ಹಾಸನ: ಕಾರ್ಮಿಕರಿಗೆ ಕಿರುಕುಳ ನೀಡುತ್ತಿರುವ ನಗರಸಭೆ ಆರೋಗ್ಯ ನಿರೀಕ್ಷಕ ಸ್ಟೀಫನ್ ಪ್ರಕಾಶ್‍ರನ್ನು ಕೂಡಲೇ ಬೇರೆಡೆಗೆ ವರ್ಗಾಯಿಸುವಂತೆ ಒತ್ತಾಯಿಸಿ ನಗರಸಭೆ ಪೌರಕಾರ್ಮಿಕರು ಜಿಲ್ಲಾಡಳಿತ ಕಚೇರಿ ಮುಂದೆ ಪ್ರತಿಭಟಿಸಿದರು. ನಗರದ ಜಿಲ್ಲಾಧಿಕಾರಿ ಕಚೇರಿ ಆವರಣ ದಲ್ಲಿ ಜಮಾಯಿಸಿದ ಪ್ರತಿಭಟನಾಕಾರರು, ಬೇಡಿಕೆ ಈಡೇರಿಕೆಗೆ ಆಗ್ರಹಿಸಿದರು. ಸ್ಟೀಫನ್ ಪ್ರಕಾಶ್ 20 ವರ್ಷಗಳಿಂದ ನಗರಸಭೆ ಆರೋಗ್ಯ ನಿರೀಕ್ಷಕನಾಗಿ ಕೆಲಸ ಮಾಡು ತ್ತಿದ್ದು, ಪೌರ ಕಾರ್ಮಿಕರನ್ನು ಅಮಾನವೀಯ ವಾಗಿ ನಡೆಸಿಕೊಳ್ಳುತ್ತಿದ್ದಾರೆ. ಈ ಪ್ರಶ್ನಿ ಸುವವರನ್ನು ಕಠಿಣ ಕೆಲಸಕ್ಕೆ ನಿಯೋಜಿಸಿ ಸರ್ವಾಧಿಕಾರಿಯಂತೆ ವರ್ತಿಸುತ್ತಾರೆ. ಇವ ರಿಂದ ಸಾಕಷ್ಟು…
ಸಹಜ ಸ್ಥಿತಿಯತ್ತ ರಾಮನಾಥಪುರ
August 21, 2018ರಾಮನಾಥಪುರ: ಕಾವೇರಿ ಜಲಾನಯನ ಪ್ರದೇಶದಲ್ಲಿ ಮಳೆಯ ಪ್ರಮಾಣ ಕುಂಠಿತಗೊಂಡ ಹಿನ್ನೆಲೆ ಇಲ್ಲಿನ ನದಿ ಪ್ರವಾಹ ತಗ್ಗಿದ್ದು, ಜನ-ಜೀವನ ಸಹಜ ಸ್ಥಿತಿಗೆ ಮರಳುತ್ತಿದೆ. ಕಳೆದ ಕೆಲ ದಿನಗಳಲ್ಲಿ ರಾಮನಾಥಪುರ ಗ್ರಾಮ ಜಲಾವೃತಗೊಂಡ ಪರಿಣಾಮ ಜನತೆ ಸಂಕಷ್ಟಕ್ಕೆ ಸಿಲುಕಿದ್ದರು. ಶುಕ್ರವಾರದಿಂದ ನದಿ ನೀರು ಹರಿಯುವಿನ ಪ್ರಮಾಣ ಸಾಕಷ್ಟು ಇಳಿದಿದ್ದು, ಮನೆ ತೊರೆದು ನೆರೆ ಪರಿಹಾರ ಕೇಂದ್ರದಲ್ಲಿರುವ ನಿರಾಶ್ರಿತರಿಗೆ ಕೊಂಚ ಮಟ್ಟಿಗೆ ನೆಮ್ಮದಿ ತಂದಿದೆ. ನೆರವಿನ ಮಹಾಪೂರ: ರಾಮನಾಥ ಪುರದ ಸರ್ಕಾರಿ ಶಾಲೆಯಲ್ಲಿ ತಾಲೂಕು ಆಡಳಿತ ನಿರಾಶ್ರಿತರಿಗೆ ತೆರೆದಿರುವ ನೆರೆ ಪರಿಹಾರ…
ನಿರಾಶ್ರಿತರ ಶಿಬಿರದಲ್ಲಿ ಸಚಿವ ಹೆಚ್.ಡಿ.ರೇವಣ್ಣ ನಡೆಗೆ ವ್ಯಾಪಕ ಟೀಕೆ
August 21, 2018ರಾಮನಾಥಪುರ: ಇಲ್ಲಿನ ನೆರೆ ಪರಿಹಾರ ಕೇಂದ್ರಕ್ಕೆ ಭೇಟಿ ನೀಡಿದ್ದ ಸಚಿವ ಎಚ್.ಡಿ.ರೇವಣ್ಣ ಪ್ರಾಣಿಗಳಿಗೆ ನೀಡುವಂತೆ ನಿರಾಶ್ರಿತರಿಗೆ ಬಿಸ್ಕೆಟ್ ಎಸೆದಿರುವ ನಡೆಗೆ ಸಾರ್ವಜನಿಕ ವಲಯದಿಂದ ಭಾರೀ ಆಕ್ರೋಶ, ಟೀಕೆ ವ್ಯಕ್ತವಾಗಿದೆ. ರಾಮನಾಥಪುರದ ಸರ್ಕಾರಿ ಶಾಲೆಯೊಂದರಲ್ಲಿ ತೆರೆದಿದ್ದ ನೆರೆ ಪರಿಹಾರ ಕೇಂದ್ರಕ್ಕೆ ನಿರಾಶ್ರಿತ ಸಮಸ್ಯೆ ಆಲಿಸಲು ಶಾಸಕ ಎ.ಟಿ.ರಾಮಸ್ವಾಮಿ ಆವರೊಡನೆ ಸಚಿವ ರೇವಣ್ಣ ಭೇಟಿ ನೀಡಿದ್ದರು. ಈ ವೇಳೆ ನಿರಾಶ್ರಿತರಿಗೆ ಬಿಸ್ಕೆಟ್ ಪ್ಯಾಕ್‍ಗಳನ್ನು ನೀಡಲು ಮುಂದಾದರು. ಆದರೆ ಇವರ ಬಿಸ್ಕೆಟ್ ವಿತರಿಸಿದ ಪರಿ ನೋಡುಗರನ್ನು ಮುಜುಗರಕ್ಕೀಡು ಮಾಡಿತು. ನಿರಾಶ್ರಿತರ ಕೈಗೆ…
ಹೇಮಾವತಿ ನದಿಗೆ ಹಾರಿದ ವ್ಯಕ್ತಿ: ವೀಡಿಯೋ ವೈರಲ್
August 21, 2018ಹೊಳೆನರಸೀಪುರ: ಅಪಾಯದ ಮಟ್ಟ ಮೀರಿ ಹರಿಯುತ್ತಿರುವ ಹೇಮಾವತಿ ನದಿಗೆ ಹಾರಿ ವ್ಯಕ್ತಿಯೋರ್ವ ಈಜಿ ದಡ ಸೇರುವ ಹುಚ್ಚು ಸಾಹಸ ಪ್ರದರ್ಶಿಸಿದ್ದು, ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಪಟ್ಟಣದ ಕೋಟೆ ಶ್ರೀರಾಮು ಎಂಬಾತ ನದಿಗೆ ಹಾರಿದ ಹುಚ್ಚು ಸಾಹಸಿ. ತನ್ನ ಪುಟಾಣಿ ಮಕ್ಕಳಾದ ಹರ್ಷಗೌಡ, ಧೃವಗೌಡ ಸಮ್ಮುಖದಲ್ಲಿ ನದಿಗೆ ಹಾರಿ ನಂತರ ಈಜಿ ದಡ ಸೇರಿದ್ದಾನೆ. ಮಕ್ಕಳು ಅಪ್ಪ ನದಿಗೆ ಹಾರಬೇಡ ಎಂಬ ಅಳಲನ್ನು ಲೆಕ್ಕಿಸದೆ ಎತ್ತರದ ಸೇತುಯಿಂದ ನದಿಗೆ ಹಾರಿ ನಂತರ ಈಜಿ ದಡ ಸೇರಿದ್ದಾರೆ….
ಕಾಲು ಜಾರಿ ಕೆರೆಗೆ ಬಿದ್ದು ಪುರಸಭಾ ಮಾಜಿ ಸದಸ್ಯ ಸಾವು
August 21, 2018ಬೇಲೂರು: ಆಕಸ್ಮಿಕವಾಗಿ ಕಾಲು ಜಾರಿ ಕೆರೆಗೆ ಬಿದ್ದು ತಾಲೂಕಿನ ಪುರಸಭಾ ಮಾಜಿ ಸದಸ್ಯ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಎ.ಸಾಲ್ಡಾನ್ (76) ಮೃತಪಟ್ಟಿದ್ದಾರೆ. ಭಾನುವಾರ ಜೀಪಿನಲ್ಲಿ ಲಕ್ಕುಂದದ ತಮ್ಮ ಕಾಫಿ ತೋಟಕ್ಕೆ ಹೋದವರು ಮನೆಗೆ ಸಂಜೆಯಾ ದರೂ ವಾಪಸ್ಸಾಗಿರಲಿಲ್ಲ. ಮನೆಯವರು ತೋಟದಲ್ಲಿ ಹುಡುಕಾಡಿ ಅರೇಹಳ್ಳಿ ಪೊಲೀ ಸರಿಗೆ ತಿಳಿಸಿದ್ದಾರೆ. ಪೊಲೀಸರು ಬೇಲೂರಿನಿಂದ ಮೀನುಗಾರರನ್ನು ಕರೆಸಿ ತೋಟದ ಕೆರೆಯಲ್ಲಿ ಹುಡುಕಾಟ ನಡೆಸಿ ಮೃತದೇಹ ಹೊರ ತೆಗೆದರು. ಬಿ.ಎ.ಸಾಲ್ಡಾನ್ ಕೆರೆಯಲ್ಲಿ ಕಾಲು ಜಾರಿ ಬಿದ್ದು ಸಾವನ್ನಪ್ಪಿರುವುದಾಗಿ ಕುಟುಂಬದವರು ದೂರಿನಲ್ಲಿ ತಿಳಿಸಿದ್ದಾರೆ. ಬೇಲೂರು…
ಪ್ರವಾಹ ಪೀಡಿತರ ಸಂಕಷ್ಟ ಆಲಿಸಿದ ಸಚಿವ ಹೆಚ್.ಡಿ.ರೇವಣ್ಣ
August 19, 2018ರಾಮನಾಥಪುರ: ಪಟ್ಟಣದಲ್ಲಿ ತೆರೆದಿರುವ ನಿರಾಶ್ರಿತರ ಕೇಂದ್ರಕ್ಕೆ ಭೇಟಿ ನೀಡಿದ ಸಚಿವ ಹೆಚ್.ಡಿ.ರೇವಣ್ಣ ಸಂತ್ರಸ್ತರ ಸಂಕಷ್ಟ ಆಲಿಸಿದರು. ಕಾವೇರಿ ನದಿ ಪ್ರವಾಹ ಸಂತ್ರಸ್ತರಿಗೆ ಗ್ರಾಮದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ರುವ ತೆರೆದಿರುವ ಗಂಜಿ ಕೇಂದ್ರಕ್ಕೆ ಭೇಟಿ ನೀಡಿದ ಸಚಿವರು, ಹಾಲು, ಬಿಸ್ಕತ್ ವಿತರಿಸಿ ಸಾಂತ್ವನ ಹೇಳಿದರು. ಈ ವೇಳೆ ಸಂತ್ರಸ್ತರು ತಮ್ಮ ಅಳಲು ತೋಡಿಕೊಂಡರು. ನಂತರ ಇಲ್ಲಿನ ಕಾವೇರಿ ನದಿ ದಂಡೆಯಲ್ಲಿ ನೀರಿನ ರಭಸಕ್ಕೆ ಮನೆಗಳು ಕುಸಿದಿರುವ ಸ್ಥಳಕ್ಕೆ ಭೇಟಿ ಪರಿಶೀಲಿಸಿ, ಮಾತನಾಡಿದರು. ಕಾವೇರಿ ನದಿ ದಂಡೆಯಲ್ಲಿರುವ ಮನೆ…
ಸಕಲೇಶಪುರ ಬಳಿ ರಸ್ತೆ, ಗುಡ್ಡ ಕುಸಿತ
August 19, 2018ಸಕಲೇಶಪುರ: ವಾರದಿಂದ ಸುರಿ ಯುತ್ತಿರುವ ಮಳೆಯಿಂದ ತಾಲೂಕಿನ ಬಳಿ ರಸ್ತೆ, ಗುಡ್ಡ ಕುಸಿದಿರುವ ಪರಿಣಾಮ ರೈಲು, ಬಸ್ ಸಂಚಾರ ಸ್ಥಗಿತಗೊಳಿಸಲಾಗಿದೆ. ವರುಣನ ಆರ್ಭಟ ಮತ್ತು ನೀರಿನ ರಭಸಕ್ಕೆ ಮಣ್ಣಿನ ಸವಕಳಿ ಉಂಟಾಗಿದ್ದು ಹಲವೆಡೆ ರೈಲ್ವೇ ಸೇತುವೆಗಳು ಕೊಚ್ಚಿ ಹೋಗಿವೆ. ಅಷ್ಟೇ ಅಲ್ಲದೇ ಜಿಲ್ಲಾ ಗಡಿ ಭಾಗಗಳಲ್ಲಿ ಮತ್ತೆ ಭೂ ಕುಸಿತ ಉಂಟಾ ಗಿದ್ದು, ಸಕಲೇಶಪುರದ ಮಾಗೇರಿ ರಸ್ತೆ ಕುಸಿದು, ಪರಿಣಾಮ ಬಸ್ಸೊವೊಂದು ಸಿಲುಕಿಕೊಂಡಿದೆ. ಇದರಿಂದ ಮಾಗೇರಿ, ಹಾಸನ, ಕೊಡಗು ಗಡಿ ಭಾಗದ ರಸ್ತೆ ಸಂಪರ್ಕ ಕಡಿತಗೊಂಡಿದೆ. ಇನ್ನೂ…
ಹಾಸನ ಹಾಲು ಒಕ್ಕೂಟದಿಂದ ಸಂತ್ರಸ್ತರಿಗೆ ನೆರವು
August 19, 2018ಹಾಸನ: ಸತತ ಮಳೆ, ಗಾಳಿ, ಪ್ರವಾಹದಿಂದ ತತ್ತರಿಸಿರುವ ಕೊಡಗಿನ ಸಂತ್ರಸ್ತರಿಗೆ ಹಾಸನ ಹಾಲು ಒಕ್ಕೂಟದಿಂದ ಅಗತ್ಯ ನೆರವು ನೀಡುವ ನಿಟ್ಟಿನಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಹೆಚ್.ಡಿ.ರೇವಣ್ಣ ಆಹಾರ ಸಾಮಾಗ್ರಿ ತುಂಬಿದ 3 ಲಾರಿಗಳಿಗೆ ಹಸಿರು ನಿಶಾನೆ ತೋರಿದರು. ನಗರದ ಹಾಲು ಒಕ್ಕೂಟದ ಆವರಣದಲ್ಲಿ 3 ಲಾರಿಗಳಲ್ಲಿ 30,000ಲೀ. ಹಾಲು, 5,000 ಬಿಸ್ಕತ್, 200 ಕ್ವಿಂಟಾಲ್ ಅಕ್ಕಿ, 5 ಕ್ವಿಂಟಾಲ್ ಬೇಳೆ ಹಾಗೂ ಬಟ್ಟೆ ಸೇರಿದಂತೆ ಅಗತ್ಯ ವಸ್ತುಗಳು ತುಂಬಿ ಕಳುಹಿಸಲಾಯಿತು. ಅಗತ್ಯಬಿದ್ದರೆ ಮತ್ತಷ್ಟು ನೆರವು ಒದಗಿಸಲಾ ಗುವುದು…
ಮೃತದೇಹ ಹುಡುಕಿಕೊಡುವಂತೆ ಡಿಸಿ ಕಾಲಿಗೆರಗಿದ ತಾಯಿ, ಪತ್ನಿ
August 18, 2018ಹಾಸನ: – ನನ್ನ ಮಗನ ನೋಡಿ ನಾಲ್ಕು ದಿನಗಳಾಗಿವೆ. ಮಗನ ಮುಖ ತೋರಿಸವ್ವಾ….. ಎಂದು ಹೆತ್ತಕರುಳೊಂದು ಗೋಳಾಡುತ್ತಾ ಕಾಲಿಗೆರುವ ದೃಶ್ಯ ಒಂದೆಡೆಯಾದರೆ, ನನ್ನ ಕಂದನಿಗೆ ಅಪ್ಪನ ಮುಖ ತೋರಿಸಿ ಎಂದು ಕಣ್ಣೀರಿಡುತ್ತಾ ಹಸುಗೂಸಿನೊಂದಿಗೆ ಮಹಿಳೆ ಅಂಗಲಾ ಚುತ್ತಿದ್ದ ದೃಶ್ಯ ಮತ್ತೊಂದೆಡೆ. ಒಬ್ಬರ ನ್ನೊಬ್ಬರು ಸಮಾಧಾನ ಪಡಿಸುತ್ತಿದ್ದ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿತು. ಇದು ಜಿಲ್ಲಾಡಳಿತ ಕಚೇರಿ ಆವರಣ ದಲ್ಲಿ ಇಂದು ಕಂಡು ಬಂದ ಚಿತ್ರಣ. ಇದರಿಂದ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರ ಕಣ್ಣೂ ತುಂಬಿ ಬಂತು ಸಕಲೇಶಪುರ…
ಪ್ರವಾಹ ಸೃಷ್ಟಿಸಿದ ಜೀವನದಿ ಕಾವೇರಿ
August 18, 2018ರಾಮನಾಥಪುರ: ಜೀವ ನದಿ ಕಾವೇರಿಯು 3ನೇ ದಿನವೂ ಅಪಾಯದ ಮಟ್ಟ ಮೀರಿ ಹರಿಯು ತ್ತಿರುವ ಪರಿಣಾಮ ಪ್ರವಾಹ ಸೃಷ್ಟಿಯಾಗಿದೆ. ಪಟ್ಟಣ ಸೇರಿದಂತೆ ನದಿ ಪಾತ್ರದ ಗ್ರಾಮಗಳು ಜಲಾ ವೃತವಾಗಿದ್ದು, ನೀರಿನ ರಭಸಕ್ಕೆ ಮನೆಗಳು ಕುಸಿದಿವೆ. ಜಮೀನುಗಳಲ್ಲಿ ನೀರು ನುಗ್ಗಿ ಪ್ರಮುಖ ಬೆಳೆ ಭತ್ತ ಸೇರಿದಂತೆ ಇನ್ನಿತರೆ ಫಸಲು ನಾಶವಾಗಿದೆ. ಶಾಸಕ ಎ.ಟಿ.ರಾಮಸ್ವಾಮಿ ನೇತೃತ್ವದಲ್ಲಿ ಸ್ಥಳಾಂ ತರ ಕಾರ್ಯ ಭರದಿಂದ ಸಾಗಿದೆ. ತೆಪ್ಪಗಳ ಮೂಲಕ ಸ್ಥಳಾಂತರ: ಪಟ್ಟಣ ಶ್ರೀ ರಾಮೇಶ್ವರಸ್ವಾಮಿ ದೇವಸ್ಥಾನದ ರಸ್ತೆ, ಐ.ಬಿ ಸರ್ಕಲ್, ಸೇರಿದಂತೆ ವಿವಿಧೆಡೆಯ…