ಮೈಸೂರು: ಸಂಪ್ರ ದಾಯ, ಜಾತಿ-ಧರ್ಮದ ಹೆಸರಿನಲ್ಲಿ ಮನು ಸ್ಮøತಿಯನ್ನು ಮನುವಾದಿಗಳು ಜೀವಂತ ವಾಗಿಟ್ಟಿದ್ದಾರೆ. ಆ ಮೂಲಕ ಸರ್ವಾಧಿ ಕಾರದಿಂದ ಆಡಳಿತ ನಡೆಸಿ ತಳ ಸಮು ದಾಯಗಳನ್ನು ಅಧೀನದಲ್ಲಿ ಇರಿಸಿಕೊಳ್ಳುವ ಉದ್ದೇಶ ಹೊಂದಿದ್ದಾರೆ ಎಂದು ಗಾಂಧಿ ನಗರದ ಉರಿಲಿಂಗಪೆದ್ದಿ ಮಠದ ಶ್ರೀ ಜ್ಞಾನಪ್ರಕಾಶ ಸ್ವಾಮೀಜಿ ಕಿಡಿಕಾರಿದರು.
ಮೈಸೂರಿನ ಮಾನಸ ಗಂಗೋತ್ರಿಯ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ಬಿಎಂಶ್ರೀ ಸಭಾಂಗಣದಲ್ಲಿ ಸಮೈಕ್ಯ ಪಬ್ಲಿಕೇಷನ್ಸ್ ವತಿಯಿಂದ ಭಾನುವಾರ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಚಿಂತಕ ಗಂಗಾರಾಂ ಚಂಡಾಳ ಅವರ `ಪ್ರಸ್ತುತ-ಅಪ್ರಸ್ತುತ (ಸಂವಿಧಾನ-ಮನುಸ್ಮøತಿ: ತೌಲ ನಿಕ ಅಧ್ಯಯನ)’ ಕೃತಿ ಬಿಡುಗಡೆಗೊಳಿಸಿ ಅವರು ಮಾತನಾಡಿದರು.
ಮನುವಾದಿ ಮನಸ್ಥಿತಿಗಳು ಮನುಸ್ಮøತಿ ಜಾರಿಗೆ ತರುವ ತವಕದಲ್ಲಿವೆ. ಪ್ರಸ್ತುತ ದೇಶ ದಲ್ಲಿ ಶೇ.80ರಷ್ಟು ಮನುವಾದದ ಆಚ ರಣೆಗಳು ಚಾಲ್ತಿಯಲ್ಲಿವೆ. ಸಂವಿಧಾನಕ್ಕಿಂತ ಗೊಡ್ಡು ಸಂಪ್ರದಾಯವೇ ಮುಖ್ಯ ಎನ್ನುವ ನೀಚರಿದ್ದಾರೆ. ಸಂಪ್ರದಾಯದ ಹೆಸರಿನಲ್ಲಿ ಮಹಿಳೆಯರನ್ನು ಶಬರಿಮಲೆ ಅಯ್ಯಪ್ಪನ ಸನ್ನಿಧಿಯ ಒಳಪ್ರವೇಶಕ್ಕೆ ವಿರೋಧ ವ್ಯಕ್ತ ಪಡಿಸುವವರು ಯಾವ ಬಾಯಲ್ಲಿ `ಭಾರತ ಮಾತಾ ಕೀ ಜೈ’ ಎನ್ನುತ್ತಾರೋ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮನುಸ್ಮøತಿಯು ಅಸಮಾನತೆ, ಕೊಳಕು, ಮಂತ್ರ, ವೇದ-ಉಪನಿಷತ್ತುಗಳಿಂದ ಕೂಡಿದೆ. ಆದರೆ ಅಂಬೇಡ್ಕರ್ ಸಂವಿಧಾನ ಮಾನವೀಯ ಮೌಲ್ಯ, ಪ್ರಜಾಸತ್ತಾತ್ಮಕ, ಸಾರ್ವಭೌಮ, ಸಮಾನತೆಯನ್ನು ಪ್ರತಿಪಾದಿ ಸುತ್ತದೆ. 1950ರಲ್ಲಿ ಸಂವಿಧಾನ ಸಭೆಯ ಚರ್ಚೆ ವೇಳೆ ಹೆಚ್.ಜೆ.ಖಂಡೇಕರ್ ಮನು ಸ್ಮøತಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಸಮಾನತೆ ಹಾಗೂ ಕೊಳಕಿನಿಂದ ಕೂಡಿದೆ ಎಂದು ಮನುಸ್ಮøತಿ ಕರಾಳ ಮುಖವನ್ನು ಉಲ್ಲೇಖಿಸಿದ್ದರು. ಇದೇವೇಳೆ ಅಂಬೇಡ್ಕರ್ ಅವರ ಸಂವಿಧಾನವನ್ನು `ಮಹರ್ ಸಂವಿಧಾನ’ ಎಂದು ಹೆಮ್ಮೆಯಿಂದ ಕರೆಯುತ್ತೇನೆ ಎಂದು ಅಭಿಮಾನ ವ್ಯಕ್ತಪಡಿಸಿದ್ದರು ಎಂದು ಸ್ಮರಿಸಿದರು.
ಪೇಜಾವರ ಸ್ವಾಮೀಜಿ ಹೇಳಿಕೆ ಖಂಡ ನಾರ್ಹ: ಉಡುಪಿಯ ಪೇಜಾವರ ಸ್ವಾಮೀಜಿ ನಮಗೆ ಮುಖ್ಯವಾದದು ಸಂವಿಧಾನವಲ್ಲ, ಬದಲಾಗಿ ಸಂಪ್ರದಾಯವೇ ಮುಖ್ಯ ಎಂದು ಹೇಳಿಕೆ ನೀಡಿದ್ದಾರೆ. ಒಂದು ವೇಳೆ ಇವರ ಮಠದ ಕೃಷ್ಣನ ವಿಗ್ರಹ ಕಳವಾದರೆ ಸಂವಿ ಧಾನದಡಿ ಪೊಲೀಸ್ ಠಾಣೆಗೆ ದೂರು ನೀಡುತ್ತಾರೋ? ಇಲ್ಲ ಸಂಪ್ರದಾಯದ ಮೊರೆ ಹೋಗುತ್ತಾರೋ? ಎಂದು ಲೇವಡಿ ಮಾಡಿದರು. 2019ರ ಲೋಕಸಭಾ ಚುನಾವಣೆ ಮನುಸ್ಮøತಿ ಹಾಗೂ ಭಾರತದ ಸಂವಿ ಧಾನದ ನಡುವೆ ನಡೆಯುವ ಯುದ್ಧ. ಇದನ್ನು ಅರಿತು ಆಯ್ಕೆ ಮಾಡಿ ಎಂದು ಸಂದೇಶ ನೀಡಿದರು. ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ ನಿರ್ದೇಶಕ ಪ್ರೊ.ನೀಲಗಿರಿ ತಳ ವಾರ್, ಚಿಂತಕ ನಾ.ದಿವಾಕರ, ಕೃತಿ ಕರ್ತೃ ಗಂಗಾರಾಂ ಚಂಡಾಳ, ಡಾ.ಬಿ.ಆರ್. ಅಂಬೇ ಡ್ಕರ್ ಅಧ್ಯಯನ ಕೇಂದ್ರದ ಉಪನ್ಯಾಸಕಿ ಟಿ.ಪದ್ಮಶ್ರೀ ಮತ್ತಿತರರು ಹಾಜರಿದ್ದರು.