ವರುಣಾ ಕೆರೆಯಲ್ಲಿ ಉದ್ಯಮಿ ದೇಹ ಪತ್ತೆ
ಮೈಸೂರು

ವರುಣಾ ಕೆರೆಯಲ್ಲಿ ಉದ್ಯಮಿ ದೇಹ ಪತ್ತೆ

March 19, 2019

ಮೈಸೂರು: ಮೈಸೂರಿನ ವರುಣಾ ಕೆರೆಯಲ್ಲಿ ವ್ಯಕ್ತಿಯೊಬ್ಬರ ದೇಹ ಭಾನುವಾರ ಸಂಜೆ ಪತ್ತೆಯಾಗಿದೆ. ಮೃತಪಟ್ಟವರನ್ನು ಮೈಸೂರಿನ ಕೆ.ಆರ್.ಮೊಹಲ್ಲಾ ನಿವಾಸಿ ಭಗವತಿ ಜೈನ್ ಅವರ ಪುತ್ರ ಸಂದೀಪ್(38) ಎಂದು ಗುರುತಿಸಲಾಗಿದ್ದು, ಕೆ.ಟಿ.ಸ್ಟ್ರೀಟ್ ನಲ್ಲಿ ಎಲೆಕ್ಟ್ರಾನಿಕ್ಸ್ ಅಂಗಡಿ ನಡೆಸುತ್ತಿದ್ದರೆಂದು ಹೇಳಲಾಗಿದೆ.

ಸಾರ್ವಜನಿಕರು ನೀಡಿದ ಮಾಹಿತಿ ಆಧರಿಸಿ ಸ್ಥಳಕ್ಕೆ ಧಾವಿ ಸಿದ ಮೈಸೂರು ದಕ್ಷಿಣ ಗ್ರಾಮಾಂತರ ಠಾಣೆ ಸಬ್‍ಇನ್‍ಸ್ಪೆಕ್ಟರ್ ಜಯಕುಮಾರ್ ಹಾಗೂ ಸಿಬ್ಬಂದಿ ಭಾನುವಾರ ಸಂಜೆ ಮೃತದೇಹ ಹೊರ ತೆಗೆದು ಮಹಜರು ನಡೆಸಿ ಪ್ರಕರಣ ದಾಖಲಿಸಿಕೊಂಡರು. ಜೀವನದಲ್ಲಿ ಜಿಗುಪ್ಸೆಗೊಂಡ ಸಂದೀಪ್ ವರುಣಾ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರಬಹುದೆಂದು ಶಂಕಿಸಲಾಗಿದೆ. ಅವರು ಕೆಲ ತಿಂಗಳಿಂದ ಅನಾ ರೋಗ್ಯದಿಂದ ಬಳಲುತ್ತಿದ್ದರು ಎಂದೂ ಹೇಳಲಾಗಿದೆ.

Translate »