ನಗರದ ವಿವಿಧೆಡೆ ಬಸವ ಜಯಂತಿ ಅದ್ಧೂರಿ ಆಚರಣೆ
ಚಾಮರಾಜನಗರ

ನಗರದ ವಿವಿಧೆಡೆ ಬಸವ ಜಯಂತಿ ಅದ್ಧೂರಿ ಆಚರಣೆ

ಚಾಮರಾಜನಗರ: ನಗರದ ವಿವಿಧೆಡೆ ಮಹಾಮಾನವತಾವಾದಿ, ಭಕ್ತಿ ಭಂಡಾರಿ, ಕ್ರಾಂತಿಯೋಗಿ ಬಸವೇಶ್ವರರ ಜಯಂತಿಯನ್ನು ಅದ್ಧೂರಿ ಯಾಗಿ ಆಚರಿಸಲಾಯಿತು.

ನಗರದ ಜಿಲ್ಲಾ ಬಿಜೆಪಿ ಕಚೇರಿ, ಜಿಲ್ಲಾ ಕಾಂಗ್ರೆಸ್ ಕಚೇರಿ, ಸಾರ್ವಜನಿಕ ಜಿಲ್ಲಾಸ್ಪತ್ರೆ, ಸಿದ್ದಮಲ್ಲೇಶ್ವರ ವಿರಕ್ತ ಮಠ ಹಾಗೂ ಭಾರತ್ ಸೇವಾದಳದ ಜಿಲ್ಲಾ ಕಾರ್ಯಾಲಯದಲ್ಲಿ ಬಸವ ಜಯಂತಿಯನ್ನು ಬಸವಣ್ಣನವರ ಭಾವಚಿತ್ರಕ್ಕೆ ಪುಷ್ಪಾ ರ್ಚನೆ ಮಾಡಿ, ಪೂಜೆ ಸಲ್ಲಿಸಿ ಆಚರಣೆ ಮಾಡಲಾಯಿತು.

ಜಿಲ್ಲಾ ಬಿಜೆಪಿ ಕಚೇರಿ: ನಗರದ ಬಿಜೆಪಿ ಜಿಲ್ಲಾ ಕಚೇರಿ ಯಲ್ಲಿ ಬಸವ ಜಯಂತಿಯನ್ನು ಅದ್ಧೂರಿಯಾಗಿ ಆಚರಿಸ ಲಾಯಿತು. ಈ ವೇಳೆ ಪಕ್ಷದ ಜಿಲ್ಲಾ ಪ್ರಧಾನ ಕಾರ್ಯ ದರ್ಶಿ ನೂರೊಂದು ಶೆಟ್ಟಿ, ಉಪಾಧ್ಯಕ್ಷ ಚಂದ್ರಶೇಖರ್, ಕಾರ್ಯದರ್ಶಿ ಎಂ.ಎಸ್.ಪೃಥ್ವಿರಾಜ್, ಗ್ರಾಮಾಂತರ ಮಂಡಲ ಅಧ್ಯಕ್ಷ ಸುಂದ್ರಪ್ಪ, ನಗರಸಭೆ ಮಾಜಿ ಅಧ್ಯಕ್ಷ ಸುರೇಶ್‍ಕುಮಾರ್, ನಗರ ಘಟಕ ಅಧ್ಯಕ್ಷ ಸುಂದರ್‍ರಾಜ್, ಪ್ರಧಾನ ಕಾರ್ಯದರ್ಶಿ ಪುರುಷೋತ್ತಮ, ರಾಜ್ಯ ಯುವ ಮೋರ್ಚಾ ಕಾರ್ಯ ಕಾರಿಣಿ ಸದಸ್ಯ ಪ್ರಶಾಂತ್, ಮುಖಂಡರಾದ ಚಂದ್ರಶೇಖರ್, ಶಿವು, ರಾಘವೇಂದ್ರ, ಮಹೇಶ್‍ಕುಮಾರ್, ಇತರರಿದ್ದರು.

ಜಿಲ್ಲಾಸ್ಪತ್ರೆ: ನಗರದ ಜಿಲ್ಲಾಸ್ಪತ್ರೆಯಲ್ಲಿ ಬಸವ ಜಯಂತಿ ಯನ್ನು ಆಚರಿಸಲಾಯಿತು. ಈ ವೇಳೆ ವೈದ್ಯಾಧಿಕಾರಿ ಡಾ. ಕೃಷ್ಣಪ್ರಸಾದ್, ಅರವಳಿಕೆ ತಜ್ಞರಾದ ಡಾ.ಸಂಜಿತ್, ಡಾ.ಎಂ. ಮಹೇಶ್, ಡಾ.ಸತ್ಯ ಪ್ರಕಾಶ್, ಡಾ.ಬಸವರಾಜು, ಡಾ. ರವಿಶಂಕರ್, ಡಾ.ನವೀನ್‍ಚಂದ್ರ, ಶುಶ್ರೂಷಕರು, ಸಿಬ್ಬಂದಿ ವರ್ಗ ಹಾಜರಿದ್ದರು.

ಸಿದ್ದಮಲ್ಲೇಶ್ವರ ವಿರಕ್ತ ಮಠ: ನಗರದ ಶ್ರೀಸಿದ್ದಮಲ್ಲೇಶ್ವರ ವಿರಕ್ತ ಮಠದಲ್ಲಿ ಶ್ರೀಬಸವೇಶ್ವರ ಜಯಂತಿಯನ್ನು ಬಸವಣ್ಣನವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಸಾರ್ವಜನಿಕ ರಿಗೆ ಮಜ್ಜಿಗೆ, ಪಾನಕ ವಿತರಿಸುವ ಮೂಲಕ ಆಚರಿಸಲಾ ಯಿತು. ಶ್ರೀಮಠದ ಚನ್ನಬಸವರಾಜ ಸ್ವಾಮೀಜಿ, ರೈತ ಮುಖಂಡ ಮಲ್ಲೇಶ, ಮುಖಂಡರಾದ ಆರ್.ಪುಟ್ಟ ಮಲ್ಲಪ್ಪ, ಮಹದೇವ ಪ್ರಸಾದ್ ಸೇರಿದಂತೆ ಇತರರಿದ್ದರು.

ಜಿಲ್ಲಾ ಕಾಂಗ್ರೆಸ್ ಕಚೇರಿ: ನಗರದ ಕಾಂಗ್ರೆಸ್ ಜಿಲ್ಲಾ ಕಾರ್ಯಾಲಯದಲ್ಲಿ ಶ್ರೀಬಸವಣ್ಣನವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಬಸವ ಜಯಂತಿ ಆಚರಿಸಲಾಯಿತು. ಜಿಲ್ಲಾ ಉಸ್ತುವಾರಿ ಸಚಿವ ಸಿ.ಪುಟ್ಟರಂಗಶೆಟ್ಟಿ, ಪಕ್ಷದ ಜಿಲ್ಲಾಧ್ಯಕ್ಷ ಪಿ.ಮರಿಸ್ವಾಮಿ, ಉಪಾಧ್ಯಕ್ಷ ಬಿ.ಕೆ.ರವಿಕುಮಾರ್, ಮಹಿಳಾಧ್ಯಕ್ಷೆ ಲತಾ, ಕೆಪಿಸಿಸಿ ಸದಸ್ಯ ಸೈಯದ್ ರಫಿ, ಚಾಮುಲ್ ನಿರ್ದೇಶಕ ಬಸವರಾಜು, ಮುಖಂಡರಾದ ಎ.ಜಯಸಿಂಹ, ಚಿಕ್ಕಮಹದೇವು, ಆರ್.ಮಹದೇವ, ನಾಗಯ್ಯ, ಮುನ್ನಾ, ಅರುಣ್‍ಕುಮಾರ್, ಕಾಗಲವಾಡಿ ಚಂದ್ರು ಇತರರಿದ್ದರು.

ಭಾರತ್ ಸೇವಾದಳ ಕಚೇರಿ: ನಗರದ ಭಾರತ್ ಸೇವಾದಳದ ಜಿಲ್ಲಾ ಕಾರ್ಯಾಲಯದಲ್ಲಿ ಬಸವೇಶ್ವರ ಹಾಗೂ ಸೇವಾದಳದ ಸಂಸ್ಥಾಪಕ ಎನ್.ಎಸ್. ಹರ್ಡೀಕರ್ ಜಯಂತಿ ಆಚರಿಸಲಾಯಿತು.

ಬಸವಣ್ಣ ಹಾಗೂ ಹರ್ಡೀಕರ್ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಗೌರವ ಸೂಚಿಸಲಾಯಿತು. ಭಾರತ್ ಸೇವಾದಳ ಸಮಿತಿ ಜಿಲ್ಲಾಧ್ಯಕ್ಷ ಎಂ.ರಾಮಚಂದ್ರ, ತಾಲೂಕು ಅಧ್ಯಕ್ಷ ಸಿ.ಎಂ.ನರಸಿಂಹಮೂರ್ತಿ, ಸದಸ್ಯ ನಾಗರಾಜು, ಮುಖಂಡರಾದ ಬಂಗಾರ ಗಿರಿನಾಯಕ, ಮಹದೇವಪ್ಪ, ರಾಜು, ಮಹೇಶ್, ಕೆ.ವೀರಯ್ಯ ಇತರರಿದ್ದರು.

May 8, 2019

Leave a Reply

Your email address will not be published. Required fields are marked *