ಕುಖ್ಯಾತ ಸರಗಳ್ಳರ ತಂಡ ಸೆರೆ
ಹಾಸನ

ಕುಖ್ಯಾತ ಸರಗಳ್ಳರ ತಂಡ ಸೆರೆ

March 15, 2019

* ಬೇಲೂರು, ಹಳೇಬೀಡು ಪೊಲೀಸರ ಜಂಟಿ ಕಾರ್ಯಾಚರಣೆ
* 2.75 ಲಕ್ಷ ರೂ. ಮೌಲ್ಯದ 120 ಗ್ರಾಂ ಚಿನ್ನಾಭರಣ, ಇನೋವಾ ಕಾರು ವಶ
ಬೇಲೂರು: ಈ ಸರಗಳ್ಳರು ಅಂತಿಥವರಲ್ಲ. ಐಶಾರಾಮಿ ಇನೋವಾ ಕಾರಿನಲ್ಲಿ ಬರುತ್ತಿದ್ದರು. ಮಹಿಳೆಯರೂ ಇರುವ ಈ ಕುಖ್ಯಾತ ಸರಗಳ್ಳರ ತಂಡ, ಜಾತ್ರೆ, ಸಂತೆ, ಹಬ್ಬಹರಿದಿನಗಳಲ್ಲಿ ಜನ ಸಂದಣಿಯ ಪ್ರದೇಶಗಳಲ್ಲಿಯೇ ಆರಾಮ ವಾಗಿ ಸರಗಳವು ನಡೆಸಿ ಜಾಗ ಖಾಲಿ ಮಾಡುತ್ತಿತ್ತು. ಜಿಲ್ಲೆಯ 4 ಪೊಲೀಸ್ ಠಾಣೆ ಗಳ ವ್ಯಾಪ್ತಿಯಲ್ಲಿ ಹಲವು ದಿನಗಳಿಂದ ಸರಗಳವು ನಡೆಸುತ್ತಾ ಆರಾಮದ ಜೀವನ ಸಾಗಿಸುತ್ತಿತ್ತು. ಇದೀಗ ಪೊಲೀಸರಿಗೆ ಸೆರೆ ಸಿಕ್ಕು ಸೆರೆಮನೆ ಸೇರಿಕೊಂಡಿದೆ.

ಜಿಲ್ಲೆಯ ವಿವಿಧೆಡೆ ಕಳವು ನಡೆಸಿದ್ದ ಕುಖ್ಯಾತ ಸರಗÀಳ್ಳರ ತಂಡವನ್ನು ಬಂಧಿಸು ವಲ್ಲಿ ಯಶಸ್ವಿಯಾಗಿರುವ ಬೇಲೂರು- ಹಳೇಬೀಡು ಪೊಲೀಸರು, ಬಂಧಿತರಿಂದ 2.75 ಲಕ್ಷ ರೂ. ಮೌಲ್ಯದ 120 ಗ್ರಾಂ ಚಿನ್ನಾ ಭರಣ, ಕೃತ್ಯಕ್ಕೆ ಬಳಸುತ್ತಿದ್ದ ಇನೋವಾ ಕಾರನ್ನು ವಶಪಡಿಸಿಕೊಂಡಿದ್ದಾರೆ. ಹುಣ ಸೂರಿನ ಪ್ರಿಯಾ, ಆನೇಕಲ್‍ನ ಆಶಾ, ಅತ್ತಿಬೆಲೆಯ ಸೋಮಶೇಖರ್, ಹುಣ ಸೂರಿನ ವಿನೋಭಾ ಬಂಧಿತರು.

ಈ ಬಗ್ಗೆ ಸುದ್ದಿಗಾರರಿಗೆ ವಿವರ ನೀಡಿದ ಬೇಲೂರು ಪೊಲೀಸ್ ವೃತ್ತ ನಿರೀಕ್ಷಕ ಲೋಕೇಶ್ ಅವರು, ಜಿಲ್ಲೆಯಲ್ಲಿ ಹಲವು ಕಳವು ಪ್ರಕರಣಗಳಲ್ಲಿ ಭಾಗಿಯಾಗಿದ್ದ 4 ಆರೋಪಿ ಗಳನ್ನು ಸೆರೆ ಹಿಡಿಯಲಾಗಿದೆ ಎಂದರು.

ದಾಳಿ-ಸೆರೆ: ಆರೋಪಿಗಳು ಜಾತ್ರೆ, ಸಂತೆಯ ಜನದಟ್ಟಣೆ, ಹಬ್ಬ ಹರಿದಿನಗಳ ಜನಜಂಗುಳಿ ಪ್ರದೇಶಗಳಲ್ಲಿ ಮಹಿಳೆ ಯರು ಧರಿಸಿರುತ್ತಿದ್ದ ಚಿನ್ನದ ಸರಗಳನ್ನು ಎಗರಿಸುತ್ತಿದ್ದರು. ಆರೋಪಿಗಳು ಕಳವು ನಡೆಸಲು ಇನೋವಾ ಕಾರಿನಲ್ಲಿಯೇ ತೆರಳು ತ್ತಿದ್ದರು. ಹಳೇಬೀಡು, ಅರಸೀಕೆರೆ, ಸಕಲೇಶ ಪುರ, ಹಾಸನ ಬಡಾವಣೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ತಲಾ 1 ಸರಗಳವು ಪ್ರಕರಣ ಗಳನ್ನು ನಡೆಸಿದ್ದಾರೆ. ಅರಸೀಕೆರೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 1 ಪ್ರಕರಣದಲ್ಲಿಯೇ 2 ಸರಗಳನ್ನು ಕದ್ದಿದ್ದಾರೆ.

ನಾಲ್ವರೂ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಆರೋಪಿಗಳ ಪತ್ತೆಗೆ ಶ್ರಮಿಸಿದ ಹಳೇಬೀಡು ಪಿಎಸ್‍ಐ ಭರತ್ ಗೌಡ, ಬೇಲೂರು ಪಿಎಸ್‍ಐ ಜಗ ದೀಶ್, ಪೊಲೀಸ್ ಸಿಬ್ಬಂದಿಗಳಾದ ರವೀಶ್, ಜಮೃದ್ದೀನ್, ನಾಗರಾಜ್, ಭವ್ಯ, ದೇವರಾಜ್ ತಂಡವನ್ನು ಎಸ್‍ಪಿ ಪ್ರಕಾಶ್ ಗೌಡ, ಎಎಸ್‍ಪಿ ನಂದಿನಿ, ಡಿವೈಎಸ್‍ಪಿ ಸದಾನಂದ ತಿಪ್ಪಣ್ಣನವರ ಅಭಿನಂದಿಸಿದ್ದಾರೆ.

Translate »