ಹಾಸನ

ಇಂದಿನಿಂದ ದ್ವಿತೀಯ ಪಿಯುಸಿ ಪರೀಕ್ಷೆ: ಸಿಸಿಟಿವಿ ಕಣ್ಗಾವಲು
ಹಾಸನ

ಇಂದಿನಿಂದ ದ್ವಿತೀಯ ಪಿಯುಸಿ ಪರೀಕ್ಷೆ: ಸಿಸಿಟಿವಿ ಕಣ್ಗಾವಲು

March 4, 2020

ಹಾಸನ, ಮಾ.3- ಇಂದಿನಿಂದ ದ್ವಿತೀಯ ಪಿಯುಸಿ ಪರೀಕ್ಷೆ ಆರಂಭಗೊಳ್ಳಲಿದ್ದು, ಮುಂಜಾಗ್ರತಾ ಕ್ರಮ ಕೈಗೊಂಡು ಪ್ರಶ್ನೆ ಪತ್ರಿಕೆ ಸೋರಿಕೆಯಾಗದಂತೆ ಎಚ್ಚರ ವಹಿಸಲಾಗಿದೆ. ಈ ಬಾರಿಯೂ ಜಿಲ್ಲಾ ಖಜಾನೆಯಲ್ಲಿ ಸಿಸಿಟಿವಿ ಅಳವಡಿಸಲಿದ್ದು ಅದರ ವೀಕ್ಷಣೆಯನ್ನು ಜಿಲ್ಲಾ ಖಜಾನೆ ಹಾಗೂ ಪದವಿಪೂರ್ವ ಶಿಕ್ಷಣ ಇಲಾಖೆಯಲ್ಲಿ ನಿರ್ವಹಿಸಲಾಗುತ್ತಿದೆ. ಅಲ್ಲದೇ ವಿಶೇಷ ವಾಗಿ ಈ ಬಾರಿ ಜಿಲ್ಲಾಧಿಕಾರಿಗಳ ಕಚೇರಿ ಯಲ್ಲಿಯೂ ಸಹ ವೀಕ್ಷಣೆ ಮಾಡ ಲಾಗುತ್ತದೆ ಎಂದು ಇಲಾಖೆ ತಿಳಿಸಿದೆ. ಈ ವರ್ಷ ಒಟ್ಟು 17,363 ವಿದ್ಯಾರ್ಥಿ ಗಳು ಪರೀಕ್ಷೆಯಲ್ಲಿ ಭಾಗವಹಿಸಲಿದ್ದಾರೆ. ಸರ್ಕಾರಿ ಕಾಲೇಜಿನ…

ಹಾಸನ

ಹಾಸನದಲ್ಲಿ ವಿಶ್ವ ಮಾನವ ಕೇಂದ್ರ ಸ್ಥಾಪನೆ: ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ

March 3, 2020

ಹಾಸನ, ಮಾ.2- ಹಾಸನ ನಗರದಲ್ಲಿ ವಿಶ್ವಮಾನವ ಕೇಂದ್ರವನ್ನು ಸ್ಥಾಪಿಸಲು ಪ್ರಯತ್ನಿಸಲಾಗುವುದು. ಅದರ ನೇತೃತ್ವವನ್ನು ತಾವೇ ವಹಿಸಿಕೊಳ್ಳುವುದಾಗಿ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಭರವಸೆ ನೀಡಿದರು. ನಗರದ ಮಹಾವೀರ ಭನದಲ್ಲಿ ಡಾ.ಎ.ಸಿ.ಮುನಿವೆಂಕಟೇಗೌಡ ಚಾರಿಟಬಲ್ ಟ್ರಸ್ಟ್, ಬೆಂಗಳೂರಿನ ಆಶ್ರಯ ಸೆಂಟರ್ ಫಾರ್ ಟ್ರಾನ್ಸ್ ಫರ್ಮೇಷನ್ ಮತ್ತು ಡಾ.ಎಸಿಎಂ ನೆನಪಿನ ಬಳಗ ವತಿಯಿಂದ ಆಯೋಜಿಸಿದ್ದ ಡಾ.ಎ.ಸಿ.ಮುನಿವೆಂಕಟೇಗೌಡ ಸ್ಮರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಜಗತ್ತಿನಲ್ಲಿ ಶಾಂತಿ ಕದಡುವಂತಹ ಘಟನೆಗಳು ನಡೆಯುತ್ತಿರುವ ಹಿನ್ನೆಲೆ ಕುವೆಂಪು ಅವರ ವಿಶ್ವ ಮಾನವ ಸಂದೇಶ ಜಗತ್ತಿಗೆ ಸಾರಲು…

87 ವರ್ಷ ಆಗಿದೆ ಅಷ್ಟೇ ಉತ್ಸಾಹ ಕಡಿಮೆಯಾಗಿಲ್ಲ: ಮಾಜಿ ಪ್ರಧಾನಿ ಎಚ್‍ಡಿಡಿ
ಹಾಸನ

87 ವರ್ಷ ಆಗಿದೆ ಅಷ್ಟೇ ಉತ್ಸಾಹ ಕಡಿಮೆಯಾಗಿಲ್ಲ: ಮಾಜಿ ಪ್ರಧಾನಿ ಎಚ್‍ಡಿಡಿ

March 2, 2020

ಹಾಸನ, ಮಾ.1- ಯಾರೋ ಒಬ್ಬರು ಹೋಗ್ತಾರೆ, ಬರ್ತಾರೆ ಅದಕ್ಕೆ ನಾನು ತಲೆ ಕೆಡಿಸಿಕೊಳ್ಳಲ್ಲ ಎಂದು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಹೇಳಿದರು. ನಗರದಲ್ಲಿ ಭಾನುವಾರ ಸುದ್ದಿಗಾರ ರೊಂದಿಗೆ ಮಾಜಿ ಸಚಿವ ಜಿ.ಟಿ.ದೇವೇ ಗೌಡ ಬಿಜೆಪಿಗೆ ಹೋಗುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಜಿ.ಟಿ.ದೇವೇ ಗೌಡರು ಬಿಜೆಪಿಗೆ ಹೋಗಿದ್ರೂ, ಆಮೇಲೆ ನಮ್ಮಲ್ಲೇ ಮಂತ್ರಿ ಕೂಡ ಆಗಿದ್ರು, ಈಗ ಮತ್ತೆ ಹೋಗಬಹುದು ಎಂದರು. ನಮ್ಮ ಪಕ್ಷವನ್ನು ಪುನಶ್ಚೇತನಗೊಳಿಸುವ ವಿಚಾರಕ್ಕೆ ಸಂಬಂಧಿಸಿದಂತೆ ಬಿಜೆಪಿ ಯವರು ಟೀಕಿಸಿದ್ದಾರೆ. ಮಗ, ಮೊಮ್ಮಗ ಇಬ್ಬರು ಸೇರಿಕೊಂಡು ಪಕ್ಷ ಕಟ್ಟಲು…

ವಿದ್ಯೆಯನ್ನು ಸ್ವಾರ್ಥಕ್ಕೆ ಬಳಸಿಕೊಳ್ಳಬೇಡಿ: ಜೆ.ಸಿ.ಮಾಧುಸ್ವಾಮಿ
ಹಾಸನ

ವಿದ್ಯೆಯನ್ನು ಸ್ವಾರ್ಥಕ್ಕೆ ಬಳಸಿಕೊಳ್ಳಬೇಡಿ: ಜೆ.ಸಿ.ಮಾಧುಸ್ವಾಮಿ

February 28, 2020

ಹಾಸನ, ಫೆ.27- ಯುವ ಜನತೆ ಸ್ಪರ್ಥೆಪರತೆ ಬಿಟ್ಟು ವಿದ್ಯೆಯನ್ನು ನಾಡಿನ ಶ್ರೇಯೋಭಿವೃದ್ಧಿಗೆ ಬಳಸಿಕೊಂಡಾಗ ಮಾತ್ರ ಉತ್ತಮ ಸಮಾಜ ರೂಪಿಸಲು ಸಾಧ್ಯ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರ, ಸಣ್ಣ ನೀರಾವರಿ ಸಚಿವರು ಹಾಗೂ ಹಾಸನ ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಹೇಳಿದರು. ನಗರದ ಹೊರವಲಯದಲ್ಲಿ ಮೈಸೂರು ವಿಶ್ವವಿದ್ಯಾನಿಲಯದ ಹೇಮಗಂಗೋತ್ರಿ ಸ್ನಾತಕೋತ್ತರ ಕೇಂದ್ರದ ಬೆಳ್ಳಿಹಬ್ಬ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ಜನರು ಮಾನವೀಯ ಮೌಲ್ಯಗಳನ್ನು ಮರೆತು ಜಾತಿ, ಲಿಂಗ, ವರ್ಣ ವ್ಯವಸ್ಥೆ ಉತ್ತೇಜಿಸುವ ಸ್ಥಿತಿಯನ್ನು ತಲುಪಿದ್ದೇವೆ ಇದು ವಿಷಾದನೀಯ…

ಅಭಿವೃದ್ಧಿ ಕಾಮಗಾರಿಗಳಿಗೆ ಅಗತ್ಯ ಅನುದಾನ
ಹಾಸನ

ಅಭಿವೃದ್ಧಿ ಕಾಮಗಾರಿಗಳಿಗೆ ಅಗತ್ಯ ಅನುದಾನ

February 9, 2020

ಹಾಸನ, ಫೆ. 8- ರಾಜ್ಯದಲ್ಲಿ ಈಗಾಗಲೇ ಮಂಜೂರಾಗಿರುವ ಹಾಗೂ ಪ್ರಗತಿಯಲ್ಲಿ ರುವ ಎಲ್ಲಾ ಅಭಿವೃದ್ಧಿ ಕಾಮಗಾರಿಗಳಿಗೂ ಅಗತ್ಯ ಅನುದಾನ ಒದಗಿಸಲಾಗುವುದು ಎಂದು ಲೋಕೋಪಯೋಗಿ, ಸಮಾಜ ಕಲ್ಯಾಣ ಸಚಿವರೂ ಆದ ಉಪ ಮುಖ್ಯ ಮಂತ್ರಿ ಗೋವಿಂದ ಕಾರಜೋಳ ಭರವಸೆ ನೀಡಿದರು. ಹಾಸನದ ಅತಿಥಿಗೃಹದಲ್ಲಿಂದು ಸುದ್ದಿ ಗಾರರೊಂದಿಗೆ ಮಾತನಾಡಿದ ಅವರು, ಯಾವುದೇ ಕಾಮಗಾರಿಗಳಿಗೂ ಅನುದಾನ ಕಡಿತ ಮಾಡುವುದಿಲ್ಲ ಎಂದರು. ರಾಜ್ಯದಲ್ಲಿ ಪ್ರವಾಹದಲ್ಲಿ ಲೋಕೋಪ ಯೋಗಿ ಇಲಾಖೆಗೆ ಸೇರಿದ ರಸ್ತೆ, ಕಟ್ಟಡ, ಸೇತುವೆಗಳು ಸೇರಿದಂತೆ ಸುಮಾರು ರೂ. 8 ಸಾವಿರ ಕೋಟಿ…

ಬದಲಿ ಮಾರ್ಗಗಳಲ್ಲಿ ಬಸ್ ಸಂಚಾರಕ್ಕೆ ಎಡಿಸಿ ಸೂಚನೆ
ಹಾಸನ

ಬದಲಿ ಮಾರ್ಗಗಳಲ್ಲಿ ಬಸ್ ಸಂಚಾರಕ್ಕೆ ಎಡಿಸಿ ಸೂಚನೆ

February 5, 2020

ಹಾಸನ, ಫೆ.4- ನಗರದ ಬಸ್ ನಿಲ್ದಾಣ ಬಳಿಯ ರೈಲ್ವೇ ಮೇಲ್ಸೇತುವೆ ಕಾಮಗಾರಿ ಪೂರ್ಣಗೊಳ್ಳು ವವರೆಗೆ ಪ್ರಯಾಣಿಕರಿಗೆ ತೊಂದರೆಯಾಗದಂತೆ ಬದಲಿ ಮಾರ್ಗಗಳಲ್ಲಿ ಅಗತ್ಯ ಬಸ್ ಸೌಲಭ್ಯ ಕಲ್ಪಿಸುವಂತೆ ಕೆಎಸ್‍ಆರ್‍ಟಿಸಿ ಅಧಿಕಾರಿಗಳಿಗೆ ಅಪರ ಜಿಲ್ಲಾಧಿಕಾರಿ ಕವಿತಾ ರಾಜಾರಾಂ ಸೂಚಿಸಿದರು. ಡಿಸಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಬೈಪಾಸ್ ರಸ್ತೆಗಳಿಂದ ನಗರದ ವಿವಿಧೆÉಡೆಗೆ ಅಗತ್ಯ ನಗರ ಬಸ್ ಸೌಲಭ್ಯ ಕಲ್ಪಿಸುವಂತೆ ಸಾರ್ವಜನಿಕರು ನೀಡಿದ್ದ ಮನವಿ ಕುರಿತು ಅವರು ಸಭೆ ನಡೆಸಿದರು. ಬೈಪಾಸ್ ವೃತ್ತಗಳಲ್ಲಿ ಕಡ್ಡಾಯವಾಗಿ ನಿಯಂತ್ರಣಾ ಧಿಕಾರಿ ನೇಮಿಸಿ ಬಸ್ ಚಾಲಕರಿಗೆ ನಿಗದಿತ…

`ಕಿಸಾನ್ ಸಮ್ಮಾನ್’ನಿಂದ ಅರ್ಹರು ಹೊರಗುಳಿಯದಿರಲಿ; ನವೀನ್‍ರಾಜ್ ಸಿಂಗ್
ಹಾಸನ

`ಕಿಸಾನ್ ಸಮ್ಮಾನ್’ನಿಂದ ಅರ್ಹರು ಹೊರಗುಳಿಯದಿರಲಿ; ನವೀನ್‍ರಾಜ್ ಸಿಂಗ್

February 4, 2020

ಹಾಸನ, ಫೆ.3- ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಿಂದ ಅರ್ಹ ಫಲಾನುಭವಿಗಳು ಹೊರಗುಳಿಯದಂತೆ ವಿಶೇಷ ಗಮನಹರಿಸುವುದರೊಂದಿಗೆ ಜಿಲ್ಲೆಯಲ್ಲಿ ಯೋಜನೆಯನ್ನು ಸಮರ್ಪಕ ವಾಗಿ ಅನುಷ್ಠಾನಗೊಳಿಸುವಂತೆ ಕೃಷಿ ಇಲಾಖೆ ಅಧಿಕಾರಿಗಳಿಗೆ ಮೈಸೂರು ಮಿನರಲ್ಸ್‍ನ ವ್ಯವಸ್ಥಾಪಕ ನಿರ್ದೇಶಕರೂ ಆದ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ನವೀನ್‍ರಾಜ್ ಸಿಂಗ್ ನಿರ್ದೇಶಿಸಿದರು. ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ಜಿಲ್ಲಾ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಅವರು, ಕಿಸಾನ್ ಸಮ್ಮಾನ್ ಯೋಜನೆಯಡಿ ನಿಗದಿಪಡಿಸಿರುವ ಗುರಿ ಯಂತೆ ಅಂಕಿ-ಅಂಶಗಳನ್ನು ಗ್ರಾಮವಾರು ಮರುಪರಿಶೀಲಿಸುವಂತೆ ಸೂಚಿಸಿದರು. ಕೃಷಿ ಜಮೀನು ದಾಖಲೆಗಳಿಗೂ ಆಧಾರ್…

ನಾನು ಡಿಸಿಎಂ ಆಗಬೇಕೆನ್ನುವುದು ಜನರ ಬಯಕೆ: ಶ್ರೀರಾಮುಲು
ಹಾಸನ

ನಾನು ಡಿಸಿಎಂ ಆಗಬೇಕೆನ್ನುವುದು ಜನರ ಬಯಕೆ: ಶ್ರೀರಾಮುಲು

January 30, 2020

ಹಾಸನ, ಜ.29-ನಾನು ಉಪ ಮುಖ್ಯಮಂತ್ರಿ(ಡಿಸಿಎಂ) ಆಗಬೇಕೆಂಬುದು ನನ್ನ ಬೇಡಿಕೆಯಲ್ಲ. ಅದು ಸಮುದಾಯದ ಜನರ ಬಯಕೆ. ಈ ವಿಚಾರವಾಗಿ ಯಾರೊಂದಿಗೂ ನಾನು ಪ್ರಸ್ತಾಪ ಮಾಡಿಲ್ಲ ಎಂದು ಆರೋಗ್ಯ ಸಚಿವ ಶ್ರೀರಾಮುಲು ಹೇಳಿದರು. ಖಾಸಗಿ ಕಾರ್ಯಕ್ರಮ ನಿಮಿತ್ತ ಚನ್ನರಾಯಪಟ್ಟಣದ ಪಿ.ಯು. ಕಾಲೇಜು ಮೈದಾನದ ಹೆಲಿಪ್ಯಾಡ್‍ನಲ್ಲಿ ಬುಧವಾರ ಬಂದಿಳಿದ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ನಾನು ಬಿಜೆಪಿ ನಿಷ್ಠಾವಂತ ಕಾರ್ಯಕರ್ತ. ಪಕ್ಷ ಅಧಿಕಾರಕ್ಕೆ ಬರಲು ನಾವೆಲ್ಲರೂ ಒಟ್ಟಾಗಿ ದುಡಿದಿದ್ದೇವೆ. ನಾನು ಡಿಸಿಎಂ ಆಗಬೇಕು ಎಂಬುದು ಜನರ ಬೇಡಿಕೆ. ಪಕ್ಷ ಏನೇ ತೀರ್ಮಾನ ಕೈಗೊಂಡರೂ…

ಮಹಾಪುರುಷರ ತತ್ವ ಪಾಲನೆ ಅವಶ್ಯ: ಶ್ವೇತಾ ದೇವರಾಜ್
ಹಾಸನ

ಮಹಾಪುರುಷರ ತತ್ವ ಪಾಲನೆ ಅವಶ್ಯ: ಶ್ವೇತಾ ದೇವರಾಜ್

January 22, 2020

ಹಾಸನ, ಜ.21-ಮಹಾಪುರುಷರ ಜಯಂತಿಗಳನ್ನು ಕೇವಲ ಆಚರಣೆಗೆ ಸೀಮಿತಗೊಳಿಸದೆ ಅವರ ತತ್ವ, ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಜಿಪಂ ಅಧ್ಯಕ್ಷೆ ಬಿ.ಎಸ್.ಶ್ವೇತಾ ದೇವರಾಜ್ ಹೇಳಿದರು. ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕøತಿ ಇಲಾಖೆಯಿಂದ ಜಿಲ್ಲಾಧಿಕಾರಿಗಳ ನ್ಯಾಯಾಂಗ ಸಭಾಂಗಣದಲ್ಲಿಂದು ಅಂಬಿಗರ ಚೌಡಯ್ಯ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಅಂಬಿಗರ ಚೌಡಯ್ಯ 12ನೇ ಶತಮಾನದಲ್ಲಿ ವಚನ ಸಾಹಿತ್ಯಗಳ ಮೂಲಕ ಜಾತಿ ಪದ್ಧತಿಯ ವಿರುದ್ಧ ಹೋರಾಡಿದರು. ಅವರ ಹಾದಿಯನ್ನು ಅನುಸರಿಸಿ ನಾವೆಲ್ಲರೂ ಉತ್ತಮ ಸಮಾಜವನ್ನು ನಿರ್ಮಿಸಲು ಮುಂದಾಗಬೇಕು ಎಂದರು. ಜಿಲ್ಲಾಧಿಕಾರಿ ಆರ್.ಗಿರೀಶ್ ಮಾತನಾಡಿ,…

ಪ್ರವಾಹ ಸಂತ್ರಸ್ತರ ಮನೆ ನಿರ್ಮಾಣ ಶೀಘ್ರ ಪೂರ್ಣಗೊಳಿಸಲು ಸೂಚನೆ
ಹಾಸನ

ಪ್ರವಾಹ ಸಂತ್ರಸ್ತರ ಮನೆ ನಿರ್ಮಾಣ ಶೀಘ್ರ ಪೂರ್ಣಗೊಳಿಸಲು ಸೂಚನೆ

January 22, 2020

ಹಾಸನ,ಜ.21-ಪ್ರವಾಹದಿಂದ ಹಾನಿಗೊಳಗಾದ ಸಂತ್ರಸ್ತರ ‘ಎ’ ಮತ್ತು ‘ಬಿ’ ಕೆಟಗರಿಯ ಮನೆಗಳಿಗೆ ಎರಡನೇ ಹಂತದ ಹಣ ಬಿಡುಗಡೆ ಮಾಡಿ ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸುವಂತೆ ಕಂದಾಯ ಇಲಾಖೆ ವಿಪತ್ತು ನಿರ್ವಹಣೆಯ ಪ್ರಧಾನ ಕಾರ್ಯದರ್ಶಿ ಟಿ.ಕೆ.ಅನಿಲ್‍ಕುಮಾರ್ ಸೂಚಿಸಿದ್ದಾರೆ. ಎಲ್ಲಾ ಜಿಲ್ಲೆಯ ಜಿಲ್ಲಾಧಿಕಾರಿಗಳೊಂದಿಗೆ ವೀಡಿಯೊ ಸಂವಾದ ನಡೆಸಿ ಮಾತನಾಡಿದ ಅವರು, ಪ್ರವಾಹದಿಂದ ಹಾನಿಯಾದ ಮನೆಗಳ ಪುನರ್ ನಿರ್ಮಾಣ, ಮೂಲಸೌಕರ್ಯಗಳ ದುರಸ್ತಿ ಕುರಿತ ವರದಿ ಪಡೆದರಲ್ಲದೆ, ಪ್ರವಾಹದಿಂದ ಉಂಟಾದ ಬೆಳೆ ಹಾನಿಗೆ ಪರಿಹಾರ, ಸಬ್ಸಿಡಿ ಸಾಲ ಸೌಲಭ್ಯ ವಿತರಣೆ ಹಾಗೂ 2020-21 ನೇ ಸಾಲಿನಲ್ಲಿ…

1 2 3 4 133
Translate »