ಹಾಸನ

1 ಕಾಡಾನೆ ಸೆರೆಗೆ 5 ಸಾಕಾನೆ ಬಳಕೆ
ಹಾಸನ

1 ಕಾಡಾನೆ ಸೆರೆಗೆ 5 ಸಾಕಾನೆ ಬಳಕೆ

July 28, 2019

ಹಾಸನ,ಜು.27- ಒಂಟಿ ಸಲಗವೊಂದು ನಗರ ಪ್ರವೇಶಿಸಿ ಆತಂಕ ಉಂಟು ಮಾಡಿದ ಬಳಿಕ ಜನರ ದೂರಿನ ಮೇರೆಗೆ ಅರಣ್ಯ ಇಲಾಖೆ ಅಧಿಕಾರಿಗಳು ಸಲಗವನ್ನು ಸೆರೆ ಹಿಡಿದು ಬೇರೆಡೆಗೆ ಸ್ಥಳಾಂತರಿಸಲು ಮುಂದಾಗಿದ್ದಾರೆ. ಕಾಡಾನೆಯನ್ನು ಸೆರೆ ಹಿಡಿಯಲು ಅರಣ್ಯ ಇಲಾಖೆ ಅಧಿಕಾರಿಗಳು 5 ಸಾಕಾನೆಗಳನ್ನು ಕರೆಸಿಕೊಂಡಿದ್ದಾರೆ. ಪಳಗಿದ ಈ 5 ಆನೆಗಳು ಶನಿವಾರ ಬೆಳಿಗ್ಗೆ ಲಾರಿಯಲ್ಲಿ ಬಂದಿಳಿದಿವೆ. ಕಳೆದ ಜೂನ್‍ನಲ್ಲಿ ಕಾಡಾನೆಯೊಂದು ಹಾಸನ ನಗರದ ಹುಣಸಿನಕೆರೆಗೆ ಬಂದಿತ್ತು. ನಂತರ ಆ ಆನೆಯನ್ನು ಅರಣ್ಯ ಇಲಾಖೆಯವರು ಕಾಡಿಗೆ ಓಡಿಸಿದ್ದರು. ಮತ್ತೆ ಜುಲೈನÀಲ್ಲಿ ಒಂಟಿ…

ಬಿಎಸ್‍ವೈ ಪ್ರಮಾಣ; ಅರಸೀಕೆರೆಯಲ್ಲಿ ಸಂಭ್ರಮ
ಹಾಸನ

ಬಿಎಸ್‍ವೈ ಪ್ರಮಾಣ; ಅರಸೀಕೆರೆಯಲ್ಲಿ ಸಂಭ್ರಮ

July 28, 2019

ಅರಸೀಕೆರೆ,ಜು.27-ಬಿ.ಎಸ್.ಯಡಿಯೂರಪ್ಪ ಅವರು ನೂತನ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದರಿಂದ ಬಿಜೆಪಿ ಕಾರ್ಯಕರ್ತರು ಶುಕ್ರವಾರ ಸಂಜೆ 6ರ ವೇಳೆ ನಗರದ ಪಿಪಿ ವೃತ್ತದಲ್ಲಿ ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು. ಬಿಎಸ್‍ವೈಗೆ ಜೈಕಾರ ಹಾಕಿ ವಿಜಯೋ ತ್ಸವ ಆಚರಿಸಿದರು. ಈ ಸಂದರ್ಭ ಬಿಜೆಪಿ ನಗರಾಧ್ಯಕ್ಷ ಮನೋಜ್‍ಕುಮಾರ್ ಮಾತನಾಡಿ, ರಾಜಕೀಯ ಧರ್ಮಕ್ಕೆ ಜಯ ಸಿಕ್ಕಿದೆ. ಕಳೆದ 14 ತಿಂಗಳು ಮೈತ್ರಿ ಸರಕಾರದ ದೌರ್ಜನ್ಯದಿಂದ ತತ್ತರಿಸಿದ ಜನತೆ ಮುಂದಿನ ದಿನಗಳಲ್ಲಿ ನೆಮ್ಮದಿ ಕಾಣ ಬಹುದಾಗಿದೆ. ಬಿಜೆಪಿಯ ಸರಕಾರ ರಚನೆಯಾಗಿರುವುದರಿಂದ ರಾಜ್ಯ ಅಭಿ…

ದಲಿತ ಉದ್ಯಮಿಗಳಿಗಾಗಿ ಹಾಸನ್ದಲಿತ್ ಕಾಮರ್ಸ್ ಯೂನಿಯನ್
ಹಾಸನ

ದಲಿತ ಉದ್ಯಮಿಗಳಿಗಾಗಿ ಹಾಸನ್ದಲಿತ್ ಕಾಮರ್ಸ್ ಯೂನಿಯನ್

July 28, 2019

ಹಾಸನ,ಜು.27- ಜಿಲ್ಲೆಯಲ್ಲಿರುವ ದಲಿತ ಸಮುದಾಯದ ಉದ್ಯಮಿಗಳನ್ನು ಒಂದೆಡೆ ಸಂಘಟಿಸುವ ಹಾಗೂ ಉದ್ಯಮ ಕ್ಷೇತ್ರ ಪ್ರವೇಶಿಸಲು ಆಸಕ್ತಿ ಹೊಂದಿರುವವರನ್ನು ಉತ್ತೇಜಿಸುವ ಉದ್ದೇಶದಿಂದ ಜಿಲ್ಲೆಯ ಉದ್ಯಮಿಗಳು ಒಗ್ಗೂಡಿ `ಹಾಸನ್ ದಲಿತ ಆಫ್ ಕಾಮರ್ಸ್ ಯೂನಿಯನ್’ ಸಂಸ್ಥೆ ಆರಂಭಿಸಿದ್ದಾರೆ. ನಗರದ ಖಾಸಗಿ ಹೋಟೆಲ್‍ನಲ್ಲಿ ದಲಿತ ಉದ್ಯಮಿಗಳು ಶನಿವಾರ ಪೂರ್ವ ಭಾವಿ ಸಭೆ ನಡೆಸಿ ನೂತನ ಸಂಘ ಸ್ಥಾಪನೆ ಮಾಡಿದರು. ಸಂಘದ ಅಧ್ಯಕ್ಷ ರಾಗಿ ಉದ್ಯಮಿ ಕೆ.ಪಿ.ಪ್ರಮೋದ್, ಉಪಾ ಧ್ಯಕ್ಷರಾಗಿ ಶಿವಪ್ಪನಾಯಕ್, ನಿಟ್ಟೂರು ಸ್ವಾಮಿ, ನಾಗರಾಜ್ ಹೆತ್ತೂರ್, ಪ್ರಸನ್ನ, ಕಾರ್ಯದರ್ಶಿಯಾಗಿ ನಾಗೇಂದ್ರಪ್ಪ ಅವರನ್ನು…

ವ್ಯಾಸಂಗ ವೇಳೆಯೇ ದೇಶಪ್ರೇಮ ರೂಢಿಸಿಕೊಳ್ಳಿ: ಕಾರ್ಗಿಲ್ ವಿಜಯೋತ್ಸವ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಉತ್ತೇಜನ
ಹಾಸನ

ವ್ಯಾಸಂಗ ವೇಳೆಯೇ ದೇಶಪ್ರೇಮ ರೂಢಿಸಿಕೊಳ್ಳಿ: ಕಾರ್ಗಿಲ್ ವಿಜಯೋತ್ಸವ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಉತ್ತೇಜನ

July 28, 2019

ಅರಸೀಕೆರೆ, ಜು.27- ವಿದ್ಯಾರ್ಥಿಗಳು ಶಿಕ್ಷಣದ ಸಮಯದಲ್ಲಿ ದೇಶ ಮತ್ತು ದೇಶ ಕಾಯುವ ಸೈನಿಕರ ಬಗ್ಗೆ ಮಾಹಿತಿ ಪಡೆದು ಕೊಳ್ಳುವ ಮೂಲಕ ದೇಶಪ್ರೇಮ ಹೆಚ್ಚಿಸಿ ಕೊಳ್ಳಬೇಕು. ಅವಕಾಶ ದೊರೆತರೆ ಸೈನಿಕ ರಾಗಿ ತಾಯಿ ನಾಡಿಗೆ ಸೇವೆ ಸಲ್ಲಿಸಲು ಯತ್ನಿಸಬೇಕು ಎಂದು ಅನಂತ್ ಇಂಟರ್ ನ್ಯಾಷನಲ್ ಶಾಲೆ ಸಂಸ್ಥಾಪಕ ಅಧ್ಯಕ್ಷ ಆರ್.ಆನಂತ್ ಕುಮಾರ್ ಕರೆ ನೀಡಿದರು. ನಗರದ ಅನಂತ್ ಇಂಟರ್‍ನ್ಯಾಷನಲ್ ಶಾಲೆಯಲ್ಲಿ ಕಾರ್ಗಿಲ್ ವಿಜಯ ದಿನ ದಂಗವಾಗಿ ಹಮ್ಮಿಕೊಂಡಿದ್ದ ವಿಶೇಷ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕರ್ನಾಟಕದ ಜನರು ಹೆಚ್ಚಿನ ಸಂಖ್ಯೆ…

ಹಾಸನದಲ್ಲಿ ಹಿಂಸಾರೂಪ ಪಡೆದ ಕಾರ್ಮಿಕರ ಪ್ರತಿಭಟನೆ
ಮೈಸೂರು, ಹಾಸನ

ಹಾಸನದಲ್ಲಿ ಹಿಂಸಾರೂಪ ಪಡೆದ ಕಾರ್ಮಿಕರ ಪ್ರತಿಭಟನೆ

July 25, 2019

ಹಾಸನ: ನಗರದ ಹೊರ ವಲಯ ಹನುಮಂತಪುರದ ಬಳಿ ಇರುವ ಹಿಮ್ಮತ್ ಸಿಂಗ್ ಗಾರ್ಮೆಂಟ್ಸ್ ಕಾರ್ಖಾನೆ ಯಲ್ಲಿ ತಮ್ಮ ಮೇಲೆ ದೌರ್ಜನ್ಯ, ಶೋಷಣೆ ನಡೆಸಲಾಗುತ್ತಿದೆ ಎಂದು ಆಕ್ರೋಶಗೊಂಡ ಹೊರ ರಾಜ್ಯಗಳ 1500ಕ್ಕೂ ಅಧಿಕ ಕಾರ್ಮಿ ಕರು ಬುಧವಾರ ಆರಂಭಿಸಿದ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದ ಪರಿಣಾಮ ಪೊಲೀಸರು ಸೇರಿದಂತೆ ಹಲವರು ಗಾಯ ಗೊಂಡರು. ಪೊಲೀಸ್ ವಾಹನಗಳು ಸೇರಿದಂತೆ 20ಕ್ಕೂ ಅಧಿಕ ವಾಹನಗಳು ಕಲ್ಲು ತೂರಾಟದಲ್ಲಿ ಜಖಂಗೊಂಡಿವೆ. ಕಲ್ಲು ತೂರಾಟದಲ್ಲಿ ಪೊಲೀಸ್ ಸಿಬ್ಬಂದಿಗಳಾದ ಶಿವಮೂರ್ತಿ, ಕೃಷ್ಣೇಗೌಡ, ದೇವರಾಜ್, ಸೋಮಶೇಖರಪ್ಪ, ಜಗದೀಶ್, ಲೋಕೇಶ್,…

ಹಾಸನದಲ್ಲಿ ಮುಂಜಾನೆ ಸುತ್ತಾಡಿ ಕಾಡಿಗೆ ಮರಳಿದ ಒಂಟಿ ಸಲಗ
ಹಾಸನ

ಹಾಸನದಲ್ಲಿ ಮುಂಜಾನೆ ಸುತ್ತಾಡಿ ಕಾಡಿಗೆ ಮರಳಿದ ಒಂಟಿ ಸಲಗ

July 24, 2019

ಹಾಸನ: ಆಹಾರದ ಆಸೆಯಿಂದ ಈವರೆಗೆ ಕಾಡಂಚಿನ ಗ್ರಾಮಗಳಲ್ಲಿ, ಕೃಷಿ ಭೂಮಿಯಲ್ಲಷ್ಟೇ ಕಾಣಿಸಿ ಕೊಳ್ಳುತ್ತಿದ್ದ ಕಾಡಾನೆಗಳು ಈಗ ನಗರ ಪ್ರದೇಶಕ್ಕೂ ಕಾಲಿಡಲಾರಂಭಿಸಿವೆ. ಇದು ನಗರದ ನಾಗರಿಕರಲ್ಲಿ ಆತಂಕ ಮೂಡಲು ಕಾರಣವಾಗಿದೆ. ಮಂಗಳವಾರ ಮುಂಜಾನೆ ಹಾಸನ ನಗರದೊಳಗೆ ಬಂದ ಕಾಡಾನೆ, ರಸ್ತೆಗಳಲ್ಲಿ ಅತ್ತಿತ್ತ ಸಂಚರಿಸಿ ಆತಂಕದ ವಾತಾವರಣ ಸೃಷ್ಟಿಸಿತ್ತು. ಸುದ್ದಿ ತಿಳಿದು ಸ್ಥಳಕ್ಕೆ ಧಾವಿಸಿದ ಅರಣ್ಯ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿ ಒಂಟಿ ಸಲಗವನ್ನು ಮರಳಿ ಕಾಡಿಗೆ ಓಡಿಸುವಲ್ಲಿ ಯಶಸ್ವಿಯಾದರು. ಏಕಾಂಗಿ ಕಾಡಾನೆ ನಸುಕಿನ 4 ಗಂಟೆ ವೇಳೆ ನಗರದ…

ಹಾಸನದಲ್ಲಿ ನಾಳೆ ಜಲಜಾಗೃತಿ ಮ್ಯಾರಥಾನ್
ಹಾಸನ

ಹಾಸನದಲ್ಲಿ ನಾಳೆ ಜಲಜಾಗೃತಿ ಮ್ಯಾರಥಾನ್

July 24, 2019

ಹಾಸನ: ಸಾರ್ವಜನಿಕರಲ್ಲಿ ಜಲಜಾಗೃತಿ ಮೂಡಿಸುವ ಸಲುವಾಗಿ ಜಿಲ್ಲಾಡಳಿತ ಹಾಗೂ ಅರಣ್ಯ ಇಲಾಖೆ ಸಹಯೋಗದಲ್ಲಿ ಜು.25ರ ಗುರುವಾರ ನಗರದಲ್ಲಿ ವಿಶೇಷ ಜಲಜಾಗೃತಿ ಮ್ಯಾರಥಾನ್ ಏರ್ಪಡಿಸಲಾಗಿದೆ ಎಂದು ಜಿಲ್ಲಾಧಿಕಾರಿ ಅಕ್ರಂ ಪಾಷ ತಿಳಿಸಿದ್ದಾರೆ. ಡಿಡಿ ಕಚೇರಿ ಸಭಾಂಗಣದಲ್ಲಿ ಮಂಗಳ ವಾರ ಜಲಶಕ್ತಿ ಅಭಿಯಾನ ಕಾರ್ಯಕ್ರಮ ಕುರಿತ ಸಭೆಯಲ್ಲಿ ಮಾತನಾಡಿ, ಜಲ ಜಾಗೃತಿ ಕಾರ್ಯಕ್ರಮದಲ್ಲಿ ಸರ್ಕಾರಿ ನೌಕರರು, ಸಂಘ-ಸಂಸ್ಥೆಗಳ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳ ಬೇಕು. ಜಲಥಾನ್‍ನಲ್ಲಿ ಭಾಗವ ಹಿಸುವವರಿಗೆ ಪ್ರಮಾಣಪತ್ರ ನೀಡ ಲಾಗುವುದು ಎಂದರು. ಜಲಶಕ್ತಿ ಅಭಿಯಾನದಲ್ಲಿ ಹಾಸನ ದೇಶದಲ್ಲಿ…

ಪೌಷ್ಠಿಕ ಆಹಾರದಿಂದ ರೋಗ ನಿರೋಧಕ ಶಕ್ತಿ ವೃದ್ಧಿ
ಹಾಸನ

ಪೌಷ್ಠಿಕ ಆಹಾರದಿಂದ ರೋಗ ನಿರೋಧಕ ಶಕ್ತಿ ವೃದ್ಧಿ

July 24, 2019

ಬೇಲೂರು: ಪೌಷ್ಠಿಕ ಆಹಾರ ಎಂದರೆ ನಮ್ಮ ದೇಹದ ಆರೋಗ್ಯ ಕಾಪಾ ಡುವ ಸಮತೋಲನ ಆಹಾರ. ಆಹಾರದ ಎಲ್ಲಾ ಘಟಕಗಳನ್ನೂ ಒಳಗೊಂಡಿರು ವುದರಿಂದ ತಯಾರಿಸಿದ ಪೌಷ್ಠಿಕ ಆಹಾರ ದಿಂದ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ. ಮುಖ್ಯವಾಗಿ ಮಕ್ಕಳಲ್ಲಿ ಮಾನಸಿಕ-ದೈಹಿಕ ಬೆಳವಣಿಗೆಗೆ ಸಹಾಯಕ ಎಂದು ಗ್ರಾಪಂ ಮಾಜಿ ಅಧ್ಯಕ್ಷೆ ರತಿದೇವಿ ಹೇಳಿದರು. ತಾಲೂಕಿನ ಹೆಬ್ಬಾಳು ಗ್ರಾಮದ ಸಮು ದಾಯ ಭವನದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಹಮ್ಮಿ ಕೊಂಡ ಪೌಷ್ಠಿಕ ಆಹಾರ ಮೇಳದಲ್ಲಿ ಮಾತ ನಾಡಿ, ಮನುಷ್ಯನಿಗೆ ಒಳ್ಳೆಯ ಹಾಗೂ…

ಅರಸೀಕೆರೆಯಲ್ಲಿ ಜನಶತಾಬ್ದಿ ರೈಲು ನಿಲುಗಡೆಗೆ ಆಗ್ರಹ
ಹಾಸನ

ಅರಸೀಕೆರೆಯಲ್ಲಿ ಜನಶತಾಬ್ದಿ ರೈಲು ನಿಲುಗಡೆಗೆ ಆಗ್ರಹ

July 24, 2019

ಅರಸೀಕೆರೆ: ಶಿವಮೊಗ್ಗ-ಯಶವಂತಪುರ ನಡುವೆ ನಿತ್ಯ ಸಂಚರಿಸು ತ್ತಿರುವ ಜನಶತಾಬ್ದಿ ರೈಲುಗಾಡಿಗೆ ನಗರದಲ್ಲಿ ನಿಲುಗಡೆ ನೀಡಬೇಕು ಮತ್ತು ರೈಲು ನಿಲ್ದಾಣದಲ್ಲಿನ ಅಭಿವೃದ್ಧಿ ಕಾಮ ಗಾರಿ ಬೇಗ ಪೂರ್ಣಗೊಳಿಸಬೇಕು ಎಂದು ಆಗ್ರಹಿಸಿ ಜಿಲ್ಲಾ ರೈತ ಸಂಘದ ಸಂಚಾಲಕ ಕನಕೆಂಚೇನಹಳ್ಳಿ ಪ್ರಸನ್ನಕುಮಾರ್ ಅರಸೀ ಕೆರೆ ರೈಲು ನಿಲ್ದಾಣ ವ್ಯವಸ್ಥಾಪಕರಿಗೆ ಮಂಗಳವಾರ ಮನವಿಪತ್ರ ಸಲ್ಲಿಸಿದರು. ಈ ಸಂದರ್ಭ ಮಾತನಾಡಿದ ಅವರು, ರೈಲ್ವೆ ಇಲಾಖೆ ಕೆಲ ವಿಚಾರಗಳಲ್ಲಿ ಮಲ ತಾಯಿ ಧೋರಣೆ ಅನುಸರಿಸುತ್ತಿದೆ. ಶಿವಮೊಗ್ಗ-ಯಶವಂತಪುರ ನಡುವೆ ಸಂಚರಿಸುವ ಜನಶತಾಬ್ದಿ ರೈಲಿಗೆ ಅರಸೀ ಕೆರೆ ಜಂಕ್ಷನ್‍ನಲ್ಲಿ…

ಒಬ್ಬರ ತಪ್ಪಿಗೆ ಇಡೀ ಸಮುದಾಯ ದೂಷಿಸದಿರಿ
ಹಾಸನ

ಒಬ್ಬರ ತಪ್ಪಿಗೆ ಇಡೀ ಸಮುದಾಯ ದೂಷಿಸದಿರಿ

July 24, 2019

ಹಾಸನ: ಸಮಾಜದಲ್ಲಿ ಕೆಲವರು ಮಾಡಿದ ತಪ್ಪಿನಿಂದ ಇಡೀ ಸಮುದಾ ಯಕ್ಕೆ ಕೆಟ್ಟ ಹೆಸರು ಬರಬಾರದು ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಬಿ.ಎನ್.ನಂದಿನಿ ಹೇಳಿದರು. ನಗರದ ಸರಕಾರಿ ಆಸ್ಪತ್ರೆ ಬಳಿ ಇರುವ ಸ್ವಾಭಿ ಮಾನಿ ಭವನದಲ್ಲಿ `ಸಂಗಮ್ ಸಮರ್ಥ್’ ಸಂಯುಕ್ತಾಶ್ರಯದಲ್ಲಿ ಸೋಮವಾರ ಹಮ್ಮಿ ಕೊಂಡಿದ್ದ ರಾಜ್ಯ ಮಟ್ಟದ ವಕಾಲತು ಕಾರ್ಯಕ್ರಮ ಉದ್ಘಾಟಿಸಿದ ಅವರು, ಸಮಾಜ ದಲ್ಲಿ ತೃತೀಯ ವರ್ಗವೊಂದು ಇರುವ ಬಗ್ಗೆ ಮನವರಿಕೆಯಾಗಿದೆ. ಮಾಹಿತಿ ಕೊರತೆ ಯಿಂದ ಸಂಘರ್ಷಕ್ಕೆ ಕಾರಣವಾಗಿದೆ. ಅನೇಕ ಪೊಲೀಸ್ ಸಿಬ್ಬಂದಿಗಳಿಗೆ ತಿಳಿಯದ ವಿಚಾರಗಳನ್ನು ತಿಳಿಸಿಕೊಡುವ…

1 2 3 4 5 6 133
Translate »