ಹೆಚ್‍ಡಿಕೆಯಿಂದ ರೈತರ ಬೇಡಿಕೆ ಈಡೇರಿಕೆ
ಮಂಡ್ಯ

ಹೆಚ್‍ಡಿಕೆಯಿಂದ ರೈತರ ಬೇಡಿಕೆ ಈಡೇರಿಕೆ

July 9, 2018

ಮದ್ದೂರು:  ಮುಖ್ಯಮಂತ್ರಿ ಕುಮಾರಸ್ವಾಮಿ ರಾಜ್ಯದ ಜನರಿಗೆ ನೀಡಿದ ಭರವಸೆಗಳನ್ನು ಈಡೇರಿಸಲಿದ್ದಾರೆ. ಈ ಬಗ್ಗೆ ಆತಂಕ ಬೇಡ. ಆದರೆ ಕಾಲಾವಕಾಶ ಬೇಕು ಎಂದು ಶಾಸಕ ಸುರೇಶ್‍ಗೌಡ ತಿಳಿಸಿದರು.

ತಾಲೂಕಿನ ಕಿರಂಗೂರು ಗ್ರಾಮದಲ್ಲಿ ನಡೆದ ತೋಪಿನ ತಿಮ್ಮಪ್ಪ ದೇವರ ಹರಿಸೇವೆ ಯಲ್ಲಿ ಮಾತನಾಡಿದ ಅವರು, ಸಿಎಂ ಅವರು ಸಿದ್ದರಾಮಯ್ಯರ ಯೋಜನೆಗಳನ್ನು ಮುಂದುವರೆಸಿಕೊಂಡು ಹೋಗುವ ಜೊತೆಗೆ ರೈತರ ಸಾಲ ಮನ್ನಾ ಮಾಡಿ ದ್ದಾರೆ. ಮುಂದಿನ ದಿನಗಳಲ್ಲಿ ಹೆಚ್ಚಿನ ಮಟ್ಟದಲ್ಲಿ ರೈತರಿಗೆ ಹಾಗೂ ಎಲ್ಲ ಸಮುದಾಯಗಳಿಗೆ ಉಪಯುಕ್ತ ಯೋಜನೆಗಳನ್ನು ಜಾರಿಗೆ ತರಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.ಸಮ್ಮಿಶ್ರ ಸರ್ಕಾರವಾದ ಕಾರಣ 2 ಪಕ್ಷಗಳ ಸಮನ್ವಯ ಕಾದುಕೊಂಡು ಹೋಗಬೇಕು.

ಈ ಹಿನ್ನೆಲೆಯಲ್ಲಿ ಸಿಎಂ ಎಲ್ಲ ವರ್ಗದವರ ಬಗ್ಗೆ ಚಿಂತಿಸಿ ಬಜೆಟ್ ಮಂಡಿಸಿದ್ದಾರೆ. ಜಿಲ್ಲೆಗೆ ಮುಂದಿನ ದಿನಗಳಲ್ಲಿ ವಿಶೇಷ ಅನುದಾನ ನೀಡಿ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಸಹಕಾರ ನೀಡಲಿದ್ದಾರೆಂದು ತಿಳಿಸಿದರು.

ಈ ಸಂದರ್ಭ ಮಂಡ್ಯದಿಂದ ಕಿರಂ ಗೂರು ಮಾರ್ಗವಾಗಿ ಹುಲಿಯೂರು ದುರ್ಗ ಕುಣಿಗಲ್ ಹೋಗುವ ಸರ್ಕಾರಿ ಬಸ್‍ಗೆ ಚಾಲನೆ ನೀಡಿದರು.ಜಿಪಂ ಸದಸ್ಯೆ ರೇಣುಕಮ್ಮ, ಮುಖಂಡ ರಾದ ಅನು ಶ್ರೀದೇವಿ, ಬಾಲು, ಸುನಿತಾ, ತಮ್ಮಣ್ಣ ನಾಯಕ್ ಸೇರಿದಂತೆ ಇನ್ನಿತರರಿದ್ದರು.

Translate »