ಇಂದಿನಿಂದ ರೈತರ ಪರ ಬಿಜೆಪಿ ಹೋರಾಟ
ಮೈಸೂರು

ಇಂದಿನಿಂದ ರೈತರ ಪರ ಬಿಜೆಪಿ ಹೋರಾಟ

November 21, 2018

ಬೆಂಗಳೂರು:  ಬಾಯಿ ಮಾತಿನ ಭರವಸೆ ಬಿಟ್ಟು ಕೃಷಿ ಸಾಲ ಮನ್ನಾ ಮಾಡಿ, ನಂತರ ವಿವರವನ್ನು ಜನತೆ ಮುಂದಿಡಿ ಎಂದು ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರಿಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಸವಾಲು ಹಾಕಿದ್ದಾರೆ.

ರಾಷ್ಟ್ರೀಕೃತ ಬ್ಯಾಂಕ್‍ಗಳಲ್ಲಿ ರೈತರು ಪಡೆದ ಸಾಲದ ಪೈಕಿ ಒಂದು ಪೈಸೆಯೂ ಮನ್ನಾ ಆಗಿಲ್ಲ. ಬೆಳಗಾದರೆ ಅನ್ನದಾತ ರನ್ನು ದಾರಿ ತಪ್ಪಿಸುವ ಕೆಲಸ ಮಾಡುತ್ತಿ ದ್ದೀರಿ ಎಂದು ಇಂದಿಲ್ಲಿ ಸುದ್ದಿಗೋಷ್ಠಿ ಯಲ್ಲಿ ಕಿಡಿಕಾರಿದರು. ವಾಗ್ದಾನದಂತೆ ಕೃಷಿ ಸಾಲ ಮನ್ನಾ ಮಾಡಿದ್ದರೆ, ನಿಮ್ಮ ಐದು ತಿಂಗಳ ಆಡಳಿತದಲ್ಲಿ 200 ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿರಲಿಲ್ಲ. ರೈತರ ಸಮಸ್ಯೆ ನಿವಾರಣೆ ಹಾಗೂ ಬರ ಪರಿಸ್ಥಿತಿ ನಿಭಾಯಿಸುವಲ್ಲಿ ಸರ್ಕಾರದ ವೈಫಲ್ಯ ಖಂಡಿಸಿ ನಾಳೆಯಿಂದ ರಾಜ್ಯಾ ದ್ಯಂತ ಜಿಲ್ಲಾ ಮತ್ತು ತಾಲೂಕು ಮಟ್ಟ ದಲ್ಲಿ ತೀವ್ರ ಹೋರಾಟ ಹಮ್ಮಿಕೊಳ್ಳಲಾಗು ವುದು ಎಂದರು. ಒಂದೆಡೆ ಅತಿವೃಷ್ಟಿ, ಮತ್ತೊಂ ದೆಡೆ 100 ತಾಲೂಕುಗಳು ಬರಗಾಲಕ್ಕೆ ಸಿಲುಕಿ ರೈತರು ಕಂಗಾಲಾಗಿದ್ದಾರೆ. ನೀವು ಮಾತ್ರ ಬೆಳಿಗ್ಗೆ ಎದ್ದರೆ, ಕೃಷಿಕರ ಜಪ ಮಾಡುತ್ತೀರಿ, ಆದರೆ ವಾಸ್ತವ ದಲ್ಲಿ ಏನೂ ಪ್ರಯೋಜನ ಆಗಿಲ್ಲ.

ಕೃಷಿ ಸಾಲ 49 ಸಾವಿರ ಕೋಟಿ ರೂ. ಮನ್ನಾ ಮಾಡಿದ್ದೀನಿ ಅಂತ ಹೇಳ್ತೀರಾ, ಎಲ್ಲಿ ಮಾಡಿದ್ದೀರಾ, ಮಾಡಿದ ನಂತರ ಹೇಳಿ, ಸುಳ್ಳು ಹೇಳಿಕೊಂಡು ಕಾಲಹರಣ ಮಾಡಬೇಡಿ. ದೇಶದಲ್ಲಿ ಅತ್ಯಂತ ದೊಡ್ಡ ಸಮಯಸಾಧಕ ರಾಜಕಾರಣಿ ಗಳು ಎಂಬುದಾಗಿ ಅಪ್ಪ-ಮಕ್ಕಳು ಖ್ಯಾತಿ ಪಡೆದಿದ್ದಾರೆ. ರೈತರ ವಿಷಯದಲ್ಲೂ ಅದನ್ನೇ ಮುಂದುವರೆಸಿದ್ದೀರಲ್ಲಾ ಎಂದು ಕಟುವಾಗಿ ಟೀಕಿಸಿದರು.
ರೈತರ ಆತ್ಮಹತ್ಯೆ ಮುಂದುವರೆದಿದೆ, ಬರ ಗಾಲ ತಾಂಡವವಾಡುತ್ತಿದೆ. ನೀವು ಸಮಸ್ಯೆ ಬಗೆಹರಿಸಲು ಇನ್ನೂ ರಣರಂಗವನ್ನೇ ಪ್ರವೇಶಿಸಿಲ್ಲ. ಸರ್ಕಾರ ಇದೆಯೇ, ಇದ್ದರೆ ಎಲ್ಲಿ ಕೆಲಸ ಮಾಡುತ್ತಿದೆ, ಒಂದು ವೇಳೆ ಕೆಲಸ ಮಾಡಿದ್ದರೆ ರೈತರು ಏಕೆ ಸಾಯುತ್ತಿ ದ್ದರು. ಹೋರಾಟ ಮಾಡಿದ ರೈತ ಸಮು ದಾಯದ ಬಗ್ಗೆ ಮುಖ್ಯಮಂತ್ರಿ ಅವಹೇಳನ ಕಾರಿಯಾಗಿ ಮಾತನಾಡಿರುವುದು ಅಕ್ಷಮ್ಯ ಅಪರಾಧ, ಹೋರಾಟ ಮಾಡುತ್ತಿದ್ದ ಮಹಿಳೆಯನ್ನ 4 ವರ್ಷದಿಂದ ಎಲ್ಲಿ ಮಲಗಿದ್ದೆ ನೀನು ಅಂತ ಕೇಳುವುದು ಇಡೀ ನಾಡಿನ ಮಹಿಳಾ ಸಮೂಹಕ್ಕೆ ಮಾಡಿದ ಅವಮಾನ. ಈ ಬಗ್ಗೆ ಕ್ಷಮೆ ಕೇಳಬೇಕು ಎಂದರೂ ತಾವು ಹೇಳಿದ್ದೇ ಸರಿ ಅಂತ ಮುಖ್ಯಮಂತ್ರಿ ಸಮರ್ಥನೆ ಮಾಡಿಕೊಳ್ಳುತ್ತಿದ್ದಾರೆ. ಕಳೆದ 40 ವರ್ಷಗಳಲ್ಲಿ ಯಾವ ಮುಖ್ಯಮಂತ್ರಿಯೂ ರೈತ ಹೋರಾಟಗಾರರ ಬಗ್ಗೆ ಈ ರೀತಿ ಹಗುರವಾಗಿ ಮಾತನಾಡಿದ ಉದಾಹರಣೆ ಇಲ್ಲ. ಯಾವುದೇ ಸಾಮಾನ್ಯ ವ್ಯಕ್ತಿಯನ್ನು ಕೇಳಿ, ನೀನು ಎಲ್ಲಿ ಮಲಗಿದ್ದೆ ಅನ್ನೋದರ ಅರ್ಥ ಏನೆಂದು ಹೇಳುತ್ತಾರೆ, ಆದರೆ, ಮುಖ್ಯಮಂತ್ರಿ ದಿನವಿಡೀ ತಮ್ಮ ಹೇಳಿಕೆಯನ್ನೇ ಸಮರ್ಥನೆ ಮಾಡಿಕೊಳ್ಳುತ್ತಿದ್ದಾರೆ, ತನ್ನನ್ನು ನಾಲಾಯಕ್ ಮುಖ್ಯಮಂತ್ರಿ ಅನ್ನೋದು ಅಪಮಾನ ಅಂತಾರೆ, ನಾಲಾಯಕ್ ಎನ್ನುವುದು ಕೆಟ್ಟ ಪದವಲ್ಲ, ನಾಲಾಯಕ್ ಅಂದ್ರೆ ಹುದ್ದೆಗೆ ಲಾಯಕ್ ಅಲ್ಲ ಅಂತ ಅರ್ಥ. ರೈತ ಮಹಿಳೆ ತಮ್ಮ ಮಾತಿನ ಅರ್ಥದಲ್ಲಿ ನೀವು ಮುಖ್ಯಮಂತ್ರಿ ಹುದ್ದೆಗೆ ಲಾಯಕ್ ಅಲ್ಲ ಅಂತ ಹೇಳಿದ್ದಾರೆ.

Translate »