ಪುಸ್ತಕ ಬದುಕು ಕಟ್ಟಿಕೊಡುತ್ತದೆ: ಚಂದ್ರಕಾಂತ್ ಪಡೆಸೂರು
ಹಾಸನ

ಪುಸ್ತಕ ಬದುಕು ಕಟ್ಟಿಕೊಡುತ್ತದೆ: ಚಂದ್ರಕಾಂತ್ ಪಡೆಸೂರು

November 22, 2018

ಹಾಸನ: ಒಳ್ಳೆಯ ಪುಸ್ತಕಗಳು ಮನುಷ್ಯನ ಬದುಕು ಕಟ್ಟಿಕೊಡುತ್ತದೆ ಎಂದು ಸಾಹಿತಿ ಚಂದ್ರಕಾಂತ್ ಪಡೆಸೂರು ಹೇಳಿದರು.

ನಗರದ ಕೇಂದ್ರ ಗ್ರಂಥಾಲಯ ಆವರಣ ದಲ್ಲಿ ರಾಷ್ಟ್ರೀಯ ಗ್ರಂಥಾಲಯ ಸಪ್ತಾಹ ಅಂಗವಾಗಿ ಮಂಗಳವಾರ ಬೆಳಿಗ್ಗೆ ನಡೆದ ಕಾರ್ಯಕ್ರಮ ಉದ್ಘಾಟಿಸಿ  ಮಾತನಾಡಿದÀರು.

ಕಂಪ್ಯೂಟರ್, ಮೊಬೈಲ್ ಮತ್ತು ಇಂಟರ್ ನೆಟ್ ಕಂಡು ಹಿಡಿದಿದ್ದು ಮಾನವನ ಮೆದುಳು. ಎಲ್ಲಾ ತಂತ್ರಜ್ಞಾನದ ತಾಯಿ ನಮ್ಮ ಮೆದುಳು ಆಗಿರುವುದರಿಂದ ಮೆದುಳನ್ನು ಎಂದು ನಿರ್ಲಕ್ಷ್ಯ ಮಾಡಬಾರದು. ಶಿಕ್ಷಕರು ಮತ್ತು ಪೋಷಕರು ಆದಷ್ಟು ಮಕ್ಕಳ ಮೆದುಳಿಗೆ ತರಬೇತಿ ಕೊಡುವ ಕೆಲಸ ಮಾಡಬೇಕು ಎಂದರು.

ಶಾಲೆಯಲ್ಲಿ ಮಕ್ಕಳಿಗೆ ಪದ್ಯವನ್ನು ಕಂಠ ಪಾಠ ಮಾಡಿ ಎಂದು ಶಿಕ್ಷಕರು ಹೇಳುತ್ತಾರೆ. ಹಿಂದೆ ರಾಮಾಯಣ, ಮಹಾಭಾರತ ಪುಸ್ತಗಳು ದೊಡ್ಡದಾಗಿತ್ತು. 25 ಸಾವಿರ ಶ್ಲೋಕದ ರಾಮಾಯಣವನ್ನು ಬಾಯಿ ಯಿಂದ ಬಾಯಿಗೆ ಹೇಳಿಕೊಂಡು ಬಂದಿ ದ್ದರು. ಇಂದಿನ ಮೆಮೋರಿ ಜಿಬಿಯ ಒಳಗೆ ಲೋಡ್ ಮಾಡಿಕೊಳ್ಳುವಂತೆ ಹಿಂದಿನ ದಿನಗಳಲ್ಲಿ ಇವನ್ನೆಲ್ಲಾ ತಲೆಯಲ್ಲಿ ತುಂಬಿ ಕೊಂಡು ಇರುತ್ತಿದ್ದರು ಎಂದು ತಿಳಿಸಿದರು.

ನಮ್ಮ ಹಿರಿಯರು ಜಾನಪದ ಪದ್ಯ ಗಳನ್ನು ಬೆಳಗ್ಗೆಯಿಂದ ರಾತ್ರಿವರೆಗೂ ಹಾಡು ತ್ತಿದ್ದರು. ಯಾರು ಕೂಡ ಮೆದುಳನ್ನು ನಿರ್ಲಕ್ಷ್ಯ ಮಾಡಬಾರದು, ಗೌರವವನ್ನು ಇಟ್ಟುಕೊಂಡಿರಬೇಕು. ಒಬ್ಬ ಒಳ್ಳೆಯ ಗೆಳೆಯ, ಗೆಳತಿ ಕಾಲಮಾನದಲ್ಲಿ ಕೆಟ್ಟವ ರಾಗಬಹುದು, ಆದರೇ ಒಂದು ಒಳ್ಳೆಯ ಪುಸ್ತಕ ಕೆಟ್ಟದಾಗಿ ಬದಲಾಗಲು ಸಾಧ್ಯವಿಲ್ಲ ಎಂದರು.

ನಿಮ್ಮ ಒಳ್ಳೆಯ ಸಂಗಾತಿ ಎಂದರೇ ಪುಸ್ತಕ ಗಳು. ಇಡೀ ಬದುಕನ್ನು ಅರ್ಥ ಮಾಡಿ ಕೊಂಡು ನಿಮ್ಮ ಸಹಾಯಕ್ಕೆ ಜ್ಞಾನಾರ್ಜನೆ ಯಾಗಿ ಪುಸ್ತಕಗಳು ಬಿಟ್ಟರೇ ಉಳಿದ ಯಾವುದೂ ನಿಮ್ಮ ಜೊತೆ ಬರುವುದಿಲ್ಲ ಎಂದು ಸಲಹೆ ನೀಡಿದರು.

ಪೋಷಕರು ತಮ್ಮ ಮಕ್ಕಳಿಗೆ ಒಳ್ಳೆಯ ಪುಸ್ತಕವನ್ನು ತಂದು ಕೊಡುವ ಮೂಲಕ ಅವರಲ್ಲಿ ಉತ್ತಮ ಸಂಸ್ಕøತಿ ಬೆಳೆಸುವ ಜೊತೆಗೆ ಹವ್ಯಾಸವನ್ನಾಗಿ ಮಾಡಬೇಕು. ದಿನದ ಒಂದು ಗಂಟೆಗಳ ಕಾಲವಾದರೂ ಪುಸ್ತಕ ಓದಲು ಸಮಯವನ್ನು ಮೀಸ ಲಾಗಿಡಬೇಕು ಎಂದು ಕರೆ ನೀಡಿದರು.

ಸಾಹಿತಿ ಗೊರೂರು ಶಿವೇಶ್ ಮಾತ ನಾಡಿ, ಹಿಂದಿನ ಮಹನೀಯರ ಚರಿತ್ರೆ ತಿಳಿದುಕೊಳ್ಳಬೇಕಾದರೇ ಪುಸ್ತಕ ಅವಶ್ಯಕ. ಓದಿದದವರಿಗೆ ಅದರ ಮಹತ್ವ ತಿಳಿಯು ತ್ತದೆ. ಜಗತ್ತು ವೈಜ್ಞಾನಿಕವಾಗಿ ಮುಂದು ವರೆದರೂ ಪುಸ್ತಕಗಳಿಗೆ ಅದು ಸರಿಸಮ ವಲ್ಲ ಎಂದರು.

ಪುಸ್ತಕ ಜ್ಞಾನ ಮತ್ತು ಅರಿವಿನ ವಿಸ್ತರಣೆ ಪುಸ್ತಕಗಳು ಇತಿಹಾಸಗಳ ಘಟನೆಗಳನ್ನು ತಿಳಿಸುತ್ತದೆ. ಒಂದು ವಾರಗಳ ಕಾಲ ಜನ ರಲ್ಲಿ ಜಾಗೃತಿ ಮೂಡಿಸಲು ಗ್ರಂಥಾಲಯ ಸಪ್ತಾಹ ಆಚರಿಸಲಾಗುತ್ತಿದೆ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷ ಮತ್ತು ಕೇಂದ್ರ ಗ್ರಂಥಾಲಯದ ನಿರ್ದೇಶಕ ಜಿ.ಓ. ಮಹಾಂತಪ್ಪ, ಸಾಹಿತಿ ಗೊರೂರು ಅನಂತರಾಜು, ಗ್ರಂಥಾಲಯದ ಜವರೇಗೌಡ ಇತರರು ಉಪಸ್ಥಿತರಿದ್ದರು.

 

 

Translate »