ಮೈಸೂರು,ಫೆ.6 (ಎಸ್‍ಪಿಎನ್)- ಭಾರತದಲ್ಲಿ ಮಹಿಳೆಯರಿಗಾಗಿ ಶಾಲೆ ತೆರೆದು ಅಕ್ಷರ ಕ್ರಾಂತಿ ಆರಂಭಿಸಿದ ಮೊದಲ ಶಿಕ್ಷಕಿ ಸಾವಿತ್ರಿ ಬಾಯಿ ಫುಲೆ. ಅವರ ತತ್ವ, ಆದರ್ಶ ಇಂದಿನ ಮಹಿಳೆಯರಿಗೆ ಮಾರ್ಗದರ್ಶನವಾಗಬೇಕು ಎಂದು ವಿವಿ ಸಂಜೆ ಕಾಲೇಜಿನ ನಿವೃತ್ತ ಪ್ರಾಂಶುಪಾಲರಾದ ಪ್ರೊ.ಲತಾ ಕೆ.ಬಿದ್ದಪ್ಪ ಅಭಿಪ್ರಾಯಪಟ್ಟರು.
ಮೈಸೂರು ವಿವಿ ಸಂಜೆ ಕಾಲೇಜಿನಲ್ಲಿ ಸಮಾಜ ಶಾಸ್ತ್ರ ವಿಭಾಗದಿಂದ `ಅಕ್ಷರ ಮಾತೆ ಸಾವಿತ್ರಿ ಬಾ ಫುಲೆ’ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿದ ಅವರು. ಫುಲೆ ದಂಪತಿ ಬಡ ಹೆಣ್ಣು ಮಕ್ಕಳಿಗಾಗಿ 1848ರಲ್ಲಿ ತಮ್ಮ ಮನೆಯಲ್ಲಿಯೇ ಶಾಲೆ ಆರಂಭಿಸಿದರು. ಈ ಕ್ರಾಂತಿಕಾರಕ ನಿರ್ಧಾರದ ಮೂಲಕ ದೇಶದಲ್ಲಿ ಹೊಸ ಮನ್ವಂತರಕ್ಕೆ ನಾಂದಿ ಹಾಡಿದರು ಎಂದು ನೆನಪಿಸಿದರು.
ಸಾವಿತ್ರಿ ಬಾಯಿ 1831ರಲ್ಲಿ ಮಹಾರಾಷ್ಟ್ರದ ಸತಾರ ಜಿಲ್ಲೆಯ `ನೈಗಾಂ’ನಲ್ಲಿ ಜನಿಸಿದರು. ಬಾಲ್ಯವಿವಾಹ ರೂಢಿಯಲ್ಲಿದ್ದ ಸಂದರ್ಭದಲ್ಲಿ ತಮ್ಮ 8ನೇ ವಯಸ್ಸಿ ನಲ್ಲಿ 13 ವರ್ಷದ ಜ್ಯೋತಿ ಬಾ ಫುಲೆ ಅವರನ್ನು ವಿವಾಹ ವಾದರು. 1847ರಲ್ಲಿ ಶಿಕ್ಷಕ ತರಬೇತಿ ಪಡೆದ ಸಾವಿತ್ರಿ ಬಾಯಿ, ಭಾರತದ ಮೊದಲ ಶಿಕ್ಷಕಿಯಾದರು. ಪುಲೆ ದಂಪತಿ 1848ರಿಂದ 1852ರವರೆಗೆ ಬಡವರು, ಮಹಿಳೆ ಯರಿಗೆ ಶಿಕ್ಷಣ ನೀಡಲು ಮಹಾರಾಷ್ಟ್ರದ ವಿವಿಧ ಪ್ರಾಂತ್ಯ ಗಳಲ್ಲಿ 14 ಶಾಲೆಗಳನ್ನು ತೆರೆದು ಅಕ್ಷರ ಕ್ರಾಂತಿಯನ್ನೇ ಮಾಡಿದರು. ಸಾವಿತ್ರಿ ಬಾಯಿ ಲೇಖಕಿಯಾಗಿ 1854 ರಲ್ಲಿ `ಕಾವ್ಯಫೂಲೆ’ ಕವನ ಸಂಕಲನ ಪ್ರಕಟಿಸಿದರು. ಈ ಕಾವ್ಯವು 19ನೇ ಶತಮಾನದ ಸಮಾಜವನ್ನು ದಾಖ ಲಿಸುವಲ್ಲಿ ಮೈಲಿಗಲ್ಲಾಗಿದೆ. ಅವರ 2ನೇ ಕೃತಿ `ಭವನ ಕಾಶಿ ಸುಬೋಧ ರತ್ನಾಕರ’ 1891ರಲ್ಲಿ, ಜ್ಯೋತಿಬಾ ಪುಲೆ ಅವರ ಭಾಷಣಗಳ ಸಂಪಾದಿತ ಕೃತಿ 1892ರಲ್ಲಿ ಬಿಡುಗಡೆಗೊಂಡವು. 4ನೇ ಕೃತಿ `ಕರ್ಜೆ’. ಅವರ ಎಲ್ಲಾ ಕೃತಿಗಳು ಸಾಮಾಜಿಕ ಕಳಕಳಿಯುಳ್ಳವಾಗಿವೆ ಎಂದರು.
ಕಾರ್ಯಕ್ರಮದಲ್ಲಿ ಮಹಾರಾಜ ಕಾಲೇಜಿನ ನಿವೃತ್ತ ಪ್ರಾಂಶುಪಾಲರಾದ ಪ್ರೊ. ಹೆಚ್.ಎಂ. ವಸಂ ತಮ್ಮ, ವಿವಿ ಸಂಜೆ ಕಾಲೇಜು ಪ್ರಾಂಶುಪಾಲರಾದ ಬಿ.ಎನ್.ಯಶೋಧ, ಮಹಾರಾಜ ಕಾಲೇಜು ಪ್ರಾಂಶು ಪಾಲರಾದ ಪ್ರೊ.ಅನಿಟಾ ವಿಮ್ಲಾ ಬ್ರ್ಯಾಗ್ಸ್, ಸಿ.ಡಿ.ಪರಶು ರಾಮ, ರಾಚಯ್ಯ ಕೋಟೆ, ಸಮಾಜ ಶಾಸ್ತ್ರ ವಿಭಾ ಗದ ಮುಖ್ಯಸ್ಥ ಆರ್.ಲಿಂಗರಾಜು, ಮೋಹನ್‍ಕುಮಾರ್, ಪಿ.ರವಿ, ಅಧೀಕ್ಷಕ ಎಂ.ಡಿ.ಚನ್ನಬಸಪ್ಪ ಇದ್ದರು.