ಮುಖ್ಯಮಂತ್ರಿ ಕುಮಾರಸ್ವಾಮಿ ವಿರುದ್ಧ ಬಿಜೆಪಿ ಪ್ರತಿಭಟನೆ
ಹಾಸನ

ಮುಖ್ಯಮಂತ್ರಿ ಕುಮಾರಸ್ವಾಮಿ ವಿರುದ್ಧ ಬಿಜೆಪಿ ಪ್ರತಿಭಟನೆ

November 22, 2018

ರೈತರ ಬಗ್ಗೆ ಹಗುರ ಮಾತಿಗೆ ತೀವ್ರ ಖಂಡನೆ, ಕಬ್ಬು ಬೆಳೆಗಾರರ ಸಮಸ್ಯೆ ಪರಿಹಾರಕ್ಕೆ ಆಗ್ರಹ

ಹಾಸನ: ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ರಾಜ್ಯದ ರೈತರ ಬಗ್ಗೆ ಹಗುರವಾಗಿ ಮಾತನಾಡಿದ್ದಾರೆ ಎಂದು ಆರೋಪಿಸಿ ನಗರದಲ್ಲಿ ಬುಧವಾರ ಬಿಜೆಪಿ ಜಿಲ್ಲಾ ಘಟಕದಿಂದ ಪ್ರತಿಭಟನೆ ನಡೆಯಿತು.ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಸಮಾ ವೇಶಗೊಂಡ ಪಕ್ಷದ ಕಾರ್ಯಕರ್ತರು ಹಾಗೂ ಮುಖಂಡರು ಕುಮಾರಸ್ವಾಮಿ ಅವರ ವಿರುದ್ಧ ಘೋಷಣೆ ಕೂಗಿದರು.

ರೈತರ ಮಗ ಎಂದು ಅಧಿಕಾರಕ್ಕೆ ಬಂದ ಹೆಚ್.ಡಿ.ಕುಮಾರಸ್ವಾಮಿ ಅವರು ರಾಜ್ಯದ ರೈತರ ಬಗ್ಗೆ ಹಗುರವಾಗಿ ಮಾತನಾಡಿ ರುವುದು ದೌರ್ಭಾಗ್ಯ. ಅವರು ಅನೈತಿಕ ವಾಗಿ ಮುಖ್ಯಮಂತ್ರಿ ಪದವಿ ಪಡೆದು, ನಾವು ರೈತ ಕುಟುಂಬದ ಮಕ್ಕಳು ಎಂದು ಬಿಂಬಿಸಿಕೊಂಡು ಇಂದು ಅನ್ನದಾತರನ್ನು ಗೂಂಡಾಗಳು ಎಂದು ಕರೆದಿರುವುದರಿಂದ ಅವರ ಬಣ್ಣ ಬಯಲಾಗಿದೆ ಎಂದರು.
ಕಬ್ಬಿಗೆ ಬೆಂಬಲ ಬೆಲೆ ನೀಡಬೇಕು ಎಂದು ಬೇಡಿಕೆ ಇಟ್ಟು ಪ್ರತಿಭಟನೆ ಮಾಡಿದ ರೈತರ ಮೇಲೆ ದೌರ್ಜನ್ಯವೆಸಗಿ ರೈತರ ಮೇಲೆ ಪ್ರಕರಣಗಳನ್ನು ದಾಖಲೆ ಮಾಡಿರುವುದು ಖಂಡನೀಯವಾಗಿದೆ. ಸಾಲಮನ್ನಾ ಘೋಷಣೆಯ ನಂತರವೂ ರಾಜ್ಯದ ರೈತ ರಿಗೆ ಬ್ಯಾಂಕ್‍ಗಳು ನೋಟೀಸ್ ನೀಡು ತ್ತಿದೆ. ಕಬ್ಬು ಬೆಳೆಗಾರರಿಗೆ ಸಕ್ಕರೆ ಕಾರ್ಖಾನೆ ಗಳಿಂದ ಬಾಕಿಯಿರುವ ಮೊತ್ತವನ್ನು ಪಾವ ತಿಸಲು ಸರಕಾರ ಸಂಪೂರ್ಣ ವಿಫಲ ವಾಗಿದೆ ಎಂದು ದೂರಿದರು.

ರೈತ ಪರ ಸರ್ಕಾರ ಎಂದು ಬಿಂಬಿ ಸುವ ಇವರು ಬೆಳಗಾವಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ರೈತ ಮಹಿಳೆಯನ್ನು ಕಳೆದ ನಾಲ್ಕು ವರ್ಷಗಳಿಂದ ಎಲ್ಲಿ ಮಲ ಗಿದ್ದೆ ಎಂದು ಅವಾಚ್ಯ ಪದಗಳಿಂದ ನಿಂದಿಸಿ ರುವುದು ನಾಡಿನ ಮುಖ್ಯಮಂತ್ರಿಗೆ ಶೋಭೆ ತರುವುದಿಲ್ಲ. ಕಬ್ಬಿನ ಕನಿಷ್ಠ ಬೆಂಬಲ ಬೆಲೆ ನೀಡುವಂತೆ ಹೋರಾಟ ನಡೆಸುತ್ತಿರುವ ರೈತರನ್ನು ನೀವು ರೈತರಲ್ಲ, ಗೂಂಡಾಗಳು ಎಂದು ಜರಿದು ಅವರನ್ನೆಲ್ಲಾ ಬಂಧಿಸಿ ರುವುದನ್ನು ಉಗ್ರವಾಗಿ ಖಂಡಿಸುತ್ತೇವೆ. ಬಂಧಿಸಿದ ರೈತರನ್ನು ಈ ಕೂಡಲೇ ಬಿಡು ಗಡೆಗೊಳಿಸಬೇಕು ಎಂದು ಆಗ್ರಹಿಸಿದರು.

ರೈತರಿಗೆ ಬೆಂಬಲ ಬೆಲೆ ಕೊಡಲು ನಾವೇನು ನೋಟ್ ಪ್ರಿಂಟಿಂಗ್ ಮಿಷನ್ ಇಟ್ಟಿಲ್ಲ ಎಂದಿರುವ ಈ ನಾಡಿನ ಪಿಡಬ್ಲೂಡಿ ಸೂಪರ್ ಸಿಎಂ ಹಿರಿಯ ಸೋದರನು ರೈತರ ಬಗ್ಗೆಯ ನಿರ್ಲಕ್ಷ್ಯ ಧೋರಣೆ ಹೊಂದಿ ರುವುದನ್ನು ಖಂಡಿಸುವುದಾಗಿ ಹೇಳಿದರು.
ಪ್ರಚಾರಗಿಟ್ಟಿಸಲು ಸುವರ್ಣಸೌಧದಲ್ಲಿ ರೈತರ ಜೊತೆ ಸಭೆ ನಡೆಸುತ್ತೇನೆ ಎಂದು ಸಿಎಂ ರೈತರನ್ನು ವಂಚಿಸಿ ಪಲಾಯನ ಮಾಡಿದ್ದು, ರೈತರ ಬಗ್ಗೆ ಕಾಳಜಿ ತೋರಿ ಸುತ್ತದೆ ಎಂದು ವ್ಯಂಗ್ಯವಾಡಿದರು.

ಕೇಂದ್ರ ಸರ್ಕಾರ ರೈತರಿಗೆ ಬೆಂಬಲ ಬೆಲೆ ನೀಡಿದ್ದರೂ ರಾಜ್ಯ ಸರ್ಕಾರ ಇನ್ನು ಖರೀದಿ ಕೇಂದ್ರ ಆರಂಭಿಸದೇ ರೈತರು ಕಂಗಾಲಾಗಿ ದ್ದಾರೆ. ಈ ಪರಿಸ್ಥಿತಿಯಲ್ಲಿ ರಾಜ್ಯ ಸರ್ಕಾರ ರೈತರ ಜೊತೆ ಚೆಲ್ಲಾಟವಾಡುತ್ತಿದೆ. ಈ ಕೂಡಲೇ ರಾಜ್ಯ ಸರ್ಕಾರ ಖರೀದಿ ಕೇಂದ್ರ ಆರಂ ಭಿಸಿ ರೈತರಿಗೆ ಸರಿಯಾದ ರೀತಿಯಲ್ಲಿ ಬೆಂಬಲ ನೀಡಬೇಕು ಎಂದು ಒತ್ತಾಯಿಸಿದರು.

ಹಾಸನ ಜಿಲ್ಲೆಯ ಏಕೈಕ ಸಕ್ಕರೆ ಕಾರ್ಖಾನೆ ರೈತರಿಗೆ ಬಾಕಿ ನೀಡಲಾಗದೆ ಹಲವಾರು ವರ್ಷಗಳಿಂದ ಕಾರ್ಖಾನೆಯನ್ನು ಮುಚ್ಚ ಲಾಗಿದೆ. ಹೇಮಾವತಿ ಸಕ್ಕರೆ ಕಾರ್ಖಾನೆ ಯನ್ನು ಶೀಘ್ರದಲ್ಲಿಯೇ ಪ್ರಾರಂಭಿಸಿ ಕಬ್ಬು ಬೆಳೆಗಾರ ರೈತರ ಸಂಕಷ್ಟ ಪರಿಹರಿಸಬೇಕು ಎಂದು ಹೇಳಿದರು.

ಜಿಲ್ಲೆಯ ಬರಪೀಡಿತ ತಾಲೂಕುಗಳಿಗೆ ಸರ್ಕಾರ ಸ್ಪಂದಿಸಿ ಅಗತ್ಯ ನೆರವನ್ನು ನೀಡ ಬೇಕು. ಅತಿಯಾದ ಮಳೆಯಿಂದ ಹಾನಿ ಗೊಳಗಾಗಿರುವ ಸಕಲೇಶಪುರ, ಅರ ಕಲಗೂಡು ತಾಲೂಕುಗಳಿಗೆ ಇಲ್ಲಿಯ ವರೆಗೆ ಯಾವುದೇ ಪರಿಹಾರ ನೀಡಿರು ವುದಿಲ್ಲ. ಜಿಲ್ಲಾಡಳಿತ ಅತಿವೃಷ್ಟಿಯಿಂದ ನೊಂದಿರುವ ರೈತರಿಗೆ ಪರಹಾರ ನೀಡ ಬೇಕು. ಆಲೂಗಡ್ಡೆ, ತೆಂಗು, ಕಾಫಿ ಇನ್ನಿ ತರ ಬೆಳೆಗಳನ್ನು ಬೆಳೆಯುವ ರೈತರ ಸಮಸ್ಯೆ ಗಳನ್ನು ಬಗೆಹರಿಸಲು ಸರ್ಕಾರ ಸಂಪೂರ್ಣ ವಿಫಲವಾಗಿದ್ದು, ಈ ಕೂಡಲೆ ಅಗತ್ಯ ಕ್ರಮಗಳನ್ನು ತುರ್ತಾಗಿ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿ ಮನವಿ ಸಲ್ಲಿಸಿದರು.

ಪ್ರತಿಭಟನೆಯಲ್ಲಿ ಶಾಸಕ ಪ್ರೀತಮ್ ಜೆ. ಗೌಡ, ಪಕ್ಷದ ಜಿಲ್ಲಾಧ್ಯಕ್ಷ ಯೋಗಾ ರಮೇಶ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ವೇಣು ಗೋಪಾಲ್, ನಗರಾಭಿವೃದ್ಧಿ ಪ್ರಾಧಿ ಕಾರ ಮಾಜಿ ಅಧ್ಯಕ್ಷ ನವೀಲೆ ಅಣ್ಣಪ್ಪ, ಭುವನೇಶ್, ರಾಜ್ಯ ರೈತ ಮೋರ್ಚಾದ ರೇಣುಕುಮಾರ್, ಲಕ್ಷ್ಮಣ್, ಯುವ ಮೋರ್ಚಾ ಜಿಲ್ಲಾಧ್ಯಕ್ಷ ಹೆಚ್.ಎನ್. ನಾಗೇಶ್, ಮಾಜಿ ಅಧ್ಯಕ್ಷ ಚನ್ನ ಕೇಶವ ಇತರರು ಪಾಲ್ಗೊಂಡಿದ್ದರು.

Translate »