ಮಳವಳ್ಳಿ: ಮನೆಯ ಮುಂಬಾ ಗಿಲು ಮೀಟಿ ಒಳನುಗ್ಗಿದ ಕಳ್ಳರು 2 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಸೇರಿ, 4 ಸಾವಿರ ನಗದು ದೋಚಿರುವ ಘಟನೆ ಪಟ್ಟಣದಲ್ಲಿ ಮಂಗಳವಾರ ರಾತ್ರಿ ನಡೆಡಿದೆ.
ಪಟ್ಟಣದ ಎನ್‍ಇಎಸ್ ಬಡಾವಣೆಯ ಶೆಟ್ಟಹಳ್ಳಿ ರಸ್ತೆಯಲ್ಲಿರುವ ಗ್ರಾಮಲೆಕ್ಕಾ ಧಿಕಾರಿ ಮಹೇಶ್ ಅವರ ಮನೆಯ ಮುಂಬಾಗಿಲನ್ನು ಹಾರೆಯಿಂದ ಮೀಟಿ ಒಳನುಗ್ಗಿದ ಕಳ್ಳರು ಸರ-ಉಂಗುರ, ಬೆಳ್ಳಿ ಆಭರಣ ಸೇರಿದಂತೆ ಹಲವು ಬೆಲೆ ಬಾಳುವ ವಸ್ತುಗಳು ಹಾಗೂ 4 ಸಾವಿರ ನಗದನ್ನು ದೋಚಿದ್ದಾರೆ. ಮಹೇಶ್ ಕರ್ತವ್ಯ ನಿಮಿತ್ತ ಕೆ.ಎಂ.ದೊಡ್ಡಿಗೆ ತೆರಳಿ ಅಲ್ಲೇ ಉಳಿದುಕೊಂಡಿದ್ದರು. ಇತ್ತ ಕುಟುಂಬದವರು ಸಹ ಪೂಜೆಗೆಂದು ಬೇರೆಡೆಗೆ ತೆರಳಿದ್ದರೆನ್ನಲಾಗಿದೆ. ಇದನ್ನರಿತ ಖದೀಮರು ಹೊಂಚು ಹಾಕಿ ಕೃತ್ಯ ನಡೆಸಿ ದ್ದಾರೆ. ಸುದ್ದಿ ತಿಳಿಯುತ್ತಿದ್ದಂತೆ ಬಡಾ ವಣೆಯ ನಿವಾಸಿಗಳು ಮನೆ ಮುಂದೆ ಜಮಾಯಿಸಿದರು. ಸ್ಥಳಕ್ಕಾಗಮಿಸಿದ ಪಟ್ಟಣ ಪೊಲೀಸ್ ಇನ್ಸ್‍ಪೆಕ್ಟರ್ ಗಂಗಾಧರ್ ಪರಿ ಶೀಲನೆ ನಡೆಸಿದರು. ಮಂಡ್ಯದ ಬೆರಳಚ್ಚು ತಜ್ಞ ಮಂಜು, ಶ್ವಾನ ದಳದ ತಂಡ ಆಗಮಿಸಿ ಮಾಹಿತಿ ಸಂಗ್ರಹಿಸಿದರು. ಈ ಸಂಬಂಧ ಪಟ್ಟಣ ಠಾಣೆ ಪ್ರಕರಣ ದಾಖಲಾಗಿದೆ.