ಬೇಲೂರಿನಲ್ಲಿ ಸರಳ ಕನಕ ಜಯಂತಿ ಆಚರಣೆ
ಹಾಸನ

ಬೇಲೂರಿನಲ್ಲಿ ಸರಳ ಕನಕ ಜಯಂತಿ ಆಚರಣೆ

November 27, 2018

ಬೇಲೂರು: ಪಟ್ಟಣದ ಕೋಟೆ ಕನಕ ಬಳಗದಿಂದ ಕನಕದಾಸರ ಬೀದಿ ಯಲ್ಲಿ ಸರಳವಾಗಿ ಕನಕ ಜಯಂತಿಯನ್ನು ಆಚರಿಸಲಾಯಿತು.

ಇಲ್ಲಿನ ಕನಕದಾಸರ ಬೀದಿಯಲ್ಲಿ ನಡೆದ ಕನಕ ಜಯಂತಿಯನ್ನು ಜಿಲ್ಲಾ ಕುರುಬರ ಸಂಘದ ನಿರ್ದೇಶಕ ಬಿ.ಎಲ್.ಧರ್ಮೇ ಗೌಡ ಉದ್ಘಾಟಿಸಿ ಮಾತನಾಡಿ, ಮಾಜಿ ವಸತಿ ಸಚಿವ ಅಂಬರೀಶ್ ಹಾಗೂ ಮಾಜಿ ರೈಲ್ವೆ ಮಂತ್ರಿ ಜಾಫರ್ ಷರೀಫ್ ಅವರ ನಿಧನದ ಹಿನ್ನಲೆಯಲ್ಲಿ ಸರಳವಾಗಿ ಕನಕ ಜಯಂತಿಯನ್ನು ಆಚರಣೆ ಮಾಡಲಾಗಿದೆ. ಕನಕದಾಸರು ಕೇವಲ ಒಂದು ಜನಾಂಗಕ್ಕೆ ಸೀಮಿತವಾಗಿರದೆ ಎಲ್ಲಾ ಜಾತಿ, ಜನಾಂಗ ದವರಿಗೂ ಅವರ ದಾಸಪದಗಳು ತಲುಪಿವೆ. ಕನಕದಾಸರ ಜಯಂತಿಯನ್ನು ಮುಂದಿನ ದಿನದಲ್ಲಿ ಒಂದು ದಿನಾಂಕವನ್ನು ನಿಗದಿ ಪಡಿಸಿ ಅದ್ಧೂರಿಯಾಗಿ ಆಚರಣೆ ಮಾಡ ಲಾಗುವುದು. ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ತಾಲೂಕಿನಲ್ಲಿ ಕನಕ ಭವನ ನಿರ್ಮಿಸಲು 1.5 ಕೋಟಿ ರೂ. ಅನುದಾನವನ್ನು ನೀಡಿ ದ್ದರು. ಆದರೆ ಕನಕ ಭವನ ನಿರ್ಮಿಸಲು ನೋಂದಣಿ ಮಾಡಿಸಲು ವಿಳಂಬ ಮತ್ತು ಸಂಘಟನೆಯ ಕೊರತೆಯಿಂದ ಅನು ದಾನದ ಹಣ ವಾಪಸ್ಸು ಹೋಗಿದ್ದು ಈಗಲಾ ದರೂ ನಮ್ಮ ಜನಾಂಗ ಎಚ್ಚೆತ್ತು ಪುನಃ ಅನು ದಾನ ತರಿಸುವಲ್ಲಿ ಪ್ರಯತ್ನ ನಡೆಸಬೇಕೆಂದರು.

ಕನಕ ಟ್ರಸ್ಟ್‍ನ ಅಧ್ಯಕ್ಷ ತಾರಾನಾಥ್ ಮಾತ ನಾಡಿ, ಕನಕದಾಸರು ರಚಿಸಿದ ಪದಗಳು ಎಂದಿಗೂ ಸರ್ವಕಾಲಿಕವಾಗಿದೆ. ಪಟ್ಟಣ ದಲ್ಲಿ ಹೈಟೆಕ್ ಮಾದರಿಯ ಕನಕ ಭವನ ವನ್ನು ನಿರ್ಮಿಸಲು ಬಂದ ಅನುದಾನದ ಹಣ ಮತ್ತೆ ಹಿಂದಕ್ಕೆ ಹೋಗಿರುವುದು ಬೇಸ ರದ ವಿಷಯವಾಗಿದ್ದು, ಶಾಸಕರು ಮತ್ತು ಜನಾಂಗದ ಗಣ್ಯರು ಮುಂದೆ ನಿಂತು ಮತ್ತೆ ಕನಕ ಭವನ ನಿರ್ಮಾಣ ಮಾಡಲು ಪಣ ತೊಡಬೇಕು ಎಂದರು. ಪುರಸಭೆ ಸದಸ್ಯ ಸತೀಶ್ ಪ್ರಮುಖರಾದ ಗಿರೀಶ್, ಭಗ ವಾನ್, ರಂಗನಾಥ್, ಅಶೋಕ್, ವಿಜಯ ಕೇಶವ, ಕಟ್ಟೆಶಿವು ಇತರರು ಇದ್ದರು.

Translate »