`ಕಾಯಕವೇ ಕೈಲಾಸ’ ತತ್ವ ಸಾರಿದ ಬಸವಣ್ಣ
ಚಾಮರಾಜನಗರ

`ಕಾಯಕವೇ ಕೈಲಾಸ’ ತತ್ವ ಸಾರಿದ ಬಸವಣ್ಣ

May 8, 2019

ಕೊಳ್ಳೇಗಾಲ: ಕಾಯಕವೇ ಕೈಲಾಸ ಎಂಬ ಮಹೋನ್ನತ ಆದರ್ಶ ವನ್ನು ಜಗತ್ತಿಗೆ ಸಾರಿ ಹೇಳಿದ ವಿಶ್ವಗುರು ಬಸವಣ್ಣನವರು ತಮ್ಮ ವಚನಗಳ ಮೂಲಕ ಬಿತ್ತಿದ ಆದರ್ಶ ಸಮಾಜ ಪರಿಕಲ್ಪನೆ ಇಂದಿಗೂ ಪ್ರಸ್ತುತ ಎಂದು ತಹಶೀಲ್ದಾರ್ ಎಂ.ಆನಂದಯ್ಯ ತಿಳಿಸಿದರು.

ಪಟ್ಟಣದ ತಾಲೂಕು ಕಚೇರಿಯಲ್ಲಿ ಆಯೋಜಿಸಲಾಗಿದ್ದ ಬಸವ ಜಯಂತಿ ಕಾರ್ಯಕ್ರಮದಲ್ಲಿ ಬಸವಣ್ಣನವರ ಭಾವ ಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ, ಪೂಜೆ ಸಲ್ಲಿಸಿ ನಂತರ ಮಾತನಾಡಿದ ಅವರು, ಪ್ರಸ್ತುತ ಪ್ರಪಂಚ ಎದುರಿಸುತ್ತಿರುವ ಸಮಸ್ಯೆಗಳಿಗೆ ಬಸವಣ್ಣನವರ ಮಾರ್ಗದಲ್ಲಿ ನಡೆದ ಶಿವ ಶರಣರ ವಚನಗಳಲ್ಲಿ ಪರಿಹಾರವಿದೆ. ಅಂತಹ ಶರಣ ಪರಂಪರೆ ನೀಡಿದ ಮಹಾನ್ ವ್ಯಕ್ತಿ ಬಸವಣ್ಣ ಎಂದರು. ಕಾರ್ಯಕ್ರಮ ದಲ್ಲಿ ಆಹಾರ ನಿರೀಕ್ಷಕ ನಾಗರಾಜು, ಉಪ ತಹಶೀಲ್ದಾರ್ ಬಿ.ಕೆ.ಶ್ರೀನಿವಾಸ್, ವಲಯ ಅರಣ್ಯಾಧಿಕಾರಿ ಶಿವರಾಂ, ತಾಪಂ ವ್ಯವಸ್ಥಾಪಕ ಶಂಕರ್, ರಾಜಸ್ವ ನಿರೀಕ್ಷಕರಾದ ನಟೇಶ್, ನಿರಂಜನ್, ಸತೀಶ್, ರಾಜಶೇಖರ್, ಸರ್ವೆರಾಜು, ವೀರೇಶ್, ರಾಜಣ್ಣ, ಮುಡಿ ಗುಂಡ ಸುಂದ್ರಪ್ಪ ಇತರರಿದ್ದರು.