ಬಿರುಗಾಳಿ ಮಳೆಗೆ ಬಾಳೆ ಬೆಳೆ ನಾಶ
ಚಾಮರಾಜನಗರ

ಬಿರುಗಾಳಿ ಮಳೆಗೆ ಬಾಳೆ ಬೆಳೆ ನಾಶ

May 8, 2019

ಬದನಗುಪ್ಪೆ: ಚಾಮರಾಜನಗರ ತಾಲೂಕಿನ ಬದನಗುಪ್ಪೆ ಯಲ್ಲಿ ಸೋಮವಾರ ಬಿದ್ದ ಬಿರುಗಾಳಿ ಸಹಿತ ಮಳೆಗೆ 3 ಎಕರೆಯಲ್ಲಿ ಬೆಳೆಯ ಲಾಗಿದ್ದ ಬಾಳೆ ಫಸಲು ನೆಲಕ್ಕುರಳಿದೆ.

ಗ್ರಾಮದ ಬಿ.ಪಿ.ನಾಗರಾಜಮೂರ್ತಿ ಅವರಿಗೆ ಸೇರಿದ ತೋಟದಲ್ಲಿ ಬೆಳೆದಿದ್ದ 3 ಎಕರೆ ಬಾಳೆ ಫಸಲು ಬಿರುಗಾಳಿ ಮಳೆಗೆ ಸಿಲುಕಿ ಸಂಪೂರ್ಣ ನಾಶವಾಗಿದೆ. 9 ತಿಂಗಳ ಬಾಳೆ ಫಸಲು ಕಟಾವಿನ ಹಂತಕ್ಕೆ ತಲುಪಿತ್ತು. ಜಮೀನಿನಲ್ಲಿ ಬೆಳೆದಿದ್ದ ಹೆಬ್ಬೇವು ಮತ್ತು ಬೇವಿನ ಮರಗಳು ಸಹ ಬುಡ ಸಮೇತ ಮುರಿದು ಬಿದ್ದಿವೆ. ಬಿರುಗಾಳಿ ಮಳೆಯ ಆರ್ಭಟಕ್ಕೆ ಸಿಲುಕಿದ ಫಸಲು ಸಂಪೂರ್ಣ ವಾಗಿ ನೆಲಕ್ಕಚ್ಚಿದ್ದು, ಸುಮಾರು 6 ಲಕ್ಷ ರೂ. ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ.

ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಸ್ಥಳಕ್ಕಾಗಮಿಸಿ ಪರಿಶೀಲನೆ ಮಾಡಿ ವರದಿ ಸಲ್ಲಿಸಿ, ಸರ್ಕಾರದಿಂದ ಪ್ರಕೃತಿ ವಿಕೋಪದ ನಿಧಿಯಲ್ಲಿ ಹೆಚ್ಚಿನ ಪರಿಹಾರ ಕಲ್ಪಿಸಿಕೊಡಬೇ ಕೆಂದು ನೊಂದ ರೈತ ಬಿ.ಪಿ. ನಾಗರಾಜ ಮೂರ್ತಿ ಮನವಿ ಮಾಡಿಕೊಂಡಿದ್ದಾರೆ.

Translate »