ಮಂಡ್ಯ: ನಗರದಲ್ಲಿ ಹಾಡಹಗಲೇ ಸರಗಳ್ಳರು ತಮ್ಮ ಕೈಚಳಕ ತೋರಿದ್ದು, ನಾಲೆಯಲ್ಲಿ ಬಟ್ಟೆ ತೊಳೆ ಯುತ್ತಿದ್ದ ಮಹಿಳೆಯ ಸರ ಕಿತ್ತು ಪರಾರಿ ಯಾಗಿದ್ದಾರೆ. ಮಂಡ್ಯ ತಾಲೂಕಿನ ಚೆನ್ನಗಿರಿದೊಡ್ಡಿ ಗ್ರಾಮದ ಸಾಕಮ್ಮ ಸರ ಕಳೆದುಕೊಂಡವರು. ಇವರ ಬಳಿ ವಿಳಾಸ ಕೇಳುವ ನೆಪದಲ್ಲಿ ಬೈಕ್‍ನಲ್ಲಿ ಬಂದ ಅಪರಿಚಿತ ವ್ಯಕ್ತಿಗಳು ಕತ್ತಿನಲ್ಲಿದ್ದ 20 ಗ್ರಾಂ. ಚಿನ್ನದ ಸರ ಕಿತ್ತು ಪರಾರಿಯಾಗಿ ದ್ದಾರೆ. ಮಂಡ್ಯ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸರಗಳ್ಳನಿ ಗಾಗಿ ಪೊಲೀಸರು ಬಲೆ ಬೀಸಿದ್ದಾರೆ.
