ರೈತರ ಬದುಕಿಗೆ ನೆರವಾಗಲು ಬ್ಯಾಂಕ್‍ನಿಂದ ಸಾಲ
ಮಂಡ್ಯ

ರೈತರ ಬದುಕಿಗೆ ನೆರವಾಗಲು ಬ್ಯಾಂಕ್‍ನಿಂದ ಸಾಲ

July 9, 2018

ಭಾರತೀನಗರ: ಬ್ಯಾಂಕ್ ಎಂದರೆ ರೈತರಿಂದ ಹಣ ಕಟ್ಟಿಸಿಕೊಂಡು ಹಣ ಕೊಡುವುದಲ್ಲ. ರೈತರ ಬದುಕಿಗೆ ನೆರವಾಗಲು ಬ್ಯಾಂಕ್‍ನಿಂದ ಸಾಲ ನೀಡಲಾಗುತ್ತಿದೆ ಎಂದು ಕೆ.ಎಂ.ದೊಡ್ಡಿ ವಿಜಯಬ್ಯಾಂಕ್ ಶಾಖೆಯ ಹಿರಿಯ ಶಾಖಾ ಪ್ರಬಂಧಕಿ ದೀಪ್ತಿ ಸಿ.ಗಂಗಾಧರ್ ತಿಳಿಸಿದರು.

ಇಲ್ಲಿನ ವಿಜಯಾ ಬ್ಯಾಂಕ್ ವತಿಯಿಂದ ನಡೆದ ಕೃಷಿ ಸಾಲ ಅಭಿಯಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಬ್ಯಾಂಕ್‍ನೊಂದಿಗೆ ನಿಕಟ ಸಂಪರ್ಕ ಹೊಂದಿದಾಗ ಮಾತ್ರ ರೈತರು ಸೌಲಭ್ಯ ಪಡೆಯಬಹುದು. ಬ್ಯಾಂಕ್‍ನಿಂದ ಸಾಲ ಪಡೆದವರು ಸಕಾಲಕ್ಕೆ ಮರು ಪಾವತಿಸಿ ಬ್ಯಾಂಕ್ ಅಭಿವೃದ್ಧಿಗೂ ಸº ಕರಿಸಬೇಕು. ಬ್ಯಾಂಕ್‍ಗಳಲ್ಲಿ ಸರ್ಕಾರಿ ಸೌಲಭ್ಯಗಳು ಸಾಕಷ್ಟಿವೆ. ಅವುಗಳನ್ನು ಸದ್ಬಳಕೆ ಮಾಡಿಕೊಳ್ಳಿ ಎಂದು ಕರೆ ನೀಡಿದರು.

ಸಾಲ ಪಡೆದವರು ಮರು ಪಾವತಿ ಮಾಡಿದರೆ ಮತ್ತಷ್ಟು ಸಾಲ ಪಡೆಯಲು ಸಾಧ್ಯವಾಗುತ್ತದೆ. ಬ್ಯಾಂಕಿನಿಂದ ಸಾಲ ಪಡೆದವರು ಸ್ವಂತ ಉದ್ಯೋಗದಲ್ಲಿ ತೊಡ ಗಬಹುದು. ದಕ್ಷಿಣ ಕನ್ನಡ ಭಾಗದಲ್ಲಿ ಜನರು ಬ್ಯಾಂಕ್‍ನಲ್ಲಿ ಸಾಲ ಪಡೆದು ನಿಯಮಿತವಾಗಿ ಸಾಲ ಮರುಪಾವತಿ ಮಾಡುತ್ತಾರೆ. ಮಂಡ್ಯ ಜಿಲ್ಲೆಯಲ್ಲಿ ಮರುಪಾವತಿ ಮಾಡುವ ಪ್ರಕ್ರಿಯೆ ಸ್ವಲ್ಪ ಕಡಿಮೆ ಇದೆ. ಯಾವುದೇ ಸಹಕಾರ ಸಂಸ್ಥೆ, ಬ್ಯಾಂಕ್ ಅಥವಾ ಹಣಕಾಸು ಸಂಸ್ಥೆಗಳಲ್ಲಿ ಹಣ ಮರು ಪಾವತಿಯಾದರೆ ಮಾತ್ರ ಅಭಿವೃದ್ಧಿಗೊಳ್ಳಲು ಸಾಧ್ಯ. ಇಲ್ಲದಿದ್ದರೆ ಆರ್‍ಬಿಐ ನಿಯಮದ ಪ್ರಕಾರ ನಷ್ಠದಲ್ಲಿದ್ದರೆ ಮುಚ್ಚುವ ಪರಿಸ್ಥಿತಿ ನಿರ್ಮಾಣವಾಗುತ್ತದೆ ಎಂದರು.

ಕಂದೇಗಾಲ ಪುರುಷ ಸ್ವ ಸಹಾಯ ಸಂಘಕ್ಕೆ ಅಂಬೇಡ್ಕರ್ ಅಭಿವೃದ್ಧಿ ನಿಗಮದಿಂದ ನೀಡಿರುವ 5 ಲಕ್ಷದ ಜೊತೆಗೆ 5 ಲಕ್ಷ ಸಬ್ಸಿಡಿ ಹಣ ಸೇರಿಸಿ ಒಟ್ಟು 10 ಲಕ್ಷ ರೂ.ಗಳಲ್ಲಿ ಮಿನಿಡೈರಿ ಸ್ಥಾಪನೆಗೆ ಇಲ್ಲಿನ ವಿಜಯಬ್ಯಾಂಕ್ ಶಾಖೆ ಮುಂದಾಗಿದೆ ಎಂದರು.
ಇದೇ ವೇಳೆ ವಿಜಯ ಬ್ಯಾಂಕ್ ಶಾಖೆಗೆ ಒಳಪಟ್ಟ ಕಂದೇಗಾಲ, ಭೂತನ ಹೊಸೂರು, ಮಳವಳ್ಳಿ ಸ್ವ ಸಹಾಯ ಸಂಘಗಳಿಗೆ ಸಾಲ ವಿತರಿಸಲಾಯಿತು.

ಈ ಸಂದರ್ಭ ವಿಜಯಬ್ಯಾಂಕ್ ಕೃಷಿ ವಲಯ ಅಧಿಕಾರಿ ಮಧುಸೂಧನ್, ಮಳ ವಳ್ಳಿ ಶಾಖೆಯ ಸಹಾಯಕ ಪ್ರಬಂಧಕ ಚಿಕ್ಕೇಗೌಡ, ಬ್ಯಾಂಕ್‍ನ ಸಿಬ್ಬಂದಿ ಅಸಮನ್ ದಾಸ್, ಮಳವಳ್ಳಿ ಧಾನ್ ಫೌಂಡೇಶನ್ ಸದಸ್ಯರು ಸೇರಿದಂತೆ ಇತರರಿದ್ದರು.

Translate »