ಹಾಸನ

ಒಬ್ಬರ ತಪ್ಪಿಗೆ ಇಡೀ ಸಮುದಾಯ ದೂಷಿಸದಿರಿ
ಹಾಸನ

ಒಬ್ಬರ ತಪ್ಪಿಗೆ ಇಡೀ ಸಮುದಾಯ ದೂಷಿಸದಿರಿ

July 24, 2019

ಹಾಸನ: ಸಮಾಜದಲ್ಲಿ ಕೆಲವರು ಮಾಡಿದ ತಪ್ಪಿನಿಂದ ಇಡೀ ಸಮುದಾ ಯಕ್ಕೆ ಕೆಟ್ಟ ಹೆಸರು ಬರಬಾರದು ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಬಿ.ಎನ್.ನಂದಿನಿ ಹೇಳಿದರು. ನಗರದ ಸರಕಾರಿ ಆಸ್ಪತ್ರೆ ಬಳಿ ಇರುವ ಸ್ವಾಭಿ ಮಾನಿ ಭವನದಲ್ಲಿ `ಸಂಗಮ್ ಸಮರ್ಥ್’ ಸಂಯುಕ್ತಾಶ್ರಯದಲ್ಲಿ ಸೋಮವಾರ ಹಮ್ಮಿ ಕೊಂಡಿದ್ದ ರಾಜ್ಯ ಮಟ್ಟದ ವಕಾಲತು ಕಾರ್ಯಕ್ರಮ ಉದ್ಘಾಟಿಸಿದ ಅವರು, ಸಮಾಜ ದಲ್ಲಿ ತೃತೀಯ ವರ್ಗವೊಂದು ಇರುವ ಬಗ್ಗೆ ಮನವರಿಕೆಯಾಗಿದೆ. ಮಾಹಿತಿ ಕೊರತೆ ಯಿಂದ ಸಂಘರ್ಷಕ್ಕೆ ಕಾರಣವಾಗಿದೆ. ಅನೇಕ ಪೊಲೀಸ್ ಸಿಬ್ಬಂದಿಗಳಿಗೆ ತಿಳಿಯದ ವಿಚಾರಗಳನ್ನು ತಿಳಿಸಿಕೊಡುವ…

ಸರ್ಕಾರಿ ಯೋಜನೆ ಅನುಷ್ಠಾನಕ್ಕೆ ನಿರ್ಲಕ್ಷ್ಯ ಬೇಡಕಂದಾಯ ಅದಾಲತ್‍ನಲ್ಲಿ ಡಿಸಿ ಅಕ್ರಂ ಪಾಷ ಸೂಚನೆ
ಹಾಸನ

ಸರ್ಕಾರಿ ಯೋಜನೆ ಅನುಷ್ಠಾನಕ್ಕೆ ನಿರ್ಲಕ್ಷ್ಯ ಬೇಡಕಂದಾಯ ಅದಾಲತ್‍ನಲ್ಲಿ ಡಿಸಿ ಅಕ್ರಂ ಪಾಷ ಸೂಚನೆ

July 23, 2019

ಹಾಸನ, ಜು.22- ಸರ್ಕಾರದ ಯೋಜನೆಗಳ ಅನುಷ್ಠಾನದಲ್ಲಿ ಯಾವುದೇ ವಿಳಂಬ ಅಥವಾ ನಿರ್ಲಕ್ಷ್ಯ ಮಾಡುವುದನ್ನು ಸಹಿಸುವುದಿಲ್ಲ. ವಿಶೇಷ ಕಾಳಜಿವಹಿಸಿ ಅಧಿಕಾರಿಗಳು ಅಭಿವೃದ್ಧಿ ಕೆಲಸ ಮಾಡಬೇಕು ಎಂದು ಜಿಲ್ಲಾಧಿಕಾರಿ ಅಕ್ರಂ ಪಾಷ ಸೂಚಿಸಿದರು. ಕೆಂಚಮ್ಮನ ಹೊಸಕೋಟೆಯಲ್ಲಿ ಸೋಮವಾರ ಜಿಲ್ಲಾಡಳಿತ, ಆಲೂರು ತಾಲೂಕು ಆಡಳಿತದ ವತಿಯಿಂದ ಏರ್ಪ ಡಿಸಲಾಗಿದ್ದ ಕಂದಾಯ ಅದಾಲತ್ ಉದ್ಘಾಟಿಸಿ ಮಾತನಾಡಿದ ಅವರು, ಸಾಮಾಜಿಕ ಭದ್ರತಾ ಯೋಜನೆಗಳ ಸೌಲಭ್ಯ ಪಡೆಯಲು ಅರ್ಹ ಫಲಾನು ಭವಿಗಳು ಸರ್ಕಾರಿ ಕಚೇರಿಗೆ ಅಲೆದಾಡು ವಂತಾಗಬಾರದು. ಈ ಬಗ್ಗೆ ಕಂದಾಯ ಇಲಾಖೆ ಅಧಿಕಾರಿ ಮತ್ತು…

ಮಣ್ಣಿನ ಸಮಗ್ರ ನಿರ್ವಹಣೆಯಿಂದ ಗುಣಮಟ್ಟದ ಇಳುವರಿ ಸಾಧ್ಯ
ಹಾಸನ

ಮಣ್ಣಿನ ಸಮಗ್ರ ನಿರ್ವಹಣೆಯಿಂದ ಗುಣಮಟ್ಟದ ಇಳುವರಿ ಸಾಧ್ಯ

July 23, 2019

ಕೃಷಿ ಮಹಾವಿದ್ಯಾಲಯದ ಡೀನ್ ಡಾ.ಎನ್.ದೇವಕುಮಾರ್ ಹಾಸನ, ಜು.22- ಮಣ್ಣಿನ ಸಮಗ್ರ ನಿರ್ವಹಣೆಯಿಂದ ತೆಂಗಿನಲ್ಲಿ ಸುಸ್ಥಿರ ಉತ್ಪಾದಕತೆ ಮತ್ತು ಗುಣಮಟ್ಟದ ಇಳುವರಿ ಪಡೆಯಲು ಸಾಧ್ಯ ಎಂದು ಕೃಷಿ ಮಹಾವಿದ್ಯಾಲಯದ ಡೀನ್ ಡಾ. ಎನ್.ದೇವಕುಮಾರ್ ತಿಳಿಸಿದರು. ಚನ್ನರಾಯಪಟ್ಟಣ ತಾಲೂಕಿನ ನುಗ್ಗೇ ಹಳ್ಳಿ ಹೋಬಳಿಯ `ಸ್ಮಾರ್ಟ್‍ಗ್ರಾಮ’ ಹೂವಿನಹಳ್ಳಿ ಗ್ರಾಮದಲ್ಲಿ ಕೃಷಿ ಮಹಾ ವಿದ್ಯಾಲಯ ಕಾರೇಕೆರೆ, ಹಾಸನ ವತಿ ಯಿಂದ ರೈತರಿಗೆ ಸುಸ್ಥಿರ ತೆಂಗಿನ ಉತ್ಪಾ ದಕತೆಯಲ್ಲಿ ಮಣ್ಣಿನ ಆರೋಗ್ಯ ಉಪ ಯುಕ್ತ ಸೂಕ್ಷ್ಮ ಜೀವಾಣುಗಳ ಬಳಕೆ ಹಾಗೂ ಫಲವತ್ತತೆಯ ಮಹತ್ವದ ಬಗ್ಗೆ…

ರಾಮನಾಥಪುರದಲ್ಲಿ ನಾಡಪ್ರಭು ಕೆಂಪೇಗೌಡ ಜಯಂತಿಮಹನೀಯರ ತತ್ವಾದರ್ಶ ಅಳವಡಿಸಿಕೊಳ್ಳಲು ಸಲಹೆ
ಹಾಸನ

ರಾಮನಾಥಪುರದಲ್ಲಿ ನಾಡಪ್ರಭು ಕೆಂಪೇಗೌಡ ಜಯಂತಿಮಹನೀಯರ ತತ್ವಾದರ್ಶ ಅಳವಡಿಸಿಕೊಳ್ಳಲು ಸಲಹೆ

July 23, 2019

ರಾಮನಾಥಪುರ, ಜು.22- ಮಹನಿ ಯರ ಜಯಂತಿಗಳನ್ನು ಆಚರಿಸುವ ಮೂಲಕ ಅವರ ತತ್ವಾದರ್ಶಗಳನ್ನು ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ಜಿಪಂ ಮಾಜಿ ಸದಸ್ಯ ಎಚ್.ಎಸ್. ಶಂಕರ್ ಸಲಹೆ ನೀಡಿದರು. ನಾಡಪ್ರಭು ಕೆಂಪೇಗೌಡ ಜಯಂತಿ ಆಚರಣಾ ಸಮಿತಿ ವತಿಯಿಂದ ಇಲ್ಲಿನ ಸಂಕ್ರಾಂತಿ ಕಲ್ಯಾಣ ಮಂಟಪದಲ್ಲಿ ಆಯೋಜಿಸಲಾಗಿದ್ದ 3ನೇ ವರ್ಷದ ನಾಡಪ್ರಭು ಕೆಂಪೇಗೌಡ ಜಯಂತಿಯಲ್ಲಿ ಅವರು ಮಾತನಾಡಿದರು. ಕೆಂಪೇಗೌಡರ ದೂರದೃಷ್ಟಿ ಫಲವಾಗಿ ಇಂದು ಬೆಂಗಳೂರು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಗಳಿಸಿ, ವಿಶ್ವದರ್ಜೆ ನಗರ ಗಳಲ್ಲೊಂದಾಗಿದೆ. ಬೆಂಗಳೂರು ನಗರ ನಿರ್ಮಾಣ ವೇಳೆ ಕೆಂಪೇಗೌಡರು ಎಲ್ಲಾ…

ಎಸ್‍ಸಿ, ಎಸ್‍ಟಿ ವಿದ್ಯಾರ್ಥಿಗಳ ಸಮಸ್ಯೆ ಪರಿಹಾರಕ್ಕೆ ಆಗ್ರಹ
ಹಾಸನ

ಎಸ್‍ಸಿ, ಎಸ್‍ಟಿ ವಿದ್ಯಾರ್ಥಿಗಳ ಸಮಸ್ಯೆ ಪರಿಹಾರಕ್ಕೆ ಆಗ್ರಹ

July 23, 2019

ಹಾಸನ, ಜು.22- ಪರಿಶಿಷ್ಟ ಜಾತಿ ಮತ್ತು ಪಂಗಡ ವಿದ್ಯಾರ್ಥಿಗಳ ಮೂಲ ಸಮಸ್ಯೆ ಗಳ ಪರಿಹಾರಕ್ಕೆ ಸರ್ಕಾರವನ್ನು ಒತ್ತಾಯಿಸಿ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿಯಿಂದ ಸಾಂಕೇತಿಕ ಧರಣಿ ನಡೆಸಿ ಮನವಿ ಸಲ್ಲಿಸಲಾಯಿತು. ದಸಂಸ ಬಾಬಾ ಸಾಹೇಬ ಅಂಬೇಡ್ಕರ್ ಆಶಯದಂತೆ ಶಿಕ್ಷಣ, ಸಂಘಟನೆ ಹಾಗೂ ಹೋರಾಟ ಈ ಮೂರು ಸೂತ್ರಗಳೊಂದಿಗೆ ನಾಡಿನಾದ್ಯಂತ ದಲಿತ ಸಮುದಾಯಕ್ಕೆ ಶಿಕ್ಷಣ ಕೊಡಿಸಲು ಹಲವು ಹೋರಾಟಗಳನ್ನು ರೂಪಿಸಿದ ಫಲವಾಗಿ ಜಿಲ್ಲಾ, ತಾಲೂಕು, ಹೋಬಳಿ ಕೇಂದ್ರಗಳಲ್ಲಿ ಅತೀ ಹೆಚ್ಚು ವಸತಿ ಶಾಲೆಗಳನ್ನು ತೆರೆಯಲಾಗಿದೆ…

ಅಹಿಂಸೆ ಮೂಲಕ ತ್ಯಾಗಿಗಳಿಂದ ಸಮಾಜಕ್ಕೆ ಮಾರ್ಗದರ್ಶನಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಅಭಿಪ್ರಾಯ
ಹಾಸನ

ಅಹಿಂಸೆ ಮೂಲಕ ತ್ಯಾಗಿಗಳಿಂದ ಸಮಾಜಕ್ಕೆ ಮಾರ್ಗದರ್ಶನಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಅಭಿಪ್ರಾಯ

July 23, 2019

ಪುಣ್ಯಸಾಗರ ಮಹಾರಾಜರ ಚಾತುರ್ಮಾಸ್ಯ ಮಂಗಲ ಕಲಶ ಸ್ಥಾಪನಾ ಕಾರ್ಯಕ್ರಮ ಶ್ರವಣಬೆಳಗೊಳ, ಜು.22- ದೇಶಾ ದ್ಯಂತ ತ್ಯಾಗಿಗಳು ಮಳೆಗಾಲದ ನಿಮಿತ್ತ ಚಾತುರ್ಮಾಸ್ಯ ಕೈಗೊಂಡು ಅಹಿಂಸೆ ಮೂಲಕ ಆತ್ಮಕಲ್ಯಾಣ ಮತ್ತು ಸಮಾಜಕ್ಕೆ ಮಾರ್ಗದರ್ಶನ ನೀಡುವ ಕಾರ್ಯ ಮಾಡುತ್ತಿದ್ದಾರೆ ಎಂದು ಕ್ಷೇತ್ರದ ಪೀಠಾಧಿ ಪತಿ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಅಭಿಪ್ರಾಯಪಟ್ಟರು. ಪಟ್ಟಣದ ಚಾವುಂಡರಾಯ ಸಭಾ ಮಂಟಪದಲ್ಲಿ ಭಾನುವಾರ ಆಯೋಜಿ ಸಿದ್ದ ಪುಣ್ಯಸಾಗರ ಮಹಾರಾಜರ ಚಾತು ರ್ಮಾಸ್ಯ ಮಂಗಲ ಕಲಶ ಸ್ಥಾಪನಾ ಕಾರ್ಯಕ್ರಮದಲ್ಲಿ ಮಂಗಲ ಆಶೀರ್ವಚನ ನೀಡಿ ಮಾತನಾಡಿದರು. ಸಾಮಾನ್ಯವಾಗಿ ಕರ್ನಾಟಕದವರು ಮುನಿ…

ವರದಕ್ಷಿಣೆ ಕಿರುಕುಳ: ನಾಲ್ವರಿಗೆ 26 ತಿಂಗಳು ಜೈಲು
ಹಾಸನ

ವರದಕ್ಷಿಣೆ ಕಿರುಕುಳ: ನಾಲ್ವರಿಗೆ 26 ತಿಂಗಳು ಜೈಲು

July 21, 2019

* ಗಂಡ, ಮಾವ, ಮೈದುನ ಸೇರಿ 4 ಮಂದಿಗೆ ತಲಾ 24 ಸಾವಿರ ರೂ. ದಂಡ * ದಂಡದ ಹಣದಲ್ಲಿ 80 ಸಾವಿರ ರೂ. ಸಂತ್ರಸ್ತ ಪತ್ನಿಗೆ ಪರಿಹಾರ ಧನ * ದಂಡ ಪಾವತಿಸಲು ವಿಫಲವಾದರೆ ಮತ್ತೆ 8 ತಿಂಗಳ ಸೆರೆವಾಸ ಆದೇಶ * ಬೇಲೂರು ಹಿರಿಯ ಸಿವಿಲ್ ಜಡ್ಜ್ ಮತ್ತು ಜೆಎಂಎಫ್‍ಸಿ ನ್ಯಾಯಾಲಯ ತೀರ್ಪು ಹಾಸನ,ಜು.20- ಬೇಲೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದ ವರದಕ್ಷಿಣೆ ಕಿರುಕುಳ ಪ್ರಕರಣದಲ್ಲಿ ನಾಲ್ವರು ಅಪರಾಧಿಗಳಿಗೆ ಬೇಲೂರು ಹಿರಿಯ ಸಿವಿಲ್ ಜಡ್ಜ್…

ಕಲ್ಯಾಣವು ಜಂಗಮ ಸ್ವರೂಪಿ; ಸರ್ವತ್ರ ಅನ್ವಯ
ಹಾಸನ

ಕಲ್ಯಾಣವು ಜಂಗಮ ಸ್ವರೂಪಿ; ಸರ್ವತ್ರ ಅನ್ವಯ

July 21, 2019

`ಸಹಮತ ವೇದಿಕೆ ಮತ್ತೆ ಕಲ್ಯಾಣ’ ಕಾರ್ಯಕ್ರಮದಲ್ಲಿ ಸಾಹಿತಿ ಚಿಟ್ನಹಳ್ಳಿ ಮಹೇಶ್ ರಾಮನಾಥಪುರ, ಜು.20- ಕೆಡಹು ವುದು ಸುಲಭ, ಕಟ್ಟುವುದೇ ಕಷ್ಟ. ಮುಂದಿನ ಪೀಳಿಗೆಗೆ ದೊರಕಬೇಕಾದ ಮಾನವೀಯ ತೆಯ ಭದ್ರ ಬುನಾದಿಗಾಗಿ ನಾವಿಂದು ಕೆಡ ಹುವ ಬದಲು ಕಟ್ಟುವ ಕಷ್ಟದ ದಾರಿ ಯನ್ನು ಅರಿಸಿಕೊಳ್ಳಬೇಕಿದೆ. ಒಡೆದ ಮನಸ್ಸು ಗಳನ್ನು ಒಂದುಗೂಡಿಸಲು ಮತ್ತೆ ಕಲ್ಯಾ ಣದ ದಾರಿಯಲ್ಲಿ ನಡೆಯಬೇಕಿದೆ. ಎಲ್ಲರೂ ಒಟ್ಟಾಗಿ ಬನ್ನಿ ಎಂದು ಸಾಹಿತಿ ಚಿಟ್ನಹಳ್ಳಿ ಮಹೇಶ್ ಕರೆ ನೀಡಿದರು. ಇಲ್ಲಿಯ ಬಸವೇಶ್ವರ ವೃತ್ತದಲ್ಲಿರುವ ಮಹಿಳಾ ಪದವಿ ಪೂರ್ವ…

ಸ್ಪರ್ಧಾತ್ಮಕ ಪರೀಕ್ಷೆ ಎದುರಿಸಲು ಆತ್ಮವಿಶ್ವಾಸವಿರಲಿ: ವೈಶಾಲಿ
ಹಾಸನ

ಸ್ಪರ್ಧಾತ್ಮಕ ಪರೀಕ್ಷೆ ಎದುರಿಸಲು ಆತ್ಮವಿಶ್ವಾಸವಿರಲಿ: ವೈಶಾಲಿ

July 21, 2019

ಹಾಸನ,ಜು.20- ಯಾವುದೇ ಸ್ಪರ್ಧಾ ತ್ಮಕ ಪರೀಕ್ಷೆಗಳನ್ನು ಎದುರಿಸಲು ಪರೀಕ್ಷಾ ರ್ಥಿಯಲ್ಲಿ ಮುಖ್ಯವಾಗಿ ಆತ್ಮವಿಶ್ವಾಸ ವಿರಬೇಕು ಎಂದು ಅಪರ ಜಿಲ್ಲಾಧಿಕಾರಿ ಎಂ.ಎಲ್.ವೈಶಾಲಿ ಹೇಳಿದರು. ನಗರದ ಆದಿಚುಂಚನಗಿರಿ ಸಮುದಾಯ ಭವನದಲ್ಲಿ ಶನಿವಾರ ಜಿಲ್ಲಾಡಳಿತ ಮತ್ತು ಬಿಜಿಎಸ್ ಸ್ಟಡಿ ಸೆಂಟರ್ ಸಂಯುಕ್ತಾ ಶ್ರಯದಲ್ಲಿ ಆಯೋಜಿಸಲಾಗಿದ್ದ ಐಎಎಸ್ ಮತ್ತು ಕೆಎಎಸ್ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು. ಜಿಲ್ಲೆಯ ಯುವಜನತೆಗೆ ಸ್ಪರ್ಧಾತ್ಮಕ ಪರೀಕ್ಷೆಗಳ ಬಗ್ಗೆ ಮಾರ್ಗದರ್ಶನ ನೀಡುವ ಉದ್ದೇಶದಿಂದ ಈ ಕಾರ್ಯಗಾರ ಹಮ್ಮಿ ಕೊಳ್ಳಲಾಗಿದೆ. ಯಾವುದೇ ವಿಷಯಗಳ ಕಲಿಕೆ, ಮನನ,…

ಮಕ್ಕಳ ತಪ್ಪುಗಳನ್ನು ಚಿಕ್ಕದರಲ್ಲೇ ತಿದ್ದುವುದು ಪೋಷಕರ ಕರ್ತವ್ಯ
ಹಾಸನ

ಮಕ್ಕಳ ತಪ್ಪುಗಳನ್ನು ಚಿಕ್ಕದರಲ್ಲೇ ತಿದ್ದುವುದು ಪೋಷಕರ ಕರ್ತವ್ಯ

July 21, 2019

ಬೇಲೂರು, ಜು.20- ಮನೆಯ ಪರಿಸರದಲ್ಲಿ ಮಕ್ಕಳ ಪ್ರಾರಂಭಿಕ ಹಂತದ ಬೆಳವಣಿಗೆಯು ಅವರು ಮಾನಸಿಕ ಹಾಗೂ ದೈಹಿಕವಾಗಿ ಸದೃಢವಾಗಿ ಬೆಳೆಯಲು ಸಹಕಾರಿ ಎಂದು ಹಾಸನ ವೈದ್ಯಕೀಯ ವಿಜ್ಞಾನ ಸಂಸ್ಥೆ ಮತ್ತು ಕಾಲೇಜಿನ ಮಾನಸಿಕ ಆರೋಗ್ಯ ಚಿಕಿತ್ಸಾ ವಿಭಾಗದ ಹಿರಿಯ ವೈದ್ಯಾಧಿಕಾರಿ ಡಾ.ಸಂತೋಷ್ ಹೇಳಿದರು. ತಾಲೂಕಿನ ಅರೇಹಳ್ಳಿ ರೋಟರಿ ಸಂಸ್ಥೆ ಹಾಗೂ ರೋಟರಿ ಶಾಲೆ ಸಹಯೋಗದಲ್ಲಿ ರೋಟರಿ ಶಾಲಾ ಆವರಣದಲ್ಲಿ ಶುಕ್ರವಾರ ಏರ್ಪಡಿಸಿದ್ದ ಪೋಷಕರ ಸಭೆಯಲ್ಲಿ ಮಾತ ನಾಡಿದ ಅವರು, ಮಕ್ಕಳು ಚಿಕ್ಕ ವಯಸ್ಸಿ ನಲ್ಲಿ ಅನೇಕ ತಪ್ಪುಗಳನ್ನು ಮಾಡುವುದು…

1 3 4 5 6 7 133
Translate »