ಕೊಡಗಿಗೆ ಸೂಕ್ತ ಪರಿಹಾರ ಘೋಷಿಸಲು ಆಗ್ರಹ
ಹಾಸನ

ಕೊಡಗಿಗೆ ಸೂಕ್ತ ಪರಿಹಾರ ಘೋಷಿಸಲು ಆಗ್ರಹ

August 29, 2018

ಹಾಸನ: ಬೆಳೆಗಳ ನಾಶದಿಂದ ಮಲೆನಾಡು ಜನರು ಸಂಕಷ್ಟದಲ್ಲಿ ಇದ್ದು, ಕೂಡಲೇ ಸರ್ಕಾರ ಧಾವಿಸಿ ಸೂಕ್ತ ಪರಿಹಾರ ಘೋಷಣೆ ಮಾಡಬೇಕು ಎಂದು ಕಾಫಿ ಬೆಳೆಗಾರರ ಒಕ್ಕೂಟದ ಮಾಜಿ ಅಧ್ಯಕ್ಷ ಬಿ.ಎ.ಜಗನ್ನಾಥ್ ಆಗ್ರಹಿಸಿದರು.

ನಗರದಲ್ಲಿ ಮಂಗಳವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಮೂರು ವರ್ಷಗಳಿಂದ ಮಳೆಯ ಕೊರತೆಯಿಂದಾಗಿ ಕಾಫಿ ಮತ್ತು ಮೆಣಸು ಬೆಳೆ ಹಂತ-ಹಂತವಾಗಿ ನಾಶವಾಗಿತ್ತು. ಈ ವರ್ಷ ಶತಮಾನದ ಅತ್ಯಂತ ಹೆಚ್ಚಿನ ಮಳೆಯಿಂದಾಗಿ ಎರಡೂ ಬೆಳೆಗಳು ಸಂಪೂರ್ಣ ನಾಶದತ್ತ ಸಾಗಿವೆ ಎಂದು ಆತಂಕ ವ್ಯಕ್ತಪಡಿಸಿದರು.

ಕಾಫಿ ಬೆಲೆ ಕುಸಿದಾಗ ಕರಿಮೆಣಸು ಉತ್ತಮ ಬೆಲೆಯಿಂದಾಗಿ ಬೆಳೆಗಾರರು ಚೇತರಿಸಿಕೊಳ್ಳುತ್ತಿರುವಾಗ ಕರಿಮೆಣಸಿನ ಬೆಲೆ ಅರ್ಧದಷ್ಟು ಇಳಿದು ಹೋಗಿದೆ. ಕಳಪೆ ಮೆಣಸು ಅನಧಿಕೃತವಾಗಿ ವಿಯಾಟ್ನಾದಿಂದ ಭಾರಕ್ಕೆ ಆಮದಾಗುತ್ತ್ತಿದೆ. ಕಳೆದ 8 ತಿಂಗಳಿಂದಲೂ ಕೇಂದ್ರ ಸರ್ಕಾರದ ಮಧ್ಯ ಪ್ರವೇಶಕ್ಕಾಗಿ ಮನವಿ ಮಾಡುತ್ತಿದ್ದರೂ ಪ್ರಯೋಜನವಾಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಪ್ರಕೃತಿ ವಿಕೋಪದಿಂದ ಕೊಡಗು ಸಂಪೂರ್ಣ ಹಾನಿಗೊಳಗಾಗಿದೆ. ಸಕಲೇಶಪುರ ಹೆತ್ತೂರು, ಯಸಳೂರು ಮತ್ತು ಹಾನುಬಾಳು ಹೋಬಳಿಯಲ್ಲೂ ತೀವ್ರವಾದ ಹಾನಿಯಾಗಿದೆ. ಕೂಡಲೇ ಕೇಂದ್ರ ಸರ್ಕಾರ ವಿಶೇಷ ಪ್ಯಾಕೇಜ್ ನೀಡುವ ಮೂಲಕ ರೈತರಿಗೆ ನೆರವಾಗಬೇಕು ಎಂದು ಮನವಿ ಮಾಡಿದರು.

ಸುದ್ದಿಗೋಷ್ಠಿಯಲ್ಲಿ ಸಂಘದ ಪ್ರಕಾಶ್, ಕೃಷ್ಣಪ್ಪ, ಗಿರೀಶ್ ಉಪಸ್ಥಿತರಿದ್ದರು.

Translate »