ಪೊಲೀಸ್ ಕ್ರೀಡಾಕೂಟ: ಮೈಸೂರು ನಗರ ಸಶಸ್ತ್ರ ಮೀಸಲು ಪಡೆಗೆ `ಟೀಂ ಚಾಂಪಿಯನ್ ಶಿಪ್’
ಮೈಸೂರು

ಪೊಲೀಸ್ ಕ್ರೀಡಾಕೂಟ: ಮೈಸೂರು ನಗರ ಸಶಸ್ತ್ರ ಮೀಸಲು ಪಡೆಗೆ `ಟೀಂ ಚಾಂಪಿಯನ್ ಶಿಪ್’

December 9, 2018

ಮೈಸೂರು: ಸೂರಿನ ನಗರ ಸಶಸ್ತ್ರ ಮೀಸಲು ಪಡೆ ಪೊಲೀಸ್ ಕವಾಯತು ಮೈದಾನದಲ್ಲಿ ಕಳೆದ 3 ದಿನಗಳಿಂದ ನಡೆದ ಕ್ರೀಡಾ ಕೂಟದಲ್ಲಿ ನಗರ ಸಶಸ್ತ್ರ ಮೀಸಲುಪಡೆ(ಸಿಎಆರ್) ತಂಡವು ಟೀಂ ಚಾಂಪಿಯನ್‍ಶಿಪ್ ಪಡೆದುಕೊಂಡಿತು.

ಮೈಸೂರು ನಗರ ಪೊಲೀಸ್ ಇಲಾಖೆ ಆಯೋ ಜಿಸಿದ್ದ ಪೊಲೀಸ್ ವಾರ್ಷಿಕ ಕ್ರೀಡಾಕೂಟದ ಪುರುಷರ ವಿಭಾಗದಲ್ಲಿ ಉತ್ತಮ ಆಟ ಪ್ರದರ್ಶಿಸಿದ ಸಿಎಆರ್ ಪೇದೆ ಮೈಲಾರಿ ಹಾಗೂ ಮಹಿಳಾ ವಿಭಾಗದಲ್ಲಿ ನರಸಿಂಹರಾಜ ಉಪ ವಿಭಾಗದ ಪೇದೆ ಕೆ.ಪಿ.ಉಷಾ ಅವರು `ಸರ್ವೋತ್ತಮ ಪ್ರಶಸ್ತಿ’ಗೆ ಭಾಜನರಾದರು.

ವಿಜೇತರ ಪಟ್ಟಿ ಇಂತಿದೆ: ಪುರುಷರ ವಿಭಾಗ: 5000 ಮೀ.ಓಟ: ಸಿಎಆರ್‍ನ ಪಿ.ಆದಿತ್ಯ(ಪ್ರ), ಮೌಂಟೆಡ್‍ನ ಚೇತನ್ ಕುಮಾರ್(ದ್ವಿ), ಸಿಎಆರ್‍ನ ಪವನ್ ಕುಮಾರ್(ತೃ). ಕೆಎಆರ್‍ಪಿ ಮೌಂಟೆಡ್ ಕಂಪೆನಿಯ ಎಆರ್‍ಎಸ್‍ಐ ಮತ್ತು ಮೇಲ್ಪಟ್ಟ ಅಧಿಕಾರಿಗಳು: ಶೋ ಜಂಪಿಂಗ್: ಮೌಂಟೆಡ್ ಕಂಪೆನಿಯ ಎಂ.ಲಿಂಬೋಜಿರಾವ್(ಪ್ರ), ಶಬೀರ್ ಪಾಷಾ(ದ್ವಿ), ಸುರೇಶ್‍ರಾವ್ ಸಿಂಧೆ(ತೃ). ಟೆಂಟ್ ಪೆಗ್ಗಿಂಗ್: ಮೌಂಟೆಡ್ ಕಂಪೆನಿಯ ಎಂ.ಮಧು(ಪ್ರ), ಜೆ.ಮೋಹನ್(ದ್ವಿ), ಲೋಕೇಶ್(ತೃ). ಬ್ಯಾಂಡ್ ಸಿಬ್ಬಂಧಿಗಳ ಬ್ಯಾಂಡ್ಸ್ ಮನ್ ರೇಸ್: ಸಿದ್ದರಾಜು(ಪ್ರ), ಪ್ರದೀಪ್‍ಕುಮಾರ್(ದ್ವಿ), ಎಸ್.ವಿಕಾಸ್(ತೃ).

ಸಹಾಯಕ ಪೊಲೀಸ್ ಅಧಿಕಾರಿಗಳ 100 ಮೀ.ಓಟ: ಕೆ.ಆರ್.ವಿಭಾಗದ ಧರ್ಮಪ್ಪ(ಪ್ರ), ಸಿಎಆರ್‍ನ ಹೆಚ್.ವಿ.ವೀರಣ್ಣ(ದ್ವಿ), ಎಫ್‍ಪಿಬಿ ವಿಭಾಗದ ರಾಜಶೇಖರ(ತೃ). ಗುಂಡು ಎಸೆತ: ಟ್ರಾಫಿಕ್ ವಿಭಾಗದ ಜಿ.ಎನ್.ಮೋಹನ್(ಪ್ರ), ಎಫ್‍ಪಿಬಿಯ ರಾಜಶೇಖರ(ದ್ವಿ), ಸಿಎಆರ್‍ನ ಸುರೇಶ್(ತೃ). ಡಿಸ್ಕರ್ಸ್ ಥ್ರೋ: ಎಫ್‍ಪಿಬಿಯ ರಾಜಶೇಖರ(ಪ್ರ), ಕೆಆರ್ ವಿಭಾಗದ ಧರ್ಮಪ್ಪ(ದ್ವಿ), ಟ್ರಾಫಿಕ್‍ನ ಜಿ.ಎನ್.ಮೋಹನ್(ತೃ).

ಆರಕ್ಷಕ ನಿರೀಕ್ಷಕರುಗಳ ಗುಂಡು ಎಸೆತ: ಸಿಸಿಬಿಯ ಅಶೋಕ್ ಕುಮಾರ್, ಸಿಎಆರ್‍ನ ಎ.ಜಿ.ಅಶೋಕ ಕುಮಾರ್(ಪ್ರ), ನಜರ್‍ಬಾದ್‍ನ ಮಹದೇವಸ್ವಾಮಿ (ದ್ವಿ), ಸಿಎಆರ್‍ನ ಕೆ.ಎಂ.ಮೂರ್ತಿ(ತೃ). 100 ಮೀ.ಓಟ: ನಜರ್‍ಬಾದ್‍ನ ಮಹದೇವಸ್ವಾಮಿ(ಪ್ರ), ಸಿಎಆರ್‍ನ ಕೆ.ಎಂ.ಮೂರ್ತಿ(ದ್ವಿ), ಸಿಸಿಐಬಿಯ ಅಶೋಕ್‍ಕುಮಾರ್(ತೃ). ಡಿಸ್ಕರ್ಸ್ ಥ್ರೋ: ಸಿಎಆರ್‍ನ ಅಶೋಕ ಕುಮಾರ್(ಪ್ರ), ಸಿಸಿಐಬಿಯ ಅಶೋಕ ಕುಮಾರ್(ದ್ವಿ), ಕೆ.ಆರ್.ವಿಭಾಗದ ಪ್ರಕಾಶ್(ತೃ).

ಉಪ ಪೊಲೀಸ್ ಆಯುಕ್ತರು ಮತ್ತು ಮೇಲ್ಪಟ್ಟ ಅಧಿಕಾರಿಗಳ ರಿವಾಲ್ವರ್ ಷೂಟಿಂಗ್ ಸ್ಪರ್ಧೆ: ನಗರ ಪೊಲೀಸ್ ಆಯುಕ್ತ ಡಾ.ಸುಬ್ರಹ್ಮಣ್ಯೇಶ್ವರ ರಾವ್(ಪ್ರ), ಸಿಎಆರ್ ಡಿಸಿಪಿ ಚನ್ನಯ್ಯ(ದ್ವಿ), ಕೆಎಆರ್‍ಪಿ ಮೌಂಟೆಡ್ ಕಂಪೆನಿ ಡೆಪ್ಯುಟಿ ಕಮಾಂಡೆಂಟ್ ಪ್ರವೀಣ್ ಆಳ್ವಾ(ತೃ). ಸಹಾಯಕ ಪೊಲೀಸ್ ಆಯುಕ್ತರ ರಿವಾಲ್ವರ್ ಷೂಟಿಂಗ್: ಸಿಎಆರ್ ಎಸಿಪಿ ನಾಗರಾಜು(ಪ್ರ), ದೇವರಾಜ ವಿಭಾಗದ ಎಸಿಪಿ ಜಿ.ಎಸ್. ಗಜೇಂದ್ರ ಪ್ರಸಾದ್(ದ್ವಿ), ಎನ್.ಆರ್.ವಿಭಾಗದ ಎಸಿಪಿ ಸಿ.ಗೋಪಾಲ್(ತೃ). ಪೊಲೀಸ್ ನಿರೀಕ್ಷಕರ ರಿವಾಲ್ವರ್ ಷೂಟಿಂಗ್: ಕುವೆಂಪುನಗರದ ಆರ್.ವಿಜಯ ಕುಮಾರ್(ಪ್ರ), ಸಿಎಆರ್‍ನ ಅಶೋಕ್‍ಕುಮಾರ್(ದ್ವಿ), ಕೆ.ಆರ್.ಟ್ರಾಫಿಕ್‍ನ ಡಿ.ಮಂಜುನಾಥ್(ತೃ).

ಸಹಾಯಕ ಉಪ ನಿರೀಕ್ಷಕರು ಮತ್ತು ಉಪ ನಿರೀಕ್ಷಕರ ರಿವಾಲ್ವರ್ ಷೂಟಿಂಗ್: ಸಿಎಆರ್‍ನ ಪಿ.ಸುರೇಶ್(ಪ್ರ), ಎನ್.ಆರ್.ಪಿ.ಎಸ್‍ನ ಎನ್. ಮೋಹನ್(ದ್ವಿ), ಸಿಎಆರ್‍ನ ಮನೋಗರನ್(ತೃ). ಹಿರಿಯ ಅಧಿಕಾರಿಗಳ ವಾಲಿಬಾಲ್ ಸ್ಪರ್ಧೆ: ಡಿಸಿಪಿ ವಿಕ್ರಂ ಅಮಟೆ, ಎಸಿಪಿ ವಿ.ಶೈಲೆಂದ್ರ, ದೇವರಾಜ ವಿಭಾಗದ ಪಿಐ ಪ್ರಸನ್ನ, ಆರ್‍ಪಿಐ ಕೆ.ಎಂ.ಮೂರ್ತಿ, ಕೆ.ಆರ್.ವಿಭಾಗದ ಪಿಎಸ್‍ಐ ಸುನೀಲ್(ಪ್ರ), ನಗರ ಪೊಲೀಸ್ ಆಯುಕ್ತ ಡಾ.ಸುಬ್ರಹ್ಮಣ್ಯೇಶ್ವರ ರಾವ್, ಕೆಎಆರ್‍ಪಿ ಮೌಂಟೆಡ್ ಕಂಪೆನಿ ಡೆಪ್ಯುಟಿ ಕಮಾಂಡೆಂಟ್ ಪ್ರವೀಣ್ ಆಳ್ವಾ, ಎಫ್‍ಪಿಬಿ ಎಸಿಪಿ ರಾಜಶೇಖರ, ದೇವರಾಜ ಎಸಿಪಿ ಗಜೇಂದ್ರ ಪ್ರಸಾದ್, ಎನ್‍ಆರ್ ವಿಭಾಗದ ಪಿಎಸ್‍ಐ ಮೋಹನ್, ವಿಜಯನಗರ ಪಿಎಸ್‍ಐ ರಾಮಚಂದ್ರ(ದ್ವಿ).

ಉಪ ಪೊಲೀಸ್ ಆಯುಕ್ತರು ಮತ್ತು ಮೇಲ್ಪಟ್ಟ ಅಧಿಕಾರಿಗಳ ಷಟಲ್ ಡಬಲ್ಸ್ ಬ್ಯಾಡ್ಮಿಂಟನ್: ನಗರ ಪೊಲೀಸ್ ಆಯುಕ್ತ ಡಾ.ಸುಬ್ರಹ್ಮಣ್ಯೇಶ್ವರ ರಾವ್, ಡಿಸಿಪಿ ವಿಕ್ರಂ ಅಮಟೆ(ಪ್ರ), ಡಿಸಿಪಿ ವಿಷ್ಣುವರ್ಧನ್, ಡೆಪ್ಯೂಟಿ ಕಮಾಂಡೆಂಟ್ ಪ್ರವೀಣ್ ಆಳ್ವಾ(ದ್ವಿ). ಸಹಾಯಕ ಪೊಲೀಸ್ ಆಯುಕ್ತರ ಷಟಲ್ ಬ್ಯಾಡ್ಮಿಂಟನ್ ಸಿಂಗಲ್ಸ್: ಎಫ್‍ಪಿಬಿಯ ರಾಜ ಶೇಖರ(ಪ್ರ), ಸಿಎಆರ್‍ನ ಹೆಚ್.ವಿ.ವೀರಣ್ಣ(ದ್ವಿ), ವಿ.ಶೈಲೇಂದ್ರ(ತೃ). ಷಟಲ್ ಬ್ಯಾಡ್ಮಿಂಟನ್ ಡಬಲ್ಸ್: ಎಫ್‍ಪಿಬಿ ಎಸಿಪಿ ರಾಜಶೇಖರ, ಕೆ.ಆರ್.ವಿಭಾಗದ ಎಸಿಪಿ ಧರ್ಮಪ್ಪ(ಪ್ರ), ಸಿಎಆರ್ ಎಸಿಪಿ ಹೆಚ್.ವಿ. ವೀರಣ್ಣ, ಟ್ರಾಫಿಕ್ ಎಸಿಪಿ ಮೋಹನ್(ದ್ವಿ), ದೇವ ರಾಜ ಎಸಿಪಿ ಗಜೇಂದ್ರ ಪ್ರಸಾದ್, ವಿ.ಶೈಲೇಂದ್ರ(ತೃ). ಆರಕ್ಷಕ ನಿರೀಕ್ಷಕರ ಷಟಲ್ ಬ್ಯಾಡ್ಮಿಂಟನ್ ಸಿಂಗಲ್ಸ್: ಆಲನಹಳ್ಳಿ ಠಾಣೆ ಪಿಐ ಮಂಜು(ಪ್ರ), ಸಿಸಿಬಿ ಪಿಐ ಜಗದೀಶ್(ದ್ವಿ), ಸಿಎಆರ್‍ನ ಕೆ.ಎಂ.ಮೂರ್ತಿ (ತೃ).

ಮಹಿಳೆಯರ ವಿಭಾಗ: 100 ಮೀ.ಓಟ: ಕೆ.ಆರ್.ವಿಭಾಗದ ಲಕ್ಷ್ಮಿ(ಪ್ರ), ಮಹಿಳಾ ವಿಭಾಗದ ರತ್ನಮ್ಮ(ದ್ವಿ), ಎನ್.ಆರ್.ವಿಭಾಗದ ಕೌಶಲ್ಯ(ತೃ). 200 ಮೀ.ಓಟ: ಎನ್.ಆರ್.ವಿಭಾಗದ ಕೆ.ಪಿ. ಉಷಾ(ಪ್ರ), ಕೆ.ಆರ್.ವಿಭಾಗದ ಲಕ್ಷ್ಮಿ(ದ್ವಿ), ಎನ್.ಆರ್.ವಿಭಾಗದ ಕೌಶಲ್ಯ(ತೃ). ಗುಂಡು ಎಸೆತ: ಎನ್.ಆರ್.ವಿಭಾಗದ ಉಷಾ(ಪ್ರ), ಸೀಮಾಬಾನು (ದ್ವಿ), ಮಹಿಳಾ ವಿಭಾಗದ ರತ್ನಮ್ಮ(ತೃ). ಉದ್ದ ಜಿಗಿತ: ಕೆ.ಆರ್.ವಿಭಾಗದ ಜ್ಯೋತಿ(ಪ್ರ), ಎನ್.ಆರ್. ವಿಭಾಗದ ಕೆ.ಪಿ.ಉಷಾ(ದ್ವಿ), ಮಹಿಳಾ ವಿಭಾಗದ ಜಿ.ಎನ್.ರತ್ನಮ್ಮ(ತೃ). ಜಾವಲಿನ್ ಥ್ರೋ: ದೇವರಾಜ ವಿಭಾಗದ ರತ್ನಮ್ಮ(ಪ್ರ), ಮಂಜುಳ(ದ್ವಿ), ಕವಿತ(ತೃ).

ಮುಖ್ಯಪೇದೆ ಹಾಗೂ ಪೇದೆಗಳ ರೈಫಲ್ ಷೂಟಿಂಗ್: ಹೆಬ್ಬಾಳ್ ಠಾಣೆಯ ಮಾನಸ(ಪ್ರ), ಸರಸ್ವತಿಪುರಂ ಠಾಣೆಯ ಜ್ಯೋತಿ(ದ್ವಿ), ವಿದ್ಯಾರಣ್ಯ ಪುರಂ ಠಾಣೆಯ ನಂದಿನಿ(ತೃ). ಡಿಸ್ಕರ್ಸ್ ಥ್ರೋ: ಎನ್.ಆರ್.ವಿಭಾಗದ ಕೆ.ಪಿ.ಉಷಾ(ಪ್ರ), ದೇವರಾಜ ವಿಭಾಗದ ಕೆ.ಪಿ.ಕವಿತಾ(ದ್ವಿ), ಎಸ್.ಎಸ್.ಮಂಜುಳಾ (ತೃ). 4*100 ಮೀ.ರಿಲೇ: ಕೆ.ಆರ್.ವಿಭಾಗದ ಲಕ್ಷ್ಮಿ, ಪುಣ್ಯಶ್ರೀ, ಜ್ಯೋತಿ, ಕೆ.ಪಿ.ಉಷಾ(ಪ್ರ), ದೇವರಾಜ ವಿಭಾಗದ ರತ್ನಮ್ಮ, ಶ್ವೇತ, ಶಿಲ್ಪ, ಮಾನಸ(ದ್ವಿ) ಬಹುಮಾನ ಪಡೆದುಕೊಂಡರು.
ಶನಿವಾರ ಸಂಜೆ ನಡೆದ ಕ್ರೀಡಾಕೂಟ ಸಮಾರೋಪ ಸಮಾರಂಭÀದಲ್ಲಿ ಕರ್ನಾಟಕ ಪೆÇಲೀಸ್ ಅಕಾಡೆಮಿ ನಿರ್ದೇಶಕ ವಿಪುಲ್‍ಕುಮಾರ್ ಅವರು ವಿಜೇತರಿಗೆ ಬಹುಮಾನ ವಿತರಿಸಿದರು. ಈ ವೇಳೆ ಪ್ರಿಯಾಂಕ ವಿಪುಲ್‍ಕುಮಾರ್, ನಗರ ಪೆÇಲೀಸ್ ಆಯುಕ್ತ ಡಾ.ಎ.ಸುಬ್ರಮಣ್ಯೇಶ್ವರ ರಾವ್, ಡಿಸಿಪಿಗಳಾದ ಎನ್.ವಿಷ್ಣುವರ್ಧನ್, ಡಾ.ವಿಕ್ರಂ ವಿ.ಅಮಟೆ, ಚೆನ್ನಯ್ಯ ಮತ್ತಿತರೆ ಅಧಿಕಾರಿಗಳು ಉಪಸ್ಥಿತರಿದ್ದರು.

Translate »