ಚಾಮರಾಜನಗರ: ನಗರದ ರಂಗಮಂದಿರಕ್ಕೆ ಪೂರಕವಾಗಿರುವ 125 ಲಕ್ಷ ರೂ. ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗೆ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಸಿ.ಪುಟ್ಟರಂಗಶೆಟ್ಟಿ ಚಾಲನೆ ನೀಡಿದರು. ನಗರದ ಜಿಲ್ಲಾಡಳಿತ ಭವನದ ಸಮೀಪವಿರುವ ರಂಗಮಂದಿರಕ್ಕೆ ಹೊಂದಿಕೊಂಡಂತೆ ಚರಂಡಿ, ಮಳೆ ನೀರಿನ ಚರಂಡಿ, ಕಾಂಪೌಂಡ್, ವಾಹನ ನಿಲುಗಡೆ ಪ್ರದೇಶ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿದರು. ಈ ವೇಳೆ ಮಾತನಾಡಿದ ಸಚಿವರು, 7.50ಮೀ. ಅಗಲಕ್ಕೆ ಅಡ್ಡಮೋರಿ ನಿರ್ಮಾಣ ಮಾಡಲಾಗುತ್ತದೆ. 90ಮೀ. ಉದ್ದದಷ್ಟು ಮಳೆ ನೀರಿನ ಕಾಂಕ್ರೀಟ್ ಚರಂಡಿ, 315ಮೀ. ಉದ್ದದ ಕಾಂಪೌಂಡನ್ನು…
ಟಿಸಿ ನೀಡಲು ಅಲೆಸ್ತೀರಾ.. ಸವಲತ್ತು ವಿತರಣೆಗೆ ನನ್ನ ಅನುಮತಿ ಕಡ್ಡಾಯ!
June 30, 2018ಮೀನುಗಾರಿಕೆ, ಸೆಸ್ಕ್ ಅಧಿಕಾರಿಗೆ ತರಾಟೆ, ಬಾರದ ಕಾರ್ಮಿಕ ಅಧಿಕಾರಿಗೂ ಕ್ಲಾಸ್.! ಕೊಳ್ಳೇಗಾಲ: ಟಿಸಿ ನೀಡಲು ರೈತರನ್ನು ಅಲೆಸ್ತೀರಾ… ಲಿಂಗರಾಜ್ ನಿಮ್ಮ ಹಾಗೂ ನಿಮ್ಮ ಇಲಾಖೆ ಬಗ್ಗೆ ಸಾಕಷ್ಟು ದೂರಿದೆ ಎಂದು ಚೆಸ್ಕಾಂ ಇಲಾಖೆಯ ಅಧಿಕಾರಿಯನ್ನು ಸಚಿವ ಎನ್.ಮಹೇಶ್ ತರಾಟೆ ತೆಗೆದು ಕೊಂಡ ಪ್ರಸಂಗ ನಡೆಯಿತು. ಶುಕ್ರವಾರ ತಾಪಂ ಸಭಾಂಗಣದಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಸಚಿವರು ಮಾತನಾಡಿ, ನಿಮ್ಮ ಇಲಾಖೆಯದ್ದೇ ಸಾಕಷ್ಟು ತಲೆನೋವು. ಟಿಸಿ ಕೆಟ್ಟರೆ ದುರಸ್ಥಿ ಮಾಡಲು ತಿಂಗಳುಗಟ್ಟಲೆ ಅಲೆಸುತ್ತೀರಾ? ಎಂದು ಚಾಟಿ ಬೀಸಿದರು. ನನ್ನ…
ಪ್ರೀತಿಸುವಂತೆ ಕಿರುಕುಳ; ಮನನೊಂದು ವಿದ್ಯಾರ್ಥಿನಿ ಆತ್ಮಹತ್ಯೆಗೆ ಯತ್ನ
June 30, 2018ಸಾವು-ಬದುಕಿನ ನಡುವೆ ಹೋರಾಟ ಯುವಕ ನಾಪತ್ತೆ ಚಾಮರಾಜನಗರ: ಯುವಕನೊಬ್ಬ ಪ್ರೀತಿಸುವಂತೆ ಕಿರುಕುಳ ನೀಡುತ್ತಿದ್ದರಿಂದ ಮನನೊಂದು ವಿದ್ಯಾರ್ಥಿನಿ ಸೀಮೆ ಎಣ್ಣೆ ಸುರಿದುಕೊಂಡು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿ ಸಿರುವ ಘಟನೆ ತಾಲೂಕಿನ ಅಮ್ಮನಪುರ ಗ್ರಾಮದಲ್ಲಿ ನಡೆದಿರುವುದು ತಡವಾಗಿ ಬೆಳಕಿಗೆ ಬಂದಿದೆ. ಕಾಗಲವಾಡಿ ಗ್ರಾಮದ ಟಿ.ಎಸ್. ಸುಬ್ಬಣ್ಣ ಪ್ರೌಢಶಾಲೆಯಲ್ಲಿ 10ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿನಿ ಆತ್ಮ ಹತ್ಯೆಗೆ ಯತ್ನಿಸಿದ್ದು, ಈಗ ಸಾವು-ಬದು ಕಿನ ನಡುವೆ ಹೋರಾಡುತ್ತಿದ್ದಾಳೆ. ಘಟನೆಯ ವಿವರ: ಅಮ್ಮನಪುರ ಗ್ರಾಮದ ವಿದ್ಯಾರ್ಥಿನಿ ಕಾಗಲವಾಡಿ ಗ್ರಾಮದ ಟಿ.ಎಸ್. ಸುಬ್ಬಣ್ಣ…
ನಾಳೆ ಮಲೆಮಹದೇಶ್ವರ ಬೆಟ್ಟದಲ್ಲಿ ಉಚಿತ ಸಾಮೂಹಿಕ ವಿವಾಹ
June 30, 2018ಚಾಮರಾಜನಗರ: ಶ್ರೀ ಮಲೆಮಹದೇಶ್ವರ ಸ್ವಾಮಿ ಕ್ಷೇತ್ರಾಭಿವೃದ್ಧಿ ಪ್ರಾಧಿಕಾರದ ವತಿಯಿಂದ ಉಚಿತ ಸಾಮೂಹಿಕ ವಿವಾಹ ಮಹೋತ್ಸವವು ಜುಲೈ 1ರಂದು ಬೆಳಿಗ್ಗೆ 10 ರಿಂದ 10.45 ಗಂಟೆಯವರೆಗೆ ಕೊಳ್ಳೇಗಾಲ ತಾಲೂಕಿನ ಮಹದೇಶ್ವರ ಬೆಟ್ಟದ ಮಲೆಮಹದೇಶ್ವರಸ್ವಾಮಿ ದೇವಸ್ಥಾನದ ರಂಗಮಂದಿರ ಆವರಣದಲ್ಲಿ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.
ಮೂಗೂರು ಬಳಿ ಅಪಘಾತ ಪ್ರಕರಣ ಪರಿಹಾರಕ್ಕೆ ಆಗ್ರಹಿಸಿ ಶವವಿಟ್ಟು ಪ್ರತಿಭಟನೆ
June 29, 2018ಹನೂರು: ಅಪಘಾತ ದಲ್ಲಿ ಮೃತಪಟ್ಟು ಹಾಗೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಗಾಯಾಳುಗಳಿಗೆ ಸೂಕ್ತ ಪರಿಹಾರ ನೀಡಬೇಕು ಎಂದು ಆಗ್ರಹಿಸಿ ಆನಾಪುರ ಗ್ರಾಮಸ್ಥರು ಮಂಗಲ ಗ್ರಾಮದ ಮುಖ್ಯ ರಸ್ತೆಯಲ್ಲಿ ಶವ ಇಟ್ಟು ಪ್ರತಿಭಟನೆ ನಡೆಸಿದರು. ನಂಜನೂಡಿಗೆ ದೇವರ ದರ್ಶನಕ್ಕಾಗಿ ಕುಟುಂಬ ಸಮೇತರಾಗಿ ತೆರಳುತ್ತಿದ್ದಾಗ ಮೂಗೂರು ಗ್ರಾಮದ ರಾಷ್ಟ್ರೀಯ ಹೆದ್ಧಾರಿ 212ರಲ್ಲಿ ಖಾಸಗಿ ಬಸ್ ಹಾಗೂ ಆಟೋ ಮುಖಾಮುಖಿ ಡಿಕ್ಕಿಯಾಗಿ ಒಂದೇ ಕುಟುಂ ಬದ ಮೂವರು ಸ್ಥಳದಲ್ಲೇ ಮೃತಪಟ್ಟಿ ದ್ದರು. ಮೃತರ ಕುಟುಂಬಕ್ಕೆ ಪರಿಹಾರ ಹಾಗೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿ…
ಮಾದಪ್ಪನ ಹುಂಡಿಯಲ್ಲಿ ಕೋಟಿ ರೂ.ಗು ಹೆಚ್ಚು ಹಣ ಸಂಗ್ರಹ
June 29, 2018ಕೊಳ್ಳೇಗಾಲ: ತಾಲೂಕಿನ ಪ್ರಸಿದ್ಧ ಪುಣ್ಯಕ್ಷೇತ್ರ ಶ್ರೀಮಲೇಮಹದೇಶ್ವರ ಬೆಟ್ಟದಲ್ಲಿರುವ ಶ್ರೀ ಮಹದೇಶ್ವರಸ್ವಾಮಿ ದೇವಸ್ಥಾನದ ಹುಂಡಿಗಳನ್ನು ಎಣಿಕೆ ಮಾಡಲಾಗಿದ್ದು, 1.08 ಕೋಟಿಗೂ ಹೆಚ್ಚು ಹಣ ಸಂಗ್ರಹವಾಗಿದೆ. ಇಂದು ಬೆಳಿಗ್ಗೆ ಶ್ರೀ ಸಾಲೂರು ಬೃಹನ್ಮಠದ ಶ್ರೀ ಪಟ್ಟದ ಗುರುಸ್ವಾಮಿ ಮತ್ತು ಶ್ರೀ ಮಲೇಮಹದೇಶ್ವರ ಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಎಂ.ಜೆ.ರೂಪ ಅವರ ನೇತೃತ್ವದಲ್ಲಿ ಹುಂಡಿಗಳನ್ನು ತೆರೆಯಲಾಯಿತು. ಹುಂಡಿಗಳ ಎಣಿಕೆ ಕಾರ್ಯದಲ್ಲಿ ಪ್ರಾಧಿಕಾರದ ನಾಮನಿರ್ದೇಶಿತ ಸದಸ್ಯರುಗಳಾದ ಕೊಪ್ಪಾಳಿ ಮಹದೇವನನಾಯಕ, ಡಿ.ದೇವರಾಜು, ಡಿ.ಮಹದೇವಪ್ಪ, ಜವರೇಗೌಡ, ಪ್ರಾಧಿಕಾರದ ಉಪ ಕಾರ್ಯದರ್ಶಿ ರಾಜಶೇಖರ್, ಅಧೀಕ್ಷಕ ಎಂ.ಬಸವರಾಜು,…
ಕಾಡುಹಂದಿ ದಾಳಿಗೆ ಸಾವಿರಾರು ರೂ. ಮೌಲ್ಯದ ಬೆಳೆ ನಾಶ
June 29, 2018ಗುಂಡ್ಲುಪೇಟೆ: ತಾಲೂಕಿನ ದೇವರಹಳ್ಳಿ ಗ್ರಾಮದ ಕಾಡಂಚಿನ ಜಮೀನುಗಳಲ್ಲಿ ಕಾಡುಹಂದಿ ಗಳ ದಾಳಿಯಿಂದ ರೈತರ ಸಾವಿರಾರು ರೂಪಾಯಿಗಳ ಮೌಲ್ಯದ ಬೆಳೆ ನಷ್ಟವಾಗಿದೆ. ಬಂಡೀಪುರ ಹುಲಿ ಯೋಜನೆಯ ವ್ಯಾಪ್ತಿ ಗೊಳಪಡುವ ಗೋಪಾಲಸ್ವಾಮಿ ಬೆಟ್ಟ ವಲಯದ ಕಾಡಂಚಿನ ದೇವರಹಳ್ಳಿ ಗ್ರಾಮದ ಸಿದ್ದಪ್ಪ, ಮಹದೇವಪ್ಪ, ರಾಜಪ್ಪ, ಕೆಂಪಣ್ಣ, ಗಿರೀಶ್ ಎಂಬುವರ ಜಮೀ ನುಗಳಿಗೆ ದಾಳಿ ನಡೆಸಿದ ಕಾಡುಹಂದಿ ಗಳು ಅಲ್ಲಿ ಬೆಳೆದಿದ್ದ ಜೋಳ ಹಾಗೂ ಸೂರ್ಯಕಾಂತಿ ಬೆಳೆಗಳನ್ನು ಸಂಪೂರ್ಣ ನಾಶಗೊಳಿಸಿವೆ. ಈ ಬಗ್ಗೆ ಸ್ಥಳ ಪರಿಶೀಲನೆ ನಡೆಸಿದ ಅರಣ್ಯಾಧಿಕಾರಿಗಳು ಹಂದಿಯಿಂದಾದ ಬೆಳೆ ನಷ್ಟಕ್ಕೆ…
ರೋಟರಿ ಸಿಲ್ಕ್ ಸಿಟಿ ಅಧ್ಯಕ್ಷರಾಗಿ ಅಜೇಯ್, ಕಾರ್ಯದರ್ಶಿ ಪ್ರದೀಪ್ ಅಧಿಕಾರ ಸ್ವೀಕಾರ
June 29, 2018ಚಾಮರಾಜನಗರ: ಚಾಮರಾಜನಗರ ರೋಟರಿ ಸಿಲ್ಕ್ ಸಿಟಿ ಸಂಸ್ಥೆಯ ನೂತನ ಅಧ್ಯಕ್ಷರಾಗಿ ಹೆಚ್.ಎಂ. ಅಜೇಯ್ ಹಾಗೂ ಕಾರ್ಯದರ್ಶಿ ಯಾಗಿ ಆಲೂರು ಎ.ಎಸ್.ಪ್ರದೀಪ್ ಅಧಿಕಾರ ಸ್ವೀಕರಿಸಿದರು. ನಗರದ ರತ್ನೇಶ್ವರಿ ರೆಸಿಡೆನ್ಸಿ ಬುಧವಾರ ಸಂಜೆ ನಡೆದ ಸಂಸ್ಥೆಯ 2018-19ನೇ ಸಾಲಿನ ಪದವಿ ಪ್ರದಾನ ಸಮಾರಂಭದಲ್ಲಿ ಅವರು ಅಧಿಕಾರ ಸ್ವೀಕರಿಸಿದರು. ಪದವಿ ಪ್ರದಾನಿ ಮಾಡಿ ಮಾತನಾಡಿದ 2020-21ನೇ ಸಾಲಿನ ರೋಟರಿ ಜಿಲ್ಲೆ 3181ರ ನಿಯೋಜಿತ ಜಿಲ್ಲಾ ಗೌರ್ನರ್ ಎಂ.ರಂಗನಾಥ್ ಭಟ್, ರೋಟರಿ ಸಂಸ್ಥೆ ವಿಶ್ವಾದ್ಯಂತ ಆರೋಗ್ಯ, ಶಿಕ್ಷಣ ಸೇರಿದಂತೆ ಇತರ ಸಮಾಜ ಸೇವಾ…
ಇಂದು ಅರಕಲವಾಡಿಯಲ್ಲಿ ತಾಲೂಕು ಸಾಹಿತ್ಯ ಸಮ್ಮೇಳನ
June 29, 2018ಚಾಮರಾಜನಗರ: ಚಾಮ ರಾಜನಗರ ತಾಲೂಕು ಐದನೇ ಕನ್ನಡ ಸಾಹಿತ್ಯ ಸಮ್ಮೇಳನ ಜೂ.29ರಂದು ಗಡಿ ಗ್ರಾಮವಾದ ಅರಕಲವಾಡಿಯಲ್ಲಿ ನಡೆ ಯಲಿದ್ದು, ಮಧುರೈ ಕನ್ನಡ ವಿಭಾಗದ ಮುಖ್ಯಸ್ಥ ಡಾ.ಎಂ.ಎನ್.ಮಹೇಶ್ ಸಮ್ಮೇಳನಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ ಎಂದು ತಾಲೂಕು ಕಸಾಪ ಅಧ್ಯಕ್ಷ ಬಿ.ಬಸವರಾಜು ತಿಳಿಸಿದರು. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತ ನಾಡಿದ ಅವರು, ಸಮ್ಮೇಳನದ ಸರ್ವಾ ಧ್ಯಕ್ಷರಾಗಿ ಆಯ್ಕೆಯಾಗಿರುವ ಡಾ.ಎಂ.ಎನ್. ಮಹೇಶ್ ಅವರು ತಾಲೂಕಿನ ಮಲೆ ಯೂರು ಗ್ರಾಮದವರು. ನಗರದ ಜೆಎಸ್‍ಎಸ್ ಕಾಲೇಜು ಪದವೀಧರರಾಗಿದ್ದು, ತರಾಸು ಕೃತಿಗಳ ವಿಶ್ಲೇಷಣಾತ್ಮಕ ಅಧ್ಯಯನ ಎಂಬ ಮಹಾಪ್ರಬಂಧಕ್ಕಾಗಿ ಪಿಎಚ್‍ಡಿ ಪದವಿ…
ಸಾರ್ವಜನಿಕ ಶೌಚಾಲಯಕ್ಕೆ ಆಗ್ರಹಿಸಿ ಪ್ರತಿಭಟನೆ
June 29, 2018ಚಾಮರಾಜನಗರ: ನಗರದ ಪ್ರಮುಖ ಸ್ಥಳಗಳಲ್ಲಿ ಸಾರ್ವಜನಿಕ ಶೌಚಾಲಯವನ್ನು ನಿರ್ಮಿಸುವಂತೆ ಆಗ್ರಹಿಸಿ ಸುವರ್ಣ ಕನ್ನಡ ಶಿಕ್ಷಣ ವೇದಿಕೆಯ ಕಾರ್ಯಕರ್ತರು ನಗರದ ನಗರಸಭೆ ಕಾರ್ಯಾಲಯದ ಮುಂದೆ ಗುರುವಾರ ಪ್ರತಿಭಟನೆ ನಡೆಸಿದರು. ಕಾರ್ಯಾಲಯದ ಮುಂದೆ ಜಮಾಯಿಸಿದ ವೇದಿಕೆ ಕಾರ್ಯಕರ್ತರು, ನಗರಸಭಾ ಅಧಿಕಾರಿಗಳು, ಅಧ್ಯಕ್ಷರು, ನದಸ್ಯರು ಹಾಗೂ ಜನಪ್ರತಿನಿಧಿಗಳ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಜಿಲ್ಲಾ ಕೇಂದ್ರವಾದ ಚಾಮರಾಜನಗರಕ್ಕೆ ಪ್ರತಿದಿನ ಸಹಸ್ರಾರು ಸಾರ್ವಜನಿಕರು ಆಗಮಿಸುತ್ತಾರೆ. ಆದರೆ ನಗರದ ಪ್ರಮುಖ ವೃತ್ತಗಳಲ್ಲಿ, ಪ್ರಮುಖ ರಸ್ತೆಗಳಲ್ಲಿ ಸಾರ್ವಜನಿಕ ಶೌಚಾಲಯ ಇಲ್ಲದ ಕಾರಣ ನಾಗರಿಕರು ಪರಿತಪಿಸುವಂತಾಗಿದೆ….