ಹಾಸನ

ಉದ್ಘಾಟನೆಗೂ ಮುನ್ನವೆ 3ನೇ ಬಾರಿ ಕುಸಿದ ರೈಲ್ವೆ ಸೇತುವೆ
ಹಾಸನ

ಉದ್ಘಾಟನೆಗೂ ಮುನ್ನವೆ 3ನೇ ಬಾರಿ ಕುಸಿದ ರೈಲ್ವೆ ಸೇತುವೆ

August 29, 2018

ಹೊಳೆನರಸೀಪುರ: ತಾಲೂಕಿನ ಹಂಗರ ಹಳ್ಳಿ ಬಳಿ ನಿರ್ಮಾಣವಾಗಿರುವ ರೈಲ್ವೆ ಮೇಲ್ಸೇ ತುವೆ ಉದ್ಘಾಟನೆಗೂ ಮುನ್ನವೇ ಪದೇ-ಪದೇ ಕುಸಿಯುತ್ತಿದ್ದು, ಕಾಮಗಾರಿಯ ಗುಣಮಟ್ಟದ ಬಗ್ಗೆ ಅನುಮಾನ ಮೂಡಿಸಿದೆ. ಹಾಸನ- ಮೈಸೂರು ರಾಜ್ಯ ಹೆದ್ದಾರಿಯಲ್ಲಿರುವ ಹಂಗರಹಳ್ಳಿ ಗ್ರಾಮದ ಬಳಿ ನಿರ್ಮಾಣವಾಗಿ ಅಂತಿಮ ಹಂತದಲ್ಲಿರುವ ರೈಲ್ವೆ ಮೇಲ್ಸೇತುವೆಯು ಈಗಾಗಲೇ 3 ಬಾರಿ ಕುಸಿದಿದ್ದು, ಸುತ್ತಲಿನ ಗ್ರಾಮ ಸ್ಥರು ಹಾಗೂ ಸೇತುವೆ ಸಮೀಪ ಸಂಚರಿಸುವ ವಾಹನ ಸವಾರರಲ್ಲಿ ಆತಂಕ ಮೂಡಿಸಿದೆ. ಸೇತುವೆ ನಿರ್ಮಾಣ ಕಾಮಗಾರಿ ಸಂಪೂರ್ಣ ಕಳಪೆಯಾಗಿದ್ದು, ಕೋಟ್ಯಾಂತರ ರೂ. ಅನುದಾನ ವ್ಯರ್ಥವಾಗಿದೆ. ಹಾಸನ…

ಕ್ರೀಡಾಪಟುಗಳಿಗೆ ಪ್ರೋತ್ಸಾಹ ನೀಡಲು ಸಲಹೆ
ಹಾಸನ

ಕ್ರೀಡಾಪಟುಗಳಿಗೆ ಪ್ರೋತ್ಸಾಹ ನೀಡಲು ಸಲಹೆ

August 29, 2018

ಬೇಲೂರು: ಕ್ರೀಡಾಪಟುಗಳಿಗೆ ಪ್ರೋತ್ಸಾಹ ನೀಡುವ ಮೂಲಕ ಅವರಲ್ಲಿ ಆತ್ಮ ವಿಶ್ವಾಸ ತುಂಬುವ ಕೆಲಸವನ್ನು ಮಾಡಬೇಕು ಎಂದು ಶಾಸಕ ಕೆ.ಎಸ್.ಲಿಂಗೇಶ್ ಹೇಳಿದರು. ಇಲ್ಲಿನ ಪದವಿಪೂರ್ಣ ಶಿಕ್ಷಣ ಇಲಾಖೆ ಹಾಗೂ ಬಾಲಕಿಯರ ಪದವಿಪೂರ್ವ ಕಾಲೇಜಿನಿಂದ ಮಂಗಳವಾರ ನಡೆದ ತಾಲೂಕು ಮಟ್ಟದ ಕ್ರೀಡಾಕೂಟವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಇತ್ತೀಚಿನ ದಿನಗಳಲ್ಲಿ ಭಾರತ ಕ್ರೀಡಾ ವಿಭಾಗದಲ್ಲಿ ಉತ್ತಮ ಸಾಧನೆ ತೋರುವಲ್ಲಿ ವಿಫಲವಾಗಿದೆ. ದೇಶದಲ್ಲಿ 130 ಕೋಟಿ ಜನಸಂಖ್ಯೆ ಇದ್ದರೂ. ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡಲು ಸಾಧ್ಯವಾಗುತ್ತಿಲ್ಲ. ಈ ನಿಟ್ಟಿನಲ್ಲಿ ಕ್ರೀಡಾಪಟುಗಳಿಗೆ ಪ್ರಾಥಮಿಕ ಹಂತದಿಂದಲೇ…

ಸಂಕಷ್ಟದಲಿರುವ ಪ್ರವಾಹ ಪೀಡಿತ ಪ್ರದೇಶದವರಿಗೆ ನೆರವಾಗಿ: ಬಿಜೆಪಿ ವಿರುದ್ಧ ಸಚಿವ ಹೆಚ್.ಡಿ. ರೇವಣ್ಣ ಆಕ್ರೋಶ
ಹಾಸನ

ಸಂಕಷ್ಟದಲಿರುವ ಪ್ರವಾಹ ಪೀಡಿತ ಪ್ರದೇಶದವರಿಗೆ ನೆರವಾಗಿ: ಬಿಜೆಪಿ ವಿರುದ್ಧ ಸಚಿವ ಹೆಚ್.ಡಿ. ರೇವಣ್ಣ ಆಕ್ರೋಶ

August 29, 2018

ಹಾಸನ:  ಬಾರಿ ಮಳೆಯಿಂದ ಪ್ರವಾಹ ಪೀಡಿತರಾಗಿ ಸಂಕಷ್ಟದಲ್ಲಿರುವವರಿಗೆ ನೆರವಾಗಿ ಅದನ್ನು ಬಿಟ್ಟು ಕೇವಲ ಟೀಕೆ ಟಿಪ್ಪಣಿಗಳನ್ನು ಮಾಡುತ್ತಿರುವುದು ಸರಿಯಲ್ಲ ಎಂದು ಬಿಜೆಪಿ ವಿರುದ್ಧ ಲೋಕೋಪಯೋಗಿ ಇಲಾಖೆ ಸಚಿವ ಹೆಚ್.ಡಿ.ರೇವಣ್ಣ ಆಕ್ರೋಶ ವ್ಯಕ್ತಪಡಿಸಿದರು. ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾವೇರಿ ಪ್ರವಾಹದಿಂದ ಹಾಸನ, ಕೊಡಗು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಅಂದಾಜು 2 ಸಾವಿರ ಕೋಟಿ ರೂ.ಗಳ ಮನೆ, ಆಸ್ತಿ ಇತರೆ ನಷ್ಟವಾಗಿದೆ. ಬಹುತೇಕ ರಸ್ತೆಗಳು ಹಾಳಾಗಿದೆ. ಅಂದಾಜು 450 ಕೋಟಿ ರೂ. ಕೊಡಗಿನ ರಸ್ತೆ ಇಲ್ಲ. ಜಿಪಂ,…

ರಾಯರ ಆರಾಧನಾ ಮಹೋತ್ಸವದ ಸಂಭ್ರಮ
ಹಾಸನ

ರಾಯರ ಆರಾಧನಾ ಮಹೋತ್ಸವದ ಸಂಭ್ರಮ

August 29, 2018

ಬೇಲೂರು:  ಪಟ್ಟಣದ ಕೋಟೆ ಶ್ರೀ ಉತ್ತರಾಧಿಮಠದಲ್ಲಿ ಗುರುಸಾರ್ವಭೌಮ ರಾಘವೇಂದ್ರಸ್ವಾಮಿ ಅವರ 347ನೇ ಆರಾಧನಾ ಮಹೋತ್ಸವ ಸಡಗರ ಸಂಭ್ರಮದಿಂದ ಜರುಗಿತು. ಪ್ರತಿ ವರ್ಷದಂತೆ ಶ್ರೀಮಠದಲ್ಲಿ ಅನುಕ್ರಮವಾಗಿ ಪೂರ್ವಾರಾಧನೆ, ಮಧ್ಯಾರಾಧನೆ ನಂತರ ಉತ್ತರಾರಾಧನೆಯನ್ನು ಆಚರಿಸಿಕೊಂಡು ಬರಲಾಗುತ್ತಿದೆ. ಸೋಮವಾರದಿಂದ ಪೂಜಾ ವಿಧಿವಿಧಾನಗಳು ಆರಂಭಗೊಂಡಿದ್ದು, ಬೆಳಿಗ್ಗೆ ಸುಪ್ರಭಾತ, ನಿರ್ಮಾಲ್ಯ, ಫಲಾಮೃತ ಅಭಿಷೇಕ, ಪುಷ್ಪಾಲಂಕಾರ, ಮಧ್ಯಾಹ್ನ 12 ರಿಂದ ಪಂಡಿತರಿಂದ ಪ್ರವಚನ ಕಾರ್ಯಕ್ರಮ, ನೈವೇದ್ಯ, ಹಸ್ತೋದಕ, ಸಂಜೆ ತಾರತಮ್ಯೋಕ್ತ, ಭಜನೆ, ಭಕ್ತಿಗೀತೆ, ಸ್ವಸ್ತಿವಾಚನ, ರಥೋತ್ಸವ, ಡೋಲೋತ್ಸವ ಮತ್ತು ಮಹಾಮಂಗಳಾರತಿ ಇತರೆ ಧಾರ್ಮಿಕ ಕಾರ್ಯಕ್ರಮಗಳು ನಡೆಯಿತು….

ಕ್ರೀಡೆಯಿಂದ ಸರ್ವತೋಮುಖ ಅಭಿವೃದ್ಧಿ ಸಾಧ್ಯ
ಹಾಸನ

ಕ್ರೀಡೆಯಿಂದ ಸರ್ವತೋಮುಖ ಅಭಿವೃದ್ಧಿ ಸಾಧ್ಯ

August 29, 2018

ಅರಸೀಕೆರೆ: ವಿದ್ಯಾರ್ಥಿಗಳು ಪಠ್ಯದ ಜೊತೆಗೆ ಗ್ರಾಮೀಣ ಕ್ರೀಡೆಗಳತ್ತ ಹೆಚ್ಚಿನ ಆಸಕ್ತಿ ಬೆಳೆಸಿಕೊಳ್ಳಬೇಕು. ಕ್ರೀಡೆಗಳು ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಗೆ ಸಹಕಾರಿಯಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಮೋಹನ್‍ಕುಮಾರ್ ಹೇಳಿದರು. ಪಟ್ಟಣದ ತಾಲೂಕು ಕ್ರೀಡಾಂಗಣದಲ್ಲಿ ಶಿಕ್ಷಣ ಇಲಾಖೆ ಮತ್ತು ಸರ್ಕಾರಿ ಪ್ರೌಢ ಶಾಲೆಯಿಂದ ನಡೆದ ಕಸಬಾ-1 ವ್ಯಾಪ್ತಿಯ ಪ್ರೌಢಶಾಲಾ ಕ್ರೀಡಾಕೂಟ ಸಮಾರಂಭದಲ್ಲಿ ಕ್ರೀಡಾ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು. ವಿದ್ಯಾರ್ಥಿಗಳು ವಿದ್ಯಾಭ್ಯಾಸದ ಜೊತೆಗೆ ಕ್ರೀಡಾ ಚಟುವಟಿಕೆಯಲ್ಲಿಯೂ ಹೆಚ್ಚಿನ ಆಸಕ್ತಿಯನ್ನು ವಹಿಸಬೇಕು. ಅವರಿಗೆ ಪೋಷಕರು ಹಾಗೂ ಶಿಕ್ಷಕರು ಪ್ರೋತ್ಸಾಹ ನೀಡಬೇಕು. ಇಂದಿನ ಕ್ರೀಡಾಕೂಟದಲ್ಲಿ…

ಕೊಡಗಿಗೆ ಸೂಕ್ತ ಪರಿಹಾರ ಘೋಷಿಸಲು ಆಗ್ರಹ
ಹಾಸನ

ಕೊಡಗಿಗೆ ಸೂಕ್ತ ಪರಿಹಾರ ಘೋಷಿಸಲು ಆಗ್ರಹ

August 29, 2018

ಹಾಸನ: ಬೆಳೆಗಳ ನಾಶದಿಂದ ಮಲೆನಾಡು ಜನರು ಸಂಕಷ್ಟದಲ್ಲಿ ಇದ್ದು, ಕೂಡಲೇ ಸರ್ಕಾರ ಧಾವಿಸಿ ಸೂಕ್ತ ಪರಿಹಾರ ಘೋಷಣೆ ಮಾಡಬೇಕು ಎಂದು ಕಾಫಿ ಬೆಳೆಗಾರರ ಒಕ್ಕೂಟದ ಮಾಜಿ ಅಧ್ಯಕ್ಷ ಬಿ.ಎ.ಜಗನ್ನಾಥ್ ಆಗ್ರಹಿಸಿದರು. ನಗರದಲ್ಲಿ ಮಂಗಳವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಮೂರು ವರ್ಷಗಳಿಂದ ಮಳೆಯ ಕೊರತೆಯಿಂದಾಗಿ ಕಾಫಿ ಮತ್ತು ಮೆಣಸು ಬೆಳೆ ಹಂತ-ಹಂತವಾಗಿ ನಾಶವಾಗಿತ್ತು. ಈ ವರ್ಷ ಶತಮಾನದ ಅತ್ಯಂತ ಹೆಚ್ಚಿನ ಮಳೆಯಿಂದಾಗಿ ಎರಡೂ ಬೆಳೆಗಳು ಸಂಪೂರ್ಣ ನಾಶದತ್ತ ಸಾಗಿವೆ ಎಂದು ಆತಂಕ ವ್ಯಕ್ತಪಡಿಸಿದರು. ಕಾಫಿ ಬೆಲೆ…

ನೆರೆಯಿಂದ ಅಂದಾಜು 73 ಕೋಟಿ ನಷ್ಟ: ಶಾಸಕ ಡಾ.ಎ.ಟಿ.ರಾಮಸ್ವಾಮಿ
ಹಾಸನ

ನೆರೆಯಿಂದ ಅಂದಾಜು 73 ಕೋಟಿ ನಷ್ಟ: ಶಾಸಕ ಡಾ.ಎ.ಟಿ.ರಾಮಸ್ವಾಮಿ

August 29, 2018

ಕೇಂದ್ರದಲ್ಲಿ ದಾಸ್ತಾನಿರುವ ಸಾಮಗ್ರಿಯನ್ನು ಸಂತ್ರಸ್ತರ ಮನೆಗೆ ತಲುಪಿಸಲು ಸೂಚನೆ ಕೂಟವಾಳು ಗ್ರಾಮದಲ್ಲಿ ಸಂತ್ರಸ್ತರಿಗೆ ವಸತಿ ಸೌಲಭ್ಯ ಕಲ್ಪಿಸಲು ಕ್ರಮ ರಾಮನಾಥಪುರ: ಕಾವೇರಿ ನದಿ ಪ್ರವಾಹದಿಂದ ಹಾನಿಗೊಳಗಾಗಿದ್ದ ಇಲ್ಲಿನ ಐ.ಬಿ.ಸರ್ಕಲ್ ಮತ್ತು ತಗ್ಗು ಪ್ರದೇಶದ ಜನರಿಗೆ ರಾಜ್ಯದ ವಿವಿಧೆಡೆ ಯಿಂದ ಜನರು ನೀಡಿದ ಆಹಾರ ಸಾಮಗ್ರಿ ಗಳನ್ನು ಸಂತ್ರಸ್ತರಿಗೆ ನೀಡಲಾಗಿತ್ತು. ಪ್ರಸ್ತುತ ಪ್ರವಾಹ ಕಡಿಮೆಯಾಗಿದ್ದು, ಜನರು ನಿರಾಶ್ರಿತ ಕೇಂದ್ರದಿಂದ ತಮ್ಮ-ತಮ್ಮ ಮನೆ ಗಳಿಗೆ ಹೋಗುತ್ತಿದ್ದಾರೆ. ಆದರೆ, ಸಂತ್ರಸ್ತರಿಗೆ ನೀಡಿದ ಸಾಮಗ್ರಿಗಳು ನಿರಾಶಿತ್ರರ ಕೇಂದ್ರ ದಲ್ಲಿ ಇನ್ನೂ ಉಳಿದಿದ್ದು, ಅವುಗಳನ್ನು…

ವಿಜೃಂಭಣೆಯ ರಾಯರ ಆರಾಧನಾ ಮಹೋತ್ಸವ
ಹಾಸನ

ವಿಜೃಂಭಣೆಯ ರಾಯರ ಆರಾಧನಾ ಮಹೋತ್ಸವ

August 28, 2018

ರಾಯರ ದರ್ಶನ ಪಡೆದ ಸಾವಿರಾರು ಭಕ್ತರು, ಮಠದಿಂದ ಭಕ್ತರಿಗೆ ಅನ್ನ ಸಂರ್ತಪಣೆ, ಪ್ರಸಾದ ವಿನಿಯೋಗ ಯಳಂದೂರು: ಶ್ರೀ ಗುರು ರಾಘವೇಂದ್ರ ಸಾರ್ವಭೌಮರ 347ನೇ ಆರಾಧನಾ ಮಹೋತ್ಸವ ಅಂಗವಾಗಿ ಪಟ್ಟಣದಲ್ಲಿ ಶ್ರೀ ರಾಘವೇಂದ್ರ ಸ್ವಾಮಿ ಬೃಂದವನಕ್ಕೆ ವಿಶೇಷ ಪೂಜೆ ವಿಭೃಂಜನೆಯಿಂದ ನಡೆಯಿತು. ಪಟ್ಟಣದ ಶ್ರೀವ್ಯಾಸರಾಜ ಮಠದಲ್ಲಿ (ಸೋಸಲೆ ಶಾಖೆ) ಸೋಮವಾರ ಶ್ರೀ ರಾಘವೇಂದ್ರಸ್ವಾಮಿ ಅವರ ಆರಾಧನ ಮಹೋತ್ಸವ 3 ದಿನಗಳ ಕಾಲ ವಿಶೇಷ ಪೂಜೆ, ಅಭಿಷೇಕಗಳನ್ನು ಏರ್ಪಡಿಸಲಾಗಿದ್ದು, ರಾಯರ ಮಠಕ್ಕೆ ಸಾವಿರಾರು ಸಂಖ್ಯೆ ಯಲ್ಲಿ ಭಕ್ತರು ಭೇಟಿ ನೀಡಿ…

ಅತಿವೃಷ್ಟಿ ಸಂತ್ರಸ್ತರಿಗೆ ಸೂಕ್ತ ಪರಿಹಾರ ಕಲ್ಪಿಸಿ:ಹೆಚ್‍ಡಿಡಿ
ಹಾಸನ

ಅತಿವೃಷ್ಟಿ ಸಂತ್ರಸ್ತರಿಗೆ ಸೂಕ್ತ ಪರಿಹಾರ ಕಲ್ಪಿಸಿ:ಹೆಚ್‍ಡಿಡಿ

August 28, 2018

ಹಾಸನ: ಜಿಲ್ಲೆಯ ಸಕಲೇಶಪುರ ಸೇರಿದಂತೆ ವಿವಿಧ ತಾಲೂಕುಗಳಲ್ಲಿ ಅತಿವೃಷ್ಟಿಯಿಂದ ಉಂಟಾಗಿರುವ ನಷ್ಟವನ್ನು ನಿಖರವಾಗಿ ಅಂದಾಜಿಸಿ, ಸಂತ್ರಸ್ತರಿಗೆ ಸೂಕ್ತ ಹೆಚ್ಚಿನ ಪರಿಹಾರ ಕಲ್ಪಿಸುವಂತೆ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಜಿಲ್ಲಾಧಿಕಾರಿ ಕಚೇರಿಯಲ್ಲಿಂದು ಅಧಿ ಕಾರಿಗಳ ಸಭೆ ನಡೆಸಿದ ಅವರು, ಸಕಲೇಶಪುರ ಹಾಗೂ ಅರಕಲಗೂಡು ತಾಲೂಕುಗಳಲ್ಲಿ ಮಳೆ, ಪ್ರವಾಹದಿಂದ ಹೆಚ್ಚು ಹಾನಿ ಯಾಗಿದ್ದು, ಎಲ್ಲಾ ಸಂತ್ರಸ್ತರಿಗೂ ಸೂಕ್ತ ರೀತಿ ಯಲ್ಲಿ ಪರಿಹಾರ ದೊರೆಯಬೇಕು ಎಂದರು. ಸಕಲೇಶಪುರ ತಾಲೂಕಿನ ಯಸಳೂರು, ಹೆತ್ತೂರು ಹೊಬಳಿಗಳಲ್ಲಿ ಅಪಾರ ಪ್ರಮಾ ಣದ ಭೂಮಿ, ಬೆಳೆ,…

ಮೈತ್ರಿ ಸರ್ಕಾರ ಉರುಳಿದರೆ ಅದಕ್ಕೆ ರೇವಣ್ಣ ಕಾರಣ
ಹಾಸನ

ಮೈತ್ರಿ ಸರ್ಕಾರ ಉರುಳಿದರೆ ಅದಕ್ಕೆ ರೇವಣ್ಣ ಕಾರಣ

August 28, 2018

ಹಾಸನ:  ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಉರುಳಿದರೆ ಅದಕ್ಕೆ ನಿಮ್ಮ ಅಣ್ಣನೇ ಕಾರಣ ಎಂದು ಸಿಎಂ ಹೆಚ್.ಡಿ. ಕುಮಾರಸ್ವಾಮಿ ಅವರಿಗೆ ಮಾಜಿ ಸಚಿವ ಎ.ಮಂಜು ಎಚ್ಚರಿಸಿದ್ದಾರೆ. ಸಕಲೇಶಪುರದ ಬಿಸಿಲೆ ಗ್ರಾಮಕ್ಕೆ ಭೇಟಿ ನೀಡಿದ್ದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಳೇ ಮೈಸೂರು ಭಾಗದಲ್ಲಿ ಕಾಂಗ್ರೆಸ್ ಬಲಹೀನವಾಗುತ್ತಿದೆ. ಅದಕ್ಕೆ ಜೆಡಿಎಸ್ ದ್ವೇಷದ ರಾಜಕಾರಣವೇ ಕಾರಣ. ಮುಖ್ಯಮಂತ್ರಿ ಹೆಚ್.ಡಿ ಕುಮಾರ ಸ್ವಾಮಿ ಅವರಿಗೆ ಬಹಿರಂಗ ಎಚ್ಚರಿಕೆ ಕೊಡುತ್ತಿದ್ದೇನೆ. ಹೆಚ್.ಡಿ.ರೇವಣ್ಣ ಅವರಿಗೆ ಕಿವಿಮಾತು ಹೇಳಬೇಕು. ನಾವು ಇನ್ನೂ ದ್ವೇಷದ ರಾಜಕಾರಣ ಸಹಿಸಲು ಸಾಧ್ಯವಿಲ್ಲ…

1 95 96 97 98 99 133
Translate »