ಹೊಳೆನರಸೀಪುರ: ಗಾರೆ ಕೆಲಸಕ್ಕೆ ಹೋದ ವ್ಯಕ್ತಿ ನಾಪತ್ತೆಯಾಗಿರುವ ಬಗ್ಗೆ ಹೊಳೆ ನರಸೀಪುರ ನಗರದಿಂದ ವರದಿಯಾಗಿದೆ. ಇಲ್ಲಿನ ರಾಜು ಅಲಿಯಾಸ್ ರಾಜಣ್ಣ(68) ಡಿ.7 ರಂದು ಸಂಜೆ 5.45ರ ವೇಳೆಯಲ್ಲಿ ಕಡವಿನಕೋಟೆ ಗ್ರಾಮದ ಲೋಕೇಶ್ ಎಂಬುವರ ಮನೆಗೆ ಗಾರೆ ಕೆಲಸಕ್ಕೆ ಹೋಗುವುದಾಗಿ ತಿಳಿಸಿ ಮನೆಯಿಂದ ಹೋದ ವರು ಈವರೆಗೆ ವಾಪಸ್ಸಾಗಿಲ್ಲ ಎಂದು ಅವರ ಪುತ್ರ ರವಿಚಂದ್ರ ನೀಡಿದ ದೂರನ್ನು ದಾಖ ಲಿಸಿಕೊಂಡಿರುವ ಹೊಳೆನರಸೀಪುರ ಠಾಣೆ ಪೊಲೀಸರು, ಈತನ ಬಗ್ಗೆ ಮಾಹಿತಿ ಇರು ವವರು ದೂರವಾಣಿ ಸಂಖ್ಯೆ 08175-273333 ಅನ್ನು ಸಂಪರ್ಕಿಸುವಂತೆ…
ತಿಂಗಳೊಳಗೆ ಚಿಕ್ಕಮಗಳೂರು-ಹಾಸನ ರೈಲುಮಾರ್ಗಕ್ಕೆ ಸರ್ವೇ: ಸಚಿವ ರೇವಣ್ಣ
December 9, 2018ಬೇಲೂರು: ಚಿಕ್ಕಮಗಳೂರಿನಿಂದ ಹಾಸನಕ್ಕೆ ಸಂಪರ್ಕ ಕಲ್ಪಿಸುವ ರೈಲು ಮಾರ್ಗದ ಸರ್ವೇ ಕಾರ್ಯ ಒಂದು ತಿಂಗಳೊಳಗೆ ಆರಂಭಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಹೆಚ್.ಡಿ. ರೇವಣ್ಣ ಹೇಳಿದರು. ದಬ್ಬೆ ಗ್ರಾಮದಲ್ಲಿ 10 ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಸೇತುವೆ ಕಾಮ ಗಾರಿಗೆ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು. ಚಿಕ್ಕಮಗಳೂರಿನಿಂದ ಬೇಲೂರು ಮಾರ್ಗವಾಗಿ ಹಾಸನದ ರೈಲ್ವೆ ಸಂಪರ್ಕದ ಕಾಮಗಾರಿಗೆ ಈ ತಿಂಗಳೊಳಗೆ ಸರ್ವೇ ನಡೆಯಲಿದೆ. ಬೇಲೂರಿಗೆ ಏನೆ ಕೆಲಸ ಇದ್ದರೂ ಮಾಡಿಸುತ್ತೇನೆ ಹಾಗೂ ಮುಂದಿನ ದಿನಗಳಲ್ಲಿ ಕಾಡಾನೆ ಕಾಫಿ ಬೆಳೆಗಾರರ ಸಮಸ್ಯೆಯ…
ರಾಮಮಂದಿರ ವಿಚಾರ ಇಟ್ಟುಕೊಂಡು ಬಿಜೆಪಿ ರಾಜಕೀಯ: ದೇವೇಗೌಡರ ಕಿಡಿ
December 9, 2018ಹಾಸನ: ರಾಮ ಮಂದಿರ ನಿರ್ಮಾಣ ಪ್ರಕರಣ ನ್ಯಾಯಾಲಯದಲ್ಲಿರುವಾಗ ಬಿಜೆಪಿ ಮತ್ತು ಸಂಘ ಪರಿವಾರದವರು ಹೋರಾಟ ಮಾಡುವ ಮೂಲಕ ರಾಜಕೀಯ ಮಾಡುತ್ತಿದ್ದಾರೆ ಎಂದು ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ಟೀಕಿಸಿದರು. ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತ ನಾಡಿದ ಅವರು, ಚುನಾವಣೆ ಕಾರಣದಿಂದ ಮತ್ತೆ ರಾಮ ಮಂದಿರ ವಿಚಾರ ಬಂದಿದೆ. ದಕ್ಷಿಣದಲ್ಲಿ ಶಬರಿಮಲೆ, ಉತ್ತರದಲ್ಲಿ ರಾಮಮಂದಿರ ವಿಚಾರ ಇಟ್ಟುಕೊಂಡು ಬಿಜೆಪಿ ರಾಜಕೀಯ ಮಾಡುತ್ತಿದ್ದಾರೆ. ಸಿಬಿಐ ಹಣೆಬರಹ ಮುಗಿಸಿದ್ದಾರೆ. ರಿಸರ್ವ್ ಬ್ಯಾಂಕ್ ಅನ್ನು ತಮ್ಮ ಹಿಡಿತಕ್ಕೆ ಪಡೆಯಲು ಯತ್ನಿಸಿದ್ದಾರೆ. ದೇಶದಲ್ಲಿ ಇನ್ನೇನು…
ವಿಜೃಂಭಣೆಯ ರಾಮೇಶ್ವರಸ್ವಾಮಿ, ಸುಬ್ರಹ್ಮಣ್ಯಸ್ವಾಮಿ ಲಕ್ಷ ದೀಪೋತ್ಸವ
December 9, 2018ರಾಮನಾಥಪುರ: ದಕ್ಷಿಣ ಕಾಶಿ ಎಂದೇ ಪ್ರಖ್ಯಾತಿ ಪಡೆದಿರುವ ಇಲ್ಲಿಯ ಶ್ರೀ ಚತುರ್ಯುಗ ಮೂರ್ತಿ ರಾಮೇಶ್ವರ ಸ್ವಾಮಿ, ಸುಬ್ರಹ್ಮಣ್ಯಸ್ವಾಮಿ ದೇವಾಲಯ ಗಳಲ್ಲಿ ಶುಕ್ರವಾರ ರಾತ್ರಿ ಲಕ್ಷ ದೀಪೋತ್ಸವ ಸಡಗರ ಸಂಭ್ರಮದಿಂದ ನಡೆಯಿತು. ರಾಮನಾಥಪುರ ಕಾವೇರಿ ನದಿ ದಂಡೆ ಯಲ್ಲಿರುವ ಶ್ರೀ ರಾಮೇಶ್ವರಸ್ವಾಮಿ ದೇವ ಸ್ಥಾನದಲ್ಲಿ ಬ್ರಾಹ್ಮೀ ಮುಹೂರ್ತದಲ್ಲಿ ದೇವರಿಗೆ ರುದ್ರಾಭಿಷೇಕ, ಕುಂಕುಮಾ ರ್ಚನೆ, ವಿಶೇಷ ಹೂವಿನ ಅಲಂಕಾರ, ವಿದ್ಯುತ್ ದೀಪಾಲಂಕಾರ ಮಾಡಿ ಮೂಲ ದೇವರ ಮೂರ್ತಿಗೆ ವಿಶೇಷ ಪೂಜಾ ಕೈಂಕರ್ಯ ಸಲ್ಲಿಸಲಾಯಿತು. ದೇವಾಲಯದ ಒಳ ಪ್ರಾಂಣಗದ ಸುತ್ತಲೂ ಸಾವಿರಾರು…
ಸ್ಕೇಟಿಂಗ್ ಕ್ರೀಡೆ ಕ್ರಿಯಾಶೀಲತೆ ಹೆಚ್ಚಿಸುತ್ತದೆ: ಪ್ರೀತಮ್ ಜೆ.ಗೌಡ
December 9, 2018ಹಾಸನ: ವಿವಿಧ ಕ್ರೀಡೆಗಳಿಗಿಂತ ಸ್ಕೇಟಿಂಗ್ ಕ್ರೀಡೆಯಿಂದ ಮಕ್ಕಳ ಕ್ರಿಯಾ ಶೀಲತೆ ಮತ್ತು ಬುದ್ದಿಯನ್ನು ಚುರುಕು ಗೊಳಿಸುತ್ತದೆ ಎಂದು ಶಾಸಕ ಪ್ರೀತಮ್ ಜೆ.ಗೌಡ ಹೇಳಿದರು. ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಹಾಸನ ಜಿಲ್ಲಾ ರೋಲರ್ ಸ್ಕೇಟಿಂಗ್ ಅಸೋಸಿ ಯೇಸನ್ ವತಿಯಿಂದ ಶನಿವಾರ ಬೆಳಿಗ್ಗೆ ಹಮ್ಮಿಕೊಳ್ಳಲಾಗಿದ್ದ ರೋಲರ್ ಸ್ಕೇಟಿಂಗ್ ಚಾಂಪಿಯನ್ ಶಿಫ್ ಸ್ಪರ್ಧೆಗೆ ಚಾಲನೆ ನೀಡಿ ಅವರು ಮಾತನಾಡಿದರು. ವಿದ್ಯಾರ್ಥಿಗಳು ಕೇವಲ ಪುಸ್ತಕಗಳಿಗೆ ಸಿಮೀತವಾಗದೆ ಇಂತಹ ಕ್ರೀಡೆಗಳಲೂ ಪಾಲ್ಗೊಳ್ಳಬೇಕು. ಅವರಿಗೆ ಶಿಕ್ಷಕರು ಹಾಗೂ ಪೋಷಕರು ಪ್ರೋತ್ಸಾಹ ನೀಡು ವುದರ ಮೂಲಕ ಅವರ…
ಅತ್ತಿಗೆ ಜೊತೆ ಅಕ್ರಮ ಸಂಬಂಧದ ಸಂಶಯ: ಅಣ್ಣನಿಂದಲೇ ತಮ್ಮನ ಕೊಲೆ
December 9, 2018ಹಾಸನ: ತನ್ನ ಹೆಂಡತಿಯ ಜೊತೆ ಅಕ್ರಮ ಸಂಬಂಧ ಹೊಂದಿದ್ದ ಸಂಶಯದ ಹಿನ್ನೆಲೆ ಅಣ್ಣನೇ ತಮ್ಮನನ್ನು ಹೊಡೆದು ಕೊಲೆ ಮಾಡಿರುವ ಘಟನೆ ಜಿಲ್ಲೆಯ ಆಲೂರು ತಾಲೂಕಿನ ಜಯಂತಿ ನಗರದಲ್ಲಿ ನಡೆದಿದೆ. ರಘು ಕೊಲೆಯಾದ ಸೋದರ. ಆತನ ಅಣ್ಣ ಜಯಣ್ಣ ದೊಣ್ಣೆಯಿಂದ ರಘು ತಲೆಗೆ ಹೊಡೆದು ಕೊಲೆ ಮಾಡಿದ್ದಾನೆ. ಜಯಣ್ಣನ ಪತ್ನಿ ಜೊತೆ ರಘು ಅಕ್ರಮ ಸಂಬಂಧ ಹೊಂದಿದ್ದ ಎಂದು ಅನುಮಾನಗೊಂಡು ತಮ್ಮನೊಂದಿಗೆ ಜಗಳಕ್ಕಿಳಿದಿದ್ದಾನೆ. ಜಗಳ ವಿಕೋಪಕ್ಕೆ ತಿರುಗಿ ಜಯಣ್ಣ, ದೊಣ್ಣೆಯಿಂದ ರಘು ತಲೆಗೆ ಹೊಡೆದಿದ್ದಾನೆ. ಇದರಿಂದ ತೀವ್ರ ಗಾಯಗೊಂಡ…
ಅಂಬೇಡ್ಕರ್ ಎಲ್ಲಾ ಸಮುದಾಯಗಳಿಗೂ ಸೇರಿದ ವ್ಯಕ್ತಿ
December 7, 2018ಹಾಸನ: ನಗರದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಡಾ.ಬಿ.ಆರ್. ಅಂಬೇಡ್ಕರ್ ಅವರ 62ನೇ ವರ್ಷದ ಮಹಾ ಪರಿನಿಬ್ಬಾಣದ ಅಂಗವಾಗಿ ಹಮ್ಮಿ ಕೊಳ್ಳಲಾಗಿದ್ದ ಪುಣ್ಯಸ್ಮರಣೆ ಕಾರ್ಯ ಕ್ರಮದಲ್ಲಿ ಭಾಗವಹಿಸಿದ್ದ ಗಣ್ಯರು ಅಂಬೇ ಡ್ಕರ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ನಮನ ಸಲ್ಲಿಸಿದರು. ನಂತರ ಮಾತನಾಡಿದ ಲೋಕೋಪ ಯೋಗಿ ಸಚಿವ ಹೆಚ್.ಡಿ.ರೇವಣ್ಣ, ಡಾ. ಬಿ.ಆರ್.ಅಂಬೇಡ್ಕರ್ ಯಾವುದೇ ಒಂದು ಸಮಾಜಕ್ಕೆ ಸೇರಿದ ವ್ಯಕ್ತಿಯಲ್ಲ. ಇಡೀ ಭಾರತ ದೇಶಕ್ಕೆ ಸಂವಿಧಾನ ಕೊಟ್ಟಿರುವು ದರಿಂದ ಎಲ್ಲಾ ಸಮುದಾಯಕ್ಕೂ ಸೇರಿ ದವರು. ಅವರು ದೇಶಕ್ಕೆ ನೀಡಿದ ಸಂವಿ ಧಾನದಿಂದ…
ಬರ ನಿರ್ವಹಣೆಗೆ ಪೂರ್ವಭಾವಿ ಸಿದ್ಧತೆ ಕೈಗೊಳ್ಳಲು ಅಧಿಕಾರಿಗಳಿಗೆ ಸಚಿವ ರೇವಣ್ಣ ಸೂಚನೆ
December 7, 2018ಹಾಸನ: ಕುಡಿಯುವ ನೀರು ಪೂರೈಕೆ ಬರ ನಿರ್ವಹಣೆ ಸೇರಿದಂತೆ ಹಲವು ಪ್ರಮುಖ ವಿಷಯಗಳ ಕುರಿತು ಇಂದು ಜಿಲ್ಲಾ ಉಸ್ತುವಾರಿ ಸಚಿವ ಹೆಚ್.ಡಿ. ರೇವಣ್ಣ ಅವರು ಜಿಲ್ಲೆಯ ಜನಪ್ರತಿನಿಧಿ ಗಳು ಹಾಗೂ ಅಧಿಕಾರಿಗಳ ಸಭೆ ನಡೆಸಿ ಹಲವು ಸಲಹೆ ಸೂಚನೆಗಳನ್ನು ನೀಡಿದರು. ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿಂದು ನಡೆದ ಸಭೆಯಲ್ಲಿ ನಗರ ಹಾಗೂ ಗ್ರಾಮೀಣ ಪ್ರದೇಶಗಳ ಕುಡಿಯುವ ನೀರು ಪೂರೈಕೆ, ಎತ್ತಿನ ಹೊಳೆ ಯೋಜನೆ ಹಾಗೂ ರಸ್ತೆ ಕಾಮಗಾರಿ ಗಳಿಗೆ ಭೂಸ್ವಾದೀನ ಪ್ರಕ್ರಿಯೆ ಮರಳು ಪೂರೈಕೆ ಯಲ್ಲಿ ಆಗುತ್ತಿರುವ ವ್ಯತ್ಯಯ…
ನನ್ನ ಹೆಸರು ಹೇಳದಿದ್ದರೇ ಕೆಲವರಿಗೆ ಹೊಟ್ಟೆ ತುಂಬುವುದಿಲ್ಲ: ಹೆಚ್.ಡಿ.ರೇವಣ್ಣ
December 7, 2018ಹಾಸನ: ಕೆಲವರಿಗೆ ಆಗಾಗ್ಗೆ ನನ್ನ ಹೆಸರು ಹೇಳದಿದ್ದರೆ ಹೊಟ್ಟೆ ತುಂಬುವುದಿಲ್ಲ, ನಿದ್ದೆಯೂ ಬರುವುದಿಲ್ಲ ಎಂದು ಲೋಕೋಪಯೋಗಿ ಹಾಗೂ ಉಸ್ತುವಾರಿ ಸಚಿವ ಹೆಚ್.ಡಿ. ರೇವಣ್ಣ ತಮ್ಮ ರಾಜಕೀಯ ವಿರೋಧಿಗಳಿಗೆ ಟಾಂಗ್ ನೀಡಿದರು. ನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಕೆಲವರು ನನ್ನನ್ನು ಸೂಪರ್ ಸಿಎಂ ಎಂದು ಹೇಳುತ್ತಿದ್ದಾರೆ. ಇನ್ನೂ ಕೆಲವರು ಎಲ್ಲಾ ಇಲಾಖೆಯನ್ನು ನಾನೇ ನೋಡಿಕೊಳ್ಳುತ್ತಿದ್ದೇನೆ ಎಂದು ದೂರುತ್ತಿದ್ದಾರೆ. ಅಲ್ಲದೆ ಮಾಧ್ಯಮಗಳೂ ಕೂಡ ನನ್ನ ಬಗ್ಗೆಯೇ ಬರೆದುಕೊಳ್ಳುತ್ತಿವೆ. ಬರೆದುಕೊಳ್ಳಲಿ, ಈ ಬಗ್ಗೆ ನಾನು ಹೆಚ್ಚು ಪ್ರತಿಕ್ರಿಯೆ ನೀಡುವುದಿಲ್ಲ ಎಂದರು….
ರಾಮನಾಥಪುರ ಕೆಎಸ್‍ಆರ್‍ಟಿಸಿ ಬಸ್ ನಿಲ್ದಾಣಕ್ಕೆ 2.62 ಕೋಟಿ ರೂ. ಮಂಜೂರು: ಶಾಸಕ ಎ.ಟಿ.ರಾಮಸ್ವಾಮಿ
December 7, 2018ರಾಮನಾಥಪುರ: ಇಲ್ಲಿಯ ಕೆಎಸ್‍ಅರ್‍ಟಿಸಿ ನೂತನ ಬಸ್ ನಿಲ್ದಾಣ, ಸಾರಿಗೆ ಘಟಕ ನಿರ್ಮಾಣಕ್ಕೆ 2 ಕೋಟಿ 62 ಲಕ್ಷ ರೂ ಮಂಜೂರಾಗಿದ್ದು ಕಾಮ ಗಾರಿ ಇಂದಿನಿಂದಲೇ ಪ್ರಾರಂಭವಾಗಲು ಕ್ರಮ ಕೈಗೊಳ್ಳಿ ಎಂದು ಅಧಿಕಾರಿಗಳಿಗೆ ಶಾಸಕ ಎ.ಟಿ.ರಾಮಸ್ವಾಮಿ ಸೂಚಿಸಿದರು. ಇಲ್ಲಿನ ಬಸವೇಶ್ವರ ವೃತ್ತದಲ್ಲಿರುವ ಸಾರಿಗೆ ಬಸ್ ನಿಲ್ದಾಣ 4 ಕಡೆಗೆ ಹೋಗುವ ಮುಖ್ಯ ಸರ್ಕಲ್ ಹೊಂದಿದ್ದು ಇಲ್ಲಿಂದ ಮಡಿಕೇರಿ, ಹಾಸನ, ಮೈಸೂರು, ಬೆಂಗ ಳೂರು ಮತ್ತು ಪಿರಿಯಾಪಟ್ಟಣ ಮಾರ್ಗ ಕೇರಳಕ್ಕೆ ಹೋಗುವ ಬಸ್ ನಿಲ್ದಾಣ ಚಿಕ್ಕದಾಗಿದ್ದು, ಸುಸಜ್ಜಿತವಾದ ಬಸ್ ನಿಲ್ದಾಣವನ್ನು…