‘ಕ್ಷೇತ್ರದ ಜನರ ಬಳಿಗೆ ಆಡಳಿತ’ ಯೋಜನೆಶೀಘ್ರವೇ ಜಾರಿ :ಅಭಿನಂದನಾ ಸಮಾರಂಭದಲ್ಲಿ ಶಾಸಕ ಡಾ.ಎ.ಟಿ.ರಾಮಸ್ವಾಮಿ ಹೇಳಿಕೆ
ಹಾಸನ

‘ಕ್ಷೇತ್ರದ ಜನರ ಬಳಿಗೆ ಆಡಳಿತ’ ಯೋಜನೆಶೀಘ್ರವೇ ಜಾರಿ :ಅಭಿನಂದನಾ ಸಮಾರಂಭದಲ್ಲಿ ಶಾಸಕ ಡಾ.ಎ.ಟಿ.ರಾಮಸ್ವಾಮಿ ಹೇಳಿಕೆ

June 22, 2018

ರಾಮನಾಥಪುರ: ‘ಕ್ಷೇತ್ರದ ಜನರ ಬಳಿಗೆ ಆಡಳಿತ ಎಂಬ ಯೋಜನೆ ಯಡಿ ಪ್ರತಿ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಶೀಘ್ರವೇ ಜನಸಂಪರ್ಕ ಸಭೆ ಹಮ್ಮಿಕೊಳ್ಳಲಾಗುವುದು’ ಎಂದು ಶಾಸಕ ಡಾ.ಎ.ಟಿ.ರಾಮಸ್ವಾಮಿ ಹೇಳಿದರು.

ಪಟ್ಟಣದ ಭಾಗ್ಯಶ್ರೀ ಕಲ್ಯಾಣ ಮಂಟಪ ದಲ್ಲಿ ಗುರುವಾರ ನಡೆದ ಅಭಿನಂದನಾ ಸಮಾರಂಭದಲ್ಲಿ ಅವರು ಮಾತನಾಡಿ ದರು. ಪ್ರತಿ ಗ್ರಾಮ ಪಂಚಾಯಿತಿ ಕೇಂದ್ರದಲ್ಲಿ ನಡೆಯುವ ಸಭೆಯಲ್ಲಿ ಜನರು ಸರ್ಕಾರಿ ಕಚೇರಿಗಳಿಗೆ ಅಲೆಯುವುದನ್ನು ತಪ್ಪಿಸಿ ಅವರ ಸಮಸ್ಯೆಗಳಿಗೆ ಸ್ಥಳದಲ್ಲೇ ಪರಿಹಾರ ದೊರಕಿ ಸುವ ಪ್ರಯತ್ನ ಇದಾಗಿದೆ ಎಂದರು.

ಗ್ರಾಮೀಣ ಪ್ರದೇಶದ ರೈತರ ಜಮೀನಿನ ಖಾತೆ ಬದಲಾವಣೆ, ಅಂಗವಿಕಲರ ದಾಖಲಾತಿಗಳು, ವಿವಿಧ ಪಿಂಚಣಿಗಳ ಮಂಜೂರಾತಿ, ಹಸಿರು ಕಾರ್ಡ್ ವಿತ ರಣೆ, ಸೇರಿದಂತೆ ವಿವಿಧ ಇಲಾಖೆಗಳಿಂದ ರೈತರಿಗೆ ದೊರೆಯುವ ಸೌಲಭ್ಯಗಳನ್ನು ಅವರ ಮನೆಬಾಗಿಲಿನಲ್ಲಿಯೇ ತಲುಪಿಸುವ ಪ್ರಯತ್ನವಾಗಿದೆ ಎಂದು ತಿಳಿಸಿದರು.

ಗ್ರಾಮೀಣ ಮತ್ತು ಪಟ್ಟಣದ ವಾರ್ಡ್ ಗಳ ವಿದ್ಯುತ್ ವ್ಯವಸ್ಥೆ, ರಸ್ತೆ, ಕುಡಿಯುವ ನೀರು, ಕೆರೆ-ಕಟ್ಟೆಗಳನ್ನು ಭರ್ತಿ ಮಾಡು ವುದು ಸೇರಿದಂತೆ ಹಲವು ಭರವಸೆ ಈಡೇರಿ ಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಭರವಸೆ ನೀಡಿದರು.
ಕಾರ್ಯಕ್ರಮದಲ್ಲಿ ತಾಲೂಕು ಜೆಡಿಎಸ್ ಅಧ್ಯಕ್ಷ ಜನಾರ್ಧನಗುಪ್ತ, ಮಾಜಿ ಅಧ್ಯಕ್ಷ ದೊಡ್ಡಮಗ್ಗೆ ರಂಗಸ್ವಾಮಿ, ಕಾಡಾ ಅಧ್ಯಕ್ಷ ಚೌಡೇಗೌಡ, ವೀರಶೈವ ಮಹಾಸಭಾ ತಾಲೂಕು ಅಧ್ಯಕ್ಷ ರವಿಕುಮಾರ್, ತಾ.ಪಂ. ಸದಸ್ಯ ಬಿ.ಸಿ.ವೀರೇಶ್, ಮುಖಂಡರಾದ ದೊಡ್ಡಮಗ್ಗೆ ಲೋಕ ನಾಥ್, ಬಸವ ಪಟ್ಟಣ ಬಿ.ಅರ್. ಮಧುಕರ್, ಗಂಗೂರು ಸಂಜೀವೇಗೌಡ, ತಿಮ್ಮರಾಜ್, ಬಸವಪಟ್ಟಣ ಜೆ. ನಾಗರಾಜು, ಎಂ.ಎಚ್. ಕೃಷ್ಣಮೂರ್ತಿ, ಉಪಾರಿಕೇಗೌಡ ವೆಂಕಟೇಶ್ ಇದ್ದರು.

Translate »