ಬಸ್ ದುರಂತ: ವದೇಸಮುದ್ರದಲ್ಲಿ ಸಾಮೂಹಿಕ ತಿಥಿ ಕಾರ್ಯ
ಮಂಡ್ಯ

ಬಸ್ ದುರಂತ: ವದೇಸಮುದ್ರದಲ್ಲಿ ಸಾಮೂಹಿಕ ತಿಥಿ ಕಾರ್ಯ

December 6, 2018

ಪಾಂಡವಪುರ: ತಾಲೂಕಿನ ಕನಗನಮರಡಿ ಬಳಿ ಬಸ್ ದುರಂತದಲ್ಲಿ ಸಾವನ್ನಪ್ಪಿದ ವದೇಸಮುದ್ರ ಗ್ರಾಮದ 8 ಮಂದಿಯ ತಿಥಿ ಕಾರ್ಯ ಬುಧವಾರ ಸಾಮೂಹಿಕವಾಗಿ ನಡೆಯಿತು.

ವದೇ ಸಮುದ್ರ ಗ್ರಾಮದ ಚಿಕ್ಕಯ್ಯ, ಕರಿಯಪ್ಪ, ಪ್ರಶಾಂತ್, ರವಿಕುಮಾರ್, ಕಮಲಮ್ಮ, ರತ್ನಮ್ಮ, ಶಶಿಕಲಾ, ಪವಿತ್ರ ಹಾಗೂ ಚಿಕ್ಕಕೊಪ್ಪಲು ಗ್ರಾಮದ ಕೆಂಪಯ್ಯ, ಪಾಪಣ್ಣಗೌಡ ಹಾಗೂ ದಿವ್ಯ ಅವರ ಕಾರ್ಯ ನಡೆಯಿತು.

ಬೆಳಿಗ್ಗೆ 11.30ರ ಸುಮಾರಿಗೆ ಮೃತರ ಸಂಬಂಧಿಕರು ತಮ್ಮ ಮನೆಗಳಿಂದ ತಂದಿದ್ದ ತಿಂಡಿ, ತಿನಿಸುಗಳನ್ನು ಸಮಾಧಿಯ ಮೇಲೆ ಎಡೆ ಇಟ್ಟು ತಮ್ಮ ಸಂಪ್ರದಾಯ ದಂತೆ ಸಾಮೂಹಿಕವಾಗಿ ತಿಥಿ ಕಾರ್ಯ ನಡೆಸಿದರು. ಆದರೆ, ಮೃತರ ಸಂಬಂ ಧಿಕರು, ಕುಟುಂಬಸ್ಥರಿಗೆ ಪ್ರತ್ಯೇಕವಾಗಿ ತಮ್ಮ ಮನೆಗಳ ಬಳಿ ಊಟದ ವ್ಯವಸ್ಥೆಗಳನ್ನು ಮಾಡಿಕೊಂಡಿದ್ದರು. ಇನ್ನೂ ಚಿಕ್ಕಕೊಪ್ಪಲು ಗ್ರಾಮದ ಮೂರು ಮಂದಿ ಅಂತ್ಯಕ್ರಿಯೆ ಯೂ ಸಹ ಪ್ರತ್ಯೇಕವಾಗಿ ನಡೆಯಿತು.

ಡಿ.7ರಂದು ಸಂಜೆ 6 ಗಂಟೆಗೆ ವದೇಸಮುದ್ರ-ಚಿಕ್ಕಕೊಪ್ಪಲು ಗ್ರಾಮದ ನಡುವಿನ ಚಿಕ್ಕಯ್ಯನ ದೇವಸ್ಥಾನದ ಆವರಣದಲ್ಲಿ ನಡೆಯಲಿರುವ ವೇದಿಕೆ ಕಾರ್ಯಕ್ರಮದಲ್ಲಿ ಮೃತರ ಕುಟುಂಬಕ್ಕೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸಾಂತ್ವನ ಹೇಳಿ 30 ಮಂದಿ ಕುಟುಂಬದ ಸದಸ್ಯರಿಗೂ ಪರಿಹಾರ ಹಣದ ಚೆಕ್ ವಿತರಣೆ ಮಾಡಲಿದ್ದಾರೆ.
ಈ ವೇಳೆ ಜಿಲ್ಲಾ ಉಸ್ತುವಾರಿ ಸಚಿವ ಸಿ.ಎಸ್.ಪುಟ್ಟರಾಜು ಸೇರಿದಂತೆ ಹಲವರು ಉಪಸ್ಥಿತರಿರಲಿದ್ದಾರೆ.

Translate »