ಸೈನಿಕ ಶಾಲೆ ಮೃತ ವಿದ್ಯಾರ್ಥಿ ರಾಸಾಯನಿಕ ಸೇವಿಸಿದ್ದನೆ?
ಕೊಡಗು

ಸೈನಿಕ ಶಾಲೆ ಮೃತ ವಿದ್ಯಾರ್ಥಿ ರಾಸಾಯನಿಕ ಸೇವಿಸಿದ್ದನೆ?

June 29, 2018
  • ತನಿಖೆ ವೇಳೆ ಸ್ನಾನದ ಕೋಣೆಯಲ್ಲಿ ರಾಸಾಯನಿಕ ಬಾಟಲ್ ಪತ್ತೆ

ಕುಶಾಲನಗರ: ಕೂಡಿಗೆ ಸೈನಿಕ ಶಾಲೆ ವಿದ್ಯಾರ್ಥಿ ಚಿಂಗಪ್ಪ ಪ್ರಯೋಗಾಲಯದ ರಾಸಾಯನಿಕ ಸೇವಿಸಿ ಮೃತಪಟ್ಟಿರಬಹುದು ಎಂದು ತನಿಖೆ ವೇಳೆ ಶಂಕೆ ವ್ಯಕ್ತವಾಗಿದೆ. ವಿದಿ ವಿಜ್ಞಾನ ಪ್ರಯೋಗಾಲಯದ ವರದಿ ಬಂದ ನಂತರವಷ್ಟೆ ಸಾವು ಸಂಭವಿಸಿದ್ದು ಹೇಗೆ? ಎಂಬುದು ತಿಳಿಯಲಿದೆ.

ವಿದ್ಯಾರ್ಥಿ ಸಾವಿಗೀಡಾದ ಜೂ.23ರಂದು ಸಿಸಿ ಕ್ಯಾಮರಾದಲ್ಲಿ ದಾಖಲಾಗಿರುವ ದೃಶ್ಯಾವಳಿ ಗಳನ್ನು ತನಿಖಾ ತಂಡ ಪರಿಶೀಲಿಸಲಾಗಿ ಆತ ಪ್ರಯೋಗಾಲಯಕ್ಕೆ ತೆರಳಿರುವುದು ಗೊತ್ತಾ ಗಿದೆ ಎಂದು ಮೂಲಗಳು ತಿಳಿಸಿವೆ. ಸಿಸಿ ಕ್ಯಾಮರಾ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ ವಿದ್ಯಾರ್ಥಿ ಅಂದು ಮಧ್ಯಾಹ್ನವೇ ಸಾವನ್ನಪ್ಪಿರಬಹುದು ಎಂದು ಮೇಲ್ನೋಟಕ್ಕೆ ತಿಳಿದಿದೆ.

ವಿದ್ಯಾರ್ಥಿ ಪ್ರಜ್ಞಾಹೀನವಾಗಿ ಬಿದಿದ್ದ ಸ್ನಾನದ ಕೋಣೆ ಚಿಲಕ ಮುಂದಿರುವ ಕುರುಹುಗಳು ಗೋಚರಿಸಿದ್ದು, ಈ ಕೋಣೆಯಲ್ಲಿ ಪ್ರಯೋಗಾಲಯದ ರಾಸಾಯನಿಕ ಬಾಟಲ್ ಪತ್ತೆಯಾಗಿದೆ ಎನ್ನಲಾಗಿದ್ದು, ಆತ ರಾಸಾಯನಿಕ ಸೇವಿಸಿರಬಹುದೇ ಎಂಬ ಪ್ರಶ್ನೆ ಉದ್ಭವಿಸಿದೆ.

Translate »