ವಿರಾಜಪೇಟೆಯಲ್ಲಿ ವಿಶ್ವ ಯೋಗ ದಿನಾಚರಣೆ
ಕೊಡಗು

ವಿರಾಜಪೇಟೆಯಲ್ಲಿ ವಿಶ್ವ ಯೋಗ ದಿನಾಚರಣೆ

June 22, 2018

ವಿರಾಜಪೇಟೆ: ಯೋಗ ಎಂಬುದು ಋಷಿ ಮುನಿಗಳ ಕಾಲದಿಂದಲೂ ನಡೆದುಕೋಂಡು ಬರುತ್ತಿದೆ. ಯೋಗಭ್ಯಾಸಕ್ಕೆ ಜಾತಿ ಭೇದಗಳಿಲ್ಲ. ವಯೋಮಿತಿ ಎಂದು ಅರಮೇರಿ ಕಳಂಚೇರಿ ಮಠಾಧೀಶ ಶಾಮತ ಮಲ್ಲಿಕಾರ್ಜುನಸ್ವಾಮಿ ಹೇಳಿದರು.

ವಿಶ್ವ ಯೋಗ ದಿನಾಚರಣೆಯ ಅಂಗವಾಗಿ ಅಪ್ಪಯ್ಯಸ್ವಾಮಿ ರಸ್ತೆಯಲ್ಲಿರುವ ಕಾವೇರಿ ಆಶ್ರಮದಲ್ಲಿ ನಡೆದ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಶಾಂತ ಮಲ್ಲಿ ಕಾರ್ಜುನ ಸ್ವಾಮಿ, ಇಂದಿನ ಒತ್ತಡದ ಬದುಕಿನಲ್ಲಿ ಸಮಸ್ಯೆಗಳೇ ಹೆಚ್ಚಾಗಿದ್ದು, ಪ್ರತಿದಿನ ಯೋಗಾಭ್ಯಾಸ ಮಾಡುವುದರಿಂದ ಆರೋಗ್ಯವನ್ನು ವೃದ್ಧಿಸಿಕೊಳುವ ಮೂಲಕ ಯೋಗದಿಂದ ಮಾನಸಿಕ ರೋಗಗಳನ್ನು ನಿವಾರಿಸಿಕೊಳ್ಳಬಹುದಾಗಿದೆ ಎಂದು ನುಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾವೇರಿ ಆಶ್ರಮದ ವಿವೇಕಾನಂದಾ ಶರಣಾ ಸ್ವಾಮೀಜಿ ಮತಾನಾಡಿ, ಹಿಂದಿನ ಕಾಲದಿಂದಲೂ ನಡೆಸಿಕೊಂಡು ಬರುತ್ತಿರುವ ಯೋಗಾ ಭ್ಯಾಸ ಇಂದಿಗೂ ಜನರ ಆರೋಗ್ಯವನ್ನು ಉತ್ತಮ ಗೊಳಿಸಿದೆ, ವಿರಾಜಪೇಟೆಯಲ್ಲಿ 19 ವರ್ಷಗಳಿಂದ ಯೋಗ ತರಬೇತಿ ನಡೆಸಿಕೊಂಡು ಬರುತ್ತಿದ್ದು ಪ್ರತಿಯೊಬ್ಬರೂ ಭಾಗವಹಿಸುವಂತೆ ಹೇಳಿದರು. ವೇದಿಕೆಯಲ್ಲಿ ವಿರಾಜಪೇಟೆ ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಎನ್.ಪಿ.ಹೇಮಕುಮಾರ್, ಕಾಫಿ ಬೆಳೆಗಾರ ಅನಿಲ್‍ರಾವ್, ಯೋಗಗುರು ಸೀತಾರಾಂ ರೈ, ಹಿರಿಯ ಯೋಗಪಟ್ಟು ಬಿ.ಗಣಪತಿ ಮುಂತಾದವರು ಉಪಸ್ಥಿತರಿದ್ದರು.

Translate »