ಸಿಲಿಂಡರ್ ಸ್ಫೋಟ; ಮಹಿಳೆ ಸಾವು
ಮಂಡ್ಯ

ಸಿಲಿಂಡರ್ ಸ್ಫೋಟ; ಮಹಿಳೆ ಸಾವು

November 22, 2018

ಕೆ.ಆರ್.ಪೇಟೆ: ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡು ಗೃಹಿಣಿ ಮೃತಪಟ್ಟಿರುವ ಘಟನೆ ಪಟ್ಟಣದ ಕ್ರಿಶ್ಚಿಯನ್ ಕಾಲೋನಿಯಲ್ಲಿ ನಡೆದಿದೆ.

ಆಂಥೋನಿಯಮ್ಮ(50) ಮೃತಪಟ್ಟ ಗೃಹಿಣಿ. ಇವರು ತಮ್ಮ ಮನೆಯಲ್ಲಿ ಮಂಗಳವಾರ ರಾತ್ರಿ ಅಡುಗೆ ಮಾಡುತ್ತಿ ದ್ದಾಗ ಆಕಸ್ಮಿಕವಾಗಿ ಅಡುಗೆ ಗ್ಯಾಸ್ ಸಿಲಿಂಡರ್ ಸ್ಫೋಟ ಗೊಂಡಿದೆ. ಪರಿಣಾಮ ಆಂಥೋನಿಯಮ್ಮ ಗಂಭೀರವಾಗಿ ಗಾಯಗೊಂಡರು. ಕೂಡಲೇ ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ, ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಕೆ.ಆರ್.ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಇಂದು ಬೆಳಿಗ್ಗೆ ಕೊನೆಯು ಸಿರೆಳೆದಿದ್ದಾರೆ. ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Translate »