ಸಂಸ್ಕøತಿ ಉಳಿವಿಗಾಗಿ ಪ್ರಾಣತೆತ್ತ ಮಹಾನ್ ವ್ಯಕ್ತಿ ಶಿವಾಜಿ: ಛತ್ರಪತಿ ಶಿವಾಜಿ 392ನೇ ಜಯಂತ್ಯುತ್ಸವದಲ್ಲಿ ಪದ್ಮಾವತಿ ಉಪನ್ಯಾಸ
ಹಾಸನ

ಸಂಸ್ಕøತಿ ಉಳಿವಿಗಾಗಿ ಪ್ರಾಣತೆತ್ತ ಮಹಾನ್ ವ್ಯಕ್ತಿ ಶಿವಾಜಿ: ಛತ್ರಪತಿ ಶಿವಾಜಿ 392ನೇ ಜಯಂತ್ಯುತ್ಸವದಲ್ಲಿ ಪದ್ಮಾವತಿ ಉಪನ್ಯಾಸ

March 15, 2019

ಹಾಸನ: ಛತ್ರಪತಿ ಶಿವಾಜಿ ಮಹಾರಾಜ ಮಹಾನ್ ವ್ಯಕ್ತಿ. ದೇಶದ ಸಂಸ್ಕøತಿಯ ಉಳಿವಿವಾಗಿ ಪ್ರಾಣತೆತ್ತ ವರಲ್ಲಿ ಮೊದಲಿಗರು ಎಂದು ಸಂತ ಫಿಲೋ ಮಿನಾ ಕಾಲೇಜು ಪ್ರಾಧ್ಯಾಪಕಿ ಹೆಚ್.ಎಂ. ಪದ್ಮಾವತಿ ಹೇಳಿದರು.

ನಗರದ ಹಾಸನಾಂಬ ಕಲಾಕ್ಷೇತ್ರದಲ್ಲಿ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಹಾಗೂ ಕರ್ನಾಟಕ ಕ್ಷತ್ರಿಯ ಮರಾಠ ಪರಿಷತ್ ಜಿಲ್ಲಾ ಶಾಖೆ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಶ್ರೀ ಶಿವ ಛತ್ರಪತಿ ಶಿವಾಜಿ ಮಹಾರಾಜರ 392ನೇ ಜಯಂತ್ಯುತ್ಸವದಲ್ಲಿ ಮಾತನಾಡಿದ ಅವರು, ಸ್ವಾಭಿಮಾನ ಬಡಿದೆಬ್ಬಿಸಿದ ಶಿವಾಜಿ ಮಹಾರಾಜ್, ದಾಳಿಕೋರರ ಹುಟ್ಟಡಗಿಸಿ ದವರು ಎಂದರು.

1630ರಲ್ಲಿ ಜನಿಸಿದ ಶಿವಾಜಿ ಚಿಕ್ಕ ವಯಸ್ಸಿನಲ್ಲಿಯೇ ಹಿಂದೂ ರಾಷ್ಟ್ರಪ್ರೇಮ ಬೆಳೆಸಿಕೊಂಡಿದ್ದರು. ಸಮಾಜಕ್ಕೆ ಮಹಾನ್ ಕೊಡುಗೆ ನೀಡಿದ್ದಾರೆ. ದಾದಾಜಿ ಕೊಂಡ ದೇವ ಅವರಂತಹ ಸಮರ್ಥ ಗುರುವಿನ ಮಾರ್ಗದರ್ಶನದಿಂದ ಮುಂದೆ ಶಿವಾಜಿ ಕೋಟೆ ನಿರ್ಮಾಣ ಮಾಡಿದರು. ಚಾಣಾಕ್ಷ ತನ, ಸಮಯಪ್ರಜ್ಞೆ, ಧೀರ ಗುಣಗಳನ್ನು ಹೊಂದಿದ್ದರು ಎಂದು ವಿವರಿಸಿದರು.

ಜಿಲ್ಲಾಧಿಕಾರಿ ಅಕ್ರಂ ಪಾಷಾ ಕಾರ್ಯ ಕ್ರಮ ಉದ್ಘಾಟಿಸಿದರು. ಲೋಕಸಭೆ ಚುನಾ ವಣೆ ಇರುವುದರಿಂದ ಎಲ್ಲ ಕಾರ್ಯಕ್ರಮ ಗಳನ್ನೂ ಸರಳವಾಗಿ ಆಚರಿಸಬೇಕು. ಇತರೆ ವಿಷಯಗಳನ್ನು ಪ್ರಸ್ತಾಪಿಸುವಂತಿಲ್ಲ ಎಂದರು.

ಮತದಾನ: ಏ.18ರಂದು ಲೋಕಸಭೆ ಚುನಾವಣೆಯಲ್ಲಿ ಪ್ರತಿಯೊಬ್ಬರೂ ಪಾಲ್ಗೊಂಡು ತಪ್ಪದೇ ಮತದಾನ ಮಾಡಬೇಕು. ಮತ ದಾರರ ಪಟ್ಟಿಯಲ್ಲಿ ಹೆಸರು ಬಿಟ್ಟು ಹೋಗಿದ್ದರೆ ತಕ್ಷಣ ಸೇರ್ಪಡೆಗೊಳಿಸ ಬೇಕು ಎಂದರು.

ಕಾರ್ಯಕ್ರಮದಲ್ಲಿ ಪುಟಾಣಿ ಮಕ್ಕಳು ಛತ್ರಪತಿ ಶಿವಾಜಿ ವೇಷ ಧರಿಸಿ ಗಮನ ಸೆಳೆದರು. ಕಾಡಿನ ವೇಷ ಧರಿಸಿ ಚಿಣ್ಣರು ನೃತ್ಯ ಮಾಡಿ ಗಮನಸೆಳೆದರು.

ಜಿಪಂ ಸಿಇಒ ವಿಜಯಕುಮಾರ್, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕ ಶಿವಲಿಂಗಪ್ಪ ಎನ್.ಕುಂಬಾರ, ಮರಾಠ ಪರಿಷತ್ ಅಧ್ಯಕ್ಷ ಸುರೇಶ್, ಖಜಾಂಚಿ ವೆಂಕಟರಾವ್, ಪ್ರಧಾನ ಕಾರ್ಯದರ್ಶಿ ಹನುಮಂತರಾವ್, ಸಹ ಕಾರ್ಯದರ್ಶಿ ಭೀಮರಾವ್, ವಿಠಲ್ ರಾವ್, ರಾಣೋಜಿ ರಾವ್, ನಿವೃತ್ತ ತಹಸೀ ಲ್ದಾರ್ ರುದ್ರಪ್ಪಾಜಿ ರಾವ್ ಇತರರು ಪಾಲ್ಗೊಂಡಿದ್ದರು. ಚುನಾವಣೆ ನೀತಿ ಸಂಹಿತೆ ಕಾರಣ ಸಚಿವರು, ಶಾಸಕರು ಕಾರ್ಯಕ್ರಮದಲ್ಲಿ ಭಾಗವಹಿಸಿರಲಿಲ್ಲ. ನಗರಸಭೆ ಅಧ್ಯಕ್ಷ ಚನ್ನವೀರಪ್ಪ, ಪುಟ್ಟ ಸ್ವಾಮಿ ಶೆಟ್ಟರ್,.ಪ್ರೇಮಮ್ಮ, ಶಂಕರಾ ಚಾರ್ಯ, ಮಂಜಪ್ಪ, ಶಾಂತಶೆಟ್ಟಿ, ಅಣ್ಣಪ್ಪ ಶೆಟ್ಟಿ ನಿಂಗರಾಜು, ಸಣ್ಣೇಗೌಡ, ವಿಶ್ವ ನಾಥ್, ರುಕ್ಮಿಣಿ ಮತ್ತಿತರರಿದ್ದರು.

ಮೆರವಣಿಗೆ: ಇನ್ನೊಂದೆಡೆ, ಮರಾಠಿ ಸಮುದಾಯದವರು ಆಕರ್ಷಕ ಮೆರವ ಣಿಗೆ ನಡೆಸಿದರು. ಅಗ್ರಹಾರ ಬೀದಿಯಿಂದ ಹೊರಟ ಮೆರವಣಿಗೆ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು. ಶಿವಾಜಿ ವೇಷಧಾರಿ ಕುದುರೆಯಲ್ಲಿ ಕುಳಿತಿದ್ದರು. ಕೇಸರಿ ಪೇಟ ತೊಟ್ಟಿದ್ದ ಮರಾಠಿಗರು ಮರಾಠಿ ಹಾಡಿಗೆ ನರ್ತಿಸಿದರು.

Translate »