ಮೈಸೂರಲ್ಲಿ ಭಗೀರಥ ಜಯಂತಿ
ಮೈಸೂರು

ಮೈಸೂರಲ್ಲಿ ಭಗೀರಥ ಜಯಂತಿ

May 12, 2019

ಮೈಸೂರು: ಮೈಸೂರಿನ ಕಲಾಮಂದಿರದ ಮನೆ ಯಂಗಳದಲ್ಲಿ ಜಿಲ್ಲಾಡಳಿತದ ವತಿಯಿಂದ ಶನಿವಾರ ಭಗೀರಥ ಜಯಂತಿ ಆಚರಿಸಿ ಗೌರವ ಸಮರ್ಪಿಸಲಾಯಿತು.

ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಂಯುಕ್ತಾಶ್ರಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮೈಸೂರು ಜಿಲ್ಲಾ ಪಂಚಾಯಿತಿ ಸಿಇಒ ಕೆ.ಜ್ಯೋತಿ ಶ್ರೀ ಭಗೀ ರಥ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ದರು. ಬಳಿಕ ಮಾತನಾಡಿದ ಅವರು, ಯಾವುದೇ ಸಂದರ್ಭದಲ್ಲಿಯೂ ಗುರಿ ಮುಟ್ಟುವವರೆಗೂ ಅಸಾಧ್ಯವಾದುದನ್ನು ಸಾಧ್ಯವಾಗಿಸುವ ಪ್ರಯತ್ನ ಮಾಡಬೇಕು. ಧೃಡ ಮನಸ್ಸಿದ್ದರೆ ಸಾಧನೆ ಮಾಡಬಹು ದೆಂಬ ಸಂದೇಶವನ್ನು ಭಗೀರಥ ಮಹರ್ಷಿ ಗಳು ಸಾರಿದ್ದರು. ಇದು ಸಾಧಕರಿಗೆ ಸ್ಫೂರ್ತಿ ಯಾಗಿದೆ. ಶ್ರೀ ಭಗೀರಥರು ಸಾವಿರ ವರ್ಷ ತಪಸ್ಸು ಮಾಡಿದ್ದರು ಎಂದು ಹೇಳಲಾಗು ತ್ತಿದೆ. ಒಂದೇ ಒಂದು ಕಾರ್ಯ ಸಾಧನೆ ಗಾಗಿ ನಿರಂತರವಾಗಿ ಊಟ, ನಿದ್ದೆ ಎಲ್ಲ ವನ್ನೂ ತ್ಯಾಗ ಮಾಡಿದ್ದರು. ಇದು ಮನು ಷ್ಯರ ಸಾಧನೆಗೆ ರೂಪಕವಾಗಿ ಪರಿಣಮಿ ಸಿದೆ ಎಂದು ಅಭಿಪ್ರಾಯಪಟ್ಟರು.

ಅಪರ ಜಿಲ್ಲಾಧಿಕಾರಿ ಜಿ. ಅನುರಾಧ ಮಾತನಾಡಿ, ಯಾರಾದರೂ ಬಲವಾದ ಪ್ರಯತ್ನ ಮಾಡುತ್ತಿದ್ದರೆ ಅದನ್ನು ಭಗೀ ರಥ ಪ್ರಯತ್ನ ಎನ್ನುತ್ತೇವೆ. ಎಲ್ಲರಿಗೂ ಭಗೀ ರಥ ಪ್ರಯತ್ನ ಸ್ಫೂರ್ತಿಯಾಗಿದೆ. ನಾವು ಏನಾದರೂ ಸಾಧಿಸುವ ಪ್ರಯತ್ನ ಮಾಡಿ ದರೆ ಭಗೀರಥರನ್ನು ಮಾದರಿಯಾಗಿಟ್ಟು ಕೊಂಡು ಮುಂದುವರಿಸಬೇಕು. ಕಪಿಲ ಮಹರ್ಷಿಗಳ ಶಾಪದಿಂದ ತಮ್ಮವರನ್ನು ವಿಮೋಚನೆಗೊಳಿಸಲು ಭಗೀರಥರು ಗಂಗೆ ಯನ್ನು ಭೂಲೋಕಕ್ಕೆ ತರಲು ಮಾಡಿದ ಪ್ರಯತ್ನ ಬಹಳ ಕಠಿಣವಾದದ್ದು. ಈ ಪ್ರಯತ್ನದಲ್ಲಿ ಯಶಸ್ವಿಯಾಗಿ ಮಹಾನ್ ವ್ಯಕ್ತಿಯಾಗುತ್ತಾರೆ ಎಂದು ವಿವರಿಸಿದರು.

ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕ ಹೆಚ್.ಚೆನ್ನಪ್ಪ, ವಾರ್ತಾ ಮತ್ತು ಸಾರ್ವ ಜನಿಕ ಸಂಪರ್ಕ ಇಲಾಖೆ ಸಹಾಯಕ ನಿರ್ದೇಶಕ ಆರ್.ರಾಜು, ಕಸಾಪ ಜಿಲ್ಲಾ ಧ್ಯಕ್ಷ ವೈ.ಡಿ.ರಾಜಣ್ಣ, ಕನ್ನಡಪರ ಹೋರಾಟ ಗಾರ ಎಂ.ಬಿ.ವಿಶ್ವನಾಥ್, ಸೋಮ ಶೇಖರ್ ಹಾಗೂ ವಿವಿಧ ಸಂಘ ಸಂಸ್ಥೆ ಗಳ ಪ್ರತಿನಿಧಿಗಳು ಪಾಲ್ಗೊಂಡಿದ್ದರು.

Translate »