ವಿರಾಜಪೇಟೆ, ಜ.23- ಸಾರ್ವಜನಿಕ ಆಸ್ಪತ್ರೆಗೆ ಕುಡಿಯುವ ನೀರಿನ ಸೌಲಭ್ಯ, ಆಸ್ಪತ್ರೆಯ ಎದುರು ರಸ್ತೆ ಡಾಂಬರೀಕರಣ ಮತ್ತು ಕಾಂಪೌಂಡ್ ನಿರ್ಮಿಸುವ ಕಾಮ ಗಾರಿಗೆ ಶಾಸಕರ ಅನುದಾನದಿಂದ 3 ಲಕ್ಷ ರೂ. ನೀಡುವುದಾಗಿ ಶಾಸಕ ಕೆ.ಜಿ. ಬೋಪಯ್ಯ ಹೇಳಿದರು ವಿರಾಜಪೇಟೆ ಸಾರ್ವಜನಿಕ ಆಸ್ಪತ್ರೆಯ ಆರೋಗ್ಯ ರಕ್ಷ ಸಮಿತಿ ಕಾರ್ಯಕರಿಣಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಈ ಸಂದರ್ಭ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ವಿಶ್ವನಾಥ್ ಸಿಂಪಿ ಅವರು ಆಸ್ಪತ್ರೆಯ ಕುಂದು ಕೊರತೆಗಳ ಬಗ್ಗೆ ಉಪವಿಭಾಗಾಧಿಕಾರಿ ಜವರೆಗೌಡ ಮತ್ತು ಶಾಸಕ ಕೆ.ಜಿ.ಬೋಪಯ್ಯ…
ವಿ.ಪೇಟೆ ಸರ್ಕಾರಿ ಆಸ್ಪತ್ರೆಯಲ್ಲಿ ಅಪರೂಪದ ಶಸ್ತ್ರ ಚಿಕಿತ್ಸೆ: ಮಹಿಳೆಯ ಉದರದಲ್ಲಿ ಭಾರೀ ಗಾತ್ರದ ಕ್ಯಾನ್ಸರ್ ಗಡ್ಡೆ ತೆಗೆದ ವೈದ್ಯರು
January 24, 2020ವೀರಾಜಪೇಟೆ, ಜ.23- ಕಳೆದ ಎರಡು ವರ್ಷಗಳಿಂದಲೂ ಹೊಟ್ಟೆನೋವಿನಿಂದ ನರಳುತ್ತಿದ್ದ ಮಹಿಳೆಯ ಉದರದಲ್ಲಿ ಸುಮಾರು 250 ಗ್ರಾಂ ತೂಕದ ಕ್ಯಾನ್ಸರ್ ಗಡ್ಡೆಯನ್ನು ವೀರಾಜಪೇಟೆ ಸರಕಾರಿ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ.ವಿಶ್ವನಾಥ್ ಸಿಂಪಿ ಅವರು ಶಸ್ತ್ರ ಚಿಕಿತ್ಸೆ ನಡೆಸಿ ಹೊರ ತೆಗೆದಿದ್ದಾರೆ. ಸಮೀಪದ ನೆಲ್ಲಿಹುದಿಕೇರಿ ಗ್ರಾಮದ ಮುಸ್ತಾಫ ಎಂಬುವರ ಪತ್ನಿ ಆಶಿಯಾ(48) ಎಂಬುವರು ಹೊಟ್ಟೆನೋವಿನಿಂದ ನರಳುತ್ತಿದ್ದು, ಮೂತ್ರವು ಸರಾಗವಾಗಿ ಹೋಗದೆ ಅಡಚಣೆ ಉಂಟಾಗಿತ್ತು ಎನ್ನಲಾಗಿದೆ. ಈ ಸಂಬಂದ ಆಶಿಯಾ ಅವರು ಮೈಸೂರು ಆಸ್ಪತ್ರೆಗಳಲ್ಲಿ ವಿಚಾರಿಸಿದಾಗ ಕ್ಯಾನ್ಸರ್ ಗೆಡ್ಡೆ ಇದೆ. ಇದನ್ನು…
ಯುವಜನರ ಸ್ಫೂರ್ತಿ ‘ವಿವೇಕಾನಂದ’
January 13, 2020ವ್ಯಕ್ತಿತ್ವದ ಎಲ್ಲಾ ಆಯಾಮಗಳ ಸಾರ್ಥಕತೆಗೆ ಅವಕಾಶವನ್ನು ನೀಡುವ ಕಾಲವೇ ಯೌವನ. ಆದರೆ, ಈ ಕಾಲದಲ್ಲಿ ಬುದ್ಧಿ ಇದ್ದರೆ ಕ್ರಿಯಾಶೀಲತೆ ಇರದು; ಕ್ರಿಯಾಶೀಲತೆ ಇದ್ದರೆ ಬುದ್ಧಿ ಇರದು. ಹೀಗಾಗಿ, ಯೌವನ ಎನ್ನುವುದು ಹಲವರ ಜೀವನದಲ್ಲಿ ಅರ್ಥವನ್ನು ಕಳೆದುಕೊಳ್ಳುವ ಸಂದರ್ಭವೇ ಹೆಚ್ಚು. ಬುದ್ಧಿ-ಶಕ್ತಿ-ಕ್ರಿಯಾಶೀಲತೆಗಳ ಮಹಾಸಂಗಮದಂತಿದ್ದವರು ಸ್ವಾಮಿ ವಿವೇಕಾನಂದರು. ಅವರ ಜೀವನ-ಸಂದೇಶಗಳು ಎಲ್ಲ್ಲಾ ಕಾಲದ ಯುವಜನಾಂಗದ ಸ್ಫೂರ್ತಿ ಕೇಂದ್ರ; ವ್ಯಕ್ತಿತ್ವ ನಿರ್ಮಾಣದ ಅರಿವಿನ ನಡಿಗೆ. ವ್ಯಕ್ತಿಯ ಏಳಿಗೆಗೂ ಸಮಾಜದ ಏಳಿಗೆಗೂ ಪೂರಕವಾಗಿರುವ ಅವರ ವಿಚಾರ ಧಾರೆಗಳು ಇಂದಿಗೂ ಪ್ರಸ್ತುತವಾಗಿದ್ದು, ವಿವೇಕಾನಂದರ 157ನೇ…
ಅರಮೇರಿ: ವಿಜೃಂಭಿಸಿದ ‘ಕರುನಾಡ ಕಲಾವೈಭವ’
January 13, 2020ವಿರಾಜಪೇಟೆ, ಜ.12- ಸುಸಂಸ್ಕøತ ಶಿಕ್ಷಣವನ್ನು ನೀಡುವಲ್ಲಿ ಮಠಮಾನ್ಯಗಳು ಮುಂದಿದ್ದು, ವಿದ್ಯಾ ಕ್ಷೇತ್ರಗಳಲ್ಲಿ ಉತ್ತಮ ಸಮಾಜ ನಿರ್ಮಾಣ ಮಾಡಲು ಸಹಕಾರಿಯಾಗುತ್ತಿದೆ ಎಂದು ಶಾಸಕ ಕೆ.ಜಿ.ಬೋಪಯ್ಯ ಹೇಳಿದರು. ವಿರಾಜಪೇಟೆ ಬಳಿಯ ಅರಮೇರಿ ಕಳಂ ಚೇರಿ ವಿದ್ಯಾಪೀಠದಲ್ಲಿ ಆಯೋಜಿಸಲಾ ಗಿದ್ದ ‘ಕರುನಾಡ ಕಲಾವೈಭವ’ ಜನಪದ ಕಲೆಯನ್ನು ಬಿಂಬಿಸಲು ರಾಗಿ ಬೀಸುವು ದರ ಮೂಲಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಇಂದಿನ ಸ್ಪರ್ಧಾ ತ್ಮಕ ಯುಗದಲ್ಲಿ ವಿದ್ಯಾ ಸಂಸ್ಥೆಗಳಲ್ಲಿನ ವಿದ್ಯಾ ಭ್ಯಾಸಗಳು ಭವಿಷ್ಯದ ದೃಷ್ಟಿಯಲ್ಲಿ ಸಹಕಾರಿ ಯಾಗುತ್ತಿದೆ. ಮಠಗಳು ಸಮಾಜದಲ್ಲಿ ಜಾತಿ, ಮತ,…
ಬಿಜೆಪಿ ಜಿಲ್ಲಾಧ್ಯಕ್ಷರಾಗಿ ಪಳೆಯಂಡ ರಾಬಿನ್ ದೇವಯ್ಯ ಆಯ್ಕೆ
January 13, 2020ಮಡಿಕೇರಿ, ಜ.12- ಕೊಡಗು ಜಿಲ್ಲಾ ಬಿಜೆಪಿ ಪಕ್ಷದ ನೂತನ ಅಧ್ಯಕ್ಷರಾಗಿ ಪಳೆಯಂಡ ರಾಬಿನ್ ದೇವಯ್ಯ ಆಯ್ಕೆಯಾಗಿ ದ್ದಾರೆ. ಮಂಗಳೂರಿನಲ್ಲಿ ಬಿಜೆಪಿ ಪಕ್ಷದ ಕಚೇರಿಯಲ್ಲಿ ನಡೆದ ಸಭೆಯಲ್ಲಿ ರಾಬಿನ್ ದೇವಯ್ಯ ಅವರನ್ನು ಆಯ್ಕೆ ಮಾಡಲಾಗಿದೆ. ಉಸ್ತುವಾರಿ ಉದಯ್ ಕುಮಾರ್ ಶೆಟ್ಟಿ ರಾಬಿನ್ ದೇವಯ್ಯ ಅವರನ್ನು ನೇಮಕಗೊಳಿಸಿ ಆದೇಶ ಹೊರಡಿಸಿದ್ದಾರೆ. ಶಾಲಾ ಕಾಲೇಜು ದಿನಗಳಲ್ಲೇ ರಾಷ್ಟ್ರೀಯ ಸ್ವಯಂ ಸೇವಕ ಸಂಘದಲ್ಲಿ ಗುರುತಿಸಿಕೊಂಡಿದ್ದ ರಾಬಿನ್ ದೇವಯ್ಯ, ಬಳಿಕ ಬಿಜೆಪಿ ಪಕ್ಷದಲ್ಲೂ ಸಕ್ರೀಯರಾಗಿ ತೊಡಗಿಸಿಕೊಂಡಿದ್ದರು. ಸಂಘ ಪರಿವಾರದ ಮುಖಂಡರೊಂದಿಗೆ ಆತ್ಮೀಯರಾಗಿದ್ದ, ಪಕ್ಷ ಸಂಘಟನೆಯಲ್ಲಿ…
ಯಮಧರ್ಮ, ಚಿತ್ರಗುಪ್ತ ವೇಷಧಾರಿಗಳಿಂದ ಹೆಲ್ಮೆಟ್ ಜಾಗೃತಿ
January 13, 2020ಕುಶಾಲನಗರ, ಜ.12- ಪಟ್ಟಣದಲ್ಲಿ ಪ್ರತ್ಯಕ್ಷರಾದ ಯಮಧರ್ಮ ಮತ್ತು ಚಿತ್ರಗುಪ್ತ, ವಾಹನ ಸವಾರರಿಗೆ ಸಂಚಾರಿ ನಿಯಮ ಗಳನ್ನು ಪಾಲಿಸುವಂತೆ ಎಚ್ಚರಿಕೆ ನೀಡಿ ಕಳುಹಿಸಿದ ದೃಶ್ಯ ಕಂಡುಬಂತು. ಕೈಯಲ್ಲಿ ಯಮಪಾಶ ಹಿಡಿದು ತನ್ನ ವಾಹನ ಸಹಿತ ಚಿತ್ರಗುಪ್ತನೊಂದಿಗೆ ಪಟ್ಟಣ ದಲ್ಲಿ ಸಂಚರಿಸಿದ ಯಮಧರ್ಮ, ಹೆಲ್ಮೆಟ್ ಮತ್ತು ಸೀಟ್ ಬೆಲ್ಟ್ ಧರಿಸದೆ ಸವಾರಿ ನಡಸುತ್ತಿದ್ದ ಚಾಲಕರು ಮತ್ತು ಸವಾರರಿಗೆ ಗುಲಾಬಿ ಮತ್ತು ಚಾಕಲೆಟ್ ನೀಡಿ ಎಚ್ಚರಿಕೆ ಕೊಟ್ಟು ಕಳುಹಿಸುತ್ತಿದ್ದ ದೃಶ್ಯ ನೆರೆದಿದ್ದ ವರಲ್ಲಿ ಆಶ್ಚರ್ಯ ಮೂಡಿಸಿತು. ಕೊಡಗು ಜಿಲ್ಲಾ ಪೆÇಲೀಸ್ ಇಲಾಖೆ…
ಮಡಿಕೇರಿಯಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ: ಕಟ್ಟಡ ಕಾಮಗಾರಿಗೆ ಶೀಘ್ರದಲ್ಲೇ ಚಾಲನೆ
January 11, 2020ಮಡಿಕೇರಿ, ಜ.10- ಕೊಡಗು ಜಿಲ್ಲೆಗೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಬೇಕೆಂಬ ಕೂಗಿಗೆ ಫಲ ದೊರೆತಿದ್ದು, ನೂತನ ಆಸ್ಪತ್ರೆ ಕಟ್ಟಡ ಕಾಮಗಾರಿಗೆ ಸದ್ಯದಲ್ಲೇ ಚಾಲನೆ ದೊರೆಯಲಿದೆ. ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಬೋಧಕ ಆಸ್ಪತ್ರೆಯ ಕ್ಯಾಂಪಸ್‍ನಲ್ಲೇ ಇನ್ನೂ 450 ಹಾಸಿಗೆ ಸಾಮಥ್ರ್ಯದ ಆಸ್ಪತ್ರೆ ಆರಂಭವಾಗ ಲಿದೆ. ಮಡಿಕೇರಿಯಲ್ಲಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣಕ್ಕೆ ಒಟ್ಟು 100 ರೂ. ಕೋಟಿ ವೆಚ್ಚ ಮಾಡಲಾಗುತ್ತಿದೆ. ಮೆಡಿಕಲ್ ಕೌನ್ಸಿಲ್ ಆಫ್ ಇಂಡಿಯಾದ ನಿಯಮದಂತೆ ವೈದ್ಯಕೀಯ ಕಾಲೇಜಿನ ಬೋಧಕ ಆಸ್ಪತ್ರೆಯಲ್ಲಿ 750…
ರಷ್ಯಾ ಯುವತಿಯನ್ನು ವರಿಸಿದ ಕೊಡಗಿನ ಯೋಗಪಟು
January 11, 2020ಸೋಮವಾರಪೇಟೆ, ಜ.10- ಕೊಡಗಿನ ಯೋಗಪಟು, ರಷ್ಯಾದ ಯುವತಿಯನ್ನು ಪ್ರೀತಿಸಿ, ಹಿಂದೂ ಸಂಪ್ರದಾಯದಂತೆ ಇತ್ತೀಚೆಗೆ ಇಲ್ಲಿನ ಜಾನಕಿ ಕನ್ವೆನ್‍ಷನ್ ಹಾಲ್‍ನಲ್ಲಿ ಹಿರಿಯರ ಸಮ್ಮುಖದಲ್ಲಿ ವಿವಾಹವಾದರು. ಇಲ್ಲಿಗೆ ಸಮೀಪದ ನಂದಿಗುಂದ ಗ್ರಾಮದ ಕೃಷಿಕ ಎನ್.ಬಿ.ಚಿನ್ನಪ್ಪ ಮತ್ತು ಪುಷ್ಪ ದಂಪತಿಯ ಪುತ್ರ ಎನ್.ಸಿ.ಜೈಚಂದನ್ ಅವರು, ರಷ್ಯಾದ ಮಾಸ್ಕೊ ವಿಶ್ವವಿದ್ಯಾನಿಲಯದ ತತ್ವಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಅಲೆ ಗ್ಸಾಂಡ್ರೋನಾ (ಮಿಲನಾ)ರನ್ನು ವರಿಸಿದ್ದಾರೆ. ಜೈಚಂದನ್ ಕಳೆದ 8 ವರ್ಷಗಳಿಂದ ಮಾಸ್ಕೊದಲ್ಲಿ ಯೋಗ ತರಬೇತುದಾರ ರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇದೇ ಕೇಂದ್ರದಲ್ಲಿ ಉಚಿತ ತರಬೇತುದಾರರಾಗಿ ಕಾರ್ಯನಿರ್ವಹಿಸುತ್ತಿದ್ದ ಅಲೆಗ್ಸಾಂಡ್ರೋನಾ…
ಬೇಗೂರು ಬಳಿ ಗದ್ದೆಗೆ ಉರುಳಿದ ‘ಐರಾವತ’
January 11, 2020ಗೋಣಿಕೊಪ್ಪ, ಜ.10- ಕೇರಳಕ್ಕೆ ತೆರಳುತ್ತಿದ್ದ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಐರಾವತ ಬಸ್ ಗದ್ದೆಗೆ ಉರುಳಿ ಬಿದ್ದ ಘಟನೆ ಬೇಗೂರು ಗ್ರಾಮದಲ್ಲಿ ನಡೆದಿದೆ. ಅಪಘಾತದಿಂದ ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯ ವಾಗಿದ್ದು, ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿ ದ್ದಾರೆ. ಗುರುವಾರ ತಡರಾತ್ರಿ ಮೈಸೂರು ಕಡೆಯಿಂದ ಕೇರಳದ ಕೋಯಿಕೋಡ್‍ಗೆ ತೆರಳುತ್ತಿದ್ದ ಬಸ್ ಬೇಗೂರು ಎಂಬಲ್ಲಿ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋಗಿ ರಸ್ತೆ ಬದಿಗೆ ಉರುಳಿ ಅವಘಡವಾಯಿತು. ಬಸ್ ನಲ್ಲಿದ್ದ ಸುಮಾರು 30 ಪ್ರಯಾಣಿಕರು ಅಪಾಯದಿಂದ ಪಾರಾದರು. ಈ ಬಗ್ಗೆ…
ಕಾಡಾನೆ ಹಾವಳಿಯಿಂದ ಅಡಿಕೆ ಬೆಳೆ ನಾಶ
January 11, 2020ಕುಶಾಲನಗರ, ಜ.10- ಕಾಡಾನೆಗಳ ಹಿಂಡು ದಾಳಿ ನಡೆಸಿದ ಪರಿಣಾಮ ಹೆಬ್ಬಾಲೆ ಬಳಿಯ ಮರೂರು ಗ್ರಾಮದ ಪ್ರಗತಿಪರ ರೈತ ಎಚ್.ಎಸ್. ಮಹೇಶ್ ಎಂಬು ವರಿಗೆ ಸೇರಿದ ನಾಲ್ಕು ಎಕರೆ ವಿಸ್ತೀರ್ಣದಲ್ಲಿ ಬೆಳೆದಿದ್ದ ಅಡಿಕೆ ಬೆಳೆ ನಾಶವಾಗಿದೆ. ಗುರುವಾರ ರಾತ್ರಿ ಗ್ರಾಮಕ್ಕೆ ನುಗ್ಗಿದ ಕಾಡಾನೆಗಳು ಹಸಿವು ನೀಗಿಸಿ ಕೊಳ್ಳಲು ಅಡಿಕೆ ತೋಟಕ್ಕೆ ದಾಳಿ ಯಿಟ್ಟು ಎಳೆಯ ಅಡಿಕೆ ಗಿಡಗಳನ್ನು ತಿಂದು, ತುಳಿದು ನೆಲಸಮ ಮಾಡಿವೆ. ಇದರಿಂದ ಲಕ್ಷಾಂತರ ರೂಗಳ ನಷ್ಟ ಸಂಭವಿಸಿದೆ ಎಂದು ರೈತ ಮಹೇಶ್ ದೂರಿದ್ದಾರೆ. ಅರಣ್ಯ ಇಲಾಖೆ…