ಅನುಚಿತ ವರ್ತನೆ: ಪುಂಡರಿಗೆ ಧರ್ಮದೇಟು
ಮೈಸೂರು

ಅನುಚಿತ ವರ್ತನೆ: ಪುಂಡರಿಗೆ ಧರ್ಮದೇಟು

August 3, 2018

ಮೈಸೂರು:  ವಾಹನ ಸವಾರರ ತಡೆದು, ಅನುಚಿತ ವಾಗಿ ವರ್ತಿಸುತ್ತಿದ್ದ ಪುಂಡರ ತಂಡವನ್ನು ಸಾರ್ವಜನಿಕರೇ ಹಿಡಿದು ಅವರಿಗೆ ಧರ್ಮದೇಟು ನೀಡಿದ ಪ್ರಸಂಗ ಕೆ.ಸಿ.ಲೇಔಟ್ ನಲ್ಲಿ ಗುರುವಾರ ರಾತ್ರಿ ನಡೆದಿದೆ.

ಗುರುವಾರ ರಾತ್ರಿ ಕೆ.ಸಿ.ಲೇಔಟ್‍ನಲ್ಲಿ ಕಾರಿನಲ್ಲಿ ಹೋಗುತ್ತಿದ್ದ ಸ್ಥಳೀಯ ನಿವಾಸಿಯೊಬ್ಬರನ್ನು 8 ಮಂದಿ ಯುವಕರ ಗುಂಪು ಅಡ್ಡ ಹಾಕಿದೆ. ಈ ವೇಳೆ ಯುವಕನೊಬ್ಬ ಅವರ ತಲೆಯ ಮೇಲೆ ಕೈಯಿಟ್ಟು ಜೋಪಾನವಾಗಿ ಹೋಗಿ ಎಂದಿದ್ದಾನೆ. ಇದನ್ನು ಪ್ರಶ್ನಿಸಿ ದ್ದಕ್ಕೆ, ಮುಂದೆ ಪೊಲೀಸರು ಹೆಲ್ಮೆಟ್ ತಪಾಸಣೆ ಮಾಡುತ್ತಿದ್ದಾರೆಂದು ಗೇಲಿ ಮಾಡಿ, ಓಡಿ ಹೋಗಿದ್ದಾರೆ. ಇದೇ ರೀತಿ ಮೂರ್ನಾಲ್ಕು ವಾಹನಗಳನ್ನು ತಡೆದು ಅನುಚಿತವಾಗಿ ವರ್ತಿಸಿದ್ದನ್ನು ಗಮನಿಸಿದ್ದ ಸ್ಥಳೀಯರು, ಆ ಯುವಕರನ್ನು ಬೆನ್ನತ್ತಿ, ಕೆಲವರನ್ನು ಹಿಡಿದು ಧರ್ಮದೇಟು ನೀಡಿದ್ದಾರೆ. ಇದನ್ನು ಗಮನಿಸಿದ ಸಿಎಆರ್ ಪೊಲೀಸರು, ಅವರ ಪೋಷಕರನ್ನು ಕರೆಯಿಸಿ, ಬುದ್ದಿ ಹೇಳಿ ಕಳುಹಿಸಿದ್ದಾರೆ. ಈ ಸಂಬಂಧ ಯಾವುದೇ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿಲ್ಲ.

Translate »