ನೆರೆಯಿಂದ ಅಂದಾಜು 73 ಕೋಟಿ ನಷ್ಟ: ಶಾಸಕ ಡಾ.ಎ.ಟಿ.ರಾಮಸ್ವಾಮಿ
ಹಾಸನ

ನೆರೆಯಿಂದ ಅಂದಾಜು 73 ಕೋಟಿ ನಷ್ಟ: ಶಾಸಕ ಡಾ.ಎ.ಟಿ.ರಾಮಸ್ವಾಮಿ

August 29, 2018
  • ಕೇಂದ್ರದಲ್ಲಿ ದಾಸ್ತಾನಿರುವ ಸಾಮಗ್ರಿಯನ್ನು ಸಂತ್ರಸ್ತರ ಮನೆಗೆ ತಲುಪಿಸಲು ಸೂಚನೆ
  • ಕೂಟವಾಳು ಗ್ರಾಮದಲ್ಲಿ ಸಂತ್ರಸ್ತರಿಗೆ ವಸತಿ ಸೌಲಭ್ಯ ಕಲ್ಪಿಸಲು ಕ್ರಮ

ರಾಮನಾಥಪುರ: ಕಾವೇರಿ ನದಿ ಪ್ರವಾಹದಿಂದ ಹಾನಿಗೊಳಗಾಗಿದ್ದ ಇಲ್ಲಿನ ಐ.ಬಿ.ಸರ್ಕಲ್ ಮತ್ತು ತಗ್ಗು ಪ್ರದೇಶದ ಜನರಿಗೆ ರಾಜ್ಯದ ವಿವಿಧೆಡೆ ಯಿಂದ ಜನರು ನೀಡಿದ ಆಹಾರ ಸಾಮಗ್ರಿ ಗಳನ್ನು ಸಂತ್ರಸ್ತರಿಗೆ ನೀಡಲಾಗಿತ್ತು. ಪ್ರಸ್ತುತ ಪ್ರವಾಹ ಕಡಿಮೆಯಾಗಿದ್ದು, ಜನರು ನಿರಾಶ್ರಿತ ಕೇಂದ್ರದಿಂದ ತಮ್ಮ-ತಮ್ಮ ಮನೆ ಗಳಿಗೆ ಹೋಗುತ್ತಿದ್ದಾರೆ. ಆದರೆ, ಸಂತ್ರಸ್ತರಿಗೆ ನೀಡಿದ ಸಾಮಗ್ರಿಗಳು ನಿರಾಶಿತ್ರರ ಕೇಂದ್ರ ದಲ್ಲಿ ಇನ್ನೂ ಉಳಿದಿದ್ದು, ಅವುಗಳನ್ನು ಸಂತ್ರಸ್ತರ ಮನೆಗಳಿಗೆ ತಲುಪಿಸಬೇಕು ಎಂದು ಅಧಿಕಾರಿಗಳಿಗೆ ಶಾಸಕ ಡಾ.ಎ.ಟಿ. ರಾಮಸ್ವಾಮಿ ಸೂಚನೆ ನೀಡಿದರು.

ಇಲ್ಲಿನ ಹಿರಿಯ ಪ್ರಾಥಮಿಕ ಶಾಲೆಯ ನಿರಾಶ್ರಿತರ ಕೇಂದ್ರಕ್ಕೆ ಶಾಸಕ ಡಾ.ಎ.ಟಿ. ರಾಮಸ್ವಾಮಿ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಪರಿಶೀಲಿಸಿದ ಬಳಿಕ ಅವರು ಮಾತ ನಾಡಿದರು. ಈ ಹಿಂದೆ ನಾನು ಶಾಸಕನಾಗಿ ದ್ದಾಗ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೂಟ ವಾಳು ಗ್ರಾಮದ ಸರ್ವೇ ನಂ. 12ರಲ್ಲಿ ನಿವೇಶನ ರಹಿತರಿಗೆ 6 ಎಕರೆ ಪ್ರದೇಶದಲ್ಲಿ ಜಾಗ ಕಾಯ್ದಿರಿಸಲಾಗಿತ್ತು. ಇದನ್ನು ರಾಮ ನಾಥಪುರದಲ್ಲಿ ನೆರೆ ಹಾವಳಿಯಿಂದ ತುತ್ತಾಗಿ ಮನೆ ಕಳೆದುಕೊಂಡವರಿಗೆ ಮತ್ತು ವಸತಿ ರಹಿತರಿಗೆ ನೀಡಿ ಆಶ್ರಯ ಯೋಜನೆ ಯಡಿ ಮನೆ ಮಂಜೂರು ಮಾಡಲು ಕ್ರಮ ಕೈಗೊಳ್ಳಬೇಕು ಎಂದು ತಾಲೂಕು ಆಡಳಿತ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ತಿಳಿಸಿದರು.

ನೆರೆ ಹಾವಳಿಯಿಂದ ಅಪಾರ ಪ್ರಮಾಣದ ಹಾನಿ ಉಂಟಾಗಿದ್ದು, 73 ಕೋಟಿ ನಷ್ಟವಾ ಗಿದೆ ಎಂದು ಅಂದಾಜಿಸಲಾಗಿದೆ. ಪರಿಹಾರ ಮೊತ್ತವನ್ನು ಶೀಘ್ರವಾಗಿ ಬಿಡುಗಡೆ ಮಾಡು ವಂತೆ ಸರ್ಕಾರಕ್ಕೆ ಒತ್ತಾಯಿಸಲಾಗಿದೆ ಎಂದರು.

ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ವಿಜಯಕುಮಾರ್ ಮತ್ತು ನಾಡಕಚೇರಿ ರಾಜಸ್ವ ನೀರೀಕ್ಷಕ ಸ್ವಾಮಿ ಮಾತನಾಡಿ, ದೇಣಿಗೆ ರೂಪದಲ್ಲಿ ಬಂದಂತಹ ಸಾಮಗ್ರಿ ಗಳನ್ನು ಪ್ರತಿ ಮನೆ-ಮನೆಗೆ ತಲುಪಿಸ ಲಾಗುತ್ತಿದೆ. ಮನೆ ಕಳೆದುಕೊಂಡಿರುವ ನಿರಾಶ್ರಿತರು ಮತ್ತು ಯಾತ್ರಿ ನಿವಾಸದಲ್ಲಿ ವಾಸವಿರುವ ಸ್ಥಳಿಯರಾದ ಸರಸ್ವತಿ, ಪಾರ್ವತಮ್ಮ, ಗಾಯತ್ರಿ, ಕಲ್ಯಾಣಮ್ಮ, ಜಯಮ್ಮ, ಗೌರಮ್ಮ, ರಾಜಮ್ಮ ಸುವರ್ಣಮ್ಮ, ನಿಂಗೇಗೌಡ, ಮರಿಯಮ್ಮ, ರೀಯಾಜ್, ಲಕ್ಷ್ಮಮ್ಮ, ನಾಗಲಕ್ಷ್ಮಿ ಕೃಷ್ಣ ನಾಯಕ, ಕುಮಾರ್, ನಂಜಯ್ಯ, ರತ್ನಮ್ಮ, ಕೃಷ್ಣಪ್ಪ ಮುಂತಾದವರ ಮನೆಗಳ ಕುಟುಂಬ ಗಳಿಗೆ ಆಹಾರ ಸಾಮಗ್ರಿಗಳನ್ನು ನೀಡ ಲಾಗಿದೆ ಎಂದು ತಿಳಿಸಿದರು.

ಬದುಕು ಬೀದಿಪಾಲು: ಕಾವೇರಿ ನದಿ ಪ್ರವಾಹದಿಂದ ಮನೆ ಕಳೆದುಕೊಂಡ ನಿರಾಶ್ರಿತ ರೀಯಾಜ್ ಮಾತನಾಡಿ, ಮನೆಯೊಳಗೆ ಕಾಲಿಟ್ಟರೆ ದುರ್ವಾಸನೆ, ಚೆಲ್ಲಾ ಪಿಲ್ಲಿಯಾಗಿರುವ ವಸ್ತುಗಳು, ಕೊಳೆತು ನಾರುತ್ತಿರುವ ದÀವಸ-ಧಾನ್ಯಗಳು, ಕುಸಿದು ಬೀಳುವ ಸ್ಥಿತಿಯಲ್ಲಿರುವ ಗೋಡೆ ಇವು ಗಳನ್ನು ನೋಡಿ ಮುಂದೆ ಏನು ಮಾಡ ಬೇಕು ಎಂದು ದಿಕ್ಕೇತೋಚದಂತಾಗಿದೆ ಎಂದು ಸಂಕಷ್ಟ ಹೇಳಿಕೊಂಡರು.

ಪ್ರವಾಹ ಪೂರ್ತಿಯಾಗಿ ತಗ್ಗಿದ್ದು, ಜಲಾ ವೃತಗೊಂಡಿದ್ದ ಮನೆಗಳಲ್ಲಿ ನೀರು ಇಳಿಮುಖವಾಗಿದ್ದರೂ ಮನೆಯಂಗಳ ದಲ್ಲಿ ಮತ್ತು ರಸ್ತೆಗಳಲ್ಲಿದ್ದ ಕೊಳಚೆ ನೀರು ಹಾಗೇ ಉಳಿದು ಗಬ್ಬು ನಾರುತ್ತಿದೆ. ಅಂತಹ ಸ್ಥಳಗಳನ್ನು ಸ್ವಚ್ಛತೆ ಮಾಡಿ, ಮುಳುಗಡೆ ಯಾದ ಪ್ರದೇಶ ವ್ಯಾಪ್ತಿಗೆ ಬ್ಲೀಚಿಂಗ್ ಪೌಡರ್ ಹಾಕಿರುವ ತಾಲೂಕು ಆಡಳಿತದವರು ಅರಕಲಗೂಡು, ಕೊಣ ನೂರು ಮತ್ತು ರಾಮನಾಥಪುರದ ಗ್ರಾಮ ಪಂಚಾಯಿತಿಯ ಕಾರ್ಮಿಕರನ್ನು ಕರೆಸಿ ಎಲ್ಲಾ ಕಡೆ ಸ್ವಚ್ಛತೆ ಮಾಡಿಸುತ್ತಿದ್ದಾರೆ. ಆದರೆ, ಬಿರುಕು ಬಿಟ್ಟ ಮನೆಯಲ್ಲಿ ಹೇಗೆ ವಾಸ ಮಾಡುವುದು ಎಂಬ ಆತಂಕ ಉಂಟಾಗಿದೆ ಎಂದರು.

ನಿರಾಶ್ರಿತ ಮಹಿಳೆ ಲಕ್ಷ್ಮಮ್ಮ ಮಾತನಾಡಿ, ನಮ್ಮದು ಚಿಕ್ಕ ಮನೆ. ದೇವಸ್ಥಾನದ ಬಳಿ ಕಡಲೆಕಾಯಿ ಮಾರಾಟ ಮಾಡಿ ಜೀವನ ನಡೆಸುತ್ತಿದ್ದೆವು. ಆದರೆ, ಪ್ರವಾಹದಿಂದ ನಮ್ಮ ಮನೆ ಸಂಪೂರ್ಣ ನಾಶವಾಗಿದೆ. ಮನೆಯಲ್ಲಿದ್ದ ಬೆಂಚು, ಟೇಬಲ್, ಪಾತ್ರೆಗಳು ನೀರಿನಿಂದ ಹಾಳಾಗಿದೆ. ದವಸ-ಧಾನ್ಯಗಳು ಕೊಳೆತು ಹೋಗಿದೆ ಎಂದು ಕಣ್ಣೀರಿಟ್ಟರು.

ಈ ಸಂದರ್ಭದಲ್ಲಿ ಕಾವೇರಿ ನದಿ ಸ್ವಚ್ಛತಾ ಆಂದೋಲನ ಸಮಿತಿ ಅಧ್ಯಕ್ಷ ಸಿದ್ದರಾಜು, ಗ್ರಾ.ಪಂ. ಸದಸ್ಯರಾದ ಎಸ್.ದಿವಾಕರ್, ಮಂಜುಳ ಮಹದೇವ್, ಅಖಿಲ ಭಾರತೀಯ ಮಾನವ ಹಕ್ಕುಗಳ ಸಂಘಟನೆ ರಾಜ್ಯಾಧ್ಯಕ್ಷ ಬಿ.ಆರ್.ನಾರಾಯಣ ಸ್ವಾಮಿ, ಮುಖಂಡರಾದ ಸರಗೂರು ಚೌಡೇಗೌಡ, ಎಂ.ಎಚ್.ಕೃಷ್ಣಮೂರ್ತಿ, ಹನ್ಯಾಳು ಮಂಜುನಾಥ್, ಕಟ್ಟೇಪುರ ವೆಂಕ ಟೇಶ್, ಕೃಷ್ಣೇಗೌಡ, ಸುಂದರ್, ಡಿ.ಎಚ್. ಪ್ರಭಾಕರ್, ಅಭಿವೃದ್ಧಿ ಅಧಿಕಾರಿ ವಿಜಯ ಕುಮಾರ್, ರಾಜಸ್ವ ನೀರಿಕ್ಷಕ ಸ್ವಾಮಿ, ಗ್ರಾಮ ಲೆಕ್ಕಾಧಿಕಾರಿ ರÀಮೇಶ್ ಇದ್ದರು.

Translate »