ಮೈಸೂರು, ಜು.30(ಪಿಎಂ)- ನ್ಯಾಯ ದಾನ ಪ್ರಕ್ರಿಯೆಯಲ್ಲಿ ಪ್ರಾಮಾಣಿಕತೆ ಮತ್ತು ಪರಿಣಾಮಕಾರಿಯಾಗಿ ತೊಡಗಿಸಿಕೊಳ್ಳು ವಂತೆ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರೂ ಆದ ಡಿಎಲ್‍ಎಸ್‍ಎ ಅಧ್ಯಕ್ಷ ಎಸ್.ಕೆ.ಒಂಟಿಗೋಡಿ, ಪ್ಯಾನಲ್ ವಕೀಲರಿಗೆ ಸಲಹೆ ನೀಡಿದರು.
ಮೈಸೂರಿನ ಜಯನಗರದ ನೂತನ ನ್ಯಾಯಾಲಯ ಸಂಕೀರ್ಣದ ಎಡಿಆರ್ ಸಭಾಂಗಣದಲ್ಲಿ ಜಿಲ್ಲಾ ಕಾನೂನು ಸೇವೆ ಗಳ ಪ್ರಾಧಿಕಾರ (ಡಿಎಲ್‍ಎಸ್‍ಎ) ಹಾಗೂ ಮೈಸೂರು ವಕೀಲರ ಸಂಘದ ಜಂಟಿ ಆಶ್ರಯದಲ್ಲಿ ನೂತನವಾಗಿ ಆಯ್ಕೆಗೊಂಡ 119 ಪ್ಯಾನಲ್ ವಕೀಲರಿಗೆ (ಪ್ರಾಧಿಕಾರದ ವ್ಯಾಜ್ಯಗಳ ನ್ಯಾಯವಾದಿ) ಹಮ್ಮಿಕೊಂಡಿ ರುವ ಎರಡು ದಿನಗಳ ತರಬೇತಿ ಕಾರ್ಯ ಕ್ರಮವನ್ನು ಮಂಗಳವಾರ ಉದ್ಘಾಟಿಸಿ ಅವರು ಮಾತನಾಡಿದರು.
ಕಾನೂನು ಸೇವೆಗಳ ಪ್ರಾಧಿಕಾರದಿಂದ ಕಾನೂನು ನೆರವಿಗಾಗಿ ಅರ್ಜಿ ಸಲ್ಲಿಸುವ ವರು ಆರ್ಥಿಕ ದುರ್ಬಲರು. ನ್ಯಾಯಾ ಲಯದ ಖರ್ಚು-ವೆಚ್ಚ ಭರಿಸಲಾಗದ ಹಿನ್ನೆಲೆಯಲ್ಲಿ ಅವರಿಗೆ ಈ ಸೌಲಭ್ಯ ನೀಡ ಲಾಗುತ್ತದೆ. ಇವರ ಪ್ರಕರಣಗಳನ್ನು ನಿರ್ವ ಹಿಸುವ ಪ್ಯಾನಲ್ ವಕೀಲರು ಪ್ರಾಮಾಣಿ ಕತೆ ಮತ್ತು ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸಬೇಕು ಎಂದು ಹೇಳಿದರು.
ಒಂದೆರಡು ಪ್ರಕರಣಗಳಿಗೆ ಸಂಬಂಧಿಸಿ ದಂತೆ ಪ್ಯಾನಲ್ ವಕೀಲರೊಬ್ಬರು ಕಕ್ಷಿ ದಾರರಿಂದ ಇತ್ತೀಚೆಗೆ ಹಣ ಪಡೆದಿರುವ ಸಂಬಂಧ ದೂರು ಕೇಳಿ ಬಂದಿತ್ತು. ಈ ಬಗ್ಗೆ ಅವರಿಗೆ ಸೂಚ್ಯವಾಗಿ ಎಚ್ಚರಿಕೆ ನೀಡಿದ ಹಿನ್ನೆಲೆಯಲ್ಲಿ ಪಡೆದ ಹಣವನ್ನು ಹಿಂತಿರುಗಿಸಿದ್ದಾರೆಂದು ಗೊತ್ತಾಗಿದೆ. ಇಂತಹ ಘಟನೆ ಮರುಕಳಿಸಬಾರದು. ಪ್ರಾಧಿಕಾರದಿಂದ ಪ್ಯಾನಲ್ ವಕೀಲರಿಗೆ ನೀಡುವ ಗೌರವಧನವೂ ಹೆಚ್ಚಳಗೊಂಡಿದ್ದು, ಯಾವುದೇ ಕಾರಣಕ್ಕೂ ಕಕ್ಷಿ ದಾರರಿಂದ ಹಣ ಪಡೆಯದೇ ಪ್ರಾಮಾ ಣಿಕವಾಗಿ ಕೆಲಸ ಮಾಡುವ ಮೂಲಕ ಪ್ರಾಧಿಕಾರದ ಗೌರವ ವೃದ್ಧಿಸಿ ಸಮಾಜಕ್ಕೆ ಕೊಡುಗೆ ನೀಡಿ. ವೃತ್ತಿಪರ ನೈತಿಕತೆಗೆ ಹೆಚ್ಚು ಆದ್ಯತೆ ನೀಡಿ ಕರ್ತವ್ಯ ನಿರ್ವಹಿಸಿ ಎಂದು ತಿಳಿಸಿದರು.
ಡಿಎಲ್‍ಎಸ್‍ಎ ಸದಸ್ಯ ಕಾರ್ಯದರ್ಶಿ ಬಿ.ಪಿ.ದೇವಮಾನೆ ಮಾತನಾಡಿ, ಇತ್ತೀಚೆ ಗಷ್ಟೇ ಪ್ಯಾನಲ್ ವಕೀಲರ ಗೌರವ ಧನ ಹೆಚ್ಚಳಗೊಂಡಿದೆ. ಹೀಗಾಗಿ ನಿಮ್ಮ (ಪ್ಯಾನಲ್ ವಕೀಲರು) ಖಾಸಗಿ ಕಕ್ಷಿದಾರರ ಪ್ರಕರಣ ಗಳಿಗಿಂತ ಪ್ರಾಧಿಕಾರದ ಕಕ್ಷಿದಾರರ ಪ್ರಕರಣಗಳ ಕುರಿತು ಅತ್ಯಂತ ಹೆಚ್ಚಿನ ಕಾಳಜಿ ವಹಿಸಬೇಕು. ನಿಮಗೆ (ಪ್ಯಾನಲ್ ವಕೀಲರು) ಹಂಚಿಕೆಯಾದ ಪ್ರಕರಣಗಳನ್ನು ಅತ್ಯಂತ ಕಾಳಜಿಯಿಂದ ನಿಭಾಯಿಸುವ ಮೂಲಕ ಪ್ರಾಧಿಕಾರದ ಗೌರವ ವೃದ್ಧಿಸು ವಂತೆ ಮಾಡಿ ಎಂದು ಸಲಹೆ ನೀಡಿದರು.
ನಮ್ಮೊಂದಿಗೆ ಸಮಾಲೋಚಿಸಿ: ಕೆರೆ ಒತ್ತುವರಿ ಸಂಬಂಧ ಸಮಾಜ ಸೇವಕ ರೊಬ್ಬರು ನನ್ನೊಂದಿಗೆ ಸಮಾಲೋಚಿಸಿದ್ದರು. ಈ ಬಗ್ಗೆ ಏನು ಮಾಡಬೇಕೆಂದು ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಯವರನ್ನು ಸಂಪರ್ಕಿಸಿದ್ದೆ. ಇದರ ಪರಿಣಾಮ ಇಡೀ ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳೊಂದಿಗೆ ಅವರು ವೀಡಿಯೋ ಕಾನ್ಫರೆನ್ಸ್ ನಡೆಸಿ ಕೆರೆ ಸಂರಕ್ಷಣೆ ಕಾಯ್ದೆ ಯನ್ನು ಪರಿಣಾಮಕಾರಿಯಾಗಿ ಅನುಷ್ಠಾನ ಗೊಳಿಸಲು ನಿರ್ದೇಶನ ನೀಡಿದ್ದರು. ಇದೇ ರೀತಿ ನಿಮಗೆ ಪ್ರಕರಣಗಳ ನಿರ್ವಹಣೆ ವೇಳೆ ಏನೇ ಗೊಂದಲಗಳಿದ್ದರೆ ನಮ್ಮೊಂ ದಿಗೆ ಸಮಾಲೋಚಿಸಿ ಮುಂದುವರೆಯ ಬಹುದು ಎಂದು ತಿಳಿಸಿದರು.
ವಕೀಲರು ಸಂವಿಧಾನದ ಆಶಯ ಈಡೇರಿಸುವಲ್ಲಿ ಮಹತ್ವದ ಪಾತ್ರ ವಹಿಸಲಿದ್ದಾರೆ. ಹೀಗಾಗಿ ಸಮಾಜದಲ್ಲಿ ವಕೀಲರಿಗೆ ಹೆಚ್ಚಿನ ಗೌರವ ಇದ್ದು, ಸ್ವಾತಂತ್ರ್ಯ ಹೋರಾಟದಲ್ಲೂ ವಕೀಲರ ಸಮೂಹ ಮುಂಚೂಣಿಯಲ್ಲಿತ್ತು. ಹೀಗಾಗಿ ಸಂವಿಧಾನ ಆಶಯ ಈಡೇರಿ ಸುವಲ್ಲಿ ವಕೀಲರ ಮೇಲೆ ಹೆಚ್ಚಿನ ಜವಾ ಬ್ದಾರಿ ಇದೆ ಎಂದರು. ಮೈಸೂರು ವಕೀಲರ ಸಂಘದ ಅಧ್ಯಕ್ಷ ಎಸ್.ಆನಂದ್ ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ತರ ಬೇತಿ ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿ ಗಳಾದ ಎಂ.ಎಸ್.ಸಾವಿತ್ರಿ, ಆಯಿಷಾ ಬಾನು, ಅಯ್ಯಣ್ಣ, ಕೆ.ಆರ್.ಶಿವಶಂಕರ್, ನಾಗೇಶ್ ಮತ್ತಿತರರು ಹಾಜರಿದ್ದರು.