ಹೆಚ್.ಡಿ. ದೇವೇಗೌಡರ ಕುಟುಂಬದಿಂದ ಹರದನಹಳ್ಳಿ ಮನೆ ದೇವರಿಗೆ ವಿಶೇಷ ಪೂಜೆ
ಹಾಸನ

ಹೆಚ್.ಡಿ. ದೇವೇಗೌಡರ ಕುಟುಂಬದಿಂದ ಹರದನಹಳ್ಳಿ ಮನೆ ದೇವರಿಗೆ ವಿಶೇಷ ಪೂಜೆ

November 27, 2018

ಹಾಸನ: ಕಾರ್ತಿಕ ಸೋಮವಾರದ ಅಂಗವಾಗಿ ಪ್ರತಿ ವರ್ಷದಂತೆ ಈ ವರ್ಷವೂ ಹೊಳೆನರಸೀಪುರ ತಾಲೂಕು ಹರದನಹಳ್ಳಿಯಲ್ಲಿರುವ ತಮ್ಮ ಮನೆ ದೇವರಿಗೆ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರು ಮತ್ತು ಕುಟುಂಬದ ಸದಸ್ಯರು ವಿಶೇಷ ಪೂಜೆ ಸಲ್ಲಿಸಿದರು.

ಕುಟುಂಬ ಸಮೇತರಾಗಿ ತಾಲೂಕಿನ ಹರದನಹಳ್ಳಿಯಲ್ಲಿರುವ ಈಶ್ವರ ದೇವಾ ಲಯಕ್ಕೆ ಭೇಟಿ ನೀಡಿದ ದೇವೇಗೌಡರು, ತಮ್ಮ ಕುಟುಂಬದೊಂದಿಗೆ ಸುಮಾರು ಎರಡು ಗಂಟೆಗೂ ಹೆಚ್ಚು ಕಾಲ ವಿಶೇಷ ಪೂಜೆ ನೆರವೇರಿಸಿದರು. ಈ ಸಂದರ್ಭದಲ್ಲಿ ದೇವೇ ಗೌಡರ ಪುತ್ರ ಸಚಿವ ಹೆಚ್.ಡಿ.ರೇವಣ್ಣ, ಸೊಸೆ ಭವಾನಿ, ಮೊಮ್ಮಕ್ಕಳಾದ ಡಾ.ಸೂರಜ್, ಪ್ರಜ್ವಲ್ ಇತರರು ಭಾಗವಹಿಸಿದ್ದರು.

ನಂತರ ಮಾತನಾಡಿದ ಮಾಜಿ ಪ್ರಧಾನಿ ಹೆಚ್.ಡಿ. ದೇವೆಗೌಡರು, ಪ್ರತಿ ವರ್ಷದಂತೆ ಈ ವರ್ಷವೂ ಕಾರ್ತಿಕ ದಿನದಂದು ಸಂಕಷ್ಟ ಪರಿಹರಿಸು ದೇವರೇ ಎಂದು ಕುಟುಂಬ ಸಮೇತರಾಗಿ ಮನೆ ದೇವರಿಗೆ ಪೂಜೆ ಸಲ್ಲಿಸಿದ್ದೇವೆ. ಹಿರಿಯ ಕಾಂಗ್ರೆಸ್ ನಾಯಕ ಜಾಫರ್ ಷರೀಫ್ ಮತ್ತು ನಟ ಅಂಬ ರೀಶ್ ನಿಧನಕ್ಕೆ ಅತೀವ ನೋವು ವ್ಯಕ್ತಪಡಿ ಸಿದ ಗೌಡರು, ಜಾಫರ್ ಷರೀಫ್ ರೈಲ್ವೆ ಸಚಿವರಾಗಿ ರಾಜ್ಯಕ್ಕೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ಅವರು ಹಾಗೂ ನಾನು ಹೆಚ್ಚೂ ಕಡಿಮೆ ಸಮಕಾಲೀನರು. ನಿನ್ನೆಯೇ ಅವರ ಅಂತಿಮ ದರ್ಶನ ಪಡೆದಿದ್ದೇನೆ ಎಂದು ಜಾಫರ್ ಸಾಧನೆಯನ್ನು ಸ್ಮರಿಸಿಕೊಂಡರು. ಹಾಗೆಯೇ ಅಂಬರೀಶ್ ರಾಜಕೀಯ ಮಾತ್ರ ವಲ್ಲದೇ ಚಿತ್ರರಂಗದಲ್ಲೂ ಉತ್ತುಂಗ ಸ್ಥಾನಕ್ಕೆ ಏರಿದ್ದರು. ತುಂಬಾ ಪ್ರಾಮಾಣಿಕ ರಾಗಿದ್ದ ಅಂಬರೀಶ್ ಹೆಚ್ಚು ಮಂದಿಗೆ ಸಹಾಯ ಮಾಡಿದ್ದರು. ಹೆಚ್ಚಿನ ಆಸ್ತಿಯನ್ನು ಸಂಪಾದನೆ ಮಾಡಿರಲಿಲ್ಲ. ಕೇಂದ್ರ ಮತ್ತು ರಾಜ್ಯದಲ್ಲಿ ಸಚಿವರಾಗಿ ಜನಪರ ಕೆಲಸ ಮಾಡಿದ್ದಾರೆ ಎಂದು ಮಾಧ್ಯಮದ ಮುಂದೆ ನೆನಪಿಸಿಕೊಂಡರು.

Translate »