ಜಿಲ್ಲೆಯಲ್ಲಿ ಸಂಭ್ರಮದ ‘ಈದ್ ಮಿಲಾದ್’
ಹಾಸನ

ಜಿಲ್ಲೆಯಲ್ಲಿ ಸಂಭ್ರಮದ ‘ಈದ್ ಮಿಲಾದ್’

November 22, 2018

ಹಾಸನ: ಜಿಲ್ಲೆಯ ಹಾಸನ, ಬೇಲೂರು, ಅರಸೀಕೆರೆ ಸೇರಿದಂತೆ ವಿವಿಧೆಡೆ ಮುಸ್ಲಿಂ ಬಾಂಧವರು ಸಂಭ್ರಮ- ಸಡಗರದಿಂದ ಬುಧವಾರ ಈದ್ ಮಿಲಾದ್ ಆಚರಿಸಿದರು.

ಮೆರವಣಿಗೆ: ಈದ್ ಮಿಲಾದ್ ಆಚ ರಣೆಯ ಅಂಗವಾಗಿ ಬುಧವಾರ ಸಂಜೆ ನಗರದ ಹಳೆ ಮಟನ್ ಮಾರ್ಕೆಟ್ ವೃತ್ತ ದಿಂದ ಹೊರಟ ಮೆರವಣಿಗೆಯಲ್ಲಿ ಮುಸ್ಲಿಂ ಬಾಂಧವರು ಘೋಷಣೆ ಮೂಲಕ ಸಾಗಿದರು.

ಇಸ್ಲಾಂ ಜಿಂದಾಬಾದ್, ಟಿಪ್ಪು ಸುಲ್ತಾನ್‍ಗೆ ಜೈಕಾರ ಸೇರಿದಂತೆ ವಿವಿಧ ಘೋಷಣೆ ಗಳು ಮೆರವಣಿಗೆಯ ಅಲ್ಲಲ್ಲಿ ಕೂಗುತ್ತಿ ದ್ದುದು ಸಾಮಾನ್ಯವಾಗಿತ್ತು. ಟಿಪ್ಪು ಸೇನೆ ಬಾವುಟ, ಟೋಪಿ, ವೇಷಧಾರಿಗಳು ಗಮನ ಸೆಳೆದವು. ಪ್ರಮುಖ ರಸ್ತೆಗಳಲ್ಲಿ ಬಾಯಿ ದಾಹ ತೀರಿಸುವ ಪಾನಿಯಗಳನ್ನು ನೀಡ ಲಾಗುತ್ತಿತ್ತು. ರಾಜಕೀಯದ ಮುಖಂಡರು ಪಾಲ್ಗೊಂಡು ಹಬ್ಬದ ಶುಭಾಶಯವನ್ನು ಹೇಳಿದರು. ಮುಸ್ಲಿಂ ಬಾಂಧವರು ಕೂಡ ಶುಭಾಶಯದ ವಿನಿಮಯ ಮಾಡಿಕೊಳ್ಳು ತ್ತಿದ್ದರು. ಮುನ್ನೆಚ್ಚರಿಕಾ ಕ್ರಮವಾಗಿ ಪೊಲೀಸ್ ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿತ್ತು.

ರೋಗಿಗಳಿಗೆ ಹಣ್ಣು, ಬ್ರೇಡ್ ವಿತರಣೆ: ಈದ್ ಮಿಲಾದ್ ಅಂಗವಾಗಿ ಇಂಡಿಯನ್ ಖಲಂ ದರಿಯ ಸಂಘಟನೆ, ಜಯ ಕರ್ನಾಟಕ ಸಂಘ ಟನೆ ಅಲ್ಪಸಂಖ್ಯಾತ ಘಟಕದಿಂದ ಬೇಲೂರು ಪಟ್ಟಣದ ಸರ್ಕಾರಿ ಆಸ್ಪತ್ರೆ ರೋಗಿಗಳಿಗೆ ಹಣ್ಣು ಬ್ರೆಡ್‍ಗಳನ್ನು ವಿತರಿಸಲಾಯಿತು.

ಇಂಡಿಯನ್ ಖಲಂದರಿಯ ಹಾಗೂ ಜಯ ಕರ್ನಾಟಕ ಸಂಘಟನೆ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಅಸ್ಲಂ ಮಾತನಾಡಿ, ಮಹಮದ್ ಪೈಗಂಬರ್ ಅವರ ಹುಟ್ಟು ಹಬ್ಬವನ್ನು (ಈದ್ ಮಿಲಾದ್) ಅಂಗ ವಾಗಿ ನೂತನವಾಗಿ ಉದ್ಘಾಟನೆಗೊಂಡಿ ರುವ ನಮ್ಮ ಸಂಘಟನೆ ಪದಾಧಿಕಾರಿಗಳು ಸರ್ಕಾರಿ ಆಸ್ಪತ್ರೆ ರೋಗಿಗಳಿಗೆ ಯಾವುದೇ ಧರ್ಮ, ಜಾತಿ ಬೇಧÀವಿಲ್ಲದೆ ಹಾಲು, ಹಣ್ಣು ಬ್ರೆಡ್‍ಗಳನ್ನು ವಿತರಿಸುತ್ತಿದ್ದೇವೆ. ಮುಂದಿನ ದಿನಗಳಲ್ಲೂ ಇದೇ ರೀತಿ ನಮ್ಮ ಸಂಘಟನೆ ಯಿಂದ ಸಮಾಜ ಮುಖಿಯಾಗಿ ಉತ್ತಮ ಕೆಲಸಗಳನ್ನು ಮಾಡಲಿದ್ದೇವೆ ಎಂದರು.

ಸರ್ಕಾರಿ ಆಸ್ಪತ್ರೆ ವೈದ್ಯಾಧಿಕಾರಿ ಡಾ. ನರಸೇಗೌಡ ಮಾತನಾಡಿ, ಮಹಮದ್ ಪೈಗಂ ಬರ್ ಅವರ ಹುಟ್ಟುಹಬ್ಬದ ಅಂಗವಾಗಿ ಇಂಡಿಯನ್ ಖಲಂದರಿಯ ಸಂಘಟನೆ, ಜಯ ಕರ್ನಾಟಕ ಸಂಘಟನೆ ಅಲ್ಪ ಸಂಖ್ಯಾತ ಘಟಕದಿಂದ ಆಸ್ಪತ್ರೆಯಲ್ಲಿನ ರೋಗಿಗಳಿಗೆ ಹಾಲು, ಹಣ್ಣು ಬ್ರೆಡ್ ವಿತರಿಸಿ ಹಬ್ಬ ಆಚರಿಸು ತ್ತಿರುವುದು ಉತ್ತಮ ಬೆಳವಣಿಗೆಯಾಗಿದ್ದು, ಮುಂದಿನ ದಿನ ಗಳಲ್ಲೂ ನಿಮ್ಮ ಸಂಘಟನೆ ಉತ್ತಮ ಸಮಾಜ ಸೇವೆಯಲ್ಲಿ ತೊಡಗಿಸಿ ಕೊಳ್ಳಲಿ ಎಂದು ಶುಭ ಹಾರೈಸಿದರು.

ಈ ವೇಳೆ ವೈದ್ಯಾಧಿಕಾರಿ ಡಾ.ನರಸೇ ಗೌಡ ಅವರನ್ನು ಸನ್ಮಾನಿಸಲಾಯಿತು. ಇಂಡಿಯನ್ ಖಲಂದರಿಯ ಸಮಿತಿಯ ಗೌರವ ಅಧ್ಯಕ್ಷ ಅಹಮದ್, ಉಪಾಧ್ಯಕ್ಷ ಶಬ್ಬೀರ್, ಖಜಾಂಚಿ ಖದೀರ್, ನಗರಾ ಧ್ಯಕ್ಷ ಅಕ್ಮಲ್, ಮುಖಂಡರಾದ ಅಬ್ಬಾಸ್, ಬಾಬು, ಜಮೃದ್ ಇನ್ನಿತರರಿದ್ದರು.

ಅರಸೀಕೆರೆ ವರದಿ: ನಗರದಲ್ಲಿ ಮುಸ್ಲಿಂ ಭಾಂದವರು ಈದ್ ಮಿಲಾದ್ ಹಬ್ಬದ ಪ್ರಯುಕ್ತ ಬುಧವಾರ ಸಂಜೆ ಬೃಹತ್ ಮೆರವಣಿಗೆ ನಡೆಸಿದರು. ನಗರದ ವಾಚ ನಾಲಯ ರಸ್ತೆ, ಹಾಸನ ರಸ್ತೆ, ಟಿಪ್ಪು ನಗರ, ಸಂತೇ ಮೈದಾನ ಮತ್ತು ಜಾಮೀಯಾ ಮಸೀದಿಗಳಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿ ದರು. ಬಳಿಕ ಮೆರವಣಿಗೆ ಮೂಲಕ ಶ್ರೀನಿ ವಾಸ ನಗರದಲ್ಲಿರುವ ಈದ್ಗಾ ಮೈದಾನ ದಲ್ಲಿ ತೆರಳಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ವಿವಿಧೆಡೆ ಅನ್ನ ಸಂತರ್ಪಣೆ ಏರ್ಪಡಿಸಲಾಗಿತ್ತು.

ಪ್ರಾರ್ಥನಾ ಸ್ಥಳಗಳು ಮತ್ತು ಪ್ರಮುಖ ರಸ್ತೆಗಳಲ್ಲಿ ವಿದ್ಯುತ್ ದೀಪಗಳಿಂದ ಅಲಂ ಕಾರ ಮಾಡಲಾಗಿತ್ತು. ಈ ಸಮಯದಲ್ಲಿ ಶಾಸಕ ಕೆ.ಎಂ.ಶಿವಲಿಂಗೇಗೌಡ, ನಗರ ಸಭೆ ಮಾಜಿ ಅಧ್ಯಕ್ಷ ಸಮೀವುಲ್ಲಾ ಶುಭ ಕೋರಿ ದರು. ಸದಸ್ಯ ಜಮೀಲ್ ಆಹ್ಮದ್, ಜಾಮೀಯಾ ಮಸೀದಿಯ ಧರ್ಮ ಗುರು ಮೌಲಾನಾ ಮುನೀಬ್ ರಜಾ ಅಜಾರಿ, ಜಾಮಾತ್ ಕಮಿಟಿ ಅಧ್ಯಕ್ಷ ಎನ್.ಎ. ಸೈಯದ್ ಸರ್ದಾರ್, ಉಪಾ ಧ್ಯಕ್ಷ ಅಬ್ದುಲ್ ರೌಫ್ ಸಾಬ್, ಕಾರ್ಯ ದರ್ಶಿ ಅಪ್ರೋಜ್ ಪಾಷಾ, ನಜೀರ್‍ಸಾಬ್, ಸರ್ವರ್ ಅಹ ಮದ್, ಮಹಬೂಬ್ ಪಾಷ, ಮೊಹಿದ್ದೀನ್‍ಪಾಷ ಉಪಸ್ಥಿತರಿದ್ದರು.

Translate »