ಬೇಲೂರು: ಗ್ರಾಮೀಣ ಪ್ರದೇಶದ ಮೂಲಭೂತ ಸೌಕರ್ಯಗಳಿಗೆ ಆದ್ಯತೆ ಅನುಸಾರ ಕಾಮಗಾರಿ ಮಾಡಿಸಲಾಗು ವುದು ಎಂದು ಶಾಸಕ ಕೆ.ಎಸ್.ಲಿಂಗೇಶ್ ತಿಳಿಸಿದರು.
ನಬಾರ್ಡ್ ಯೋಜನೆಯಡಿ ತಾಲೂಕಿನ ನವಿಲಹಳ್ಳಿ ಕಂದಾವರ ನಡುವಿನ 2 ಕಿ.ಮೀ. ರಸ್ತೆ ಕಾಮಗಾರಿಗೆ ಭೂಮಿಪೂಜೆ ನೆರವೇ ರಿಸಿ ಮಾತನಾಡಿದ ಅವರು, ಗ್ರಾಮೀಣ ಭಾಗದಲ್ಲಿ ಸಾಕಷ್ಟು ಮೂಲ ಸೌಕರ್ಯದ ಕೊರತೆ ಕಂಡುಬರುತ್ತಿದೆ. ಕುಡಿಯುವ ನೀರು, ರಸ್ತೆ, ಚರಂಡಿ ಕೆಲಸ ಆಗಬೇಕಿದೆ. ಕೆಲವು ರಸ್ತೆಗಳಿಗೆ ಡಾಂಬರ್ ಹಾಗೂ ಜಲ್ಲಿ ಕಂಡು ಅನೇಕ ವರ್ಷಗಳೇ ಆಗಿವೆ. ಇಂತಹ ಗ್ರಾಮಗಳನ್ನು ಗುರುತಿಸಿ ಕೆಲಸ ಮಾಡಿಸ ಲಾಗುವುದು. ಇದೀಗ ನವಿಲಹಳ್ಳಿ ಹಾಗೂ ಕಂದಾವರ ನಡುವಿನ 2 ಕಿ.ಮೀ. ರಸ್ತೆ ಅಭಿವೃದ್ಧಿ ಕಾಮಗಾರಿಯನ್ನು 1.20 ಲಕ್ಷ ರೂ. ವೆಚ್ಚದಲ್ಲಿ ಮಾಡಿಸಲಾಗುತ್ತಿದೆ ಎಂದು ತಿಳಿಸಿದರು.
ಮೊದಲ ಆದ್ಯತೆಯನ್ನು ಕುಡಿಯುವ ನೀರಿಗೆ ನೀಡಲಾಗುವುದು. ಕೊಳವೆಬಾವಿ ಕೊರೆಸಲು ಅಗತ್ಯ ಕ್ರಮ ಕೈಗೊಳ್ಳಲಾಗು ತ್ತಿದೆ. ಚರಂಡಿ, ರಸ್ತೆಗೆ ನಂತರ ಗಮನ ಹರಿಸಲಾಗುವುದು. ಯಾವುದೇ ಕಾಮ ಗಾರಿ ಆಗಲಿ ಗುಣಮಟ್ಟ ಕಾಯ್ದುಕೊಳ್ಳ ದಿದ್ದರೆ ಕಾಮಗಾರಿ ಉಸ್ತುವಾರಿ ಹೊತ್ತ ವರ ಮೇಲೆ ಯಾರ ಮುಲಾಜಿಗೂ ಒಳ ಗಾಗದೆ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಸಿದರು.
ತಾ.ಪಂ.ಅಧ್ಯಕ್ಷ ರಂಗೇಗೌಡ ಮಾತ ನಾಡಿ, ತಾಲೂಕಿನಲ್ಲಿ ಹಲವಾರು ಸಮಸ್ಯೆ ಗಳಿವೆ. ಪ್ರಮುಖವಾಗಿ ಕುಡಿಯುವ ನೀರಿನ ಸಮಸ್ಯೆ ಮಿತಿಮೀರಿದೆ. ಹಳೇಬೀಡು ವ್ಯಾಪ್ತಿಯ ಹಳ್ಳಿಗಳಲ್ಲಿ ಹಾಗೂ ಹಳೇ ಬೀಡು ಪಟ್ಟಣದಲ್ಲೂ ನೀರಿನ ಕೊರತೆ ಯಿದ್ದು ನಿವಾರಣೆಗೆ ಕ್ರಮ ಕೈಗೊಳ್ಳಬೇಕಿದೆ ಎಂದರು. ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಎಂ.ಎ.ನಾಗರಾಜ್ ಮಾತನಾಡಿ, ತಾಲೂಕಿನ ಮಲೆನಾಡ ಭಾಗದ ಹಳ್ಳಿಗಳು ಸಾಕಷ್ಟು ಅಭಿವೃದ್ಧಿ ಕಂಡಿಲ್ಲ. ಇಂತಹ ಗ್ರಾಮದಲ್ಲಿ ಅಭಿವೃದ್ಧಿಗೆ ಒತ್ತು ನೀಡಬೇಕಿದೆ. ಈ ಭಾಗದ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸುವಲ್ಲಿ ಗಮನ ಹರಿಸಬೇಕಿದೆ ಎಂದು ಹೇಳಿದರು.
ಗ್ರಾಪಂ ಅಧ್ಯಕ್ಷೆ ಯಶೋಧ, ತಾಪಂ ಸದಸ್ಯರಾದ ಶಶಿಕುಮಾರ್ ಪ್ರಮುಖರಾದ ಮಹೇಶ್, ಸತೀಶ್, ಮಂಜೇಗೌಡ, ಪ್ರದೀಪ್, ಪ್ರಸನ್ನ, ಉಮೇಶ್ ಇತರರು ಇದ್ದರು.