ತಿಂಗಳೊಳಗೆ ಚಿಕ್ಕಮಗಳೂರು-ಹಾಸನ ರೈಲುಮಾರ್ಗಕ್ಕೆ ಸರ್ವೇ: ಸಚಿವ ರೇವಣ್ಣ
ಹಾಸನ

ತಿಂಗಳೊಳಗೆ ಚಿಕ್ಕಮಗಳೂರು-ಹಾಸನ ರೈಲುಮಾರ್ಗಕ್ಕೆ ಸರ್ವೇ: ಸಚಿವ ರೇವಣ್ಣ

December 9, 2018

ಬೇಲೂರು:  ಚಿಕ್ಕಮಗಳೂರಿನಿಂದ ಹಾಸನಕ್ಕೆ ಸಂಪರ್ಕ ಕಲ್ಪಿಸುವ ರೈಲು ಮಾರ್ಗದ ಸರ್ವೇ ಕಾರ್ಯ ಒಂದು ತಿಂಗಳೊಳಗೆ ಆರಂಭಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಹೆಚ್.ಡಿ. ರೇವಣ್ಣ ಹೇಳಿದರು.

ದಬ್ಬೆ ಗ್ರಾಮದಲ್ಲಿ 10 ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಸೇತುವೆ ಕಾಮ ಗಾರಿಗೆ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.

ಚಿಕ್ಕಮಗಳೂರಿನಿಂದ ಬೇಲೂರು ಮಾರ್ಗವಾಗಿ ಹಾಸನದ ರೈಲ್ವೆ ಸಂಪರ್ಕದ ಕಾಮಗಾರಿಗೆ ಈ ತಿಂಗಳೊಳಗೆ ಸರ್ವೇ ನಡೆಯಲಿದೆ. ಬೇಲೂರಿಗೆ ಏನೆ ಕೆಲಸ ಇದ್ದರೂ ಮಾಡಿಸುತ್ತೇನೆ ಹಾಗೂ ಮುಂದಿನ ದಿನಗಳಲ್ಲಿ ಕಾಡಾನೆ ಕಾಫಿ ಬೆಳೆಗಾರರ ಸಮಸ್ಯೆಯ ಬಗ್ಗೆ ಚರ್ಚಿಸಲು ಸಭೆ ಕರೆಯಲಾಗಿದೆ ಎಂದರು.

ಬೇಲೂರು ತಾಲೂಕಿಗೆ ಇಂಜಿನಿಯರಿಂಗ್ ಕಾಲೇಜನ್ನು ತರುವ ಉದ್ದೇಶವಿದೆ. ಮಲೆನಾಡು ಭಾಗದಲ್ಲಿ ಮಳೆಯಿಂದಾಗಿ ಹಾಳಾಗಿರುವ ಸಣ್ಣ ಸೇತುವೆಗಳನ್ನು ದುರಸ್ತಿ ಮತ್ತು ಹೊಸ ಸೇತುವೆ, ನೀರಾ ವರಿ, ರಸ್ತೆ ಕಾಮಗಾರಿಗೆ ಹೆಚ್ಚಿನ ಆದ್ಯತೆ ನೀಡಲಾಗುವುದು. ಗ್ರಾಹಕರಿಗೆ ಅನು ಕೂಲವಾಗಲು ತಾಲೂಕಿನ 6 ಹೋಬಳಿ ಕೇಂದ್ರಗಳಲ್ಲಿ ಸೆಸ್ಕಾಂ ಉಪ ಕಚೇರಿ ಯನ್ನು ತೆರೆಯುವ ಬಗ್ಗೆ ಚಿಂತನೆ ನಡೆಸ ಲಾಗಿದೆ ಎಂದು ತಿಳಿಸಿದರು.

ದಬ್ಬೆ ಗ್ರಾಮಸ್ಥರ ಹಲವು ವರ್ಷಗಳ ಬೇಡಿಕೆ ಈಗ ಈಡೇರಿದಂತಾಗಿದೆ. 186 ಕೋಟಿ ವೆಚ್ಚದ ಹಾಸನ-ಬೇಲೂರು ನಡುವಿನ ರಾಷ್ಟ್ರೀಯ ಹೆದ್ದಾರಿ 33 ಕಿ.ಮೀವರೆಗೆ ಚತುಷ್ಪಥವಾಗಿ ಅಭಿವೃದ್ಧಿ ಪಡಿಸಲಾಗುತ್ತಿದ್ದು, ಇನ್ನೊಂದು ವಾರ ದೊಳಗೆ ಸರ್ವೇ ನಡೆಯಲಿದೆ ಎಂದರು.

ಜಿಲ್ಲಾ ಪಂಚಾಯಿತಿ ಸದಸ್ಯೆ ಭವಾನಿ ರೇವಣ್ಣ ಮಾತನಾಡಿ, ಕಾಂಗ್ರೆಸ್ ಸರ್ಕಾ ರದ ಅಧಿಕಾರದ ಅವಧಿಯಲ್ಲಿ ಮಾಜಿ ಪ್ರಧಾನಿ ದೇವೇಗೌಡರು ಸಂಸದ ನಿಧಿ ಯಿಂದ 2 ಕೋಟಿ ಅನುದಾನ ಕೊಡಿಸಿ ಹಲವು ಕಾಮಗಾರಿಗೆ ಚಾಲನೆ ನೀಡಿ ದ್ದಾರೆ. ಮುಂದಿನ ಚುನಾವಣೆಯಲ್ಲೂ ದೇವೇಗೌಡರು ಮತ್ತೆ ಹಾಸನ ಕ್ಷೇತ್ರದಿಂದ ಸ್ಪರ್ಧಿಸಲಿ ಎಂಬುದು ತಮ್ಮ ಆಶಯ ವಾಗಿದೆ ಎಂದರು.
ರಾಜ್ಯ ಯುವ ಜೆಡಿಎಸ್ ಅಧ್ಯಕ್ಷ ಪ್ರಜ್ವಲ್ ರೇವಣ್ಣ ಮಾತನಾಡಿ, ಬೇಲೂರು ತಾಲೂಕಿನ ಬಗ್ಗೆ ದೇವೇಗೌಡರು ಸೇರಿ ದಂತೆ ನಮ್ಮ ಕುಟುಂಬಕ್ಕೆ ಅಪಾರವಾದ ಪ್ರೀತಿ ಇದೆ. ಅಧಿಕಾರ ಇರಲಿ, ಬಿಡಲಿ ಅಭಿ ವೃದ್ಧಿ ಕೆಲಸವನ್ನು ಮಾಡಿಕೊಂಡು ಬರ ಲಾಗುತ್ತಿದೆ. ತಾಲೂಕಿನ ಅಭಿವೃದ್ಧಿ ಕಾಮ ಗಾರಿ ಬಗ್ಗೆ ಮನವಿಯನ್ನು ನೀಡಿದರೆ ಸಚಿವ ರೇವಣ್ಣ ಅವರು ಮರು ಮಾತನಾ ಡದೇ ಒಪ್ಪಿಗೆ ಸೂಚಿಸುತ್ತಾರೆ ಎಂದರು.

ಶಾಸಕ ಕೆ.ಎಸ್.ಲಿಂಗೇಶ್ ಮಾತನಾಡಿ, ಪ್ರವಾಸೋದ್ಯಮ ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಬೇಲೂರು ಯಗಚಿ ನದಿಯನ್ನು ಕೆಆರ್‍ಎಸ್ ಮಾದರಿ ನಿರ್ಮಿಸಲು 250 ಕೋಟಿ ಅನುದಾನವನ್ನು ರೇವಣ್ಣ ಬಿಡು ಗಡೆ ಮಾಡಿಸಿದ್ದಾರೆ. ತಾಲೂಕಿನಲ್ಲಿ ನಿರು ದ್ಯೋಗ ನಿವಾರಣೆಗೆ ಹಳೆಬೀಡು ರಸ್ತೆಯಲ್ಲಿ ರುವ 10 ಎಕರೆ ಖಾಲಿ ಜಾಗದಲ್ಲಿ ಗಾರ್ಮೆ ಂಟ್ಸ್ ಪ್ರಾರಂಭಿಸಲು ಮುಂದಾಗು ವಂತೆ ಮನವಿ ಮಾಡಿದರು.

ಈ ಸಂದರ್ಭದಲ್ಲಿ ತಾಲೂಕು ಜೆಡಿ ಎಸ್ ಅಧ್ಯಕ್ಷ ತೊ.ಚ.ಅನಂತಸುಬ್ಬರಾಯ, ಕಾರ್ಯದರ್ಶಿ ಬಿ.ಸಿ.ಮಂಜುನಾಥ್, ಜಿಪಂ ಸದಸ್ಯೆ ಲತಾದಿಲೀಪ್, ತಾಪಂ ಅಧ್ಯಕ್ಷ ರಂಗೇಗೌಡ, ಸದಸ್ಯ ಅಶ್ವಥ್, ಎಪಿಎಂಸಿ ಅಧ್ಯಕ್ಷ ಚೇತನ್, ಮುಖಂಡರಾದ ಚಂದ್ರೇ ಗೌಡ, ಎಂ.ಎ.ನಾಗರಾಜ್, ಸಿ.ಎಸ್. ಪ್ರಕಾಶ್, ಮಹೇಶ್, ಲೊಕೋಪಯೋಗಿ ಅಧಿಕಾರಿ ಕೃಷ್ಣಾರೆಡ್ಡಿ, ಎಂಜಿನಿಯರ್ ರಮೇಶ್ ಇದ್ದರು.

Translate »