ಕಲಾಮಂದಿರ ಆವರಣ ಸೌಂದರ್ಯೀಕರಣ ಲೋಕಾರ್ಪಣೆ
ಮೈಸೂರು

ಕಲಾಮಂದಿರ ಆವರಣ ಸೌಂದರ್ಯೀಕರಣ ಲೋಕಾರ್ಪಣೆ

July 16, 2019

ಮೈಸೂರು, ಜು.15(ಎಂಕೆ)- ಮೈಸೂ ರಿನ ಕರ್ನಾಟಕ ಕಲಾಮಂದಿರದ ಆವರಣ ದಲ್ಲಿ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಹಾಗೂ ಬ್ಯಾಂಕ್ ನೋಟ್ ಪೇಪರ್ ಮಿಲ್ ಇಂಡಿಯಾ ಮೈಸೂರು ಘಟಕದ ವತಿ ಯಿಂದ ಸಿಎಸ್‍ಆರ್ ಯೋಜನೆಯಡಿ ಅಭಿವೃದ್ಧಿಪಡಿಸಿದ ‘ಕಲಾಮಂದಿರದ ಸೌಂದರ್ಯೀಕರಣ ಕಾಮಗಾರಿಗಳ ಲೋಕಾ ರ್ಪಣೆ’ಯನ್ನು ಬ್ಯಾಂಕ್ ನೋಟ್ ಪೇಪರ್ ಮಿಲ್ ಇಂಡಿಯಾ ಮೈಸೂರು ಘಟಕದ ವ್ಯವಸ್ಥಾಪಕ ನಿರ್ದೇಶಕ ಕೆ.ಜಿ.ವಿಶ್ವನಾಥ್ ನೆರವೇರಿಸಿದರು.

ಬಳಿಕ ಮಾತನಾಡಿದ ಅವರು, ಬ್ಯಾಂಕ್ ನೋಟ್ ಪೇಪರ್ ಮಿಲ್ ಇಂಡಿಯಾ ಸಂಸ್ಥೆ ಪ್ರಾರಂಭದಿಂದ ಹಲವು ಅಭಿವೃದ್ಧಿ ಕಾಮಗಾರಿಗೆ ಸಹಾಯ ಮಾಡುತ್ತ ಬಂದಿದೆ.  ಕಲಾಮಂದಿರದ ಆವರಣದಲ್ಲಿ 61 ಲಕ್ಷ ರೂ. ಅನುದಾನದಲ್ಲಿ ಲಾನ್, ಉದ್ಯಾನ ವನ, ವೃತ್ತ ಪರಗೋಲ, ಕಲ್ಲಿನ ಚಪ್ಪರ ಸೇರಿದಂತೆ ನಾನಾ ಸೌಂದರ್ಯೀಕರಣ ಕಾಮ ಗಾರಿಗಳನ್ನು ಮಾಡಲಾಗಿದೆ ಎಂದರು.

ಕಲಾಮಂದಿರ ಮಾತ್ರವಲ್ಲದೆ ಕೇಂದ್ರೀಯ ವಿದ್ಯಾಲಯ, ಜಯದೇವ ಆಸ್ಪತ್ರೆ ಆವರಣ ದಲ್ಲಿ ಕೂಡ ಹಲವು ಕಾಮಗಾರಿ ಹಮ್ಮಿ ಕೊಂಡಿz್ದÉೀವೆ. ಮುಂದಿನ ದಿನಗಳಲ್ಲಿ ಮೈಸೂರು ನಗರ ಮಾತ್ರವಲ್ಲದೆ ಗ್ರಾಮೀಣ ಪ್ರದೇಶದಲ್ಲಿಯೂ ಕೆಲವೊಂದು ಅಭಿವೃದ್ಧಿ  ಕಾಮಗಾರಿ ಮಾಡಬೇಕು ಎಂದು ತೀರ್ಮಾ ನಿಸಿz್ದÉೀವೆ. ನಮ್ಮ ಎಲ್ಲಾ ಯೋಜನೆಗೂ ಜಿಲ್ಲಾಧಿಕಾರಿಗಳು ಅನುಮತಿ ನೀಡಿ, ಸಹಾಯ ಮಾಡಿದ್ದಾರೆ ಎಂದು ಹೇಳಿದರು.

ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾ ಯಕ ನಿರ್ದೇಶಕ ಹೆಚ್. ಚೆನ್ನಪ್ಪ ಮಾತ ನಾಡಿ, ಬ್ಯಾಂಕ್ ನೋಟ್ ಪೇಪರ್ ಮಿಲ್ ಇಂಡಿಯಾ ಸಂಸ್ಥೆ ಸಿಎಸ್‍ಆರ್ ಯೋಜನೆ ಯಡಿ ವಿವಿಧ ಸೇವಾ ಕಾರ್ಯದಲ್ಲಿ ತೊಡ ಗಿಸಿಕೊಂಡಿದೆ. ಕಲಾಮಂದಿರದ ಸೌಂದರ್ಯೀ ಕರಣ ಮಾತ್ರವಲ್ಲದೆ ಶಿP್ಷÀಣ ಕ್ಷೇತ್ರಕ್ಕೂ ಕೊಡುಗೆ ನೀಡಲು ಚಿಂತನೆ ನಡೆಸುತ್ತಿದೆ. ರಾಜ್ಯದಲ್ಲಿಯೇ ಕಲಾಮಂದಿರವು ದೊಡ್ಡ ಸಾಂಸ್ಕøತಿಕ ಕೇಂದ್ರವಾಗಿದ್ದು, ಅದರ ಘನತೆಗೆ ತಕ್ಕಂತೆ ಅಭಿವೃದ್ಧಿಪಡಿಸಲಾಗಿದೆ ಎಂದರು.

ಸಿಎಸ್‍ಆರ್ ಯೋಜನೆಯಡಿ ಇನ್ನಷ್ಟು ಅನುದಾನ ಬೇಕಾಗುತ್ತದೆ. ಈಗಾಗಲೇ ಕಲಾಮಂದಿರದ ಹೊರಾಂಗಣ ಅಭಿ ವೃದ್ಧಿಯು ಜನರ ಮೆಚ್ಚುಗೆಗೆ ಪಾತ್ರವಾಗಿದ್ದು, ಅದರಂತೆ ಒಳಾಂಗಣದ ಅಭಿವೃದ್ಧಿ ಕಾಮ ಗಾರಿಗಳು ಆಗಬೇಕು. ಕಲಾಮಂದಿರ ಒಳಾಂಗಣದಲ್ಲಿ ಅಂತರರಾಷ್ಟ್ರೀಯ ಮಟ್ಟದ ಶೌಚಾಲಯ, ಬೆಳಕು, ಉತ್ತಮ ಆಸನ ವ್ಯವಸ್ಥೆಯಾಗಬೇಕು. ಈ ನಿಟ್ಟಿನಲ್ಲಿ 80 ಲಕ್ಷದ ಅನುದಾನಕ್ಕಾಗಿ ಬ್ಯಾಂಕ್ ನೋಟ್ ಪೇಪರ್ ಮಿಲ್ ಇಂಡಿಯಾ ಸಂಸ್ಥೆಗೆ ಮನವಿ ಸಲ್ಲಿಸಿದ್ದೇವೆ ಎಂದು ಹೇಳಿದರು.

ಇದೇ ವೇಳೆ ಬ್ಯಾಂಕ್ ನೋಟ್ ಪೇಪರ್ ಮಿಲ್ ಇಂಡಿಯಾ ಮೈಸೂರು ಘಟಕದ ವ್ಯವಸ್ಥಾಪಕ ನಿರ್ದೇಶಕ ಕೆ.ಜಿ. ವಿಶ್ವನಾಥ್, ಉಪ ವ್ಯವಸ್ಥಾಪಕ ನಿರ್ದೇಶಕ ಎಸ್. ಸುಂದರ್‍ರಾಜ್, ಲಕ್ಷ್ಮೀಶ್, ವಾದಿರಾಜ್, ರಾಘವೇಂದ್ರ, ಕೈಗಾರಿಕೆ ಇಲಾಖೆ ಸಹಾ ಯಕ ನಿರ್ದೇಶಕ ನಜೀರ್, ನಿರ್ಮೀತಿ ಕೇಂದ್ರದ ಮಂಜುನಾಥ್, ಸತೀಶ್, ಶ್ವೇತ, ಸುಭಾಷ್, ಅರಣ್ಯ ಇಲಾಖೆಯ ವಿಜಯ್ ಕುಮಾರ್, ರಂಗಕರ್ಮಿಗಳಾದ ರಾಜ ಶೇಖರ ಕದಂಬ, ಮೈಮ್ ರಮೇಶ್, ಕಲಾಮಂದಿರ ಇತರೆ ಅಭಿವೃದ್ಧಿ ಸಹಕಾರ ನೀಡಿದ ರಾಮಚಂದ್ರ, ಸುನೀಲ್ ಅವ ರನ್ನು ಸನ್ಮಾನಿಸಿ ಅಭಿನಂದಿಸಲಾಯಿತು.

ಕಾರ್ಯಕ್ರಮದಲ್ಲಿ ರಂಗಾಯಣದ ಜಂಟಿ ನಿರ್ದೇಶಕ ವಿ.ಎನ್.ಮಲ್ಲಿ ಕಾರ್ಜುನ ಸ್ವಾಮಿ, ಕಸಾಪ ಮಾಜಿ ಅಧ್ಯಕ್ಷ ಎಂ.ಚಂದ್ರಶೇಖರ್, ದೀಪಕ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

 

Translate »