ಮೈಸೂರು: ಮನೆಯ ಸ್ಕೆಚ್ ಕಾಪಿ ಕೊಡಿಸುವಂತೆ ಕೇಳಿದ ಮಹಿಳೆಯನ್ನು ಗ್ರಾಪಂ ಸದಸ್ಯನೋರ್ವ ಮಂಚಕ್ಕೆ ಕರೆದನೆಂದು ಆರೋಪಿಸಲಾಗಿದ್ದು, ಈ ಸಂಬಂಧ ಗ್ರಾಮ ದಲ್ಲಿ ಪಂಚಾಯ್ತಿ ನಡೆದ ವೇಳೆ ಆತನ ಬೆಂಬಲಿಗರು ಇಬ್ಬರ ಮೇಲೆ ಹಲ್ಲೆ ನಡೆಸಿದ್ದಾ ರೆಂದು ಈ ಸಂಬಂಧ ಓರ್ವ ಮಹಿಳೆ ಸೇರಿ ಐವರ ವಿರುದ್ಧ ಜಯಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಧನಗಳ್ಳಿ ಗ್ರಾಮದ ಗ್ರಾಪಂ ಸದಸ್ಯ ಪಿ.ಲಿಂಗ ರಾಜು ಎಂಬಾತನೇ ಮಹಿಳೆಯನ್ನು ಮಂಚಕ್ಕೆ ಕರೆದ ಆರೋಪಕ್ಕೆ ಗುರಿಯಾದವನಾಗಿದ್ದು, ಧನಗಳ್ಳಿ ಗ್ರಾಮದ ಸ್ವಾಮಿ, ಸುರೇಶ, ಚಿಕ್ಕಮ್ಮ ಮತ್ತು ಉದ್ಬೂರು ಗ್ರಾಮದ ನಂಜುಂಡ ಅವರು ಗಳು ಪಂಚಾಯ್ತಿ ನಡೆದ ವೇಳೆ ಇಬ್ಬರ ವಿರುದ್ಧ ಹಲ್ಲೆ ನಡೆಸಿದ್ದಾರೆ ಎಂಬ ಆರೋಪದಡಿ ಪೊಲೀ ಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ವಿವರ: ಧನಗಳ್ಳಿ ಗ್ರಾಮದ ಮಹಿಳೆಯೋ ರ್ವರು ತನ್ನ ಮನೆಗೆ ಗ್ರಾಮ ಪಂಚಾಯಿತಿ ಯಿಂದ ಸ್ಕೆಚ್ ಕಾಪಿ ಕೊಡಿಸುವಂತೆ ಗ್ರಾಪಂ ಸದಸ್ಯ ಪಿ.ಲಿಂಗರಾಜು ಅವರನ್ನು ಕೇಳಿದಾಗ ಆತ ಸ್ಕೆಚ್ ಕಾಪಿ ಬೇಕೆಂದರೆ ನೀನು ರಾತ್ರಿ ಮಂಚಕ್ಕೆ ಬರಬೇಕು ಅಥವಾ ನಿನಗೆ ಪರಿಚಿತ ರಾದ ಇಬ್ಬರು ಮಹಿಳೆಯರನ್ನು ಕಳುಹಿಸ ಬೇಕು ಎಂದು ಹೇಳಿದ್ದಾನೆ. ತಾನು ಅದಕ್ಕೆ ಒಪ್ಪದಿದ್ದರೂ, ಆತ ಎಲ್ಲಿಗೆ ಹೋದರೂ ಅಲ್ಲಿಗೆ ಬಂದು ಪೀಡಿಸುತ್ತಿದ್ದ ಎಂದು ಮಹಿಳೆ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾಳೆ.
ತಾನು ಈ ವಿಚಾರವನ್ನು ಗ್ರಾಮದ ಯಜ ಮಾನರುಗಳಿಗೆ ತಿಳಿಸಿದಾಗ ಅವರು ಎರಡು ಕಡೆಯವರನ್ನೂ ಪಂಚಾಯ್ತಿಗೆ ಕರೆದಿದ್ದರು. ಪಂಚಾಯ್ತಿ ನಡೆಯುತ್ತಿದ್ದಾಗಲೇ ಲಿಂಗರಾಜು ವಿನ ಅಣ್ಣ ಸ್ವಾಮಿ, ಸುರೇಶ, ಚಿಕ್ಕಮ್ಮ ಮತ್ತು ಉದ್ಬೂರು ಗ್ರಾಮದ ನಂಜುಂಡ ಅವರುಗಳು ಮಂಜುನಾಥ್ ಮತ್ತು ಬಸಪ್ಪ ಎಂಬುವರ ಮೇಲೆ ಹಲ್ಲೆ ನಡೆಸಿದ್ದು, ಗ್ರಾಮಸ್ಥರು ಪಂಚಾಯ್ತಿ ಮೊಟಕುಗೊಳಿಸಿ ಹಲ್ಲೆಗೊಳ ಗಾದವರನ್ನು ರಕ್ಷಿಸಿದ್ದಾರೆ ಎಂದು ಮಹಿಳೆ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾಳೆ.