ಮೈಸೂರು: ಅಖಿಲ ಭಾರತ ವೀರಶೈವ ಮಹಾಸಭಾ, ವೀರ ಶೈವ ಲಿಂಗಾಯತ ಸಂಘ ಸಂಸ್ಥೆಗಳು ಹಾಗೂ ಬಸವ ಬಳಗಗಳ ಒಕ್ಕೂಟದ ಸಂಯುಕ್ತಾಶ್ರಯದಲ್ಲಿ ಮೈಸೂರಿನಲ್ಲಿ ಮೇ 7 ಮತ್ತು 8ರಂದು ಬಸವ ಜಯಂತಿ ಆಯೋಜಿಸಿದ್ದು, ಇದರ ಪ್ರಚಾರ ವಾಹನಕ್ಕೆ ಸೋಮವಾರ ಚಾಲನೆ ನೀಡಲಾಯಿತು.
ಮೈಸೂರಿನ ಕಲಾಮಂದಿರದಲ್ಲಿ ಮೇ 7 ಮತ್ತು 8ರಂದು ಎರಡು ದಿನಗಳ ಕಾಲ ಬಸವ ಜಯಂತಿ ಹಮ್ಮಿಕೊಂಡಿದ್ದು, ಮೈಸೂರಿನ ಜೆಎಸ್ಎಸ್ ಮಹಾವಿದ್ಯಾ ಪೀಠದ ಬಳಿಯ ಬಸವಣ್ಣನ ಪ್ರತಿಮೆ ಬಳಿ ಜಯಂತಿಯ ಪ್ರಚಾರ ವಾಹನಕ್ಕೆ ಇಂದು ಕುದೇರು ಮಠದ ಶ್ರೀ ಗುರು ಶಾಂತ ಸ್ವಾಮೀಜಿ ಚಾಲನೆ ನೀಡಿದರು.
ಪ್ರಚಾರ ವಾಹನವು ಮೇ 6ರವರೆಗೆ ಜಿಲ್ಲೆಯ ವಿವಿಧ ಭಾಗಗಳಲ್ಲಿ ಜಯಂ ತಿಯ ಬಗ್ಗೆ ಪ್ರಚಾರ ನಡೆಸಲಿದೆ. ಮೇ 7ರಂದು ಬೆಳಿಗ್ಗೆ 8.30ಕ್ಕೆ ಬಸವೇಶ್ವರರ ಪುತ್ಥಳಿ ಮೆರವಣಿಗೆ ನಡೆಯಲಿದೆ. ಜೆಎಸ್ಎಸ್ ಮಹಾವಿದ್ಯಾಪೀಠದ ಬಳಿಯ ಬಸವಣ್ಣನ ಪ್ರತಿಮೆ ಬಳಿಯಿಂದ ಕಲಾ ಮಂದಿರದವರೆಗೆ ವಿವಿಧ ಜಾನಪದ ಕಲಾ ತಂಡಗಳೊಂದಿಗೆ ಮೆರವಣಿಗೆ ನಡೆಯಲಿದೆ.
ಬಳಿಕ ಕಲಾಮಂದಿರದಲ್ಲಿ ಬೆಳಿಗ್ಗೆ 11ಕ್ಕೆ ಉದ್ಘಾಟನಾ ಸಮಾರಂಭ ನಡೆಯಲಿದ್ದು, ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ವಿಜಯಪುರದ ಜ್ಞಾನ ಯೋಗಾ ಶ್ರಮದ ಶ್ರೀ ಸಿದ್ಧೇಶ್ವರ ಸ್ವಾಮೀಜಿ ಸಾನಿಧ್ಯ ದಲ್ಲಿ ಸರ್ವೋಚ್ಛ ನ್ಯಾಯಾಲಯದ ನಿವೃತ್ತ ಮುಖ್ಯ ನ್ಯಾಯಾಧೀಶ ಡಾ.ಎಂ.ಎನ್. ವೆಂಕಟಾಚಲಯ್ಯ ಜಯಂತಿ ಉದ್ಘಾಟಿಸಲಿದ್ದಾರೆ. ಶಿವಗಂಗಾ ಕ್ಷೇತ್ರದ ಶ್ರೀ ಮೇಲಣ ಗವಿ ಮಠದ ಶ್ರೀ ಶಾಂತಮುನಿ ಶಿವಾಚಾರ್ಯ ಸ್ವಾಮೀಜಿ ಅಧ್ಯಕ್ಷತೆ ವಹಿಸಲಿದ್ದಾರೆ.
ಜಯಂತಿ ಅಂಗವಾಗಿ ವಿಚಾರ ಗೋಷ್ಠಿ, ಧಾರ್ಮಿಕ ಸಮನ್ವಯತೆ, ಸಾಮಾಜಿಕ ಸಮನ್ವಯತೆ ಕುರಿತಂತೆ ವಿಚಾರ ಗೋಷ್ಠಿಗಳು ನಡೆಯಲಿದ್ದು, ಶರಣರ ಜೀವನ ಮೌಲ್ಯ ಗಳ ಕುರಿತ ಉಪನ್ಯಾಸ ಸೇರಿದಂತೆ ವಿವಿಧ ಕಾರ್ಯಕ್ರಮಗಳೊಂದಿಗೆ ಮೇ 8ರಂದು ಮಧ್ಯಾಹ್ನ 2.30ಕ್ಕೆ ಸಮಾ ರೋಪ ಸಮಾರಂಭ ನಡೆಯಲಿದೆ.
ಕರ್ನಾಟಕ ಲೋಕಾಯುಕ್ತ ಪಿ.ವಿಶ್ವ ನಾಥಶೆಟ್ಟಿ ಸಮಾರೋಪ ಭಾಷಣ ಮಾಡ ಲಿದ್ದು, ಹಾರನಹಳ್ಳಿ ಕೋಡಿಮಠದ ಶ್ರೀ ಡಾ.ಶ್ರೀ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಅಧ್ಯಕ್ಷತೆ ವಹಿಸಲಿ ದ್ದಾರೆ. ಪ್ರಚಾರ ವಾಹನದ ಚಾಲನೆ ವೇಳೆ ದೇವಲಾಪುರ ಮಠದ ಜಡೇಸ್ವಾಮಿ ಶ್ರೀಗಳು, ಬಸವ ಬಳಗಗಳ ಒಕ್ಕೂಟದ ಅಧ್ಯಕ್ಷೆ ಜಯಾಗೌಡ, ವೀರಶೈವ ಮಹಾಸಭಾದ ಎಸ್.ಶಿವಮೂರ್ತಿ ಕಾನ್ಯ, ಮುಖಂಡರಾದ ಎಲ್.ಜಗದೀಶ್, ನಾಗರಾಜು, ಪ್ರಕಾಶ್ ಮತ್ತಿತರರು ಹಾಜರಿದ್ದರು.