ಕಾರು ಅಪಘಾತ; ಶಾಸಕ ಭೀಮಾನಾಯ್ಕ್ ಪುತ್ರನಿಗೆ ಗಾಯ
ಮೈಸೂರು

ಕಾರು ಅಪಘಾತ; ಶಾಸಕ ಭೀಮಾನಾಯ್ಕ್ ಪುತ್ರನಿಗೆ ಗಾಯ

August 19, 2019

ಬಳ್ಳಾರಿ, ಆ.18- ಕಾರು ಹಾಗೂ ಟಂಟಂ ವಾಹನದ ನಡುವೆ ಸಂಭ ವಿಸಿದ ಅಪಘಾತದಲ್ಲಿ ಕಾರಿನಲ್ಲಿದ್ದ ಶಾಸಕ ಭೀಮಾನಾಯ್ಕ್ ಅವರ ಪುತ್ರ ಸೇರಿದಂತೆ ಇಬ್ಬರಿಗೆ ಗಂಭೀರ ಗಾಯ ವಾಗಿರುವ ಘಟನೆ ಹೊಸಪೇಟೆಯ ಮರಿಯಮ್ಮನಹಳ್ಳಿ
ಬಳಿ ಇರುವ ರಾಷ್ಟ್ರೀಯ ಹೆದ್ದಾರಿ 50ರ ಎಂಎಸ್‍ಪಿಎಲ್ ಕ್ರಾಸ್‍ನಲ್ಲಿ ನಡೆದಿದೆ.

ಹಗರಿಬೊಮ್ಮನಹಳ್ಳಿ ಕಾಂಗ್ರೆಸ್ ಶಾಸಕ ಭೀಮಾನಾಯ್ಕ್ ಪುತ್ರ ಅಶೋಕ್ ಅಪಘಾತದಿಂದ ಗಂಭೀರ ಗಾಯಗೊಂಡಿದ್ದಾರೆ. ಅಲ್ಲದೆ ಟಂಟಂ ಚಾಲಕನಿಗೂ ಸಹ ಗಾಯಗಳಾಗಿದೆ. ಶಾಸಕರ ಪುತ್ರ ಅಶೋಕ್ ಜಿಂದಾಲ್ ವಿಮಾನ ನಿಲ್ದಾಣಕ್ಕಾಗಿ ತೆರಳುವಾಗ ಈ ದುರ್ಘಟನೆ ಸಂಭವಿಸಿದೆ. ಕಾರಿನಲ್ಲಿದ್ದ ಏರ್ ಬಲೂನ್ ತಕ್ಷಣ ತೆರೆದುಕೊಂಡ ಕಾರಣ ಅಶೋಕ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸದ್ಯ ಶಾಸಕರ ಪುತ್ರ ಹೊಸಪೇಟೆಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಘಟನೆ ಕುರಿತಂತೆ ಮರಿಯಮ್ಮನಹಳ್ಳಿ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Translate »