ಸೀತಾರಾಮ ಕಲ್ಯಾಣ ಚಿತ್ರ ಪ್ರದರ್ಶನ ಚುನಾವಣೆ ನೀತಿಸಂಹಿತೆ ಗೊಂದಲ
ಹಾಸನ

ಸೀತಾರಾಮ ಕಲ್ಯಾಣ ಚಿತ್ರ ಪ್ರದರ್ಶನ ಚುನಾವಣೆ ನೀತಿಸಂಹಿತೆ ಗೊಂದಲ

March 15, 2019

ಹಾಸನ: ಲೋಕಸಭೆ ಚುನಾ ವಣೆ ಪ್ರಕ್ರಿಯೆ ಪ್ರಾರಂಭವಾಗಿ ನೀತಿ ಸಂಹಿತೆ ಜಾರಿಯಾಗಿದ್ದರೂ ಸೀತಾರಾಮ ಕಲ್ಯಾಣ ಚಿತ್ರಕ್ಕೆ ಮಾತ್ರ ನಿಯಮ ಅನ್ವಯಿ ಸಿಲ್ಲದಿರುವುದು ಜಿಲ್ಲೆಯಲ್ಲಿ ಚರ್ಚೆಗೆ ಗ್ರಾಸ ಒದಗಿಸಿದೆ. ಈ ಬಗ್ಗೆ ಪ್ರಶ್ನಿಸಿದರೆ ಚುನಾ ವಣೆ ಶಾಖೆ ಅಧಿಕಾರಿಗಳಲ್ಲಿ ಸಮರ್ಪಕ ಉತ್ತರ ದೊರಕುತ್ತಿಲ್ಲ. ಅಧಿಕಾರಿಗಳು ಗೊಂದಲಕ್ಕೆ ಬಿದ್ದಿದ್ದಾರೆ!

ನೀತಿಸಂಹಿತೆ ಜಾರಿಯಲ್ಲಿರುವಾಗ ರಾಜಕೀಯ ಪಕ್ಷಗಳ ನಾಯಕರು, ಅಭ್ಯರ್ಥಿಗಳ ಸಿನಿಮಾ ಪ್ರದರ್ಶನಕ್ಕೆ ಅವ ಕಾಶವಿರುವುದಿಲ್ಲ. ಆದರೆ, ಮಂಡ್ಯ ಲೋಕ ಸಭೆ ಕ್ಷೇತ್ರದ ಜೆಡಿಎಸ್‍ನ ಘೋಷಿತ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ನಾಯಕ ನಾಗಿ ನಟಿಸಿರುವ ಸೀತಾರಾಮ ಕಲ್ಯಾಣ ಕನ್ನಡ ಚಲನಚಿತ್ರ ಜಿಲ್ಲೆಯಲ್ಲಷ್ಟೇ ಅಲ್ಲದೇ, ರಾಜ್ಯಾದ್ಯಂತ ಪ್ರದರ್ಶಿತÀವಾಗುತ್ತಿದೆ. ಜತೆಗೆ ಚಿತ್ರದ ಪೋಸ್ಟರ್‍ಗಳೂ ಎಲ್ಲೆಡೆ ಮತ ದಾರರ ಕಣ್ಣಿಗೆ ಬೀಳುವಂತೆಯೇ ಇವೆ. ಆದರೆ, ಇದುವರೆಗೂ ಚುನಾವಣೆ ಅಧಿ ಕಾರಿಗಳು ಕ್ರಮ ಕೈಗೊಳ್ಳದೇ ಇರುವುದರ ಬಗ್ಗೆ ಸಾರ್ವಜನಿಕ ವಲಯದಲ್ಲಿ ಆಕ್ಷೇಪ ವ್ಯಕ್ತವಾಗುತ್ತಿದೆ.
ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿನ ಜೆಡಿ ಎಸ್ ಅಭ್ಯರ್ಥಿಯ ಸಿನಿಮಾ ಪ್ರದರ್ಶನಕ್ಕೆ ನೀತಿ ಸಂಹಿತೆ ಅಡ್ಡಿ ಬರುವುದಿಲ್ಲವೇ? ಎಂದು ದೂರವಾಣಿ ಮೂಲಕ ಚುನಾವಣಾಧಿಕಾರಿಗೆ ಪ್ರಶ್ನೆ ಮಾಡಿದಾಗ, ಚಿತ್ರ ಪ್ರದರ್ಶನ ನಿರ್ಬಂ ಧಿಸುವ ಬಗ್ಗೆ ಚರ್ಚಿಸಿ, ರಾಜ್ಯದ ಮುಖ್ಯ ಚುನಾ ವಣಾಧಿಕಾರಿಗಳ ಸಲಹೆ ಪಡೆದು ನಂತರ ಕ್ರಮ ಕೈಗೊಳ್ಳುವುದಾಗಿ ಹೇಳಿದರು.

Translate »