ಹಾಸನ

ಬಾಲ ಕಾರ್ಮಿಕ ಪದ್ಧತಿ ನಿರ್ಮೂಲನೆಗೆ ಕೈ ಜೋಡಿಸಿ
ಹಾಸನ

ಬಾಲ ಕಾರ್ಮಿಕ ಪದ್ಧತಿ ನಿರ್ಮೂಲನೆಗೆ ಕೈ ಜೋಡಿಸಿ

May 31, 2018

ಹಾಸನ: ಬಾಲ ಕಾರ್ಮಿಕ ಪದ್ಧತಿ ನಿರ್ಮೂಲನೆಗೆ ಪ್ರತಿಯೊಬ್ಬರ ಸಹಕಾರ ಅಗತ್ಯ ಬಾಲ ಕಾರ್ಮಿಕ ಪದ್ಧತಿ ನಿರ್ಮೂಲನೆಗೆ ಎಲ್ಲಾ ಇಲಾಖೆಗಳೂ ಕೈಜೋಡಿಸಬೇಕು ಎಂದು ಅಪರ ಜಿಲ್ಲಾಧಿಕಾರಿ ಪೂರ್ಣಿಮಾ ತಿಳಿಸಿದ್ದಾರೆ. ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಬಾಲ ಕಾರ್ಮಿಕ ವಿರೋಧಿ ದಿನಾಚರಣೆ ಪೂರ್ವಭಾವಿ ಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಎಲ್ಲಾ ಮಕ್ಕಳಿಗೂ ಸಮಾನ ಅವಕಾಶ ದೊರೆಯಬೇಕು. ಅದಕ್ಕೆ ಸಮಾಜವೂ ಸಹಕಾರ ನೀಡಬೇಕು ಎಂದರು. ಬಾಲ ಕಾರ್ಮಿಕ ಪದ್ಧತಿ ಒಂದು ಅನಿಷ್ಠ ವ್ಯವಸ್ಥೆ. ಅದನ್ನು ಸಂಪೂರ್ಣವಾಗಿ ತೊಡೆದು ಹಾಕಬೇಕು….

ಉರುಳಿಗೆ ಸಿಲುಕಿದ್ದ ಚಿರತೆ ರಕ್ಷಣೆ
ಹಾಸನ

ಉರುಳಿಗೆ ಸಿಲುಕಿದ್ದ ಚಿರತೆ ರಕ್ಷಣೆ

May 30, 2018

ಅರಕಲಗೂಡು: ಹಂದಿ ಹಿಡಿಯಲು ಹಾಕಿದ್ದ ಉರುಳಿಗೆ ಸಿಲುಕಿದ್ದ ಒದ್ದಾಡುತ್ತಿದ್ದ ಚಿರತೆಯನ್ನು ಅರಣ್ಯಾಧಿಕಾರಿಗಳು ಅರವಳಿಕೆ ನೀಡಿ ರಕ್ಷಿಸಿದ್ದಾರೆ. ತಾಲೂಕಿನ ಮಲ್ಲಿಪಟ್ಟಣದಲ್ಲಿ ಹಂದಿ ಹಿಡಿಯಲು ಹಾಕಿದ್ದ ಉರುಳಿಗೆ ಚಿರತೆ ಯೊಂದು ಸಿಲುಕಿ ಸುಮಾರು ನಾಲ್ಕು ಗಂಟೆಗಳ ಕಾಲ ನರಳಿದೆ. ಸುದ್ದಿ ತಿಳಿದ ಅರಣ್ಯಧಿಕಾರಿಗಳು ಸ್ಥಳಕ್ಕೆ ಧಾವಿಸಿ ಚಿರತೆಗೆ ಅರವಳಿಕೆ ನೀಡಿ ಸೆರೆ ಹಿಡಿಯು ವಲ್ಲಿ ಸಫಲರಾದರು. ಆಕ್ರೋಶ: ಈ ಘಟನೆ ನಂತರ ಗ್ರಾಮಸ್ಥರು ಮಾತ್ರ ಅರಣ್ಯ ಇಲಾಖೆ ನಿರ್ಲಕ್ಷ್ಯದ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಎರಡು ತಿಂಗಳಿಂದ ಚಿರತೆಗಳ ಓಡಾಟದ ಬಗ್ಗೆ…

ವಿದ್ಯುತ್ ಸ್ಪರ್ಶಿಸಿ ರೈತ ಸಾವು
ಹಾಸನ

ವಿದ್ಯುತ್ ಸ್ಪರ್ಶಿಸಿ ರೈತ ಸಾವು

May 30, 2018

ಅರಸೀಕೆರೆ: ವಿದ್ಯುತ್ ಸ್ಪರ್ಶಿಸಿ ವ್ಯಕ್ತಿ ಸಾವಿಗೀಡಾದ ಘಟನೆ ತಾಲೂಕಿನ ನಾಗವೇದಿ ಗ್ರಾಮದಲ್ಲಿ ನಡೆದಿದೆ. ಅರುಣ್ ಕುಮಾರ್ (45) ಮೃತ ರೈತ. ಜಮೀನಿಗೆ ಅಳವಡಿಸಿದ್ದ ತಂತಿ ಬೇಲಿಗೆ ವಿದ್ಯುತ್ ಪ್ರವಹಿಸಿ ಆಕಸ್ಮಿಕವಾಗಿ ಅರುಣ್‍ಗೆ ವಿದ್ಯುತ್ ಸ್ಪರ್ಶವಾಗಿದ್ದು, ಸ್ಥಳದಲ್ಲೇ ಅಸುನೀಗಿದ್ದಾರೆ. ಘಟನೆಯಿಂದ ಕುಟುಂಬ ಸದಸ್ಯರ ಆಕ್ರಂದನ ಮುಗಿಲು ಮುಟ್ಟಿದೆ. ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಓವರ್‍ಟೇಕ್: ಸೇತುವೆಗೆ ಬಸ್ ಡಿಕ್ಕಿ
ಹಾಸನ

ಓವರ್‍ಟೇಕ್: ಸೇತುವೆಗೆ ಬಸ್ ಡಿಕ್ಕಿ

May 30, 2018

ಅರಕಲಗೂಡು: ಎರಡು ಬಸ್‍ಗಳ ಚಾಲಕರು ಓವರ್‍ಟೇಕ್ ಮಾಡುವ ಧಾವಂತದಲ್ಲಿ ಕೆಎಸ್‍ಆರ್ ಟಿಸಿ ಬಸ್ ಹಳ್ಳದ ಸೇತುವೆಗೆ ಡಿಕ್ಕಿ ಹೊಡೆದಿರುವ ಘಟನೆ ತಾಲೂಕಿನ ಬೆಟ್ಟಸೋಗೆ ಗೇಟ್ ಬಳಿ ನಡೆದಿದೆ. ಇಂದು ಬೆಳಗ್ಗೆ ಮೈಸೂರು ಕಡೆಗೆ ಹೋಗುತ್ತಿದ್ದ ಬಸ್‍ಅನ್ನು ಮತ್ತೊಂದು ಬಸ್ ಓವರ್‍ಟೇಕ್ ಮಾಡಲು ಮುಂದಾಗಿ ಸೇತುವೆ ಕಡೆಗೆ ನುಗ್ಗಿದೆ. ಆದರೆ ತಕ್ಷಣ ಬ್ರೇಕ್ ಹಾಕಿ ನಿಲ್ಲಿಸಿದ್ದರಿಂದ ಸೇತುವೆ ತಡೆಗೋಡೆಗೆ ಗುದ್ದಿ ಅಲ್ಲೆ ನಿಂತಿತು. ಎರಡು ಬಸ್ ಚಾಲಕರ ಅವಾಂತರ ದಿಂದಾಗಿ ಬಸ್‍ನಲ್ಲಿದ್ದ ಪ್ರಯಾಣ ಕರು ಕೆಲಕಾಲ ಆತಂಕಕ್ಕೊಳಗಾದರಲ್ಲದೆ, ಚಾಲಕರ…

ಜಿಟಿ ಜಿಟಿ ಮಳೆ: ತಂಬಾಕು ಬೆಳೆಗಾರರಲ್ಲಿ ಹೆಚ್ಚಿದ ಆತಂಕ
ಹಾಸನ

ಜಿಟಿ ಜಿಟಿ ಮಳೆ: ತಂಬಾಕು ಬೆಳೆಗಾರರಲ್ಲಿ ಹೆಚ್ಚಿದ ಆತಂಕ

May 30, 2018

ರಾಮನಾಥಪುರ: ಕಳೆದ ವಾರದಿಂದ ಸುರಿಯುತ್ತಿರುವ ಜಿಟಿಜಿಟಿ ಮಳೆಯಿಂದಾಗಿ ತಂಬಾಕು ಹೊಲಗಳು ಗದ್ದೆ ಯಂತಾಗಿದ್ದು, ಹೊಗೆ ಸಸಿ ನಾಟಿ ಮಾಡಿದ ರೈತರು ಆತಂಕಕ್ಕೊಳಗಾಗಿದ್ದಾರೆ. ಪೂರ್ವ ಮುಂಗಾರಿನಿಂದ ಉತ್ತಮ ಮಳೆ ಯಾದ ಹಿನ್ನೆಲೆಯಲ್ಲಿ ಎರಡು ತಿಂಗಳಿಂದಲೂ ಉಳುಮೆ ಮಾಡಿ ತಂಬಾಕು ನಾಟಿ ಮಾಡಿ ದ್ದರು. ಅಲ್ಲದೆ ತಂಬಾಕು ಮಂಡಳಿ ಮತ್ತು ಅಂಗಡಿಗಳಿಂದ ಸಾವಿರಾರು ರೈತರು ಸಾಕಷ್ಟು ಬೆಲೆ ತೆತ್ತು ರಸಗೊಬ್ಬರವನ್ನು ಹಾಕಿ ಫಸಲಿನ ನಿರೀಕ್ಷೆಯಲ್ಲಿದ್ದರು. ಆದರೆ ಕಳೆದ ಒಂದು ವಾರದಿಂದ ಬಿಳುತ್ತಿರುವ ಮಳೆಗೆ ಬೆಳೆ ಹಾಳಾಗುತ್ತಿದೆ. ಇದರಿಂದ ರೈತರು ಕೈ…

ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಖಂಡಿಸಿ ಜಯ ಕರ್ನಾಟಕ ಸಂಘಟನೆ ಪ್ರತಿಭಟನೆ
ಹಾಸನ

ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಖಂಡಿಸಿ ಜಯ ಕರ್ನಾಟಕ ಸಂಘಟನೆ ಪ್ರತಿಭಟನೆ

May 30, 2018

ಬೇಲೂರು:  ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಖಂಡಿಸಿ ಕೇಂದ್ರ ಸರ್ಕಾರದ ವಿರುದ್ಧ ತಾಲೂಕು ಜಯ ಕರ್ನಾಟಕ ಸಂಘಟನೆ ಕಾರ್ಯಕರ್ತರು ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು. ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಜಮಾ ಯಿಸಿದ ಪ್ರತಿಭಟನಾಕಾರರು, ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಕಾರ್ಯಕರ್ತ ರನ್ನುದ್ದೇಶಿಸಿ ತಾಲೂಕು ಜಯ ಕರ್ನಾಟಕ ಸಂಘಟನೆ ಅಧ್ಯಕ್ಷ ಐ.ಎನ್.ಅರುಣ್‍ಕುಮಾರ್ ಮಾತನಾಡಿ, ರಾಜ್ಯ ವಿಧಾನಸಭೆ ಚುನಾ ವಣೆ ಮುಗಿಯುವವರೆಗೂ ಪೆಟ್ರೋಲ್, ಡೀಸೆಲ್ ಬೆಲೆ ಏರಿಸದ ಕೇಂದ್ರ ಸರ್ಕಾರ ಚುನಾವಣೆ ಮುಗಿದ ನಂತರ…

ಬಂದ್‍ಗೆ ಹಾಸನದಲ್ಲಿ ಮಿಶ್ರ ಪ್ರತಿಕ್ರಿಯೆ
ಹಾಸನ

ಬಂದ್‍ಗೆ ಹಾಸನದಲ್ಲಿ ಮಿಶ್ರ ಪ್ರತಿಕ್ರಿಯೆ

May 29, 2018

ಹಾಸನ: ರೈತರ ಸಾಲಮನ್ನಾ ಮಾಡುವಂತೆ ಸಿಎಂ ಹೆಚ್‍ಡಿ. ಕುಮಾರ ಸ್ವಾಮಿಗೆ ಒತ್ತಡ ಹೇರಲು ವಿಪಕ್ಷ ನಾಯಕ ಬಿ.ಎಸ್.ಯಡಿಯೂರಪ್ಪ ಕರೆ ನೀಡಿದ್ದ ಬಂದ್‍ಗೆ ನಗರದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಯಿತು. ಬೆಳಗ್ಗೆಯಿಂದಲೇ ನಗರದ ಹೇಮಾವತಿ ಪ್ರತಿಮೆ ಬಳಿ ಬಿಜೆಪಿ ಕಾರ್ಯಕರ್ತರು ಜಮಾಯಿಸಿ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ರೈತರ ಬೆಂಬಲ: ಜೊತೆಗೆ ಎತ್ತಿನಗಾಡಿ, ಟ್ರಾಕ್ಟರ್ ಮೂಲಕ ರೈತರು ಆಗಮಿಸಿ ಬಂದ್‍ಗೆ ಬೆಂಬಲ ವ್ಯಕ್ತಪಡಿಸಿದರು. ನಂತರ ನಗರದ ಪ್ರಮುಖ ರಸ್ತೆಗಳಲ್ಲಿ ಬಿಜೆಪಿ ಕಾರ್ಯಕರ್ತರು ಹಸಿರು ಶಾಲುಗಳನ್ನು ಕೊರಳಿಗೆ ಹಾಕಿಕೊಂಡು…

ಬೇಲೂರಿನಲ್ಲೂ ಬಂದ್‍ಗೆ ಮಿಶ್ರ ಪ್ರತಿಕ್ರಿಯೆ
ಹಾಸನ

ಬೇಲೂರಿನಲ್ಲೂ ಬಂದ್‍ಗೆ ಮಿಶ್ರ ಪ್ರತಿಕ್ರಿಯೆ

May 29, 2018

ಬೇಲೂರು: ರೈತರ ಸಾಲ ಮನ್ನಾ ಮಾಡುವಂತೆ ಒತ್ತಡ ಹೇರಲು ಬಿಜೆಪಿ ಕರೆ ನೀಡಿದ್ದ ಬಂದ್‍ಗೆ ಪಟ್ಟಣ ದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಯಿತು. ಬಂದ್ ಹಿನ್ನೆಲೆ ಪಟ್ಟಣದ ಶ್ರೀ ಚನ್ನ ಕೇಶವ ದೇವಾಲಯದ ಮುಂಭಾಗದಿಂದ ಬಿಜೆಪಿ ಪರಾಜಿತ ಅಭ್ಯರ್ಥಿ ಹುಲ್ಲಹಳ್ಳಿ ಸುರೇಶ್ ನೇತೃತ್ವದಲ್ಲಿ ನೂರಾರು ಕಾರ್ಯಕರ್ತರು ಪ್ರತಿಭಟನೆ ಆರಂಭಿಸಿ, ಪಟ್ಟಣದ ಅಂಗಡಿ-ಮುಂಗಟ್ಟುಗಳ ಬಳಿ ತೆರಳಿ ಅಂಗಡಿ ಬಾಗಿಲು ಮುಚ್ಚುವಂತೆ ಮನವಿ ಮಾಡಿ ಬಂದ್ ಆಚರಣೆಗೆ ಮುಂದಾದರು. ಈ ಸಂದರ್ಭ ಕೆಲ ಅಂಗಡಿ ಮಾಲೀಕರು ಅಂಗಡಿ ಬಾಗಿಲುಗಳನ್ನು ಹಾಕಲು ಮುಂದಾ…

ಸಿಎಂ ಹೆಚ್‍ಡಿಕೆ ನುಡಿದಂತೆ ನಡೆಯಲಿ
ಹಾಸನ

ಸಿಎಂ ಹೆಚ್‍ಡಿಕೆ ನುಡಿದಂತೆ ನಡೆಯಲಿ

May 29, 2018

ಅರಸೀಕೆರೆ: ನೂತನ ಮುಖ್ಯ ಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ತಮ್ಮ ಪ್ರಣಾಳಿಕೆಯಲ್ಲಿ ಭರವಸೆ ನೀಡಿದಂತೆ ರೈತರ ಸಂಪೂರ್ಣ ಸಾಲ ಮನ್ನಾ ಮಾಡ ಬೇಕೆಂದು ತಾಲೂಕು ಬಿಜೆಪಿ ಘಟಕದ ಅಧ್ಯಕ್ಷ ಜಿ.ವಿ.ಟಿ ಬಸವರಾಜು ಆಗ್ರಹಿಸಿದರು. ತಾಲೂಕು ಬಿಜೆಪಿಯಿಂದ ನಗರದ ಪಿಪಿ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ರಸ್ತೆ ತಡೆ ನಡೆಸಿದ ಸಂದರ್ಭದಲ್ಲಿ ಕಾರ್ಯ ಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು, ರಾಜ್ಯದ ರೈತರು ಸಾಲದ ಸುಳಿಯಲ್ಲಿ ಸಿಲುಕಿ ಆತ್ಮಹತ್ಯೆ ಹಾದಿ ಹಿಡಿದಿದ್ದು ಕೂಡಲೇ ಕುಮಾರಸ್ವಾಮಿಯವರು ತಾವು ನುಡಿ ದಂತೆ ನಡೆದುಕೊಂಡು ಸಾಲಮನ್ನಾ ಮಾಡ…

ಅತಿಸಾರ ಭೇದಿ ನಿಯಂತ್ರಣಕ್ಕೆ ಸಹಕಾರ ಅಗತ್ಯ: ಸಿಇಓ
ಹಾಸನ

ಅತಿಸಾರ ಭೇದಿ ನಿಯಂತ್ರಣಕ್ಕೆ ಸಹಕಾರ ಅಗತ್ಯ: ಸಿಇಓ

May 29, 2018

ಹಾಸನ: ಅತಿಸಾರ ಭೇದಿ ನಿಯಂತ್ರಣ ಕಾರ್ಯಕ್ರಮಗಳನ್ನು ಜಿಲ್ಲೆಯಾ ದ್ಯಂತ ಪ್ರತಿ ಮನೆ ಮನೆಗೂ ತಲುಪು ವಂತೆ ಮಾಡುವಲ್ಲಿ ನಮ್ಮ ಆಶಾ ಕಾರ್ಯ ಕರ್ತೆಯರು ಹಾಗೂ ಸುದ್ದಿ ಮಾಧ್ಯಮ ಗಳು ತಮ್ಮ ಪೂರ್ತಿ ಸಹಕಾರ ನೀಡಬೇಕು ಎಂದು ಜಿಪಂ ಮುಖ್ಯ ಕಾರ್ಯ ನಿರ್ವ ಹಣಾಧಿಕಾರಿ ಜಗದೀಶ್ ಹೇಳಿದರು. ನಗರದ ಕೃಷ್ಣ ಆಸ್ಪತ್ರೆ ಆವರಣದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಹಮ್ಮಿಕೊಂಡಿದ್ದ ಸಶಕ್ತ ಅತಿಸಾರ ನಿಯಂತ್ರಣದ ಪ್ರಾತ್ಯಕ್ಷಿಕೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತ ನಾಡಿದರು. ಜಿಲ್ಲೆಯಾದ್ಯಂತ 5…

1 124 125 126 127 128 133
Translate »