ವಾಯುವಿಹಾರಿಗಳಿಗೆ ಬೈಕ್ ಡಿಕ್ಕಿ: ಗಾಯಾಳು ಸಾವು
ಚಾಮರಾಜನಗರ

ವಾಯುವಿಹಾರಿಗಳಿಗೆ ಬೈಕ್ ಡಿಕ್ಕಿ: ಗಾಯಾಳು ಸಾವು

February 28, 2019

ಚಾಮರಾಜನಗರ: ತಾಲೂಕಿನ ದೊಡ್ಡ ರಾಯಪೇಟೆ ಕ್ರಾಸ್ ಬಳಿ ಇರುವ ಪೆಟ್ರೋಲ್ ಬಂಕ್ ಸಮೀಪ ವಾಯುವಿಹಾರಿಗಳಿಗೆ ಬೈಕ್ ಡಿಕ್ಕಿ ಹೊಡೆದು ಗಾಯಗೊಂಡಿದ್ದ ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ.

ದೊಡ್ಡರಾಯಪೇಟೆ ಗ್ರಾಮದ ಕುಮಾರಸ್ವಾಮಿ (39) ಮೃತ ಪಟ್ಟವರು. ದೊಡ್ಡರಾಯಪೇಟೆ ಕ್ರಾಸ್ ಬಳಿ ಇರುವ ಪೆಟ್ರೋಲ್ ಬಂಕ್ ಬಳಿ ಫೆ.21ರ ಮುಂಜಾನೆ ವಾಯುವಿಹಾರಕ್ಕೆ ತೆರಳಿದ್ದ ಮೂವರಿಗೆ ಬೈಕ್ ಡಿಕ್ಕಿ ಹೊಡೆದಿತ್ತು. ಈ ವೇಳೆ ನಂಜಮ್ಮಣಿ (45) ಸ್ಥಳದಲ್ಲಿಯೇ ಮೃತಪಟ್ಟಿದ್ದರು. ಗಾಯಗೊಂಡಿದ್ದ ಕುಮಾರಸ್ವಾಮಿ ಅವರನ್ನು ಮೈಸೂರಿನ ಕೆ.ಆರ್. ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಮಂಗಳವಾರ ರಾತ್ರಿ ಮೃತಪಟ್ಟರು. ಕುಮಾರ ಸ್ವಾಮಿ ಪತ್ನಿ ಶಾಂತಕುಮಾರಿ ಆಶ್ಚರ್ಯಕರ ರೀತಿಯಲ್ಲಿ ಪ್ರಾಣಾಪಾಯ ದಿಂದ ಪಾರಾಗಿದ್ದರು. ಘಟನೆಯಿಂದ ಇಬ್ಬರು ಮೃತಪಟ್ಟಂತೆ ಆಗಿದ್ದು, ಈ ಬಗ್ಗೆ ರಾಮಸಮುದ್ರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Translate »