ಪಾಕಿಸ್ತಾನವನ್ನು ಬೆಂಬಲಿಸಿ ಫೇಸ್‍ಬುಕ್‍ನಲ್ಲಿ  ಫೋಟೋ ಶೇರ್ ಮಾಡಿದ ಯುವಕನ ಬಂಧನ, ವಿಚಾರಣೆ
ಮಂಡ್ಯ

ಪಾಕಿಸ್ತಾನವನ್ನು ಬೆಂಬಲಿಸಿ ಫೇಸ್‍ಬುಕ್‍ನಲ್ಲಿ  ಫೋಟೋ ಶೇರ್ ಮಾಡಿದ ಯುವಕನ ಬಂಧನ, ವಿಚಾರಣೆ

February 28, 2019

ಕೆ.ಆರ್.ಪೇಟೆ: ಪಾಕಿಸ್ತಾನ ಸೈನಿಕರ ಫೋಟೋಗಳನ್ನು ಫೇಸ್‍ಬುಕ್‍ನಲ್ಲಿ ಶೇರ್ ಮಾಡುವ ಮೂಲಕ ಹಿಂದೂ-ಮುಸ್ಲಿ ಮರ ನಡುವೆ ಅಶಾಂತಿ ಸೃಷ್ಟಿಸಲು ಪ್ರಯತ್ನಿಸುತ್ತಿದ್ದ ವ್ಯಕ್ತಿಯನ್ನು ಬಂಧಿಸಿರುವ ಘಟನೆ ಪಟ್ಟಣದಲ್ಲಿ ನಡೆದಿದೆ.

ತಾಲೂಕು ಕಚೇರಿ ರಸ್ತೆಯಲ್ಲಿ ಗುಜರಿ ಅಂಗಡಿ ಮಾಲೀಕ ಶಫೀ ಎಂಬಾತ ಬಂಧಿತ ಯುವಕ. ಭಾರತ ಮತ್ತು ಪಾಕಿಸ್ತಾನ ನಡುವೆ ಯುದ್ಧ ನಡೆಯುವ ಉದ್ವಿಗ್ನ ಪರಿಸ್ಥಿತಿ ಸಮಯದಲ್ಲಿ ಭಾರತ ದೇಶಕ್ಕೆ ಬೆಂಬಲ ವ್ಯಕ್ತಪಡಿಸಬೇಕಾದ ಈತ ಪಾಕಿಸ್ತಾನದ ಯೋಧ ಪಾಕಿಸ್ತಾನದ ಧ್ವಜಕ್ಕೆ ಮುತ್ತಿಡುವ ಫೋಟೋ ಗಳನ್ನು ತನ್ನ ಫೇಸ್‍ಬುಕ್‍ನಲ್ಲಿ ಶೇರ್ ಮಾಡುವ ಮೂಲಕ ಪಟ್ಟಣ ದಲ್ಲಿ ಅಶಾಂತಿ ಉಂಟು ಮಾಡುವ ಕಿಡಿಗೇಡಿತನವನ್ನು ಮಾಡಿದ್ದ.

ಈ ಹಿನ್ನೆಲೆ ಈತನನ್ನು ಪಟ್ಟಣ ಪೊಲೀಸರು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದ್ದಾರೆ.
ಈತನನ್ನು ತಾಲೂಕಿನಿಂದ ಗಡಿಪಾರು ಮಾಡಿ, ಕಠಿಣ ಕಾನೂನು ಕ್ರಮ ಜರುಗಿಸಬೇಕೆಂದು ವಿಶ್ವ ಹಿಂದೂ ಪರಿಷತ್ ಮಾಜಿ ಅಧ್ಯಕ್ಷರೂ ಜಿಪಂ ಸದಸ್ಯರಾದ ಡಾ.ಎಸ್.ಕೃಷ್ಣಮೂರ್ತಿ, ಜಿಲ್ಲಾ ಛಲವಾದಿ ಮಹಾಸಭಾ ಅಧ್ಯಕ್ಷ ಮಾಂಬಹಳ್ಳಿ ಜಯರಾಂ, ತಾಲೂಕು ಜಯಕರ್ನಾಟಕ ಸಂಘಟನೆಯ ಅಧ್ಯಕ್ಷ ಕೆ.ಎಸ್. ಕುಮಾರ್, ತಾಲೂಕು ಆಟೋ ಚಾಲಕರು ಮತ್ತು ಮಾಲೀಕರ ಸಂಘದ ಅಧ್ಯಕ್ಷ ಕೆ.ಎನ್.ವಾಸುದೇವ್ ನೇತೃತ್ವದಲ್ಲಿ ವಿವಿಧ ಸಂಘಟನೆಗಳು ಪಟ್ಟಣದ ಪೊಲೀಸ್ ಠಾಣೆಯ ಮುಂದೆ ಪ್ರತಿಭಟನೆ ನಡೆಸಿ ಒತ್ತಾಯಿಸಿದ್ದಾರೆ.

Translate »