ಸರ್ಕಾರ ಪತನದ ಡೆಡ್‍ಲೈನ್ ಹೊಸದೇನಲ್ಲ
ಮೈಸೂರು

ಸರ್ಕಾರ ಪತನದ ಡೆಡ್‍ಲೈನ್ ಹೊಸದೇನಲ್ಲ

January 14, 2019

ಮೈಸೂರು: ಸಂಕ್ರಾಂತಿ ಬಳಿಕ ಮೈತ್ರಿ ಸರ್ಕಾರದ ಪತನವಾಗ ಲಿದೆ ಎಂಬ ಚರ್ಚೆ ಸಂಬಂಧ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಕುಮಾರಸ್ವಾಮಿ, ಈ ರೀತಿಯ ಡೆಡ್ ಲೈನ್ ಹೊಸದೇನಲ್ಲ ಎಂದು ಕುಟುಕಿದ್ದಾರೆ. ಮೈಸೂರಿನಲ್ಲಿ ನಡೆದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಮೈತ್ರಿ ಸರ್ಕಾರ ರಚನೆಯಾದಾಗಿನಿಂದ ಬಿಜೆಪಿಯವರು ಅದೆಷ್ಟೋ ಬಾರಿ ಡೆಡ್‍ಲೈನ್ ನೀಡಿದ್ದಾರೆ. ಈಗ ಸಂಕ್ರಾಂತಿ ಗಡುವು ನೀಡಿದ್ದಾರೆ.

ಏನೇನೋ ಊಹಾಪೋಹಗಳನ್ನು ಮಾಧ್ಯಮಗಳಿಗೆ ತಿಳಿಸುತ್ತಿ ದ್ದಾರೆ. ಆದರೆ ನನ್ನನ್ನು ನೋಡಿ. ನನ್ನಲ್ಲಿ ಯಾವುದೇ ಆತಂಕವಿಲ್ಲ. ಆರಾಮವಾಗಿ ದ್ದೇನೆ ಎಂದು ಟಾಂಗ್ ನೀಡಿದರು. ರೈತರ ರಕ್ಷಣೆ ಬಗ್ಗೆ ನಾನು ಬಿಜೆಪಿಯವರಿಂದ ಸಲಹೆ ಪಡೆಯುವ ಅಗತ್ಯವಿಲ್ಲ. ರಾಷ್ಟ್ರೀಕೃತ ಬ್ಯಾಂಕ್‍ಗಳಲ್ಲಿರುವ ರೈತರ 2 ಲಕ್ಷದವರೆ ಗಿನ ಸಾಲ ಮನ್ನಾ ಸಂಬಂಧ ದೇಶಕ್ಕೆ ಮಾದರಿಯಾದ ಯೋಜನೆ ಸಿದ್ಧವಾಗುತ್ತಿದೆ. ಇದರಲ್ಲಿ ಯಾವುದೇ ದುರುಪಯೋಗಕ್ಕೆ ಅವಕಾಶವಾಗದಂತೆ ಜ.30ರೊಳಗೆ ಫಲಾನು ಭವಿಗಳ ಮನೆಗೆ ಸಾಲಮುಕ್ತ ಪ್ರಮಾಣ ಪತ್ರ ಕಳುಹಿಸಲುಸಿದ್ಧತೆ ನಡೆದಿದೆ. `ಬಡವರ ಬಂಧು’ ಯೋಜನೆಯಡಿ ರಾಜ್ಯದ ಸುಮಾರು 4.50 ಲಕ್ಷ ಬೀದಿ ಬದಿ ವ್ಯಾಪಾರಿಗಳಿಗೆ 1ರಿಂದ 10 ಸಾವಿರ ರೂ.ವರೆಗೆ ಬಡ್ಡಿ ರಹಿತ ಸಾಲ ನೀಡಿ, ಕಂತಿನ ರೂಪದಲ್ಲಿ ಮರುಪಾವತಿಗೆ 3 ತಿಂಗಳ ಕಾಲಾವಕಾಶ ನೀಡಲಾಗುವುದು. ಮಹಿಳಾ ಸ್ವಸಹಾಯ ಗುಂಪುಗಳಿಗೆ 5 ಲಕ್ಷ ಬಡ್ಡಿ ರಹಿತ, ಶೇ.4ರ ಬಡ್ಡಿದರದಲ್ಲಿ 5 ಲಕ್ಷ ಸೇರಿದಂತೆ ಒಟ್ಟು 10 ಲಕ್ಷ ರೂ. ಸಾಲ ಸೌಲಭ್ಯ ರೈತರು ಮುಂದೆ ಸಾಲಗಾರರಾಗದಂತೆ ಇಸ್ರೇಲ್ ಮಾದರಿ ಕಾರ್ಯಕ್ರಮಗಳನ್ನು ಅನುಷ್ಠಾನಕ್ಕೆ ತರುವುದಾಗಿ ಭರವಸೆ ನೀಡಿದರು.

Translate »