ಬಿಜೆಪಿಯವರು ಮುಹೂರ್ತ ಫಿಕ್ಸ್ ಮಾಡಿದ್ದಾರೆ…
ಮೈಸೂರು

ಬಿಜೆಪಿಯವರು ಮುಹೂರ್ತ ಫಿಕ್ಸ್ ಮಾಡಿದ್ದಾರೆ…

January 14, 2019

ಬೆಂಗಳೂರು: ಮೈತ್ರಿ ಸರ್ಕಾರ ಪತನಕ್ಕೆ ಬಿಜೆಪಿ ಮುಹೂರ್ತ ಫಿಕ್ಸ್ ಮಾಡಿದೆ. ಮೂವರು ಶಾಸಕರು ಮುಂಬೈಗೆ ತೆರಳಿದ್ದಾರೆ ಎಂಬುದನ್ನು ಜಲಸಂಪನ್ಮೂಲ ಸಚಿವ ಡಿ.ಕೆ.ಶಿವ ಕುಮಾರ್ ಖಚಿತಪಡಿ ಸಿದ್ದು, ನಾವೇನೂ ಸುಮ್ಮನೆ ಕೂರಲ್ಲ ಎಂದು ಗುಡುಗಿದ್ದಾರೆ.

ಇಂದು ಸುದ್ದಿಗಾರರ ಜೊತೆ ಮಾತನಾಡಿದ ಅವರು, ಮೈತ್ರಿ ಸರ್ಕಾರ ಉರುಳಿಸಲು ಬಿಜೆಪಿಯವರು ಮುಹೂರ್ತ ಫಿಕ್ಸ್ ಮಾಡಿದ್ದಾರೆ ಎಂಬುದು ನಮಗೆ ಗೊತ್ತಿದೆ. ಮೂವರು ಶಾಸಕರು ಮುಂಬೈಗೆ ಹೋಗಿದ್ದಾರೆ ಎಂಬುದೂ ಕೂಡ ಗೊತ್ತಿದೆ. ಅವರು ಯಾವ ಹೋಟೆಲ್‍ನಲ್ಲಿ ತಂಗಿದ್ದಾರೆ ಎಂಬ ಮಾಹಿತಿಯೂ ನಮಗಿದೆ ಎಂದು ಹೇಳಿದರು.

ಮುಂಬೈಗೆ ಹೋಗಿರುವ ಶಾಸಕರು ಯಾರನ್ನು ಭೇಟಿ ಮಾಡಲು ಹೋಗಿದ್ದಾರೆ? ಎಂಬುದು ಗೊತ್ತಿಲ್ಲ. ಆದರೆ ಅವರು ಅಲ್ಲಿ ರೆಸ್ಟ್ ತೆಗೆದುಕೊಳ್ಳುತ್ತಿದ್ದಾರೆ. ಬಿಜೆಪಿಯವರು ಕುದುರೆ ವ್ಯಾಪಾರದಲ್ಲಿ ತೊಡಗಿದ್ದಾರೆ. ನಮ್ಮ ಹಲವಾರು ಶಾಸಕರ ಜೊತೆ ವ್ಯವಹಾರ ಕುದು ರಿಸಲು ಪ್ರಯತ್ನ ಪಟ್ಟಿದ್ದಾರೆ. ನಮ್ಮ ಶಾಸಕರೇ ಅದನ್ನು ನಮಗೆ ತಿಳಿಸಿದ್ದಾರೆ. ಇವೆಲ್ಲವೂ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಮತ್ತು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಗೊತ್ತಿದೆ. ಆದರೂ ಅವರು ಸಹನೆಯಿಂದಿದ್ದಾರೆ. ಅವರ ಸ್ಥಾನದಲ್ಲಿ ನಾನಿದ್ದಿದ್ದರೆ ಕೇವಲ 24 ಗಂಟೆಗಳಲ್ಲೇ ಎಕ್ಸ್‍ಫೋಸ್ ಮಾಡುತ್ತಿದ್ದೆ ಎಂದು ಶಿವಕುಮಾರ್ ಹೇಳಿದರು.

ಬಿಜೆಪಿಯವರು ಮೈತ್ರಿ ಸರ್ಕಾರದ ಪತನಕ್ಕೆ `ಸಂಕ್ರಾಂತಿ’ ಮುಹೂರ್ತವನ್ನು ಫಿಕ್ಸ್ ಮಾಡಿಕೊಂಡಿದ್ದಾರೆ. ನಮ್ಮ ಅದೆಷ್ಟೋ ಶಾಸಕರು ಅವರ ಜೊತೆ ಹೋಗಿದ್ದಾರೆ ಎಂದು ಹೇಳಿಕೊಳ್ಳುತ್ತಿ ದ್ದಾರೆ. ಹೋಗಿರುವುದು ಮೂವರು ಮಾತ್ರ. ಅವರು ಮುಹೂರ್ತ ಫಿಕ್ಸ್ ಮಾಡಲಿ. ಅದಕ್ಕೆ ಏನು ಮಾಡ ಬೇಕು ಎಂಬುದು ನಮಗೂ ಗೊತ್ತಿದೆ. ನಾವೇನೂ ಸುಮ್ಮನೆ ಕೂರುವುದಿಲ್ಲ ಎಂದು ಗುಡುಗಿದ್ದಾರೆ.

Translate »