ಮೈಸೂರು,ಜೂ.29(ಎಂಕೆ)- ನಗರದ ಕುವೆಂಪುನಗರದಲ್ಲಿರುವ ಗಾನ ಭಾರತಿ ವೀಣೆ ಶೇಷಣ್ಣ ಭವನದಲ್ಲಿ ರಾಗ ಮ್ಯೂಸಿಕ್ ಅಕಾಡೆಮಿ ವತಿಯಿಂದ ವಿದ್ವಾನ್ ಹೆಮ್ಮಿಗೆ ಪ್ರಶಾಂತ್ ನೇತೃತ್ವದಲ್ಲಿ ಆಯೋಜಿಸಿದ್ದ ಕರ್ನಾಟಿಕ್ ಸಂಗೀತ ಗಾಯನ ಸಂಗೀತ ಪ್ರಿಯರ ಮನತಣಿಸಿತು.
ವಿದ್ವಾನ್ ಹೆಮ್ಮಿಗೆ ಪ್ರಶಾಂತ್, ತ್ಯಾಗ ರಾಜರ ‘ನಿನ್ನುವಿನ ಸುಖಮಯಿ ಗಾನ’, ‘ಎಂಥಾ ವೆದುಕೊಂಡು’, ‘ಕರಹಪ್ರಿಯ’ ಕಿರ್ತನೆಗಳನ್ನು ಹಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಬಳಿಕ ‘ಸಮರ ಜಾನಕಿ ಶುಭ ಚೈತ್ರ’, ಮಂಕುತಿಮ್ಮ ಕಗ್ಗದ ‘ದೀನಾ ನಾನು ಸಮಸ್ತ ಲೋಕಕ್ಕೆ ದಾನಿ ನೀನು’, ‘ಸಾಗರ ಸಯನ’ ಕೀರ್ತನೆಗಳನ್ನು ಹಾಡಿ ಕಲಾಭಿಮಾನಿಗಳ ಮನಗೆದ್ದರು. ವಯಲಿನ್‍ನಲ್ಲಿ ವಿದ್ವಾನ್ ಚಾರುಲತಾ ರಾಮಾನುಜನ್, ಮೃದಂಗ ದಲ್ಲಿ ವಿದ್ವಾನ್ ಬಿ.ಆರ್.ಶ್ರೀನಿವಾಸ, ಘಟದಲ್ಲಿ ರಘುನಂದನ ರಾವ್ ಸಹಕಾರ ನೀಡಿದರು.
ಇದಕ್ಕೂ ಮೊದಲು ಪ್ರಜ್ಞಾ ಕುಟಿರ ಆಯುರ್ವೇದ ಕೇಂದ್ರದ ನಿರ್ದೇಶಕ ಡಾ.ಎನ್.ವಿ.ಕೃಷ್ಣಮೂರ್ತಿ ಮಾತನಾಡಿ, ಉತ್ತಮ ಆರೋಗ್ಯಕ್ಕೆ ಆಯುರ್ವೇದ ಅಗತ್ಯವಾಗಿದ್ದು, ಪ್ರತಿಯೊಬ್ಬರೂ ಆಯು ರ್ವೇದದ ಅರಿವನ್ನು ಪಡೆದುಕೊಳ್ಳಬೇಕು 5 ಸಾವಿರಕ್ಕಿಂತ ಹೆಚ್ಚು ವರ್ಷಗಳ ಪುರಾ ತನ ಆಯುರ್ವೇದ ಆರೋಗ್ಯಯುತ ಜೀವನಕ್ಕೆ ದಾರಿದೀಪವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಹನೂರು ಅನಂತ ಕೃಷ್ಣ ಶರ್ಮ, ಡಾ.ಬಿ.ಆರ್.ಪೈ, ಜಯಂತಿ ಪೈ, ಕೊವಿಲಡಿ ಆರ್.ಕಲಾ, ಕೊವಿಲಡಿ ಕೆ.ರಂಗರಾಜನ್, ರಾಗ ಮ್ಯೂಸಿಕ್ ಅಕಾಡೆಮಿಯ ಪೂರ್ಣಿಮಾ ಕೆ.ಮೂರ್ತಿ ಉಪಸ್ಥಿತರಿದ್ದರು.